Ramachari Serial: ಹೆತ್ತ ತಾಯಿಗಿಂತ ಅತ್ತೆಯೇ ಹೆಚ್ಚು ಎಂದ ಚಾರು; ಮಾನ್ಯತಾ, ವೈಶಾಖ ಇಬ್ಬರಿಗೂ ಈಗ ಜೈಲೇ ಗತಿ
Oct 21, 2024 07:32 PM IST
ಹೆತ್ತ ತಾಯಿಗಿಂತ ಅತ್ತೆಯೇ ಹೆಚ್ಚು ಎಂದ ಚಾರು
- ರಾಮಾಚಾರಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಚಾರು ತನ್ನ ಅತ್ತಿಗೆ ವೈಶಾಖ ಹಾಗೂ ತಾಯಿ ಮಾನ್ಯತಾ ಇಬ್ಬರನ್ನೂ ಜೈಲಿಗೆ ಕಳಿಸಲು ಪ್ರಯತ್ನ ಮಾಡಿದ್ದಾಳೆ. ಚಾರುಗೆ ಈಗ ಮನೆಯವರೆಲ್ಲರ ಸಹಕಾರವೂ ಇದೆ.
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಈಗ ಎಲ್ಲ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾಳೆ. ಇದರಿಂದಾಗಿ ವೈಶಾಖ ಹಾಗೂ ಅವಳ ತಾಯಿ ಮಾನ್ಯತಾಗೆ ಜೈಲಿನ ಭೀತಿ ಕಾಡುತ್ತಿದೆ. ಬೇಡ ಬೇಡ ಎಂದು ಯಾರು ಎಷ್ಟೇ ಹೇಳಿದರೂ ಚಾರು ಮಾತ್ರ ಈ ಬಾರಿ ತನ್ನ ತಾಯಿ ಹಾಗೂ ಅತ್ತಿಗೆಯನ್ನು ಜೈಲಿಗೆ ಕಳಿಸದೆ ಸುಮ್ಮನೆ ಇರುವಂತೆ ಕಾಣುತ್ತಿಲ್ಲ. ಯಾಕೆಂದರೆ ಅವಳ ಗಂಡನ ಮನೆಗೆ ಅವರಿಬ್ಬರೂ ಸೇರಿಕೊಂಡು ಮಾಡಿದ ಮೋಸವನ್ನು ಮರೆಯಲು ಮತ್ತು ಸಹಿಸಿಕೊಳ್ಳಲು ಚಾರು ಹತ್ತಿರ ಆಗುತ್ತಿಲ್ಲ. ಹೀಗಿರುವಾಗ ಈ ಬಾರಿ ಮನೆಯ ಯಾರೂ ಅವಳನ್ನು ವಿರೋಧ ಮಾಡುತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳುತ್ತಿದ್ದಾರೆ. ಇದಾದ ನಂತರದಲ್ಲಿ ಚಾರು ಇನ್ನಷ್ಟು ಬೈತಾಳೆ.
ಈ ಮನೆಯ ನೆಮ್ಮದಿ ಹಾಳು ಮಾಡಿದಾಗಲೇ ನಿಮ್ಮಂತ ಕ್ರಿಮಿಗಳು ಏನಾಗಬೇಕು ಎಂದು ನಾನು ಅಂದುಕೊಂಡಾಗಿದೆ. ನೀವು ಈಗ ಕಾನೂನಿನ ಕೈ ಸೇರಲೇಬೇಕಿದೆ. ಇಷ್ಟು ದಿನ ನೀವು ಅಂದುಕೊಂಡಿದ್ದನ್ನೆಲ್ಲ ಮಾಡಿದ್ದೀರಿ ಆದರೆ ಈಗ ಹಾಗಾಗೋದಿಲ್ಲ. ಈಗ ನಾನು ಏನಂದುಕೊಂಡಿದ್ದೆನೊ ಅದೇ ಆಗೋದು ಎಂದು ಹೇಳುತ್ತಾಳೆ. ಅದಾದ ನಂತರದಲ್ಲಿ ಇಷ್ಟು ದಿನ ಪೊಲೀಸರು ಯಾಕೆ ಸುಮ್ಮನಿದ್ದರು ಗೊತ್ತಾ? ಎಂದು ಪ್ರಶ್ನೆ ಮಾಡುತ್ತಾಳೆ. ಆ ನಂತರದಲ್ಲಿ ಪ್ರಶ್ನೆಗೆ ಅವಳೇ ಉತ್ತರ ನೀಡುತ್ತಾಳೆ.
ಮಾನ್ಯತಾಗೆ ವಾರ್ನಿಂಗ್ ಮಾಡಿದ ಚಾರು
ಅದಾದ ನಂತರದಲ್ಲಿ ನಾನೇ ಬೇಕು ಎಂದು ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ್ದೇನೆ. ನನ್ನ ಫ್ರೆಂಡ್ ಸಹಾಯದಿಂದ ನೀವು ಎನೆಲ್ಲ ಮಾಡಿದ್ದೀರಿ ಎಂಬುದನ್ನು ತಿಳಿದುಕೊಂಡಿದ್ದೇನೆ ಎಂದು ಹೇಳುತ್ತಾಳೆ. ಇದಕ್ಕೆ ಕಿಟ್ಟಿ ಸಪೋರ್ಟ್ ಕೂಡ ತುಂಬಾ ಇತ್ತು. ಇನ್ನು ಮಾನ್ಯತಾಗೆ ಹೇಳುತ್ತಾಳೆ. ಈ ಮನೆಯಲ್ಲಿ ಎಲ್ಲ ಒಳ್ಳೆ ಗುಣಗಳನ್ನು ನನ್ನ ಅತ್ತೆ ನನಗೆ ಹೇಳಿಕೊಟ್ಟಿದ್ದಾರೆ. ಆದರೆ ನೀನು ಮಾತ್ರ ನನ್ನ ಈ ಸ್ವರ್ಗದಂತ ಮನೆಯಿಂದ ದೂರ ಮಾಡೋಕೆ ಪ್ರಯತ್ನ ಮಾಡ್ದೆ. ನಿನಗೆ ಜೈಲೆ ಗತಿ ಎಂದು ಹೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
ವಿಭಾಗ