Amruthadhaare: ಮೋಸ ಮಾಡಲೆಂದು ಬಂದ ಅಶ್ವಿನಿ ಗಂಡ; ಜೈದೇವ್ ಇಷ್ಟು ಕ್ರೂರಿನಾ? ಕೆಂಚ ಹೇಳಿದ ಸತ್ಯ ಕೇಳಿ ಭೂಮಿಕಾಳಿಗೆ ಆಘಾತ
Jun 21, 2024 06:30 AM IST
Amruthadhaare:ಜೈದೇವ್ ಇಷ್ಟು ಕ್ರೂರಿನಾ? ಕೆಂಚ ಹೇಳಿದ ಸತ್ಯ ಕೇಳಿ ಭೂಮಿಕಾಳಿಗೆ ಆಘಾತ
- Amruthadhaare serial Yesterday episode: ಅಮೃತಧಾರೆ ಸೀರಿಯಲ್‌ನ ಗುರುವಾರದ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಟೆಂಡರ್ ತಪ್ಪಿಸಿದಾತನ ಹಿಡಿಯಲು ಗೌತಮ್ ಬಲೆ ಬೀಸಿದ್ದಾರೆ. ಇನ್ನೊಂದೆಡೆ ಕೆಂಚಪ್ಪ ಬಂದು ಭೂಮಿಕಾಳಿಗೆ ಎಲ್ಲಾ ಸತ್ಯ ಹೇಳಿದ್ದಾನೆ. ಅಶ್ವಿನಿ ಕುಟುಂಬದಿಂದ ಹಣ ಕಸಿಯಲು ಅರುಣ್ ಬಂದಿದ್ದಾನೆ.
Amruthadhaare serial Yesterday episode: ಜೈದೇವ್ ಮತ್ತು ಮಲ್ಲಿ ಮೇಲೆ ಅಟ್ಯಾಕ್ ಆಗಿರುವ ವಿಷಯವನ್ನು ಭೂಮಿಕಾ ಗೌತಮ್‌ಗೆ ತಿಳಿಸುತ್ತಾಳೆ. ನಮ್ಮ ಮೇಲೆ ಚಿಕ್ಕಮಗಳೂರಿನಲ್ಲಿ ನಡೆದ ದಾಳಿ ರೀತಿ ಇಲ್ಲಿ ಮಲ್ಲಿ ಮತ್ತು ಜೈದೇವ್ ಮೇಲೆ ಅಟ್ಯಾಕ್ ಆಗಿತ್ತು ಎಂಬ ವಿವರ ನೀಡಿದಾಗ ಗೌತಮ್‌ಗೆ ಅಚ್ಚರಿಯಾಗುತ್ತದೆ. ಈ ವಿಚಾರ ನನಗೆ ಯಾಕೆ ತಿಳಿಸಿಲ್ಲ ಎಂದು ಕೇಳುತ್ತಾನೆ. ಸಿಚುವೇಷನ್ ಆಗಿತ್ತು ಎನ್ನುತ್ತಾರೆ ಭೂಮಿಕಾ. ಈ ದಾಳಿ ಹಿಂದೆಯೂ ಟೆಂಡರ್ ತಪ್ಪಿಸಿದವರು ಇರಬಹುದು. ನೀವು ತನಿಖೆ ಮಾಡುತ್ತಿರುವುದು ತಿಳಿಯುವಂತೆ ಇರಬಾರದು, ಅವರು ಅಲಾರ್ಟ್ ಆಗುತ್ತಾರೆ. ನೀವು ಏನೂ ಆಗದವರಂತೆ ಇರಿ ಎಂದು ಭೂಮಿಕಾ ಸಲಹೆ ನೀಡಿದಾಗ ಗೌತಮ್‌ಗೆ ಹೌದೆನಿಸುತ್ತದೆ.
ಹಣಕ್ಕಾಗಿ ಅಶ್ವಿನಿ ಗಂಡ ಅರುಣ್ ನಾಟಕ
ಮನೆಗೆ ಬಂದಿರುವ ಅಶ್ವಿನಿ ಗಂಡ ಏನೋ ಸಮಸ್ಯೆಯಲ್ಲಿರುವುದನ್ನು ಹೇಳುತ್ತಾನೆ. ಬಿಸ್ನೆಸ್ ಸರಿ ಹೋಗ್ತಾ ಇಲ್ಲ. ನಾನು ಅಂದುಕೊಂಡ ರಿಸಲ್ಟ್ ಬರ್ತಾ ಇಲ್ಲ. ತುಂಬಾ ಲಾಸ್ ಆಗ್ತಾ ಇದೆ. ಅದಕ್ಕೆ ಅಪ್ಪ ಅಮ್ಮನನ್ನೂ ನೋಡಲು ಹೋಗದೆ ಸೀದಾ ಇಲ್ಲಿಗೆ ಬಂದೆ ಎನ್ನುತ್ತಾನೆ ಅಶ್ವಿನಿ ಗಂಡ. ಹೇಗಾದ್ರೂ ಮಾಡಿ ದುಡ್ಡು ಅರೆಂಜ್ ಮಾಡಬೇಕು, ಅದು ಹೇಗೆ ಎಂದು ಗೊತ್ತಾಗ್ತ ಇಲ್ಲ ಎನ್ನುತ್ತಾನೆ. ಈಗ ನಿನಗೆ ಎಷ್ಟು ಹಣ ಬೇಕಾಗಬಹುದು ಎಂದು ಅಶ್ವಿನಿ ಕೇಳಿದಾಗ "ಸುಮಾರು 40 ಕೋಟಿ ರೂಪಾಯಿ ಆದ್ರೂ ಬೇಕೇ ಬೇಕು" ಎನ್ನುತ್ತಾನೆ. ಅಷ್ಟೊಂದು ಲಾಸ್ ಆಗಿದೆಯಾ ಎಂದು ಕೇಳಿದಾಗ "ಡಾಲರ್ ಲೆಕ್ಕದಲ್ಲಿ ಕಡಿಮೆ, ಸುಮಾರು ಐವತ್ತು ಡಾಲರ್, ಆದರೆ, ರೂಪಾಯಿಗೆ ಲೆಕ್ಕ ಹಾಕಿದಾಗ ಇಷ್ಟು ಆಗುತ್ತದೆ" ಎನ್ನುತ್ತಾನೆ. ನಾನು ಬಿಸಿನೆಸ್ ಸ್ಟಾರ್ಟ್ ಮಾಡೋ ಟೈಮ್‌ನಲ್ಲಿ ಮಾರ್ಕೆಟ್ ಕ್ರಾಶ್ ಆಯ್ತು. ಹಾಗೇ ಲಾಸ್ ಆಯ್ತು ಎನ್ನುತ್ತಾನೆ. ಹೇಗಾದರೂ ಮಾಡಿ ದುಡ್ಡು ಅರೆಂಜ್ ಮಾಡೋಣ ಎಂದು ಅಶ್ವಿನಿ ಹೇಳಿ ಯೋಚನೆಗೆ ಬೀಳುತ್ತಾಳೆ. ಈಕೆಯ ಈ ಭರವಸೆಯನ್ನು ನೋಡಿ ಮನಸ್ಸಲ್ಲಿಯೇ ನಗುತ್ತಾನೆ ಅಶ್ವಿನಿ ಗಂಡ. ಈ ಮೂಲಕ ಆತನೂ ಹಣ ವಸೂಲಿ ಮಾಡಲು ಬಂದವನೆಂದು ತೋರಿಸುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಕೆಂಚ ಮತ್ತು ಭೂಮಿಕಾ ಮಾತುಕತೆ
ಭೂಮಿಕಾಳಿಗೆ ಕೆಂಚ ಕಾಲ್ ಮಾಡುತ್ತಾನೆ. ಜೈಲಿನಿಂದ ಬಿಡಿಸಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಾಳೆ. ಕೆಂಚನ ಭೂಮಿಕಾ ಜೈಲಿನಿಂದ ಬಿಡಿಸಿದ್ದಾಳೆ. "ನೀವು ಬಿಡಿಸದೆ ಇದ್ದರೆ ನಾನು ಜೈಲಲ್ಲಿ ಕೊಳೆಯ ಬೇಕಿತ್ತು. ನನ್ನ ಹೆಂಡ್ರು ಮಕ್ಕಳು ಕಷ್ಟಪಡಬೇಕಿತ್ತು" ಎನ್ನುತ್ತಾನೆ. "ನಾನು ಎಲ್ಲಿಗೆ ಬರಬೇಕು, ಯಾವಾಗ ಬರಬೇಕು, ಎಲ್ಲಾ ಸತ್ಯ ಹೇಳ್ತಿನಿ" ಎಂದು ಕೆಂಚ ಹೇಳುತ್ತಾನೆ. "ಎಲ್ಲಿ ಯಾವಾಗ ಸಿಗುತ್ತೇನೆ ಎಂದು ಆಮೇಲೆ ತಿಳಿಸುವೆ" ಎಂದು ಹೇಳುತ್ತಾಳೆ.
ಶಕುಂತಲಾ ದೇವಿ ಅಳಿಯನ ಯೋಗಕ್ಷೇಮ ವಿಚಾರಿಸುತ್ತಾರೆ. "ಫಾರಿನ್‌ನಿಂದ ನಿಮಗೆಲ್ಲ ಗಿಫ್ಟ್ ತಂದಿದ್ದೆ. ಕಸ್ಟಮ್ಸ್ ಎಲ್ಲಾ ತೆಗೆದುಕೊಂಡರು. ನಾನು ಅಮ್ಮನ ಮನೆಗೂ ಹೋಗಿಲ್ಲ. ಅಶ್ವಿನಿ ಜತೆ ಟೈಮ್ ಸ್ಪೆಂಡ್ ಮಾಡಲು ಆಗುತ್ತಿಲ್ಲ" ಎಂದೆಲ್ಲ ಸುಳ್ಳು ಹೇಳುತ್ತಾನೆ. ಈ ಮೂಲಕ ಅತ್ತೆಯ ಮನಸ್ಸು ಗೆಲ್ಲುತ್ತಾನೆ. "ಅಮ್ಮನಲ್ಲಿ ಯಾಕೆ ಹೇಳಿಲ್ಲ. ಲಾಸ್ ವಿಷಯ ಯಾಕೆ ತಿಳಿಸಿಲ್ಲ" ಎಂದು ಅಶ್ವಿನಿ ಕೇಳುತ್ತಾಳೆ. "ಲಾಸ್ ಆಗಿದೆ ಎಂದು ನಾನು ಹೇಳಿದರೆ ಈ ಮನೆಯಲ್ಲಿ ನನ್ನ ಪ್ರೆಸ್ಟೀಜ್ ಏನಾಗಬಹುದು. ನೀನೇ ಹೇಳು" ಎನ್ನುತ್ತಾನೆ ಅರುಣ್.
ಇನ್ನೊಂದೆಡೆ ಕೆಂಚನಿಗೆ ಭೂಮಿಕಾ ಕಾಲ್ ಮಾಡುತ್ತಾಳೆ. ಲೊಕೆಷನ್ ಕಳುಹಿಸುತ್ತಾಳೆ. ಅಲ್ಲಿ ಇಬ್ಬರು ಭೇಟಿಯಾಗಲು ಯೋಜಿಸುತ್ತಾರೆ.. "ನನ್ನನ್ನು ಕಿಡ್ನ್ಯಾಪ್ ಮಾಡಿದ್ದು ಯಾರು? ಮಲ್ಲಿಯನ್ನು ಕಿಡ್ನ್ಯಾಪ್ ಮಾಡಿದ್ದು ಯಾರು? ಇದರ ಹಿಂದೆ ಯಾರಿದ್ದಾರೆ?" ಎಂಬ ಯೋಚನೆ ಭೂಮಿಕಾಳಲ್ಲಿ ಇರುತ್ತದೆ.
ಇನ್ನೊಂದೆಡೆ ರಾಘವ್ ಜೈದೇವ್‌ಗೆ ಕಾಲ್ ಮಾಡುತ್ತಾನೆ. ಟೆಂಡರ್ ಮೋಸ ಮಾಡಿದ ಈತನಿಗೆ ಎರಡು ಕೋಟಿ ರೂಪಾಯಿ ನೀಡಲು ಫೋನ್ ಮಾಡಿರುತ್ತಾನೆ. ಈ ಮೂಲಕ ಪ್ರೆಸ್ಟಿಯೆಜಸ್ ಟೆಂಡರ್ ನೀಡಿರುವುದಕ್ಕೆ ಹಣ ಪಡೆಯಲು ಉದ್ದೇಶಿಸಿದ್ದಾನೆ.
ಟೆಂಡರ್ ತಪ್ಪಿಸಿದ ಕಳ್ಳನ ಪತ್ತೆಗೆ ಬಲೆ
ಇದೇ ಸಮಯದಲ್ಲಿ ಜೀವನ್ ಗೆಳೆಯ ಗೌತಮ್‌ಗೆ ಕಾಲ್ ಮಾಡುತ್ತಾನೆ. ನಮ್ಮ ಕಂಪನಿಯಿಂದ ಇವತ್ತು ದೊಡ್ಡ ಅಮೌಂಟ್ ಡ್ರಾ ಆಗಿದೆ. ಆ ಹಣವನ್ನು ಮಾಹಿತಿ ಲೀಕ್ ಮಾಡಿದವರಿಗೆ ನೀಡಲು ಕೊಂಡೊಯ್ಯುವಂತೆ ಕಾಣಿಸುತ್ತದೆ ಎಂಬ ಮಾಹಿತಿ ನೀಡುತ್ತಾನೆ. ಆ ವಾಹನದ ಲೊಕೆಷನ್ ತಿಳಿಸಲು ಸಾಧ್ಯವಾಗುತ್ತ ಎಂದು ಗೌತಮ್ ಕೇಳುತ್ತಾರೆ. ಇದರಿಂದ ನನ್ನ ಕೆಲಸಕ್ಕೆ ರಿಸ್ಕ್ ಎನ್ನುತ್ತಾನೆ. "ಕೆಲಸ ಹೋದ್ರೆ ನನ್ನ ಕಂಪನಿಯಲ್ಲಿ ಒಳ್ಳೆಯ ಪೋಸ್ಟ್ ನೀಡುವೆ" ಎನ್ನುತ್ತಾರೆ ಗೌತಮ್. ಗೌತಮ್‌ಗೆ ಸಹಾಯ ಮಾಡಲು ಜೀವನ್ ಗೆಳೆಯ ಒಪ್ಪುತ್ತಾನೆ. ಆದರೆ, ಇವತ್ತು ಕಂಪನಿಯಿಂದ ಹೊರ ಹೋಗಲು ನನ್ನಿಂದ ಸಾಧ್ಯವಿಲ್ಲ ಎಂದಾಗ ಗೌತಮ್ ನಾನೊಂದು ಜಿಪಿಎಸ್ ಟ್ರ್ಯಾಕರ್ ಕಳುಹಿಸಿ ಕೊಡುವೆ, ಅದನ್ನು ಆ ವಾಹನಕ್ಕೆ ಸಿಲುಕಿಸಿ ಎನ್ನುತ್ತಾನೆ. ಅದಕ್ಕೆ ಆತ ಒಪ್ಪುತ್ತಾನೆ. ಈ ಮೂಲಕ ಜೈದೇವ್‌ನ ಹಿಡಿಯಲು ಪ್ಲ್ಯಾನ್ ರೆಡಿಯಾಗುತ್ತದೆ.
ಶಕುಂತಲಾ ದೇವಿ ಮತ್ತು ಆಕೆಯ ಸಹೋದರ ಮಾತನಾಡುತ್ತಾರೆ. "ಈ ಸರ್ತಿ ಪಟ್ಟ ನಿನಗೆ ಪಕ್ಕಾ" ಎಂದು ರಮಕಾಂತ್ ಹೇಳುತ್ತಾನೆ. ಶಕುಂತಲಾದೇವಿ ಉಬ್ಬುವಂತಹ ಮಾತುಗಳನ್ನು ಆಡುತ್ತಾನೆ.
ಕೆಂಚ ಹೇಳಿದ ಸತ್ಯಕ್ಕೆ ಭೂಮಿಕಾ ಶಾಕ್
ಕೆಂಚ ಮತ್ತು ಭೂಮಿಕಾ ನಿಗದಿತ ಸ್ಥಳದಲ್ಲಿ ಭೇಟಿಯಾಗುತ್ತಾರೆ. ಔಪಚಾರಿಕ ಮಾತುಕತೆ ಬಳಿಕ ಕೆಂಚ ಸತ್ಯ ಹೇಳುತ್ತಾನೆ. "ಅದು ಬೇರೆ ಯಾರೂ ಅಲ್ಲ ಅಮ್ಮಾವ್ರೆ, ನಿಮ್ಮ ಮೈದುನ ಜೈದೇವ್ ಅವ್ರು" ಎಂಬ ಸತ್ಯ ಕೇಳಿ ಭೂಮಿಕಾಳಿಗೆ ಶಾಕ್ ಆಗುತ್ತದೆ. "ನನಗೆ ಎರಡು ಲಕ್ಷ ರೂಪಾಯಿ ಕೊಡ್ತಿನಿ ಅಂದ. ಆಸ್ತಿ ಪೋರ್ಜರಿ ಮಾಡು, ನಿನಗೆ ಹಣ ನೀಡ್ತಿನಿ ಎಂದ. ದುಡ್ಡಿನಾಸೆಗೆ ಮಣ್ಣು ತಿನ್ನುವ ಕೆಲಸ ಮಾಡಿದೆ" ಎನ್ನುತ್ತಾನೆ. ಇದನ್ನು ನಂಬಲು ಭೂಮಿಕಾ ರೆಡಿ ಇಲ್ಲ. "ನನಗೆ ಜೈದೇವ್ ಸಣ್ಣಪುಟ್ಟ ಕಿರಿಕ್ ಮಾಡಿರಬಹುದು. ಆದರೆ, ಈ ರೀತಿ ಮನುಷ್ಯತ್ವ ಬಿಟ್ಟು ಇಂತಹ ಕೆಲಸ ಎಲ್ಲಾ ಮಾಡಲಾರ" ಎನ್ನುತ್ತಾಳೆ ಭೂಮಿಕಾ. ಬೇಕಿದ್ರೆ ಎಲ್ಲಾ ಸಾಕ್ಷಿ ನಿಮ್ಮ ಮುಂದೆ ತರ್ತಿನಿ, ಆಗ ನಿಮಗೆ ವಿಷದ ಹಾವಿಗೆ ಹಾಲು ಎರೆದೆವು ಎನ್ನುವುದು ತಿಳಿಯುತ್ತದೆ ಎಂದು ಹೇಳುತ್ತಾನೆ. "ನನ್ನಲ್ಲಿ ಕಾಲ್ ರೆಕಾರ್ಡ್ಸ್, ಎಲ್ಲಾ ಸಾಕ್ಷಿಗಳು ಇವೆ. ನಾನು ಸತ್ಯ ಹೇಳ್ತಾ ಇದ್ದೀನಿ. ಸುಳ್ಳು ಹೇಳ್ತಾ ಇಲ್ಲ. ನಂಬಲೇಬೇಕು" ಎನ್ನುತ್ತಾನೆ. "ನೀವು ನೋಡಿರುವುದೆಲ್ಲ ಸುಳ್ಳು, ನಾನು ಹೇಳ್ತಾ ಇರೋದೇ ಸತ್ಯ" ಎನ್ನುತ್ತಾನೆ. "ಇರೀ ನಾನು ಗೌತಮ್ ಅವರಿಗೆ ಇಲ್ಲಿಗೆ ಬರಲು ಹೇಳ್ತಿನಿ" ಎಂದು ಗೌತಮ್‌ಗೆ ಕಾಲ್ ಮಾಡಲು ಪ್ರಯತ್ನಿಸಿದಾಗ ಗೌತಮ್ ಫೋನ್ ನಾಟ್ ರೀಚೆಬಲ್ ಆಗಿರುತ್ತದೆ. ನಾನು ಗೌತಮ್ ಅವರಿಗೆ ತಿಳಿಸಿ ಒಟ್ಟಿಗೆ ಬರುವೆ, ನೀವು ಸಾಕ್ಷಿ ಸಮೇತ ಬನ್ನಿ ಎಂದು ಭೂಮಿಕಾ ಹೇಳುತ್ತಾಳೆ. ಅದಕ್ಕೆ ಕೆಂಚ ಒಪ್ಪುತ್ತಾನೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)