ಅಮೃತಧಾರೆ ಧಾರಾವಾಹಿ: ಅಪೇಕ್ಷಾ ಜೈದೇವ್ ಮದುವೆ ಮಾತುಕತೆ ನಡೆಸಿದ ಶಕುಂತಲಾ ದೇವಿ; ಅತ್ತಿಗೆತಂಗಿ - ಭಾವನತಮ್ಮನ ಪ್ರೀತಿಗೆ ಸಂಚಕಾರ
Feb 09, 2024 09:09 AM IST
ಅಮೃತಧಾರೆ ಧಾರಾವಾಹಿ: ಅಪೇಕ್ಷಾ ಜೈದೇವ್ ಮದುವೆ ಮಾತುಕತೆ ನಡೆಸಿದ ಶಕುಂತಲಾ ದೇವಿ
- Amruthadhaare Kannada Serial latest Episode: ಝೀ ಕನ್ನಡದ ಅಮೃತಧಾರೆ ಸೀರಿಯಲ್‌ನ ಫೆಬ್ರವರಿ 8ರ ಸಂಚಿಕೆಯಲ್ಲಿ ಶಕುಂತಲಾ ದೇವಿ ಮನೆಯಲ್ಲಿ ಶುಭಕಾರ್ಯದ ಮಾತುಕತೆ ನಡೆದಿದೆ. ಜೈದೇವ್‌ಗೂ ಅಪೇಕ್ಷಾಗೂ ಮದುವೆ ಮಾಡುವ ಕುರಿತು ಚರ್ಚಿಸಲಾಗಿದೆ. ಈ ವಿಚಾರ ಭೂಮಿಕಾಳಿಗೆ ಖುಷಿ ತಂದಿದೆ.
Amruthadhaare Kannada Serial: ಅಪೇಕ್ಷಾ ಮತ್ತು ಪಾರ್ಥ ಪ್ರೀತಿಸುತ್ತಿರುವ ಸಂಗತಿ ತಿಳಿದಾಗ ಜೈದೇವ್ ಆಕ್ರೋಶಕ್ಕೆ ಒಳಗಾಗುತ್ತಾನೆ. ಅಪೇಕ್ಷಾಳ ಪಡೆಯಲೇಬೇಕೆಂದು ತೀರ್ಮಾನಿಸುತ್ತಾನೆ. ಅಮ್ಮ ಶಕುಂತಲಾ ದೇವಿಯಲ್ಲಿ ಅಪೇಕ್ಷಾಳನ್ನು ಮದುವೆಯಾಗಲು ಬಯಸುವುದಾಗಿ ಹೇಳುತ್ತಾನೆ. ಅಂತಿಮವಾಗಿ "ಈ ಮದುವೆಗೆ ನಾನು ಒಪೋದಿಲ್ಲ" ಎಂದು ತಾಯಿ ಹೇಳುತ್ತಾಳೆ. "ಇದೇ ಅಂತಿಮ ಮಾತಾ" ಎಂದು ಹೇಳಿದ ಜಯ್‌ದೇವ್ ಪಿಸ್ತೂಲ್‌ನಲ್ಲಿ ತನ್ನ ತಲೆಗೆ ಗುರಿ ಇಡುತ್ತಾನೆ. ಝೀ ಕನ್ನಡ ಅಮೃತಧಾರೆ ಧಾರಾವಾಹಿಯ ಫೆಬ್ರವರಿ 8ರ ಸಂಚಿಕೆಯ ಸ್ಟೋರಿ ಇಲ್ಲಿದೆ.
ಜೈದೇವ್ ಸಾಯುವ ನಾಟಕಕ್ಕೆ ಕರಗಿದ ಶಕುಂತಲಾದೇವಿ
ನಿಮ್ಮ ಸ್ಟೇಟಸ್ ನಿಮಗೆ ಮುಖ್ಯವಾದರೆ ನನಗೆ ಇಷ್ಟವಿಲ್ಲದೆ ಇರುವವರ ಜತೆ ಬದುಕಲು ಸಾಧ್ಯವಿಲ್ಲ. ಇಲ್ಲಮ್ಮ ನಾನು ಸಾಯ್ತಿನಿ ಎಂದು ಜೈದೇವ್ ಪಿಸ್ತೂಲ್ ಹಿಡಿದುಕೊಳ್ಳುತ್ತಾನೆ. "ನಿನಗೋಷ್ಕರ ಇಡೀ ಜೀವನ ಸವೆಸಿದ್ದೀನಿ. ನನ್ನನ್ನೇ ಬ್ಲಾಕ್‌ಮೇಲ್ ಮಾಡ್ತಿಯ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನನಗೆ ಗೊತ್ತು ಕಣೋ" ಎಂದು ಜೈ ಅಮ್ಮಾ ಹೇಳುತ್ತಾರೆ. ಹೀಗೆ ಹೇಳುತ್ತಾ "ನಿಮಗೆ ಈ ಮಗ ಬೇಕಾ ಬೇಡ್ವ" ಎಂದು ಅಮ್ಮ ಶಂಕುತಲಾ ದೇವಿಯ ಮುಂದೆ ಸಾಯುವ ನಾಟಕವಾಡುತ್ತಾನೆ.
ಫೆಬ್ರವರಿ 7ರ ಅಮೃತಧಾರೆ ಸಂಚಿಕೆ ಓದಿ: Amruthadhaare Serial: ಗೌತಮ್‌ಗೆ ರೋಸ್ ನೀಡಲು ಭೂಮಿಕಾ ಪರದಾಟ ; ಅಪೇಕ್ಷಾ ಬೇಕು ಎಂದು ಜಯ್‌ದೇವ್ ರಂಪಾಟ, ಅಮೃತಧಾರೆಯಲ್ಲಿ ಪ್ರೇಮಧಾರೆ
ಅಪೇಕ್ಷಾಳಿಗೆ ಮದುವೆ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ
ಅಪೇಕ್ಷಾ ಮತ್ತು ಆಕೆಯ ಅಮ್ಮನ ಮಾತುಕತೆ ನಡೆಯುತ್ತ ಇರುತ್ತದೆ. ನಿದ್ದೆಯಲ್ಲಿ ಯಾರದ್ದೋ ಹೆಸರು ಕನವರಿಸ್ತಾ ಇದ್ದೆ ಎಂದು ಅಮ್ಮ ಹೇಳಿದಾಗ "ಪಾರ್ಥನ ಹೆಸರು ಎಲ್ಲಾದರೂ ಹೇಳಿದ್ನಾ" ಎಂದು ಅಪೇಕ್ಷಾ ಟೆನ್ಷನ್ ಮಾಡಿಕೊಳ್ಳುತ್ತಾ ಇರುತ್ತಾಳೆ. "ಇಲ್ಲಾಮ್ಮ, ನಾನು ನಿನ್ನ ತರಹ ಸಾಧನೆ ಮಾಡಬೇಕು" ಎಂದು ಅಪೇಕ್ಷಾ ಹೇಳಿದಾಗ ಅಮ್ಮ ಉಬ್ಬಿ ಹೋಗುತ್ತಾಳೆ. "ನಾನು ಸಾಧನೆಯನ್ನು ಬಿಟ್ಟು ಈ ರೀತಿ ಮನಸ್ಸು ಬದಲಾಯಿಸಿಕೊಂಡು ಹೋಗುವ ಮಾತೇ ಇಲ್ಲ. ನಾನು ಮಂದಾಕಿನಿ ಸದಾಶಿವ ಮಗಳು" ಎನ್ನುತ್ತಾಳೆ. "ಇವಳು ಸರಿಯಾಗಬೇಕಾದರೆ ಅದಕ್ಕೆ ಒಂದು ಸೊಲ್ಯುಷನ್ ಇದೆ. ಇವಳಿಗೆ ಒಂದು ಮದುವೆ ಮಾಡಬೇಕು" ಎಂದು ಅಣ್ಣಾ ಹೇಳುತ್ತಾನೆ.
ಭೂಮಿಕಾ ಮತ್ತು ಗೌತಮ್ ಬಳಿ ಅಪೇಕ್ಷಾ ಮದುವೆ ಪ್ರಸ್ತಾಪ
ಬಳಿಕ ಶಕುಂತಲಾ ದೇವಿ ಅವರು ಭೂಮಿಕಾ ಮತ್ತು ಗೌತಮ್ ರೂಂಗೆ ಬರುತ್ತಾರೆ. ಶುಭಕಾರ್ಯದ ಮಾತುಕತೆ ನಡೆಸುತ್ತಾರೆ. ನನ್ನ ಮಗನಿಗೆ ಮದುವೆ ಮಾಡಿಸಲು ಬಯಸಿದ್ದೇನೆ ಎನ್ನುತ್ತಾರೆ. "ಜೈದೇವ್‌ಗೆ ಮದುವೆ ಮಾಡೋಣ ಅಂದುಕೊಂಡಿದ್ದೇನೆ" ಎಂದಾಗ ಭೂಮಿಕಾ ಮತ್ತು ಗೌತಮ್ ಖುಷಿ ಪಡುತ್ತಾರೆ. "ಹುಡುಗಿಯನ್ನು ಹುಡುಕೋಣ" ಎನ್ನುತ್ತಾರೆ ಗೌತಮ್. "ನಾನು ಈಗಾಗಲೇ ಹುಡುಗಿನ ಹುಡುಕಿದ್ದೀನಿ. ಈ ಹುಡುಗಿ ಬೇರಾರು ಅಲ್ಲ. ನಮಗೆ ಗೊತ್ತಿರೋರೆ" ಎಂದು ಶಕುಂತಲಾ ದೇವಿ ಹೇಳುತ್ತಾರೆ. ಬಳಿಕ "ಅಪೇಕ್ಷಾ ನನ್ನ ಮನೆಗೆ ಸೊಸೆಯಾಗಿ ಬರಲಿ ಎನ್ನೋದು ನನ್ನ ಆಸೆ" ಎನ್ನುತ್ತಾರೆ. ಈ ಮಾತು ಕೇಳಿ ಇಬ್ಬರಿಗೂ ಆಶ್ವರ್ಯ. ಈ ಮಾತು ಕೇಳಿ ಭೂಮಿಕಾಳಿಗೆ ಖುಷಿಯಾಗುತ್ತದೆ. ಆದರೆ, ಗೌತಮ್‌ಗೆ ಯಾಕೋ ಸರಿ ಕಾಣಿಸೋದಿಲ್ಲ. "ಜೈದೇವ್ ಕೈಹಿಡಿಯುವವಳು ಭೂಮಿಕಾ ರೀತಿಯೇ ಇರಬೇಕು" ಎಂದು ಶಕುಂತಲಾ ದೇವಿ ಗೌತಮ್‌ನ ಮನಸ್ಸನ್ನು ಒಲಿಸಲು ಪ್ರಯತ್ನಿಸುತ್ತಾರೆ. "ಈ ಮದುವೆ ಪ್ರಪೋಸ್‌ಗೆ ಅಪೇಕ್ಷಾ ಒಪ್ಪಿಕೊಳ್ಳುತ್ತಾಳ" ಎಂದು ಗೌತಮ್ ಹೇಳುತ್ತಾನೆ. "ಅಪ್ಪ ಅಮ್ಮನನ್ನು ನಾನು ಒಪ್ಪಿಸುವೆ" ಎಂದು ಭೂಮಿಕಾ ಹೇಳುತ್ತಾಳೆ. "ನನ್ನ ಮೈದುನನಿಗೆ ನಾನು ಹೆಣ್ಣು ಕೇಳುವೆ" ಎಂದು ಭೂಮಿಕಾ ಹೇಳುತ್ತಾಳೆ. "ಅಪೇಕ್ಷಾ ಮತ್ತು ಅವರ ಮನೆಯವರಿಗೆ ಫೋರ್ಸ್ ಮಾಡೋದು ಬೇಡ" ಎಂದು ಗೌತಮ್ ಹೇಳುತ್ತಾನೆ. ತಾಯಿ ಹೊರಗೆ ಹೋದ ಬಳಿಕ "ಅವಸರ ಬೇಡ, ಆಕ್ಸಿಡೆಂಟ್ ಆಗಬಹುದು" ಎಂದು ಗೌತಮ್ ಎಚ್ಚರಿಸುತ್ತಾನೆ.
ಪಾರ್ಥ ಮತ್ತು ಅಪೇಕ್ಷಾರ ಟೆನ್ಷನ್
ಇದಾದ ಬಳಿಕ ಪಾರ್ಥ ಮತ್ತು ಜೈದೇವ್ ಭೇಟಿಯಾಗುತ್ತದೆ. ಎಲ್ಲಿ ಹೋಗಿದ್ದೆ. ಯಾರನ್ನು ಭೇಟಿಯಾಗಿದ್ದೆ ಎಂದು ಉಭಯ ಕುಶಲೋಪರಿ ನಡೆಯುತ್ತದೆ. "ನೀನು ಯಾರನ್ನು ಲವ್ ಮಾಡ್ತಾ ಇದ್ಯಾ?" ಎಂದು ಜೈದೇವ್ ಕೇಳುತ್ತಾನೆ. "ಹಾಗೆನಿಲ್ಲ ಬ್ರೋ" ಎಂದು ಜೈದೇವ್ ಹೇಳುತ್ತಾನೆ. "ಪಾರ್ಥ ಐ ಆಮ್ ಇನ್ ಲವ್" ಎಂದು ಜೈದೇವ್ ಹೇಳುತ್ತಾನೆ. ಅವನ ಮಾತು ಕೇಳಿ ಪಾರ್ಥನಿಗೆ ಟೆನ್ಷನ್ ಆಗುತ್ತದೆ. "ನಾವು ಇಷ್ಟಪಟ್ಟದ್ದು ಬೇರೆಯವರ ಬಳಿಗೆ ಹೋಗುತ್ತದೆ" ಇತ್ಯಾದಿ ಡೈಲಾಗ್‌ಗಳು ಮುಂದುವರೆಯುತ್ತವೆ. "ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು" ಹೀಗೆ ಸಹೋದರರ ನಡುವೆ ಮಾತುಕತೆ ನಡೆಯುತ್ತದೆ.
ನಾವು ಅಂದುಕೊಂಡಂತೆ ಎಲ್ಲವೂ ಆಗುತ್ತೆ ಎಂದುಕೊಳ್ಳುವಂತೆ ಇಲ್ಲ. ಅಪೇಕ್ಷಾ ಒಪ್ಪಿಕೊಳ್ಳಬೇಕು. ಅವರ ಮನೆಯವರು ಒಪ್ಪಿಕೊಳ್ಳಬೇಕು ಎಂದು ಗೌತಮ್ ಹೇಳುತ್ತಾನೆ. "ಫೋನ್‌ನಲ್ಲಿ ಮಾತನಾಡುವುದು ಬೇಡ. ನಾವೇ ಹೋಗಿ ಅಪೇಕ್ಷಾ ಮನೆಯವರ ಬಳಿ ಮಾತನಾಡೋಣ" ಎಂದು ಗೌತಮ್ ಹೇಳುತ್ತಾನೆ. ಬಳಿಕ ಪಾರ್ಥ ಮತ್ತು ಅಪೇಕ್ಷಾ ತಮ್ಮ ಕಷ್ಟಗಳ ಕುರಿತು ಫೋನ್‌ನಲ್ಲಿ ಮಾತನಾಡುತ್ತಾರೆ. ಬಳಿಕ ಇವರ ಸರಸ ಸಲ್ಲಾಪ ಒರಿತ್ತದೆ. ಇದಾದ ಬಳಿಕ ಶಕುಂತಲಾ ದೇವಿ ಮತ್ತು ಅಂಕಲ್ ಕುತಂತ್ರ ಮಾತುಗಳು ಮುಂದುವರೆಯುತ್ತದೆ. ಇದಾದ ಬಳಿಕ ಜೈದೇವ್ ಕೊಠಡಿಗೆ ಭೂಮಿಕಾ ಹೋಗುತ್ತಾರೆ. ನೀನು ಒಪ್ಪಿ ಈ ನಿರ್ಧಾರಕ್ಕೆ ಬಂದಿರುವೆಯ, ಈ ಮದುವೆ ಇಷ್ಟವೇ ಎಂದು ಜೈದೇವ್ ಬಳಿ ಭೂಮಿಕಾ ಕೇಳುತ್ತಾರೆ. "ಅಮ್ಮ ನನಗಾಗಿ ಯಾವ ನಿರ್ಧಾರ ತೆಗೆದುಕೊಂಡರೂ ಸರಿಯಾಗಿರುತ್ತದೆ" ಎಂದೆಲ್ಲ ಜೈದೇವ್ ಹೇಳುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಅಮೃತಧಾರೆ ಧಾರಾವಾಹಿ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)