Aamruthadhaare: ನಾನು ಈ ವಿಷಯ ಇಲ್ಲಿಗೆ ಬಿಡೋದಿಲ್ಲ ಎನ್ನುತ್ತಾಳೆ ಭೂಮಿಕಾ; ವಿಷದ ಬಟ್ಟಲಿನ ಮುಂದೆ ಶಕುಂತಲಾದೇವಿ ಸತ್ಯಪರೀಕ್ಷೆ
Mar 12, 2024 09:21 AM IST
ಅಮೃತಧಾರೆ ಧಾರಾವಾಹಿ
- Aamruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಸಾಯಿಸಲು ಜೈದೇವ್ ಇನ್ನೊಂದು ಪ್ಲ್ಯಾನ್ ಮಾಡುತ್ತಾನೆ. ಆದರೆ, ವಿಷ ಹಾಕಿದ ಆಹಾರವನ್ನು ಶಕುಂತಲಾದೇವಿ ಟೇಸ್ಟ್ ಮಾಡಬೇಕಾಗುತ್ತದೆ. ಮಲ್ಲಿಯನ್ನು ಸಾಯಿಸುವ ಸಂಚಿನ ಕುರಿತು ಅನುಮಾನಗೊಂಡಿರುವ ಭೂಮಿಕಾ "ಈ ವಿಷಯ ನಾನು ಇಲ್ಲಿಗೆ ಬಿಡೋದಿಲ್ಲ" ಎನ್ನುತ್ತಾಳೆ.
Aamruthadhaare: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆ 215ರ ಕಥೆ ತಿಳಿದುಕೊಳ್ಳೋಣ. ಮಲ್ಲಿಯನ್ನು ಸಾಯಿಸಲು ಮಾಡಿದ ಪ್ಲ್ಯಾನ್ ವಿಫಲವಾದ ಕುರಿತು ಜೈದೇವ್ ಚಿಂತೆ ಮಾಡ್ತಾ ಇರ್ತಾನೆ. ಜೈದೇವ್ ನೋವಿನಲ್ಲಿದ್ದಾನೆ ಎಂದು ಮಲ್ಲಿ ಉಪಚಾರ ಮಾಡಲು ಬರುತ್ತಾಳೆ. "ನನಗೆ ನನ್ನ ಬಗ್ಗೆ ಚಿಂತೆ ಇಲ್ಲ. ನನ್ನ ಹೊಟ್ಟೆಯಲ್ಲಿ ಬೆಳೆಯುವ ಮಗುವಿನದ್ದೇ ಚಿಂತೆ" ಎಂದೆಲ್ಲ ಮಲ್ಲಿ ಹೇಳುತ್ತಾಳೆ. "ನೀನೇ ಇಷ್ಟ ಇಲ್ಲ. ನಿನ್ನ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಯೋಚನೆ ಮಾಡ್ತಿನಾ?" ಎಂದು ಜೈದೇವ್ ಹೇಳುತ್ತಾನೆ. ನಾನು ನಿಮ್ಮನ್ನು ಕಟ್ಟಿಕೊಂಡದ್ದು ನನಗೋಸ್ಕರ ಅಲ್ಲ, ನನ್ನ ಮಗುವಿನ ಭವಿಷ್ಯಸ್ಕೋರ ಎಂದು ಮಲ್ಲಿ ಹೇಳುತ್ತಾಳೆ.
ಭೂಮಿಕಾ ಮತ್ತು ಶಕುಂತಲಾದೇವಿ ಮಾತನಾಡುತ್ತ ಇದ್ದಾರೆ. "ನಿನ್ನೆ ರಾತ್ರಿ ಮನೆಯಲ್ಲಿ ಏನು ನಡೆಯಿತು ಎಂದು ಗೊತ್ತಿಲ್ವ?" ಎಂದು ಭೂಮಿಕಾ ಕೇಳುತ್ತಾಳೆ. "ನಿನ್ನೆ ರಾತ್ರಿ ಯಾರು ಇಲ್ಲದೆ ಹೊತ್ತಲ್ಲಿ ಮನೆಗೆ ಒಂದಿಷ್ಟು ಜನರು ಬಂದಿದ್ದರು. ಯಾರೋ ಮನೆಯವರೇ ಇದನ್ನು ಮಾಡಿಸಿರಬೇಕು" ಎಂದು ಭೂಮಿಕಾ ಹೇಳುತ್ತಾಳೆ. "ವಿದೌಟ್ ಪ್ರೂಫ್ ಅಪಾದನೆ ಮಾಡ್ತಾ ಇದ್ದೀಯಾ" ಎಂದಾಗ "ಆ ಗ್ಯಾಂಗ್ ಲೀಡರ್ ಬೇರೆ ಯಾರೂ ಅಲ್ಲ ಆ ಲೋಕಿ" ಎಂದು ಶಕುಂತಲಾದೇವಿಗೆ ಭೂಮಿಕಾ ಹೇಳುತ್ತಾಳೆ. "ಮತ್ತೆ ಆ ಲೋಕಿನೇ ಎಂಟ್ರಿ ಆಗಿದ್ದಾನೆ. ಮುಂದೊಂದು ದಿನ ಆತ ಸಿಕ್ಕಿ ಬಿದ್ದು ಈ ಮನೆಯವರ ಹೆಸರು ಹೇಳಿದ್ರೆ ಮನೆ ಮರ್ಯಾದೆ ಹೋಗುತ್ತೆ. ಸತ್ಯವನ್ನು ಯಾರೂ ಮುಚ್ಚಿಡೋಕ್ಕೆ ಅಗೋದಿಲ್ಲ" ಎಂದೆಲ್ಲ ಭೂಮಿಕಾ ಹೇಳುತ್ತಾಳೆ. "ನಾನು ಈ ವಿಷಯವನ್ನು ಇಲ್ಲಿಗೆ ಬಿಡೋದಿಲ್ಲ. ಎಷ್ಟಾದರೂ ಟೀಚರ್ ಅಲ್ವ" ಎಂದು ಹೇಳುತ್ತಾಳೆ. ಮಾತು ಮುಂದುವರೆಯುವ ಹಂತದಲ್ಲಿ ಗೌತಮ್ ಪ್ರವೇಶವಾಗುತ್ತದೆ. ವಿಷಯ ಬೇರೆಕಡೆಗೆ ತಿರುಗುತ್ತದೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಗೌತಮ್ ಟೀ ಮಾಡಿಕೊಂಡು ಬಂದು ಭೂಮಿಕಾಳಿಗೆ ನೀಡುತ್ತಾನೆ. ಭೂಮಿಕಾಗೆ ಅಚ್ಚರಿ. ಒಂದಿಷ್ಟು ಪ್ರೀತಿ ಮಾತುಕತೆ ನಡೆಯುತ್ತದೆ. ಯಾವುದರ ಬಗ್ಗೆಯೂ ತುಂಬಾ ತಲೆಕೆಡಿಸಿಕೊಂಡಿದ್ದೀರಿ ಎಂಬ ಅನುಮಾನವನ್ನು ಗೌತಮ್ ವ್ಯಕ್ತಪಡಿಸುತ್ತಾನೆ. ಇದಾದ ಬಳಿಕ ಶಕುಂತಲಾದೇವಿ ಮತ್ತು ಜೈದೇವ್ ಮಾತುಕತೆ ಇರುತ್ತದೆ. ಮಗನಿಗೆ ತಾಯಿಯ ಮಂಗಳಾರತಿ ಇರುತ್ತದೆ. ಇನ್ನು ಏನೇ ಮಾಡೋದಾದ್ರೆ ಕೇರ್‌ಫುಲ್ ಆಗಿ ಮಾಡು ಎಂದು ತಾಯಿಯ ಸಲಹೆ ಇರುತ್ತದೆ. "ಇನ್ನು ಮೇಲೆ ನಾನೇ ಏನಾದರೂ ಮಾಡ್ತಿನಿ" ಎಂದು ಜೈದೇವ್ ಯೋಚಿಸುತ್ತಾನೆ.
ಸಿರಿಧಾನ್ಯದ ಆಹಾರದಲ್ಲಿ ವಿಷ
ವಿಷದ ಬಾಟಲ್ ತೆಗೆಯುತ್ತಾನೆ. ಮಲ್ಲಿ ತಿಂಡಿಗೆ ವಿಷ ಹಾಕಲು ಮುಂದಾಗುತ್ತಾನೆ. ಮಲ್ಲಿಗೆ ಮಾಡಿರುವ ಸಿರಿಧಾನ್ಯದ ಆಹಾರಕ್ಕೆ ವಿಷ ಹಾಕುತ್ತಾನೆ. ಆ ಸಮಯದಲ್ಲಿ ಮಲ್ಲಿ ಮರೆಯಲ್ಲಿ ಜೈದೇವ್ ಮಾತು ಕೇಳಿಸಿಕೊಳ್ಳುತ್ತಾಳೆ. "ನನಗೆ ಮಾತ್ರ ಕೊಡಬೇಕು ಎಂದ್ರೆ ಇವ್ರೆಲ್ಲ ಏನೋ ಮಾಡಿರಬೇಕು" ಎಂದು ಮಲ್ಲಿಗೆ ಅನುಮಾನ ಬರುತ್ತದೆ. ಅವಳು ಭೂಮಿಕಾಳಿಗೆ ವಿಷಯ ತಿಳಿಸುತ್ತಾಳೆ. ಭೂಮಿಕಾ ಮಲ್ಲಿಯನ್ನು ಕರೆದುಕೊಂಡು ಶಕುಂತಲಾದೇವಿ ಬಳಿಗೆ ಬರುತ್ತಾಳೆ. "ಇವಳು ತಿನ್ನೋ ತಿಂಡಿಯಲ್ಲಿ ಏನಾದರೂ ಕಲಸಿದ್ದಾರೆ. ಮಗುವಿಗೆ ತಾಯಿಗೆ ಏನಾದರೂ ಆಗುತ್ತೆ ಅಂತ ಭಯ. ಅದಕ್ಕೆ ಏನೂ ತಿನ್ತಾ ಇಲ್ಲ. ನೀವೇ ಹೇಳಿ ಅತ್ತೆ" ಎಂದು ಉಪಾಯವಾಗಿ ಭೂಮಿಕಾ ಮಾತನಾಡುತ್ತಾಳೆ. ತಿಂಡಿಯಲ್ಲಿ ಏನೂ ಇಲ್ಲ ನಿನ್ನ ತಲೆಯಲ್ಲಿ ಇರೋದು ಎಂದು ಶಕುಂತಲಾದೇವಿ ಹೇಳುತ್ತಾರೆ. "ನಿನಗೆ ನಂಬಿಕೆ ಬರೋಕ್ಕೆ ಇನ್ಯಾರಾದ್ರೂ ಟೇಸ್ಟ್ ಮಾಡಬೇಕ" ಎಂದು ಶಕುಂತಲಾದೇವಿ ಹೇಳಿದಾಗ "ಹೌದು ಅತ್ತೆ ಇನ್ನು ಮುಂದೆ ನೀವೇ ಎಲ್ಲಾ ಆಹಾರ ಟೇಸ್ಟ್ ಮಾಡಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಆ ಸಮಯದಲ್ಲಿ ಅಜ್ಜಿಯು "ಅವಳಿಗೆ ನೀನೇ ತಿಳುವಳಿಕೆ ನೀಡಬೇಕು. ನೀನೇ ಎಲ್ಲಾ ಆಹಾರ ರುಚಿ ನೋಡಿ ನೀಡಬೇಕು. ಅವಳನ್ನು ಕೇರ್ ಮಾಡಬೇಕು. ನೀನು ನಾಲ್ಕು ಮಕ್ಕಳನ್ನು ಹೆತ್ತ ತಾಯಿ" ಎಂದೆಲ್ಲ ಹೇಳುತ್ತಾಳೆ.
ಎಲ್ಲರೂ ತಿಂಡಿಗೆ ಕೂತಿದ್ದಾರೆ. ಜೈದೇವ್ ನೋಡುತ್ತ ಇದ್ದಾನೆ. ಮಲ್ಲಿಯ ಆಹಾರದಿಂದ ಶಕುಂತಲಾದೇವಿ ಸ್ವಲ್ಪ ತೆಗೆದುಕೊಂಡು ಬೌಲ್‌ಗೆ ಹಾಕಿಕೊಳ್ಳುತ್ತಾರೆ. ಜೈದೇವ್‌ಗೆ ಆತಂಕವಾಗುತ್ತದೆ. ಸೀರಿಯಲ್ ಮುಂದುವರೆಯುತ್ತದೆ.