logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ನೀವು 24ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡಿದ್ದೀರಾ; ಗೌತಮ್‌ಗೆ ಭವಿಷ್ಯದೊಂದಿಗೆ ಭೂತಕಾಲ ನೆನಪಿಸಿದ ಗುರುಗಳು

Amruthadhaare Serial: ನೀವು 24ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡಿದ್ದೀರಾ; ಗೌತಮ್‌ಗೆ ಭವಿಷ್ಯದೊಂದಿಗೆ ಭೂತಕಾಲ ನೆನಪಿಸಿದ ಗುರುಗಳು

Praveen Chandra B HT Kannada

Apr 16, 2024 11:06 AM IST

google News

ಅಮೃತಧಾರೆ ಸೀರಿಯಲ್‌ ಸ್ಟೋರಿ

    • Amruthadhaare Serial: ಝೀ ಕನ್ನಡವಾಹಿನಿಯ ಅಮೃತಧಾರೆಯ ಸೋಮವಾರದ ಸಂಚಿಕೆಯಲ್ಲಿ ಗುರುಗಳು ಗೌತಮ್‌ನ ಭವಿಷ್ಯ ಮಾತ್ರವಲ್ಲದೆ ಭೂತಕಾಲದ ವಿಷಯವನ್ನೂ ಹೇಳುತ್ತಾರೆ. ಗೌತಮ್‌ ಮನಸ್ಸಿನಲ್ಲಿ ಮತ್ತೆ ಒಲವ ಅಮೃತಧಾರೆ ಮೂಡುತ್ತದೆ.
ಅಮೃತಧಾರೆ ಸೀರಿಯಲ್‌ ಸ್ಟೋರಿ
ಅಮೃತಧಾರೆ ಸೀರಿಯಲ್‌ ಸ್ಟೋರಿ

ನೀವು ಈ ಜಾತಕನ ಎಲ್ಲಿ ಬೇಕಾದರೂ ತೋರಿಸಿ ಇದನ್ನೇ ಹೇಳ್ತಾರೆ ಎಂದು ಗುರುಗಳು ಹೇಳುತ್ತಾರೆ. ಏನೂ ಸಮಸ್ಯೆ ಇಲ್ಲ ಎಂದು ಇವರು ಹೇಳಿದ್ರೂ ಪದೇಪದೇ ಯಾಕೆ ಕೇಳ್ತಿಯಾ ಎಂದು ಅಜ್ಜಿ ಕೇಳುತ್ತಾರೆ. "ಹೌದಜ್ಜಿ, ಗುರುಗಳು ಒಬ್ಬರು, ನಾವಿಬ್ಬರು ಮದುವೆಯಾಗಬಾರದು, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಬಾರದು, ಭೂಮಿಕಾ ಅವರ ಜೀವಕ್ಕೆ ಅಪಾಯ ಇದೆ ಎಂದ್ರು" ಎನ್ನುತ್ತಾರೆ. ಇದನ್ನು ಕೇಳಿ ಎಲ್ಲರೂ ಆಶ್ಚರ್ಯಪಡುತ್ತಾರೆ. "ಇಲ್ಲ ಆ ರೀತಿ ಆಗಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರು ಆ ರೀತಿ ಹೇಳಿದ್ರೆ ಅವರಿಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲ ಎಂದರ್ಥ" ಎಂದು ಗುರುಗಳು ಹೇಳುತ್ತಾರೆ. "ಇವನ ಹಳೆಯ ವಿಷಯ ಸ್ವಲ್ಪ ಹೇಳಿ" ಎಂದು ಶಕುಂತಲಾದೇವಿ ಹೇಳುತ್ತಾರೆ. "ನಿಮಗೆ 24 ವರ್ಷ ಇದ್ದಾಗ ನಿಮ್ಮ ತಂದೆನ ಕಳೆದುಕೊಂಡ್ರಿ" "ನಿಮಗೆ 44ನೇ ವರ್ಷ ತನಕ ಮದುವೆ ಯೋಗ ಇರಲಿಲ್ಲ. ನೀವು ಮದುವೆಯಾದದ್ದು 45ನೇ ವರ್ಷಕ್ಕೆ ಅಲ್ವ" ಎಂದು ಗುರುಗಳು ಹೇಳುತ್ತಾರೆ. "ಹಿಂದೆ ನಡೆದದ್ದನ್ನೂ ಸರಿಯಾಗಿ ಹೇಳ್ತಾರಲ್ವ" ಎಂದು ಶಕುಂತಲಾದೇವಿ ಅಂದುಕೊಳ್ಳುತ್ತಾರೆ. "ನಿಮಗೆ ಭಗವಂತ ಎಲ್ಲವನ್ನೂ ಕೊಟ್ಟಿದ್ದಾನೆ. ತಾಯಿ ಪ್ರೀತಿ ಒಂದನ್ನು ಬಿಟ್ಟು. ನಿಮಗೆ ಸುತ್ತಮುತ್ತ ಎಷ್ಟೇ ಶುಚಿಯಾಗಿದ್ದರೂ ಸಾಕಾಗುವುದಿಲ್ಲ. ಇನ್ನೂ ಸರಿಯಾಗಿರಬೇಕೆಂದು ಬಯಸುವಿರಿ. ರುಚಿ ಅಂದರೆ ನಿಮಗೆ ಪಂಚಪ್ರಾಣ, ಅನುಭವಿಸಿ ತಿಂತೀರಿ. ನಿಮ್ಮ ಜೀವನದಲ್ಲಿ ಪ್ರೀತಿ ಕೊರತೆ ಇದೆ ಅಂತ ಆ ಭಗವಂತ ನಿಮ್ಮಿಬ್ಬರನ್ನು ಒಂದು ಮಾಡಿದ್ದಾನೆ" ಎಂದು ಗೌತಮ್‌ ಬಗ್ಗೆ ಗುರುಗಳು ಹೇಳುತ್ತಾರೆ. "ಇಷ್ಟು ದಿನ ನಿಮ್ಮ ಹತ್ರ ದುಡ್ಡು ಮಾತ್ರ ಇತ್ತು. ಪ್ರೀತಿ ಸಿಕ್ಕಿರಲಿಲ್ಲ. ಈಗ ದುಡ್ಡಿನ ಜತೆ ಪ್ರೀತಿಯೂ ಬಂದು ಸೇರಿದೆ" ಎಂದಾಗ ಹಿನ್ನೆಲೆಯಲ್ಲಿ ಒಲವೇ ಅಮೃತಧಾರೆ ಹಾಡು ಕೇಳಿಸುತ್ತದೆ.

ಇದಾದ ಬಳಿಕ ನನ್ನ ಮೈದುನ ಮತ್ತು ತಂಗಿ ಜಾತಕ ಎಂದು ನೀಡುತ್ತಾರೆ. ಈ ಜಾತಕದ ಪ್ರಕಾರ ಇವರಿಬ್ಬರು ಸುಲಭವಾಗಿ ಮದುವೆಯಾಗಿಲ್ಲ. ಸಾಕಷ್ಟು ಅಡ್ಡಿ ಆತಂಕಗಳು ಆಗಿವೆ ಎಂದು ಹೇಳುತ್ತಾರೆ. ಈ ಹುಡುಗಿಯನ್ನು ಕಾಯಲು ತಂದೆ ಸ್ಥಾನದಲ್ಲಿ ಒಬ್ಬರಿದ್ದಾನೆ. ತಾಯಿ ಸ್ಥಾನದಲ್ಲಿ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಅದಕ್ಕೆ ಅವರಿಬ್ಬರು ಚೆನ್ನಾಗಿದ್ದಾರೆ, ಮುಂದೆಯೂ ಚೆನ್ನಾಗಿರುತ್ತಾರೆ ಎಂದು ಹೇಳುತ್ತಾರೆ. ಗುರುಗಳು ಹೋದ ಬಳಿಕ ಶಕುಂತಲಾದೇವಿ "ಯಾರನ್ನು ನಂಬೋದು ಯಾರನ್ನೂ ಬಿಡೋದು ಗೊತ್ತಾಗ್ತ ಇಲ್ಲ. ಎಲ್ಲಾ ಚೆನ್ನಾಗಿದೆ ಅಂದ್ರಲ್ಲ ಅಷ್ಟು ಸಾಕು" ಎಂದು ನಾಟಕೀಯವಾಗಿ ಹೇಳುತ್ತಾರೆ.

ಇನ್ನೊಂದೆಡೆ ಜೈದೇವ್‌ಗೆ ಮಲ್ಲಿ ಮನೆಯಲ್ಲಿ ಆತಿಥ್ಯ ನಡೆಯುತ್ತದೆ. ನೆಲದ ಮೇಲೆ ಕೂತು ಊಟ ಮಾಡುತ್ತಾನೆ. ಆ ಪಾತ್ರೆಗಳನ್ನು ನೋಡುವಾಗ "ನಮ್ಮ ಮನೆಯಲ್ಲಿ ನಾಯಿಗೂ ಇದಕ್ಕಿಂತ ಚೆನ್ನಾಗಿರುವ ಪಾತ್ರೆ ಇರುತ್ತದೆ" ಎಂದುಕೊಳ್ಳುತ್ತಾನೆ. ಒಬ್ಬಟ್ಟು ಊಟ ತಿನ್ನುತ್ತಾನೆ. ತಾತಾ ಮತ್ತು ಹೆಂಡತಿ ಸೇರಿ "ಅದು ತಿನ್ನಿ ಇದು ತಿನ್ನಿ" ಎಂದು ಊಟ ಮಾಡಿಸ್ತಾರೆ. ಮನೆಯೊಳಗೆ ಹಸು ಸಾಕುತ್ತಿದ್ದ ವಿಷಯಗಳನ್ನೆಲ್ಲ ನೋಡುತ್ತಾನೆ. ಹಸು ಸಾಕಿ ದೊಡ್ಡ ಡೈರಿ ಮಾಡಬೇಕು ಎಂಬ ಕನಸು ಕಂಡಿದ್ದೆ ಎಂದು ಹೇಳುತ್ತಾಳೆ. ಹಳ್ಳಿಯ ಕಥೆ ಹೇಳುತ್ತಾಳೆ. ಈ ಸಮಯದಲ್ಲಿ ಮನಸ್ಸಿನೊಳಗೆ ಮಲ್ಲಿಯನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಬೇಕೆಂಬ ಕೆಟ್ಟ ಆಲೋಚನೆ ಮೂಡುತ್ತದೆ. ನಿಮ್ಮಿಬ್ಬರ ಭವಿಷ್ಯ ಚೆನ್ನಾಗಿರಬೇಕು ಅಂದರೆ ಪ್ರಪೋಸ್‌ ಮಾಡಿಬಿಡು ಎಂದು ಸಲಹೆ ನೀಡುತ್ತಾನೆ.

ನಿನಗೆ ಪ್ರಾಪರ್‌ ಕೆಲಸ ಸಿಗುವ ತನಕ ಸಿಕ್ಕಸಿಕ್ಕ ಕೆಲಸ ಮಾಡು ಎಂದು ಗೆಳೆಯ ಹೇಳಿದ್ದು ಜೀವನ್‌ಗೆ ನೆನಪಿಗೆ ಬರುತ್ತದೆ. ಆ ಸಮಯದಲ್ಲಿ ಮಹಿಮಾ ಬರುತ್ತಾಳೆ. "ನಿನ್ನ ಲ್ಯಾಪ್‌ಟಾಪ್‌ ಎಲ್ಲಿ" ಎಂದು ಮಹಿಮಾ ಕೇಳುತ್ತಾಳೆ. "ಸರ್ವೀಸ್‌ಗೆ ಕೊಟ್ಟಿದ್ದೇನೆ" ಎಂದು ಹೇಳುತ್ತಾನೆ. "ಆಫೀಸ್‌ನಲ್ಲಿ ಕಾಫಿ ಕುಡಿದಾಗ ಚೆಲ್ಲಿ ಹಾಳಾಯ್ತು" ಎಂದು ಸುಳ್ಳು ಹೇಳುತ್ತಾನೆ. ಆದಷ್ಟು ಬೇಗ ಕೆಲಸ ಹುಡುಕಬೇಕು, ಇಲ್ಲಾಂದ್ರೆ ಪ್ರಾಬ್ಲಂ ಆಗತ್ತೆ ಎಂದುಕೊಳ್ಳುತ್ತಾನೆ. ಇನ್ನೊಂದೆಡೆ ಗೌತಮ್‌ ಖುಷಿಯಲ್ಲಿದ್ದಾನೆ. ಗುರುಗಳು ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾರೆ. "ಈಗ ನೀವು ನಾರ್ಮಲ್‌ ಆಗಿದ್ದೀರ" ಎಂದು ಹೇಳುತ್ತಾಳೆ. ನಿಮ್ಮ ವಿಷಯದಲ್ಲಿ ಟೆನ್ಷನ್‌ ಆಗಿದ್ದೆ ಎನ್ನುತ್ತಾನೆ. ಮತ್ತೆ ಒಂದಿಷ್ಟು ಭಾವನಾತ್ಮಕ ಮಾತುಕತೆ ನಡೆಯುತ್ತವೆ. ನನ್ನ ಮನಸ್ಸಿನ ಭಾರವನ್ನು ಇಳಿಸಿಬಿಟ್ರಿ ಎಂದು ಅಪ್ಪಿಕೊಳ್ಳುತ್ತಾನೆ. "ಹೃದಯವೇ ಹೃದಯವೇ" ಹಾಡು ಹಿನ್ನೆಲೆಯಲ್ಲಿ ಕೇಳಿಸುತ್ತದೆ. ಅಮೃತಧಾರೆಯಲ್ಲಿ ಮತ್ತೆ ಒಲವಧಾರೆ ಸುರಿಯುತ್ತದೆ. ಆ ಸಮಯದಲ್ಲಿ ಅಲ್ಲಿ ಆನಂದ್‌ ಬಂದು "ಇದು ಕಣೋ ಹೊಸ ಅಧ್ಯಾಯ" ಎನ್ನುತ್ತಾನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ