logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಬಸುರಿ ಮಲ್ಲಿ ಕಣ್ಣೀರು ಕಂಡ ಭೂಮಿಕಾ, ಸತ್ಯ ಬಯಲಾಗುತ್ತ? ಫೆ 18ರಂದು ಅಪೇಕ್ಷಾ- ಜೈದೇವ್‌ ಶುಭವಿವಾಹ

Amruthadhaare: ಬಸುರಿ ಮಲ್ಲಿ ಕಣ್ಣೀರು ಕಂಡ ಭೂಮಿಕಾ, ಸತ್ಯ ಬಯಲಾಗುತ್ತ? ಫೆ 18ರಂದು ಅಪೇಕ್ಷಾ- ಜೈದೇವ್‌ ಶುಭವಿವಾಹ

Praveen Chandra B HT Kannada

Feb 14, 2024 09:20 AM IST

google News

Amruthadhaare: ಬಸುರಿ ಮಲ್ಲಿ ಕಣ್ಣೀರು ಕಂಡ ಭೂಮಿಕಾ, ಸತ್ಯ ಬಯಲಾಗುತ್ತ? ಫೆ 18ರಂದು ಅಪೇಕ್ಷಾ- ಜೈದೇವ್‌ ಶುಭವಿವಾಹ

    • Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯ ಮಂಗಳವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ ನಿಶ್ಚಿತಾರ್ಥ ಸಾಂಗವಾಗಿ ನಡೆದಿದೆ. ಇನ್ನೊಂದೆಡೆ ಬಸುರಿ ಮಲ್ಲಿಗೆ ಜೈದೇವ್‌ ಬೆದರಿಕೆ ಹಾಕುತ್ತಾನೆ. ಮಲ್ಲಿ ಕಣ್ಣಿರಿಡುವುದನ್ನು ಭೂಮಿಕಾ ನೋಡುತ್ತಾಳೆ. ಏನು ವಿಷಯ ಎಂದು ಕೇಳುತ್ತಾಳೆ.
Amruthadhaare: ಬಸುರಿ ಮಲ್ಲಿ ಕಣ್ಣೀರು ಕಂಡ ಭೂಮಿಕಾ, ಸತ್ಯ ಬಯಲಾಗುತ್ತ? ಫೆ 18ರಂದು ಅಪೇಕ್ಷಾ- ಜೈದೇವ್‌ ಶುಭವಿವಾಹ
Amruthadhaare: ಬಸುರಿ ಮಲ್ಲಿ ಕಣ್ಣೀರು ಕಂಡ ಭೂಮಿಕಾ, ಸತ್ಯ ಬಯಲಾಗುತ್ತ? ಫೆ 18ರಂದು ಅಪೇಕ್ಷಾ- ಜೈದೇವ್‌ ಶುಭವಿವಾಹ

Amruthadhaare Kannada Serial Episode February 13: ಅಮೃತಧಾರೆ ಸೀರಿಯಲ್‌ನ ಈ ಹಿಂದಿನ ಸಂಚಿಕೆಯಲ್ಲಿ ಶಕುಂತಲಾದೇವಿ ಎರಡು ಕುಟುಂಬದ ಮುಂದೆ ಎಂಗೇಜ್‌ಮೆಂಟ್‌ ಪ್ರಸ್ತಾಪ ಇಡುತ್ತಾರೆ. "ಶಾಸ್ತ್ರಿಗಳು ಹೇಳಿದ್ರು. ಜೈದೇವ್‌ ಜಾತಕದಲ್ಲಿ ಗುರುಬಲ ಜಾಸ್ತಿ ದಿನ ಇಲ್ವಂತೆ. ನೇರವಾಗಿ ಎಂಗೇಜ್‌ಮೆಂಟ್‌ ಮಾಡೋದು ಒಳ್ಳೆಯದು ಅನ್ಸುತೆ. "ನೆಂಟರಿಸ್ಟರನ್ನು ಕರೆಯದೆ ಎಂಗೇಜ್‌ಮೆಂಟ್‌ ಮಾಡೋದು ಹೇಗೆ ಆಗುತ್ತದೆ?" ಎಂದು ಹೇಳುತ್ತಾರೆ. ಮಂದಾಕಿನಿಯವರಲ್ಲಿ ಅಭಿಪ್ರಾಯ ಕೇಳಿದಾಗ "ನಮ್ಮವರನ್ನು ಕೇಳಿದ್ರೆ ಒಳ್ಳೆಯದು" ಎಂದು ಹೇಳುತ್ತಾರೆ. ಒಟ್ಟಾರೆ, ಮನೆಯೊಳಗೆ ಎಂಗೇಜ್‌ಮೆಂಟ್‌ ಶಾಸ್ತ್ರ ಮಾಡೋ ಅವಸರದಲ್ಲಿರುತ್ತಾರೆ. ಈಗ ಮಂದಾಕಿನಿ ಅಭಿಪ್ರಾಯ ಮುಖ್ಯವಾಗುತ್ತದೆ. "ಅಮ್ಮ ಯಾವುದೇ ಕಾರಣಕ್ಕೆ ಒಪ್ಪಿಗೆ ನೀಡಬೇಡ" ಎಂದು ಅಪೇಕ್ಷಾ ಮನಸ್ಸಲ್ಲಿ ಪ್ರಾರ್ಥಿಸುತ್ತಾಳೆ. ಅಮೃತಧಾರೆ ಧಾರಾವಾಹಿಯ ಫೆಬ್ರವರಿ 13 ಮಂಗಳವಾರದ ಸಂಚಿಕೆಯಲ್ಲಿ ಎಂಗೇಜ್‌ಮೆಂಟ್‌, ಮದುವೆ ಕಥೆ ಎಲ್ಲಿಗೆ ಬಂದು ತಲುಪಿತು ನೋಡೋಣ.

ಅಮೃತಧಾರೆ ಧಾರಾವಾಹಿ ಮಂಗಳವಾರದ ಸ್ಟೋರಿ

ಗೌತಮ್‌ ಕೇಳಿದ ಬಳಿಕ ಮಂದಾಕಿಣಿ ಎಂಗೇಜ್‌ಮೆಂಟ್‌ಗೆ ಒಪ್ಪುತ್ತಾರೆ. ಸ್ವಲ್ಪ ಹೊತ್ತಿನಲ್ಲಿಯೇ ಶಾಸ್ತ್ರಿಗಳು ಬರುತ್ತಾರೆ. ಈ ವಾರ ಎರಡು ಒಳ್ಳೆಯ ಮುಹೂರ್ತ ಇದೆ. ಬಳಿಕ 45 ದಿನ ಒಳ್ಳೆಯ ದಿನ ಇಲ್ಲ ಎಂದು ಹೇಳುತ್ತಾರೆ. ಒಳ್ಳೆಯ ಎರಡು ಮಹೂರ್ತದಲ್ಲಿ ಒಂದು ಮುಹೂರ್ತ ಓಕೆ ಮಾಡಲು ತಿಳಿಸುತ್ತಾರೆ. ಬಳಿಕ ಲಗ್ನಪತ್ರಿಕೆ ಓದುತ್ತಾರೆ. ಇದೇ 18ನೇ ತಾರೀಕು ವಿವಾಹವೆಂದು ಘೋಷಣೆ ಮಾಡುತ್ತಾರೆ. ನಿಶ್ಚಿತಾರ್ಥದ ಮುಂದಿನ ಕಾರ್ಯ ಮುಂದುವರೆಸುವಾಗ ಪಾರ್ಥನಿಗೆ ನೆಟ್‌ವರ್ಕ್‌ ದೊರಕುತ್ತದೆ.

ಅಪೇಕ್ಷಾ ಮತ್ತು ಜೈದೇವ್‌ಗೆ ಹಾರ ಬದಲಾಯಿಸಿಕೊಳ್ಳಲು ಶಾಸ್ತ್ರಿಗಳು ಹೇಳುತ್ತಾರೆ. ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ಪಾರ್ಥನ ಕರೆ ಬರುತ್ತಾದೆ. ದೇವರೇ ನೀನೇ ಕಾಪಾಡಪ್ಪ ಎಂದು ಅಪೇಕ್ಷಾ ಬೇಡಿಕೊಳ್ಳುತ್ತಾ ಇರುತ್ತಾಳೆ. "ಯಾಕೆ ಫೋನ್‌ ತೆಗಿತಾ ಇಲ್ಲ" ಎಂದು ಪಾರ್ಥ ಟೆನ್ಷನ್‌ ಆಗುತ್ತಾನೆ. ಹಾರ ಬದಲಾಯಿಸಿದ ಬಳಿಕ ಉಂಗುರ ಬದಲಾವಣೆ ಮಾಡಲಾಗುತ್ತದೆ. ಜೈದೇವ್‌ ಉಂಗುರ ಹಾಕುವಾಗ ಮರೆಯಲ್ಲಿ ಮಲ್ಲಿ ನೋಡುತ್ತಾ ಇರುತ್ತಾಳೆ. ಪಾರ್ಥ ಫೋನ್‌ ಮಾಡ್ತಾ ಇದ್ದಾನೆ ಎಂದು ಮಾವ ಹೇಳಿದಾಗ ಜೈದೇವ್‌ ಟೆನ್ಷನ್‌ ಆಗುತ್ತಾನೆ

ಇನ್ನೊಂದು ಕಡೆ ಗೌತಮ್‌ ಅವರು ಮಂದಾಕಿಣಿಯನ್ನು ಕರೆದು "ಮದುವೆ ಖರ್ಚು ನಾನೇ ನೋಡಿಕೊಳ್ಳುವೆ" ಎಂದು ಹೇಳುತ್ತಾನೆ. ಈ ಮೂಲಕ ಮದುವೆ ಖರ್ಚಿನ ಹೊರೆಯನ್ನು ತಪ್ಪಿಸುತ್ತಾನೆ. ಇದನ್ನು ಕೇಳಿಸಿಕೊಂಡ ಭೂಮಿಕಾ ಖುಷಿಪಡುತ್ತಾಳೆ. "ನನಗಾಗಿ ಒಪ್ಪಿಕೊಳ್ಳಿ, ಮಾವನನ್ನೂ ಒಪ್ಪಿಸಿ" ಎಂದು ಗೌತಮ್‌ ಹೇಳುತ್ತಾನೆ. "ನಮ್ಮ ಮನೆಯವರನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ" ಎಂದು ಭೂಮಿಕಾ ಹೇಳುತ್ತಾಳೆ. "ನಿಮ್ಮ ಮನೆಯವರು ನಮ್ಮ ಮನೆಯವರೇ" ಎಂದು ಗೌತಮ್‌ ಹೇಳುತ್ತಾನೆ. "ಇರೋದೊಂದೇ ಹೃದಯ ಎಷ್ಟು ಸಲ ಗೆಲ್ತಿರಿ" ಎಂದು ಭೂಮಿಕಾನ ಸ್ವಗತ ಇರುತ್ತದೆ.

ಪಾರ್ಥ ಜೈದೇವ್‌ಗೆ ಕರೆಮಾಡುತ್ತಾನೆ. ಇಲ್ಲಿ ನೆಟ್‌ವರ್ಕ್‌ ಇಲ್ಲ. ಬೋರ್‌ ಆಗ್ತಿದೆ. ನಾನು ವಾಪಸ್‌ ಬರ್ತಿನಿ ಎಂದು ಪಾರ್ಥ ಹೇಳುತ್ತಾನೆ. "ಇಂಪಾರ್ಟೆಂಟ್‌ ವಿಷಯ ಇದೆ. ಈಗಲೇ ಬರಬೇಡ" ಎಂದು ಜೈದೇವ್‌ ಹೇಳುತ್ತಾನೆ. ಅತ್ತಿಗೆ ತಂಗಿಗೆ ಕರೆ ಮಾಡುವಾಗ ನೆಟ್‌ವರ್ಕ್‌ ಹೋಗುತ್ತದೆ. ಒಟ್ಟಾರೆ ಮದುವೆ ತನಕ ಇಬ್ಬರಿಗೂ ವಿಷಯ ಗೊತ್ತಾಗದಂತೆ ಕಾಣಿಸುತ್ತದೆ. ಒಂದು ಎಸ್‌ಎಂಎಸ್‌ ಆದ್ರೂ ಮಾಡುವ ಕುರಿತು ಇಬ್ಬರೂ ಯೋಚಿಸುವುದಿಲ್ಲ. ಸೀರಿಯಲ್‌ ಅಲ್ವೇ.

ಅಪೇಕ್ಷಾ ದುಃಖದಿಂದ ಕುಳಿತಿದ್ದಾಳೆ. ಹೂವು ಮುಡಿಸುವ ಶಾಸ್ತ್ರ ಎಂದು ಎಂಗೇಜ್‌ಮೆಂಟೇ ಮುಗಿಯಿತು ಎಂದು ಖುಷಿಯಿಂದ ಮಂದಾಕಿಣಿ ಮತ್ತು ಭೂಮಿಕಾ ಮಾತನಾಡುತ್ತಾರೆ. ಅಪೇಕ್ಷಾ ದುಃಖದಿಂದ ಕುಳಿತುಕೊಳ್ಳುತ್ತಾಳೆ.

ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ಭೇಟಿಯಾಗುತ್ತದೆ. "ನೀವು ಬೇರೆ ಹುಡುಗಿಯನ್ನು ಮದುವೆಯಾಗ್ತಿರ?" ಎಂದು ಮಲ್ಲಿ ಕೇಳುತ್ತಾಳೆ. ಮತ್ತೆ ನನ್ನ ಜೀವನ? ಎಂದು ಮಲ್ಲಿ ಕೇಳುತ್ತಾಳೆ. ಭೂಮಿಕಾ ಈ ಕಡೆಗೆ ಬರುತ್ತಾ ಇರುತ್ತಾಳೆ. "ನನ್ನ ಜೀವನದಲ್ಲಿ ನೀನು ಮೊದಲನೆಯ ಹುಡುಗಿಯಲ್ಲ. ನಾನು ಇಷ್ಟಪಟ್ಟವರನ್ನು ಮದುವೆಯಾದರೆ ನೂರು ಹೆಣ್ಣುಗಳನ್ನು ಮದುವೆಯಾಗಬೇಕಿತ್ತು" ಎಂದು ಜೈದೇವ್‌ ಹೇಳುತ್ತಾನೆ. "ನೀವು ಹೀಗೆ ಎಂದು ಗೊತ್ತಿಲ್ಲದೆ ಮೋಸ ಹೋಗಿಬಿಟ್ಟೆ. ನಿಮ್ಮನ್ನು ನಂಬಿ ಮೋಸ ಹೋದೆ. ಅದಕ್ಕೆ ಸಾಕ್ಷಿಯಾಗಿ ನಿಮ್ಮ ಹೊಟ್ಟೆಯಲ್ಲಿ ನನ್ನ ಮಗು ಬೆಳಿತಾ ಇದೆ" ಎಂದು ಮಲ್ಲಿ ಅಳುತ್ತಾಳೆ. "ನಿನಗೆ ಹಣ ಬೇಕಾ, ಸೈಲೆಂಟ್‌ ಆಗಿರು. ನಿನಗೆ ಬೇರೆ ಹುಡುಗನ ಮದುವೆ ಮಾಡಿಕೊಡ್ಲ. ಏನ್‌ ಬೇಕು ಕೇಳು" ಎಂದೆಲ್ಲ ಜೈದೇವ್‌ ಹೇಳುತ್ತಾನೆ. ಯಾರನ್ನೋ ಹುಡುಕುತ್ತ ಭೂಮಿ ಈ ಕಡೆ ಬರ್ತಾ ಇರುತ್ತಾರೆ. "ಅವರಿಗೆ ಹೇಳ್ತಿನಿ ಇವರಿಗೆ ಹೇಳ್ತಿನಿ ಅಂದ್ರೆ ನಿನ್ನ ಬಾಯನ್ನು ಪರ್ಮನೆಂಟ್‌ ಮುಗಿಸ್ತಿನಿ" ಎಂದು ಬೆದರಿಕೆ ಹಾಕುತ್ತಾನೆ.

ಮಲ್ಲಿ ಅಳುತ್ತಾ ಇರುತ್ತಾಳೆ. ಜೈದೇವ್‌ ಹೋಗುತ್ತಾನೆ. ಭೂಮಿಕಾ ಬರುತ್ತಾಳೆ. "ಯಾರಲ್ಲಿ ಮಾತನಾಡುತ್ತ ಇದ್ದಿ. ಅವನು ಯಾರು?" ಎಂದು ಭೂಮಿಕಾ ಕೇಳುತ್ತಾಳೆ. "ನನ್ನ ಜೀವನ ಸರಿ ಮಾಡಲು ಆಗುವುದಿಲ್ಲ. ನನ್ನ ಜೀವನ ಇಷ್ಟೇ" ಎಂದು ಮಲ್ಲಿ ಹೇಳುತ್ತಾಳೆ. "ಅವರು ದೊಡ್ಡ ಮನುಷ್ಯರು. ನಮ್ಮಂತವರ ಜೀವನ ಇಷ್ಟೇಯಾ" ಎಂದೆಲ್ಲ ಮಾತುಕತೆ ನಡೆಯುತ್ತದೆ. "ನಿನ್ನ ಜತೆ ನಾನು ನಿಲ್ತಿನಿ" ಎಂದು ಭೂಮಿಕಾ ಹೇಳ್ತಾಳೆ. "ನೀನೂ ಇನ್ನೂ ನಿನ್ನ ಜೀವನ ಸರಿಮಾಡಿಕೊಳ್ಳಬಹುದು" ಎಂದು ಭೂಮಿಕಾ ಹೇಳುತ್ತಾಳೆ. ನಾಳೆಯಾದರೂ ಹೇಳು ಎಂದು ಭೂಮಿಕಾ ಹೇಳುತ್ತಾಳೆ. ಬಸುರಿ ವಿಚಾರ ಮಾವನ ಜತೆ ಜೈದೇವ್‌ ಚರ್ಚೆ ಮಾಡುತ್ತಾನೆ. ಇದಾದ ಬಳಿಕ ಅಲ್ಲಿಗೆ ಜೈದೇವ್‌ ಅಮ್ಮ ಶಕುಂತಲಾ ಬರುತ್ತಾರೆ. "ಮದುವೆ ಚೆನ್ನಾಗಿ ನಡೀಬೇಕು. ಮದುವೆಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ" ಎಂದು ಹೇಳುತ್ತಾರೆ. ಮತ್ತೊಂದೆಡೆ ಗೌತಮ್‌ ಮತ್ತು ಭೂಮಿಕಾರ ಪ್ರೀತಿಯ ಮಾತುಕತೆ ನಡೆಯುತ್ತದೆ.

ಅಮೃತಧಾರೆ ಧಾರಾವಾಹಿ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)
ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್‌: ಜೈದೇವ್‌
ಚಂದನ್‌: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)
ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ