Womens Day: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಸನ್ಮಾನ, ಶಕುಂತಲಾದೇವಿಗೆ ಅವಮಾನ; ಮಲ್ಲಿಗೆ ಖುಷಿ, ಜೈದೇವ್‌ಗೆ ಕಸಿವಿಸಿ
Mar 08, 2024 08:51 AM IST
Womens Day: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಸನ್ಮಾನ, ಶಕುಂತಲಾದೇವಿಗೆ ಅವಮಾನ
- Amruthadhare Kannada Serial Womens Day: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಮಹಿಳಾ ದಿನದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ದಿವಾನ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮಲ್ಲಿಗೂ ಸ್ಥಾನ ದೊರಕಿದೆ. ಈ ಕಾರ್ಯಕ್ರಮದಲ್ಲಿ ಭೂಮಿಕಾ ಮುಖ್ಯ ಅತಿಥಿ. ಶಕುಂತಲಾದೇವಿ ಅಸೂಯೆಯಿಂದ ಉರಿಯುತ್ತಿದ್ದಾರೆ.
Amruthadhare Kannada Serial: ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಳಾ ದಿನ ಸಂಭ್ರಮದಿಂದ ನಡೆದಿದೆ. ಮೊದಲಿಗೆ ಆನಂದ್ ಎಲ್ಲರನ್ನೂ ಆಮಂತ್ರಿಸುತ್ತಾರೆ. ಆಫೀಸ್‌ನ ಎಲ್ಲರೂ ಆಗಮಿಸಿದ್ದಾರೆ. ದಿವಾನ್ ಕುಟುಂಬದ ಎಲ್ಲರೂ ಇದ್ದಾರೆ. ಮೊದಲಿಗೆ ಶಕುಂತಲಾದೇವಿ, ಬಳಿಕ ಭೂಮಿಕಾಳನ್ನು ಆಮಂತ್ರಿಸಲಾಗುತ್ತದೆ. ಭೂಮಿಕಾ ಜತೆಗೆ ಮಲ್ಲಿಯೂ ಆಗಮಿಸಿದ್ದಾರೆ. ಮಲ್ಲಿಯ ಮುಖ ನೋಡಿದಾಗ ಶಕುಂತಲಾದೇವಿ, ಜೈದೇವ್ ಮುಖ ಕೋಪಗೊಳ್ಳುತ್ತದೆ. ಬಳಿಕ ಮನೆಯ ಸೊಸೆ ಮಲ್ಲಿಯನ್ನು ಆಮಂತ್ರಿಸಲಾಗುತ್ತದೆ. ಆಫೀಸ್‌ನವರು ವಿಷಯ ಗೊತ್ತಿಲ್ಲದಂತೆ ಮುಖ ಮುಖ ನೋಡಿಕೊಳ್ಳುತ್ತಾರೆ. ಮಲ್ಲಿ ಶಕುಂತಲಾ ಮತ್ತು ಭೂಮಿಕಾ ಜತೆ ಕುಳಿತುಕೊಳ್ಳಲು ಹಿಂಜರಿಯುತ್ತಾರೆ.
ಭೂಮಿಕಾಗೆ ಸನ್ಮಾನ, ಶಕುಂತಲಾದೇವಿಗೆ ಅವಮಾನ
ಮಹಿಳಾ ದಿನದ ಕಾರ್ಯಕ್ರಮದಲ್ಲಿ ಮೊದಲು ಗೌತಮ್ ಮಾತನಾಡುತ್ತಾರೆ. ಎಲ್ಲರಿಗೂ ಮಹಿಳಾ ದಿನದ ಶುಭಾಶಯ ಹೇಳುತ್ತಾರೆ. ಗೌತಮ್ ಮಾತಲ್ಲಿ ಭೂಮಿಕಾ ಈ ಹಿಂದೆ ಮಲ್ಲಿಗೆ ಹೇಳಿದ ಮಾತುಗಳು ಇರುತ್ತವೆ. ಮಹಿಳಾ ದಿನದ ಮಹತ್ವದ ಕುರಿತು ಭೂಮಿಕಾ ಈ ಹಿಂದೆ ಮಲ್ಲಿಗೆ ಹೇಳಿದ ಮಾತನ್ನೇ ಗೌತಮ್ ಹೇಳುತ್ತಾರೆ. ಇದನ್ನು ಕೇಳಿ ಭೂಮಿಗೆ ಖುಷಿಯಾಗುತ್ತದೆ. ಇದಾದ ಬಳಿಕ ಪ್ರಶಸ್ತಿ ವಿತರಣೆ ಇರುತ್ತದೆ. ಪ್ರಶಸ್ತಿ ನೀಡಲು ಶಕುಂತಲಾ ಎದ್ದೇಳುತ್ತಾಳೆ. ಆಗ ಗೌತಮ್ "ನೀವೇ ಚೀಫ್ ಗೆಸ್ಟ್" ಎಂದು ಭೂಮಿಕಾಳಿಗೆ ಹೇಳುತ್ತಾನೆ. ಶಕುಂತಲಾಳಿಗೆ ಕೋಪ ಬರುತ್ತದೆ. ತನ್ನನ್ನು ಕಡೆಗಣಿಸಿರುವುದರಿಂದ ಅವಮಾನವಾದಂತೆ ಆಗುತ್ತದೆ. ಭೂಮಿಕಾ ಎಲ್ಲರಿಗೂ ಪ್ರಶಸ್ತಿ ನೀಡುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಬಳಿಕ ನಮ್ಮ ಬಾಸ್‌ಗೆ ಬಾಸ್ ಎರಡು ಮಾತನಾಡಬೇಕು ಎಂದು ಭೂಮಿಕಾಳಿಗೆ ತಿಳಿಸುತ್ತಾರೆ. ಶಕುಂತಲಾದೇವಿಗೆ ಇದೂ ಕಿರಿಕಿರಿಯಾಗುತ್ತದೆ. "ಗೌತಮ್ ಹೇಳಿದ ಅಷ್ಟು ಮಾತು ನನ್ನ ಮಾತು ಕೂಡ. ಇವರನ್ನು ಹಸ್ಬೆಂಡ್ ಆಗಿ ಪಡೆದ ಧನ್ಯ. ಇವರನ್ನು ಹೆಣ್ಣು ಮಕ್ಕಳನ್ನು ಈಕ್ವಲ್ ಆಗಿ ನೋಡಿಕೊಳ್ಳುತ್ತಾರೆ. ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ" ಎಂದೆಲ್ಲ ಭೂಮಿ ಭಾಷಣ ಮಾಡಿದಾಗ ಗೌತಮ್‌ಗೆ ಖುಷಿಯಾಗುತ್ತದೆ. ಬಳಿಕ ಭೂಮಿಕಾಳ ಬಗ್ಗೆ ಗೌತಮ್ ಹೇಳುತ್ತಾರೆ. "ಭೂಮಿಕಾ ನನಗೆ ಥ್ಯಾಂಕ್ಸ್ ಹೇಳಿದ್ರು. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಯಶಸ್ಸಿನ ಹಿಂದೆ ಭೂಮಿಕಾ ಇದ್ದಾರೆ" ಎಂದು ಗೌತಮ್ ಹೇಳಿದಾಗ ಭೂಮಿಕಾಗೆ ಖುಷಿ, ಶಕುಂತಲಾದೇವಿಗೆ ಕಸಿವಿಸಿ. "ಇವರಿಂದಾಗಿ ನನ್ನ ಕರಿಯರ್ ಹೊಸದಾಗಿ ಆರಂಭವಾಗಿದೆ ಎನಿಸುತ್ತದೆ" ಎಂದೆಲ್ಲ ಪತ್ನಿಯನ್ನು ಹೊಗಳುತ್ತಾನೆ. ಇಬ್ರ ಪ್ರೀತಿಯನ್ನು ನೋಡಿ ಗೌತಮ್, ಮನೆಹಾಳ ಮಾವ, ಜೈದೇವ್‌ಗೆ ಕಿರಿಕಿರಿ.
ಮಲ್ಲಿ, ಭೂಮಿಕಾ ಬಗ್ಗೆ ಶಕುಂತಲಾದೇವಿ ಎರಡುಮಾತು
"ಭೂಮಿಕಾಳ ಬಗ್ಗೆ ನನಗಿಂತ ಜಾಸ್ತಿ ನನ್ನ ಅಮ್ಮ ಮಾತನಾಡ್ತಾರೆ" ಎಂದು ಗೌತಮ್ ಹೇಳಿದಾಗ ಶಕುಂತಲಾದೇವಿಗೆ ಮತ್ತೊಂದು ಆಘಾತ. "ನಮ್ಮ ಗೌತಮ್ ಹೇಳಿದ ರೀತಿ ಭೂಮಿಕಾಳಂತಹ ಸೊಸೆ ಸಿಕ್ಕಿದ್ದು ನಮ್ಮ ಪುಣ್ಯ" ಎಂದು ಇರಿಸುಮುರಿಸಿನಲ್ಲೇ ಒಂದೆರಡು ಮಾತು ಹೇಳುತ್ತಾರೆ ಶಕುಂತಲಾದೇವಿ ಹೇಳುತ್ತಾರೆ. ಇದಾದ ಬಳಿಕ ಮಲ್ಲಿ ಬಗ್ಗೆ ನೀವು ಎರಡು ಮಾತು ಹೇಳಿ ಎಂದು ಭೂಮಿಕಾ ಕೇಳಿಕೊಂಡಾಗ ಎಲ್ಲರಿಗೂ ಶಾಕ್. "ಹೇಳಿದ್ನಲ್ಲಮ್ಮ ನಮ್ಮವರ ಬಗ್ಗೆ ನಾವು ಜಾಸ್ತಿ ಹೊಗಳಿಸ್ಕೋಬಾರದು ಅಂತ" ಎಂದು ಹೇಳಿ ಶಕುಂತಲಾ ಭಾಷಣ ಮುಗಿಸ್ತಾರೆ. "ನೀವು ಕಂಟಿನ್ಯೂ ಮಾಡಿ" ಎಂದು ಶಕುಂತಲಾ ಅಲ್ಲಿಂದ ಹೋಗುತ್ತಾರೆ. ಫಂಕ್ಷನ್ ಮುಗಿಯುತ್ತದೆ.
ಈ ಮೂಲಕ ಅಮೃತಧಾರೆ ಧಾರಾವಾಹಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿದೆ. ಅಮೃತಧಾರೆ ಸೀರಿಯಲ್ ಮಹಿಳಾ ಪ್ರಧಾನ ಕಥೆ ಹೊಂದಿರುವುದರಿಂದ, ಭೂಮಿಕಾರಂತಹ ಕ್ಯಾರೆಕ್ಟರ್ ಮೂಲಕ ಮಹಿಳೆಯರ ಮಹತ್ವ, ಮಹಿಳಾ ದಿನದ ಮಹತ್ವ, ಆಚರಣೆಯ ಉದ್ದೇಶ ಇತ್ಯಾದಿಗಳನ್ನು ಪ್ರೇಕ್ಷಕರಿಗೆ ಯಶಸ್ವಿಯಾಗಿ ನಿರ್ದೇಶಕರು ದಾಟಿಸಿದ್ದಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)