logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ, ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ಮತ್ತೆ ಹಳ್ಳಿವಾಸ

Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ, ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ಗೆ ಮತ್ತೆ ಹಳ್ಳಿವಾಸ

Praveen Chandra B HT Kannada

Sep 16, 2024 09:49 AM IST

google News

Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ

    • Amruthadhaare September 16th Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್‌ 16ರ ಸಂಚಿಕೆಯಲ್ಲಿ ಮಲ್ಲಿ ತನ್ನ ತಾತಾನ ಜತೆಗೆ ಹಳ್ಳಿಗೆ ಹೊರಟಿದ್ದಾಳೆ. ಇದೇ ಸಮಯದಲ್ಲಿ ಗರ್ಭಿಣಿಯ ಜತೆ ಜೈದೇವ್‌ನನ್ನೂ ಕಳುಹಿಸಿದ್ದಾರೆ ಗೌತಮ್‌ ದಿವಾನ್‌.
Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ
Amruthadhaare September 16th Episode: ಸೀಮಂತಕ್ಕಾಗಿ ಹಳ್ಳಿಗೆ ಹೊರಟಳು ಮಲ್ಲಿ

Amruthadhaare September 16th Episode: ಜೈದೇವ್‌ ಟೆನ್ಷನ್‌ನಲ್ಲಿದ್ದಾನೆ. ಆ ಸಮಯದಲ್ಲಿ ಮನೆಹಾಳ ಮಾವ ಅಲ್ಲಿಗೆ ಬರುತ್ತಾರೆ. "ನಿನ್ನ ತಾತಾ ಬಂದಿದ್ದಾರೆ" ಅನ್ನುತ್ತಾರೆ. ನನ್ನ ತಾತಾ ಸತ್ತು ಕಾಲವಾಯ್ತು, ಇದ್ಯಾವ ತಾತಾ ಎನ್ನುತ್ತಾನೆ ಜೈದೇವ್‌. "ಅದೇ ಮಲ್ಲಿ ತಾತಾ ಬಂದಿದ್ದಾರೆ. ಹೋಗಿ ಮಾತನಾಡು" ಎನ್ನುತ್ತಾರೆ. ಈ ವಿಷಯ ಕೇಳಿ ಜೈದೇವ್‌ ತಲೆಬಿಸಿ ಹೆಚ್ಚಾಗುತ್ತದೆ. "ಇವಳು ನನ್ನ ಜೀವನದಲ್ಲಿ ತೊಲಗಿದ್ದರೆ ನೆಮ್ಮದಿಯಾಗಿರುತ್ತಿದ್ದೆ" ಎಂದು ಜೈದೇವ್‌ ಹೇಳುತ್ತಿದ್ದಾನೆ. "ಹೆಣ್ಣಾದರೂ ಎಣ್ಣೆಯಾದರೂ ನಮಗೆ ಒಗ್ಗುತ್ತಾ ಎಂದು ನೋಡಿಕೊಂಡು ಮುಂದುವರೆಯಬೇಕು" ಎಂದೆಲ್ಲ ಮನೆಹಾಳ ಮಾವ ತನ್ನದೇ ಶೈಲಿಯಲ್ಲಿ ಜೈದೇವ್‌ನನ್ನು ಮಾತಿನಲ್ಲೇ ತಿವಿಯುತ್ತಾರೆ. "ಈ ಮನೆಯಲ್ಲಿ ನನ್ನನ್ನು ಯಾರೂ ಕ್ಯಾರೇ ಮಾಡುವುದಿಲ್ಲ. ಎಲ್ಲರೂ ನನ್ನನ್ನು ಸಿಂಪತಿಯಿಂದ ನೋಡಬೇಕು. ಹೀಗೆ ಆಗಬೇಕಾದರೆ ಮಲ್ಲಿ ಸಾಯಬೇಕು" ಎಂದು ಜೈದೇವ್‌ ಹೇಳುತ್ತಾನೆ. ಈ ಮೂಲಕ ಗೌತಮ್‌ ನೀಡಿರುವ ವಾರ್ನಿಂಗ್‌ ಪರಿಣಾಮ ಬೀರಿಲ್ಲ ಎನ್ನುವುದನ್ನು ತೋರ್ಪಡಿಸುತ್ತಾನೆ.

ಮಲ್ಲಿ ತಾತಾ ಗೌತಮ್‌ ದಿವಾನ್‌ ಮನೆಯಲ್ಲಿದ್ದಾರೆ. ಮೊದಲು ಶಕುಂತಲಾದೇವಿ ಜತೆ ಮಾತನಾಡುತ್ತ ಇರುತ್ತಾರೆ. ಇದಾದ ಬಳಿಕ ಗೌತಮ್‌ ಮತ್ತು ಭೂಮಿಕಾ ಬರುತ್ತಾರೆ. "ಮಲ್ಲಿಗೆ ಸೀಮಂತ ಮಾಡಲು ಒಳ್ಳೆಯ ದಿನ ಹೇಳಿ" ಎಂದು ಶಕುಂತಲಾದೇವಿ ಬಳಿಯಲ್ಲಿ ಗೌತಮ್‌ ಕೇಳುತ್ತಾರೆ. "ಸೀಮಂತ ಮಾಡುವುದು ಒಳ್ಳೆಯ ಸಂಗತಿ. ಆದರೆ, ದಿಢೀರ್‌ ಅಂತ ಹಳ್ಳಿಗೆ ಕಳುಹಿಸುವುದು ಎಷ್ಟು ಸರಿ?" ಎಂದು ಅಜ್ಜಮ್ಮ ಕೇಳುತ್ತಾರೆ. ಅದಕ್ಕೆ ಗೌತಮ್‌ "ಅಲ್ಲಿ ಅಂಬ್ಯುಲೆನ್ಸ್‌ ರೆಡಿ ಇರುತ್ತದೆ. ಜತೆಗೆ ಏನು ತಿನ್ನಬೇಕು, ತಿನ್ನಬಾರದು ಎಂದು ನೋಡಲು ಡಯೇಟಿಷಿಯನ್ಸ್‌ ಇರ್ತಾರೆ. ಇಷ್ಟು ಮಾತ್ರವಲ್ಲ, ಅಲ್ಲಿಗೆ ಜೈದೇವ್‌ನನ್ನು ಕಳುಹಿಸುತ್ತ ಇದ್ದೇವೆ. ಇನ್ನೇನೂ ಬೇಕು" ಎಂದು ಗೌತಮ್‌ ಹೇಳಿದಾಗ ಜೈದೇವ್‌ ಕಕ್ಕಾಬಿಕ್ಕಿಯಾಗುತ್ತಾನೆ. ಉಳಿದವರು "ಮಲ್ಲಿ ಇಲ್ಲೇ ಇರಬಹುದಲ್ವ" ಎಂದು ಕೇಳುತ್ತಾರೆ. "ಮಲ್ಲಿಗೆ ಹಳ್ಳಿಗೆ ಹೋಗಬೇಕು ಎಂಬ ಆಸೆ ಇದೆ. ತಾತಾನ ಜತೆ ಕಾಲ ಕಳೆಯುವ ಆಸೆ ಇರುತ್ತದೆ. ಹಳ್ಳಿಯಲ್ಲಿ ಒಳ್ಳೆಯ ವಾತಾವರಣ ಇರುತ್ತದೆ. ಮಗುವಿನ ಬೆಳವಣಿಗೆಗೆ ಒಳ್ಳೆಯದು" ಎಂದು ಗೌತಮ್‌ ಹೇಳುತ್ತಾರೆ. ಎಲ್ಲರೂ ಒಪ್ಪುತ್ತಾರೆ. "ಮಲ್ಲಿಯನ್ನು ಮುಗಿಸಬೇಕು ಎಂದು ಜೈದೇವ್‌ ಯೋಚಿಸಿದ್ದಾನೆ. ಇಲ್ಲಿ ನೋಡಿದ್ರೆ ಇವನನ್ನೇ ಮಲ್ಲಿಯ ಜತೆ ಕಳುಹಿಸಿದ್ದಾರೆ" ಎಂದು ಮನೆಹಾಳ ಮಾವ ಯೋಚಿಸುತ್ತಾರೆ.

ಆನಂದ್‌ ಮತ್ತು ಅಪರ್ಣಾ ಮಾತನಾಡುತ್ತಿದ್ದಾರೆ. ಮಲ್ಲಿಯ ಸೀಮಂತದ ವಿಷಯ ಬರುತ್ತದೆ. ಇವರಿಬ್ಬರೂ ತಮ್ಮ ಸೀಮಂತದ ದಿನವನ್ನು ನೆನಪಿಸುತ್ತಾರೆ. "ನಮಗೆ ಸೀಮಂತದ ಸಮಯದಲ್ಲಿ ಡುಮ್ಮ ಸರ್‌ ಎಷ್ಟು ನೆರವಾಗಿದ್ರು. ಅರ್ಜೆಂಟ್‌ ಆಗಿ ಫಾರಿನ್‌ನಲ್ಲಿ ಚಿಕಿತ್ಸೆ ನೀಡದೆ ಇದ್ರೆ ಕಷ್ಟವಾಗ್ತ ಇತ್ತು" ಎಂದು ಅಪರ್ಣಾ ಹೇಳುತ್ತಾಳೆ. ಡುಮ್ಮ ಸರ್‌ ಗುಣಗಾನ ನಡೆಯುತ್ತದೆ.

ಏನು ಜೈದೇವ್‌ ಮೆಟರ್ನಿಟಿ ಲೀವ್‌ ಸಿಕ್ಕಂಗೆ ಇದೆ ಎಂದು ಮಾಮ್ಸ್‌ ಹೇಳುತ್ತಾರೆ. "ಏನು ಹೇಳಲಿ ಮಾಮ್ಸ್‌, ಎಲ್ಲವೂ ನನ್ನ ಕರ್ಮ" ಎಂದು ಜೈದೇವ್‌ ಹೇಳುತ್ತಾನೆ. ಈ ಸಮಯದಲ್ಲಿ ಮಾವ "ಕರ್ಮದ ಕಲ್ಲನು ಎಡವಿದ ಮನುಜನ ಬೆರಳಿನ ಗಾಯವು ಮಾಯದು ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ" ಎಂಬ ಕಾಂತಾರ ಸಿನಿಮಾದ ಹಾಡನ್ನು ಹಾಡುತ್ತಾರೆ. ಒಟ್ಟಾರೆ ಜೈದೇವ್‌ನ ಕೋಪದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಾರೆ.

ಇದೇ ಸಮಯದಲ್ಲಿ ಜೀವನ್‌ ಗೌತಮ್‌ ದಿವಾನ್‌ ಮನೆಗೆ ಬರುತ್ತಾರೆ. ಭೂಮಿಕಾ ಮತ್ತು ಜೀವನ್‌ ಮಾತನಾಡುತ್ತಾರೆ. ಒಂದಿಷ್ಟು ಉಭಯ ಕುಶಲೋಪರಿ ಇರುತ್ತದೆ. ಈ ಸಮಯದಲ್ಲಿ ಅಪ್ಪ ಹೇಗಿದ್ದಾರೆ ಎಂದು ಕೇಳುತ್ತಾಳೆ. "ಅಪ್ಪ ತೋಟದ ಮನೆಗೆ ಹೋಗಿದ್ದಾರೆ. ಅಪ್ಪಿ ವಿಷಯದಲ್ಲಿ ಡಲ್‌ ಆಗಿದ್ದಾರೆ" ಎಂದು ಜೀವನ್‌ ಹೇಳುತ್ತಾರೆ. ಇದಾದ ಬಳಿಕ ಅಪೇಕ್ಷಾ ಮತ್ತು ಪಾರ್ಥನನ್ನು ಜೀವನ್‌ ಮೀಟ್‌ ಆಗುತ್ತಾರೆ. ಈ ಸಮಯದಲ್ಲಿ ಅಪೇಕ್ಷಾ ಅಮ್ಮ ಅತ್ತಿಗೆಯನ್ನು ಕೇಳುತ್ತಾರೆ. ತಂದೆಯ ಕುರಿತು ವಿಚಾರಿಸುವುದಿಲ್ಲ. ಇದು ಜೀವನ್‌ಗೆ ಬೇಸರ ತರುತ್ತದೆ. ಇನ್ನೊಂದೆಡೆ ತಾತಾ ಮತ್ತು ಮೊಮ್ಮಗಳು ಮನೆಯಿಂದ ಹೊರಡುತ್ತಾರೆ. ಗೌತಮ್‌ ಮತ್ತು ಭೂಮಿಕಾ ಭಾರವಾದ ಮನಸ್ಸಿನಿಂದ ಇವರನ್ನು ಕಳುಹಿಸಿಕೊಡುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ