Amruthadhaare: ಪಾರ್ಥನಿಗಲ್ಲಿ ಪ್ರೀತಿ ಪರೀಕ್ಷೆ, ಮನೆಯಲ್ಲಿ ವಧು ಅನ್ವೇಷಣೆ; ಆನಂದ್‌ಗೆ ಪಕ್ಕದ ಮನೆಯ ಆಂಟಿ ಕಾಟ
Jul 26, 2024 06:25 AM IST
Amruthadhaare: ಪಾರ್ಥನಿಗಲ್ಲಿ ಪ್ರೀತಿ ಪರೀಕ್ಷೆ, ಮನೆಯಲ್ಲಿ ವಧು ಅನ್ವೇಷಣೆ
- Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಎಲ್ಲರೂ ಪಾರ್ಥನಿಗೆ ಹುಡುಗಿ ಹುಡುಕೋ ಕೆಲಸದಲ್ಲಿ ಬಿಝಿ ಇದ್ದಾರೆ. ಆದರೆ, ಪಾರ್ಥ ನಾಟ್ ರೀಚೆಬಲ್ ಇರುವಾಗಲೇ ಈ ಪ್ರಕ್ರಿಯೆ ನಡೆದಿದೆ. ಇನ್ನೊಂದೆಡೆ ಪಾರ್ಥ ಪ್ರೀತಿಪರೀಕ್ಷೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾನೆ.
Amruthadhaare serial Story: ಜೈದೇವ್ ತನ್ನ ಗೆಳತಿಯ ನೆನಪಿನಲ್ಲಿ ಇರುವ ಸಂದರ್ಭದಲ್ಲಿ ಅಶ್ವಿನಿ ಬರುತ್ತಾಳೆ. ಅಪೇಕ್ಷಾ ಈ ಮನೆಗೆ ಬರಬಾರದು, ಆ ಟಾರ್ಚರ್ ತಪ್ಪಿತ್ತು ಎಂದು ಮಾತನಾಡುತ್ತಾರೆ. ಆ ಸಮಯದಲ್ಲಿ ಮಲ್ಲಿ ಅಲ್ಲಿಗೆ ಬರುತ್ತಾಳೆ. "ಪಾರ್ಥನಿಗೂ ನೀವೇ ಹುಡುಗಿ ಹುಡುಕಿ" ಎಂದು ಹೇಳುತ್ತಾಳೆ. ಪಾರ್ಥನಿಗೆ ಸೆಟ್ ಆಗುವಂತಹ ಹುಡುಗಿನ ಹುಡುಕೋಣ ಎನ್ನುತ್ತಾರೆ. "ನಮ್ಮ ಸ್ಟೇಟಸ್ ರೀತಿ ಇರಬೇಕು" ಎಂದು ಅಶ್ವಿನಿ ಹೇಳುತ್ತಾಳೆ. "ಸ್ಟೇಟಸ್ ಸುಮ್ಮನೆ. ಹಣ ಮುಖ್ಯವಲ್ಲ. ಒಳ್ಳೆಯ ಗುಣ ಮುಖ್ಯ" ಎಂದು ನಾಟಕೀಯವಾಗಿ ಹೇಳುತ್ತಾಳೆ. ಅಶ್ವಿನಿ ಹೋದಮೇಲೆ "ಮಲ್ಲಿ ನೀನು ಬೇಸರ ಮಾಡಬೇಡ. ನೀನು ನನ್ನ ಹೆಂಡ್ತಿ" ಎಂದು ರಮಿಸುತ್ತಾನೆ.
ಅಪೇಕ್ಷಾ ಪಾರ್ಥ ಇರುವ ಶಾಲೆಗೆ ಬರುತ್ತಾಳೆ. ಇಬ್ಬರೂ ಒಬ್ಬರನ್ನು ಒಬ್ಬರು ನೋಡಿ ಖುಷಿಪಡುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಸದಾಶಿವ ಆಗಮಿಸುತ್ತಾರೆ. "ನೀನು ನನಗೆ ಏನು ಮಾತು ಕೊಟ್ಟಿದ್ದೆ. ಏನು ಮಾಡ್ತಾ ಇದ್ಯ" ಎಂದು ಸದಾಶಿವ ಹೇಳುತ್ತಾನೆ. "ಈ ಚಾಲೆಂಜ್ ಗೆದ್ದ ಮೇಲೆ ಮಾತನಾಡ್ತಿನಿ. ಈ ಟಾಸ್ಕ್‌ನಲ್ಲಿ ಗೆದ್ದೆ ಗೆಲ್ಲುವೆ ಅಲ್ವಾ ಅಂಕಲ್" ಎಂದು ಇನ್‌ಡೈರೆಕ್ಟ್ ಆಗಿ ಅಪೇಕ್ಷಾ ಹೇಳುತ್ತಾಳೆ. ಇದೇ ಸಮಯದಲ್ಲಿ ಅಪ್ಪಿ ಕೂಡ "ನಾನು ಕೂಡ ಮಿಸ್ ಇಂಡಿಯಾದಲ್ಲಿ ಪಾಲ್ಗೊಳ್ತಿನಿ ಅಂತ ಹೇಳಿ ಅಪ್ಪ" ಎಂದು ಇನ್‌ಡೈರೆಕ್ಟ್ ಆಗಿ ಪಾರ್ಥನಿಗೆ ಹೇಳುತ್ತಾಳೆ. ಸದಾಶಿವನಿಗೆ ಗೊಂದಲವಾಗುತ್ತದೆ.
ಪಾರ್ಥನಿಗೆ ವಧು ಅನ್ವೇಷಣೆ ಆರಂಭ
ಇನ್ನೊಂದೆಡೆ ಗೌತಮ್ ಮನೆಗೆ ಮ್ಯಾಚ್ ಮೇಕರ್ ಬರುತ್ತಾರೆ. ಪಾರ್ಥನಿಗೆ ಹುಡುಗಿ ಹುಡುಕಲು ನೀವೂ ನೆರವು ನೀಡಿ ಎಂದು ಗೌತಮ್ ಭೂಮಿಕಾಳಿಗೂ ಹೇಳುತ್ತಾರೆ. ಏನೂದರೂ ಸಲಹೆ ಸೂಚನೆ ಇದ್ರೆ ನೀಡು ಎಂದು ಅಜ್ಜಿ ಹೇಳುತ್ತಾಳೆ. ಮದುವೆ ಫಿಕ್ಸ್ ಆದ್ರೆ ನೀನು ಗುಂಡು ಇಬ್ರೂ ನಿಂತು ಮದುವೆಯಾಗಬೇಕು. "ಸ್ವಲ್ಪ ನಮ್ಮ ಸ್ಟೇಟಸ್‌ಗೂ ಮ್ಯಾಚ್ ಆಗಬೇಕು. ಹುಡುಗಿ ಓದಿರಬೇಕು. ಪಾರ್ಥನ ಮೈಂಡ್ ಸೆಟ್‌ಗೆ ಮ್ಯಾಚ್ ಆಗಿರಬೇಕು. ನಮ್ಮ ಭೂಮಿಕಾ ರೀತಿ ಇರಬೇಕು" ಎಂದು ಶಕುಂತಲಾ ಹೇಳುತ್ತಾರೆ. "ಹುಡುಗಿಯ ಶಾರ್ಟ್ ಲಿಸ್ಟ್ ಮಾಡಿ ಫೋಟೋ ಮತ್ತು ಡಿಟೈಲ್ ಕಳುಹಿಸಿ" ಎಂದು ಗೌತಮ್ ಹೇಳುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಭೂಮಿಕಾ ಕೊಠಡಿಯಲ್ಲಿ ಒಬ್ಬಳೇ ಆಲೋಚಿಸುವಾಗ ಅಲ್ಲಿಗೆ ಮಲ್ಲಿ ಬರುತ್ತಾಳೆ. "ಯಾಕೆ ಅಕ್ಕಾರೆ ಏನಾಯ್ತು" ಎಂದು ಕೇಳುತ್ತಾಳೆ. "ಅತ್ತೆಯ ಮುದ್ದಿನ ಮಗ ಅಂದ್ಮೆಳೆ ಅವರು ಹೇಳಿದಂತೆ ಆಗ್ಲೇ ಬೇಕು" ಎನ್ನುತ್ತಾಳೆ. "ಪಾರ್ಥನಿಗೆ ನೀವೇ ಹುಡುಗಿ ಹುಡುಕಿದ್ರೆ ಒಳ್ಳೆಯದು" ಎಂದು ಮಲ್ಲಿ ಹೇಳುತ್ತಾಳೆ. "ಪಾರ್ಥ ಭಾವನ ಮನಸ್ಸಿನಲ್ಲಿ ಪ್ರೀತಿಗೀತಿ ಇದ್ರೆ ಇರಬಹುದು. ಅದನ್ನೂ ಕೇಳಬೇಕಿತ್ತು" ಎಂದು ಮಲ್ಲಿ ಸಲಹೆ ನೀಡುತ್ತಾಳೆ. "ಈ ಮದುವೆ ಅತ್ತೆ ಇಷ್ಟಪಟ್ಟ ರೀತಿಯೇ ಆಗ್ಲಿ" ಎಂದು ಭೂಮಿಕಾ ಹೇಳುತ್ತಾಳೆ. "ಯಾಕೋ ಅಕ್ಕನ ನಡವಳಿಕೆ ವಿಚಿತ್ರವಾಗಿದೆ" ಎಂದುಕೊಳ್ಳುತ್ತಾಳೆ ಮಲ್ಲಿ.
ಒಂದು ತಿಂಗಳಲ್ಲಿ ಮದುವೆ ಫಿಕ್ಸ್ ಆಗಬೇಕು. ಹೆಚ್ಚು ವಿಳಂಬವಾಗಬಾರದು ಎಂದು ಶಕುಂತಲಾ ಮತ್ತು ಮನೆಹಾಳ ಮಾವ ಮಾತನಾಡುತ್ತಾರೆ. "ಭೂಮಿಕಾ ಒಳ್ಳೆತನವನ್ನು ನನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಿನಿ. ಅವಳ ಒಳ್ಳೆಯತನವೇ ನನ್ನ ಬಂಡವಾಳ" ಎಂದು ಶಕುಂತಲಾದೇವಿ ಹೇಳುತ್ತಾಳೆ. "ಇನ್ನು ಅವಳೇ ವಿಲನ್. ಎಲ್ಲಾ ಟೈಮ್ ಅವಳೇ ಒಳ್ಳೆಯವಳು ಆಗಿರಬೇಕು ಯಾಕೆ. ನಾವು ನಾಟಕ ಆಡೋಣ" ಎನ್ನುತ್ತಾಳೆ. "ಫಿಟ್ಟಿಂಗ್ ಇಟ್ರೆನೇ ಇಲ್ಲಿ ಬದುಕಲು ಆಗೋದು" ಎಂದು ಮನೆಹಾಳ ಮಾವ ಹೇಳುತ್ತಾನೆ. "ಇದರ ಅಂತ್ಯ ಹೀಗೆ ಆಗುತ್ತದೆ ಎಂದು ಯಾರೂ ಊಹೆ ಮಾಡಿರೋದಿಲ್ಲ" ಎಂದು ಶಕುಂತಲಾ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡಂತೆ ಹೇಳುತ್ತಾಳೆ.
ಆನಂದ್‌ಗೆ ಪಕ್ಕದ ಮನೆಯ ಆಂಟಿ ಕಾಟ
ಆನಂದ್ ಮನೆಯಲ್ಲಿ ಇರುವಾಗ ಪಕ್ಕದ ಮನೆಯಾಕೆ ಬಂದಿದ್ದಾಳೆ. ಅಪರ್ಣಾ ಗುರಾಯಿಸ್ತಾಳೆ. ನಿನ್ನೆ ಬಾಯಿ ಮಾತಿಗೆ ಹೇಳಿದ್ದಕ್ಕೆ ಇವಳು ಮನೆಗೆ ಬಂದು ಬಿಟ್ಟಿದ್ದಾಳೆ ಎಂದುಕೊಳ್ಳುತ್ತಾಳೆ. ಮಗ ಇವತ್ತು ಸ್ಕೂಲ್‌ಗೆ ಹೋಗಿಲ್ಲ. ಅದಕ್ಕೆ ನೋಟ್ಸ್ ತೆಗೆದುಕೊಳ್ಳಲು ಬಂದೆ ಎನ್ನುತ್ತಾಳೆ. ಒಟ್ಟಾರೆ ಆನಂದ್‌ಗೆ ಪನಿಶ್‌ಮೆಂಟ್ ಕೊಡಲು ಅಪರ್ಣಾಗೆ ಒಳ್ಳೆಯ ವಿಷಯ ದೊರಕಿದೆ. ಅಪರ್ಣಾ ಬುಕ್ ತಂದುಕೊಟ್ಟಾಗ ನಿಮ್ಮ ಮನೆ ಚೆನ್ನಾಗಿದೆ, ನಿಮ್ಮ ಮನೆಯವರೂ ಒಳ್ಳೆಯವರು ಅನ್ತಾಳೆ. ಎಂತವರನ್ನೂ ಸೂಜಿಗಲ್ಲಿನಂತೆ ತನ್ನ ಕಡೆಗೆ ಸೆಳೆದುಕೊಂಡು ಬಿಡ್ತಾರೆ ಎಂದು ಹೊಗಳ್ತಾಳೆ. ಆನಂದ್ ಕಾಫಿ ತಂದುಕೊಟ್ಟಾಗ ಕಾಫಿ ಸಖತ್ ಆಗಿದೆ ಎಂದು ಹೊಗಳುತ್ತಾಳೆ. ಇಂತಹ ಕಾಫಿನ ನನ್ನ ಲೈಫ್‌ನಲ್ಲೇ ಕುಡಿದಿಲ್ಲ. ಈ ಕಾಫಿ ಕುಡಿಯಲಾದ್ರೂ ಡೈಲಿ ಮನೆಗೆ ಬರ್ತಿನಿ ಎನ್ನುತ್ತಾಳೆ. ಒಟ್ಟಾರೆ ಆನಂದ್‌ಗೆ ಮಾರಿ ಹಬ್ಬ ಕಾದಿದೆ. ಅವಳು ಹೋದ ಬಳಿಕ ಅಪರ್ಣಾ ಶುರು ಮಾಡ್ತಾಳೆ. "ಒಂದು ದಿನ ನನಗೆ ನೀನು ಕೈಯಾರೆ ಕಾಫಿ ಮಾಡಿಕೊಟ್ಟಿದ್ದಿಯಾ? ಎಂದದಕ್ಕೆ ನೀನು ಕಾಫಿ ಮಾಡಿಕೊಟ್ರೆ ನಾನು ಇಲ್ಲಿ ಅವಳ ಮುಖ ನೋಡ್ತಾ ಇದ್ದೆ ಅನ್ತಿ. ಅದಕ್ಕೆ ನಾನೇ ಮಾಡಿಕೊಟ್ಟೆ ಅನ್ತಾನೆ. ಸರಿ ಮುಂದಿನ ಬಾರಿ ಬಂದಾಗ ನಾನೇ ಕಾಫಿ ಮಾಡಿಕೊಡುವೆ ಎನ್ನುತ್ತಾಳೆ.
ಗೌತಮ್ ಮತ್ತು ಭೂಮಿಕಾ ಮಾತನಾಡ್ತಾ ಇದ್ದಾರೆ. ಅವನ ಫೋನ್ ಕನೆಕ್ಟ್ ಆಗ್ತಾ ಇಲ್ಲ. ಅವನಿಗೆ ಯಾವ ತರಹದ ಹುಡುಗಿ ಬೇಕು. ಅವನ ಫ್ಯೂಚರ್ ಪ್ಲಾನ್ಸ್ ಏನು ಎಂದೆಲ್ಲ ಕೇಳಬೇಕಿತ್ತು. ನಾವು ಹುಡುಕುವ ಹುಡುಗಿ ಅವನಿಗೆ ಖಂಡಿತಾ ಇಷ್ಟ ಆಗ್ತಾಳೆ ಎನ್ನುತ್ತಾರೆ. ಮ್ಯಾಚ್‌ಮೇಕರ್ ಕಾಲ್ ಮಾಡಿದಾಗ ಫೋಟೋಗಳ ಜತೆ ಜಾತಕನೂ ಕಳುಹಿಸಿ ಎಂದು ಗೌತಮ್ ಹೇಳುತ್ತಾರೆ. ಒಟ್ಟಾರೆ ಪಾರ್ಥನಿಗೆ ತಿಳಿಯುವ ಮೊದಲು ಹುಡುಗಿ ಫೈನಲ್ ಆಗೋದು ಪಕ್ಕಾ ಅನ್ನೋ ರೀತಿಗೆ ಸೀರಿಯಲ್ ಮುಂದುವರೆದಿದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)