Amruthadhaare: ಜೈದೇವ್ ಕಾಟ, ಶಕುಂತಲಾ ಆಟ, ಭೂಮಿಕಾ ಪಾಠ, ಗೌತಮ್ ಸಂಕಟ; ಅಮೃತಧಾರೆ ಧಾರಾವಾಹಿಯಲ್ಲಿ ಭಾವನೆಗಳ ತೊಳಲಾಟ
Feb 29, 2024 07:00 AM IST
Amruthadhaare: ಜೈದೇವ್ ಕಾಟ, ಶಕುಂತಲಾ ಆಟ, ಭೂಮಿಕಾ ಪಾಠ, ಗೌತಮ್ ಸಂಕಟ; ಅಮೃತಧಾರೆ ಧಾರಾವಾಹಿಯಲ್ಲಿ ಭಾವನೆಗಳ ತೊಳಲಾಟ
- Amruthadhaare Kannada Serial: ಪ್ರೀತಿಗಾಗಿ ಹಂಬಲಿಸಿದ ಮಲ್ಲಿಗೆ ಮೊದಲ ರಾತ್ರಿಯಂದೇ ಜೈದೇವ್ ಕಾಟ ನೀಡುತ್ತಾನೆ. ಜೈದೇವ್‌ಗೆ ಜೀವನ ಪಾಠ ತಿಳಿಸಿ ಭೂಮಿಕಾ ಎಚ್ಚರಿಕೆ ನೀಡುತ್ತಾಳೆ. ಗೌತಮ್ ಭಾವನೆಗಳ ತಾಕಲಾಟದಲ್ಲಿದ್ದಾನೆ. ಪಾರ್ಥ ಮತ್ತು ಅಪೇಕ್ಷಾ ಖುಷಿಯಾಗಿದ್ದಾರೆ.
Amruthadhaare Serial Yesterday Episode: ಭೂಮಿಕಾ ಮತ್ತು ಗೌತಮ್ ಪ್ರಯತ್ನದಿಂದ ಮಲ್ಲಿ ಮತ್ತು ಜೈದೇವ್ ವಿವಾಹವಾಗಿರುತ್ತದೆ. ಕೋಪಿಸಿಕೊಂಡ ಶಕುಂತಲಾದೇವಿ ಗೌತಮ್ ಮುಂದೆ ನಾಟಕವಾಡಿ ಕಣ್ಣಿರಿಡುತ್ತಾರೆ. ನನ್ನನ್ನು ಮಲತಾಯಿ ರೀತಿ ನೋಡಬೇಡ ಎನ್ನುತ್ತಾರೆ. ಇದೇ ಸಮಯದಲ್ಲಿ ಮನೆಗೆ ಪ್ರವೇಶಿಸಿದ ಮಲ್ಲಿಗೆ ದೊಡ್ಡ ಮನೆ ಸುಖದ ಹಾಸಿಗೆಯಾಗಿರುವುದಿಲ್ಲ. ಆಕೆಗೆ ಹಲವು ಸವಾಲುಗಳು ಇವೆ. ಝೀ ಕನ್ನಡ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಏನೆಲ್ಲ ಆಯ್ತು ಎಂದು ನೋಡೋಣ.
ಮತ್ತೆ ಚಿಗುರಿತು ಪಾರ್ಥ- ಅಪೇಕ್ಷಾ ಪ್ರೇಮ
ಒಂದೆಡೆ ಅಪೇಕ್ಷಾ ಪಾರ್ಥನ ಫೋಟೋ ನೋಡ್ತಾ ಇರುತ್ತಾಳೆ. ಇನ್ನೊಂದೆಡೆ ಅಪ್ಪಿಯ ಅಮ್ಮ ಬಂದು ಮಗಳನ್ನು ಸಮಧಾನ ಪಡಿಸುತ್ತಾರೆ. ಇಷ್ಟೆಲ್ಲ ಆದ್ರೂ ಒಂದು ಹನಿ ಕಣ್ಣೀರು ಹಾಕಿಲ್ಲ ಎಂದು ಅಮ್ಮ ಕೇಳುತ್ತಾಳೆ. ನಾನು ನಿಜಕ್ಕೂ ಆರಾಮವಾಗಿದ್ದೇನೆ ಎಂದು ಅಪೇಕ್ಷಾ ಹೇಳುತ್ತಾಳೆ. ಮದುವೆ ಆಗಿದ್ಮೇಲೆ ಈ ವಿಷಯ ಹೊರಕ್ಕೆ ಬಂದ್ರೆ ಏನಾಗ್ತಾ ಇತ್ತು, ನನ್ನ ಲೈಫ್ ಸೇವ್ ಆಯ್ತು ಅಂತ ಖುಷಿಪಡಿ ಎಂದು ಅಪ್ಪಿ ಹೇಳುತ್ತಾಳೆ. ನನ್ನ ಲೈಪ್ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ತುಂಬಾ ಇದೆ ಎಂದು ಅಪೇಕ್ಷಾ ಹೇಳಿದಾಗ ಅಮ್ಮನಿಗೆ ಅಚ್ಚರಿ. ಐ ಆಮ್ ರಿಯಲ್ ಪ್ರೌಡ್ ಆಫ್ ಯು ಮಗಳೇ ಎನ್ನುತ್ತಾಳೆ. ಇದಕ್ಕೆಲ್ಲ ಭೂಮಿ ಅಕ್ಕನೇ ಮೋಟಿವೇಷನ್ ಎನ್ನುತ್ತಾಳೆ.
ಜೈದೇವ್‌ಗೆ ಎಚ್ಚರಿಕೆ ನೀಡಿದ ಭೂಮಿಕಾ
ಇನ್ನೊಂದೆಡೆ ಕೋಪದಲ್ಲಿ ಜೈದೇವ್ ಧೂಮಪಾನ ಮಾಡುತ್ತ ಕುಳಿತಿದ್ದಾನೆ. ಆತನಿಗೆ ಭೂಮಿಕಾ ತನ್ನ ಮದುವೆ ಮಾಡಿರುವ ಸಂಗತಿಯೆಲ್ಲ ನೆನಪಾಗುತ್ತದೆ. ತಾಳಿ ಕಟ್ಟುವ ತನಕದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಜೈದೇವ್ ಅವರೇ ನಿಮಗೆ ನನ್ನ ಮೇಲೆ ಕೋಪ ಇದೆ ಎಂದು ಗೊತ್ತು, ನನ್ನ ನೆರಳನ್ನು ಇಷ್ಟಪಡುವುದಿಲ್ಲ" ಎಂದು ಹೇಳಿದಾಗ ಜೈದೇವ್ ಅಲ್ಲಿಂದ ಹೋಗಲು ಮುಂದಾಗುತ್ತಾನೆ. ಆತ ಈ ಹಿಂದೆ ಮಾಡಿದ ತಪ್ಪುಗಳನ್ನು ನೆನಪಿಸುತ್ತಾಳೆ. ಒಂದು ಹುಡುಗಿಯನ್ನು ಪ್ರೀತಿಸಿ, ಆ ಹುಡುಗಿ ಕುರಿತು ನನ್ನ ಮುಂದೆ ಸುಳ್ಳು ಹೇಳಿದ್ದು ಎಂದೆಲ್ಲ ಭೂಮಿಕಾ ಹೇಳುತ್ತಾಳೆ. "ನನಗೂ ಆ ಮಗುಗೂ ಯಾವುದೇ ಸಂಬಂಧ ಇಲ್ಲ" ಎನ್ನುತ್ತಾನೆ ಜೈದೇವ್. ಈ ಮದುವೆಯಿಂದ ನಿನ್ನ ಜೀವನ ಟ್ರ್ಯಾಕ್‌ಗೆ ಬಂದಿದೆ. ಮಲ್ಲಿ ಜೀವನ ಸೇವ್ ಆಗಿದೆ. ಅಪ್ಪಿ ಬದುಕು ಉಳಿದಿದೆ ಎಂದೆಲ್ಲ ಭೂಮಿಕಾ ಹೇಳುತ್ತಾಳೆ. ಅಪೇಕ್ಷಾ ಬಾಳು ಹಾಳು ಮಾಡಲು ಬಂದ್ಯಲ್ಲ, ಇದು ಕ್ಷಮಿಸಲಾರದ ತಪ್ಪು. ನಿಮಗೆ ನನ್ನ ಮೇಲೆ ಸಿಟ್ಟಿದೆ. ಅದನ್ನು ಮಲ್ಲಿ ಮೇಲೆ ತೋರಿಸಬೇಡಿ ಎಂದು ಜೈದೇವ್‌ಗೆ ಕೈ ಮುಗೀತಾಳೆ. ಅಕಸ್ಮಾತ್ ಮಲ್ಲಿಗೆ ಟಾರ್ಚರ್ ಕೊಡಬೇಕು ಎಂದು ನೀವು ಅಂದುಕೊಂಡರೆ ಎಂದು ಬೆದರಿಕೆಯ ಮಾತು ಆಡಿದ ಭೂಮಿಕಾ "ಅರ್ಥ ಆಯ್ತು ಅಂದುಕೊಳ್ಳುತ್ತೇನೆ, ಗುಡ್‌ನೈಟ್" ಎಂದು ರಾಜಾರೋಷವಾಗಿ ಹೋದಾಗ ಜೈದೇವ್ ತಲೆ ಕೆಡುತ್ತದೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಇನ್ನೊಂದೆಡೆ ಭಾವನತಮ್ಮ ಅತ್ತಿಗೆ ತಂಗಿಗೆ ಕಾಲ್ ಮಾಡ್ತಾನೆ. ಅವಳು ಆಟ ಆಡಿಸಲೆಂದೇ ಫೋನ್ ಕಟ್ ಮಾಡುತ್ತಾಳೆ. ಫ್ಲೈಟ್ ಮೋಡ್ ಇಡುತ್ತಾಳೆ. ವ್ಯಾಪ್ತಿ ಪ್ರದೇಶದಲ್ಲಿ ದೊರಕುತ್ತಿಲ್ಲ ಎಂದುಕೊಳ್ಳುತ್ತಾನೆ. ನೇರವಾಗಿ ಆಕೆಯ ಮನೆಗೆ ಹೋಗುವುದು ಬೆಟರ್ ಎನ್ನುತ್ತಾನೆ. ಇದೇ ಸಮಯದಲ್ಲಿ ಆತನ ಫೋಟೋ ನೋಡುತ್ತ "ಸಾರಿ ಭಾವನ ತಮ್ಮ" ಎಂದೆಲ್ಲ ಅಪೇಕ್ಷಾ ಹೇಳುತ್ತಾಳೆ.
ಮಲ್ಲಿ ಜೈದೇವ್ ಫಸ್ಟ್‌ನೈಟ್
ಇನ್ನೊಂದೆಡೆ ಮಲ್ಲಿಯನ್ನು ಫಸ್ಟ್ ನೈಟ್ ಕೊಠಡಿಗೆ ಭೂಮಿಕಾ ಕರೆದೊಯ್ಯುತ್ತಾಳೆ. ಅವಳಿಗೆ ಪ್ರೀತಿಯ ಕುರಿತು ಹೇಳಿ ಧೈರ್ಯ ತುಂಬುತ್ತಾಳೆ. ಜೈದೇವ್ ಕೊಠಡಿ ತೆರೆದು ಒಳಗೆ ಹೋದಾಗ ಅವಳಿಗೆ ಅಚ್ಚರಿ. ಪ್ರಸ್ಥಕ್ಕೆ ಹಾಸಿಗೆ ಡೆಕೊರೇಷನ್ ಮಾಡಲಾಗಿರುತ್ತದೆ. ಹೂವಿನಿಂದ ಎಂಜೆ ಎಂದು ಬರೆಯಲಾಗಿರುತ್ತದೆ. ಇದನ್ನು ನೋಡಿ ಮಲ್ಲಿ ಖುಷಿ ಪಡುತ್ತಾಳೆ. ಇನ್ನೊಂದೆಡೆ ಹಣ್ಣು ಹಂಪಲು ಇರುತ್ತವೆ. ಇದೇ ಸಮಯದಲ್ಲಿ ಜೈದೇವ್ ಬರುತ್ತಾನೆ. ಪ್ರೀತಿಯ ನೋಟ ಬೀರುತ್ತಾನೆ. ಎಂಜೆ ಎಂದು ಹಾಸಿಗೆಯಲ್ಲಿ ಅಲಂಕಾರ ಮಾಡಿದ್ದು ನೀವೇಯ ಎಂದು ಕೇಳುತ್ತಾಳೆ. ಹೌದು ಎಂದು ತಲೆಯಾಡಿಸುತ್ತಾನೆ. ಇವಳು ನಾಚಿ ನೀರಾಗುತ್ತಾಳೆ. ಹಾಲಿನ ಲೋಟ ತರುತ್ತಾನೆ. ಹಾಲಿನ ಲೋಟ ಕೈಯಲ್ಲಿ ನೀಡಿದಂತೆ ಮಾಡಿ ಕೆಳಕ್ಕೆ ಬೀಳಿಸುತ್ತಾನೆ. ಮಲ್ಲಿ ಕೊಡು ಕುಡಿದು ಕೊಡು ಅಂದು ಹಾಲನ್ನು ಕೆಳಕ್ಕೆ ಬೀಳಿಸುತ್ತಾನೆ. ರೋಷದಿಂದ ಮಲ್ಲಿಯನ್ನು ನೋಡುತ್ತಾನೆ.
"ಏನು ಲೈಪ್ ಇಷ್ಟು ಸುಂದರವಾಗಿ ಇರುತ್ತೆ ಅಂದುಕೊಂಡ್ಯ" ಎಂದು ಹೇಳಿ ಹಾಸಿಗೆ ಅಲಂಕಾರವನ್ನು ಎತ್ತಿ ಬಿಸಾಕುತ್ತಾನೆ. "ಯಾಕೆ ಬಂದೆ ಇಲ್ಲಿಗೆ, ಯಾರು ನಿನ್ನನ್ನು ಇಲ್ಲಿಗೆ ಬರಲು ಹೇಳಿದ್ದು" ಎಂದಾಗ "ನಾನು ನಿಮ್ಮ ಜತೆ ಇರಬೇಕಾದದ್ದು" ಎಂದೆಲ್ಲ ಮಲ್ಲಿ ಹೇಳುತ್ತಾಳೆ. "ನನ್ನ ಜೀವನ ಬರ್ಬಾದ್ ಮಾಡಿದ್ಯಲೆ, ನಿನ್ನ ಸಹವಾಸ ಮಾಡಿ ಹಾಳಾಗಿ ಹೋದೆ" ಎಂದೆಲ್ಲ ಹೇಳುತ್ತಾನೆ ಜೈದೇವ್. "ನಿನಗೆ ನನ್ನ ಹೆಂಡತಿಯಾಗುವ ಯಾವುದೇ ಅರ್ಹತೆ ಇಲ್ಲ. ನಿನ್ನ ನೋಡುತ್ತ ಇದ್ದರೆ ಮೈ ಉರಿಯುತ್ತದೆ. ಬಾಯಿ ಮುಚ್ಚಿಕೊಂಡಿರು ಎಂದರೂ ಭೂಮಿಕಾಳಿಗೆ ಹೇಳಿದ್ಯಲ್ಲ, ನನಗೆ ಆದ ತೊಂದರೆಗೆ ನಿನ್ನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುವೆ ನೋಡ್ತಾ ಇರು" ಎಂದು ಜೈದೇವ್ ಭಯ ಹುಟ್ಟಿಸುತ್ತಾನೆ. "ನನಗೆ ಈ ಆಸ್ತಿ ಯಾವುದೂ ಬೇಡ, ನಿಮ್ಮ ಪ್ರೀತಿ ಬೇಕು" ಎಂದು ಮಲ್ಲಿ ಕೈ ಮುಗಿದಾಗ ಜೈದೇವ್ ಒಂದೇಟು ಹಾಕುತ್ತಾನೆ. ಹೊರಗಿನ ಪ್ರಪಂಚಕ್ಕೆ ಮಾತ್ರ ನಾವು ಗಂಡ ಹೆಂಡತಿ, ಇಲ್ಲಿ ನೀನ್ಯಾರೋ ನಾನ್ಯಾರೋ ಎಂದು ಹೇಳಿ ಜೈದೇವ್ ಹೊರಕ್ಕೆ ಹೋಗುತ್ತಾನೆ. ಮಲ್ಲಿ ಅಳುತ್ತ ನೆಲಕ್ಕೆ ಕುಸಿಯುತ್ತಾಳೆ.
ಸಂಕಟದಲ್ಲಿ ಗೌತಮ್
ಇನ್ನೊಂದೆಡೆ ಗೌತಮ್ ಏನೋ ಯೋಚನೆಯಲ್ಲಿ ಇರುತ್ತಾನೆ. ಅಮ್ಮ ತನ್ನನ್ನು ಮಲತಾಯಿ ರೀತಿ ನೋಡಬೇಡ ಎಂದದ್ದು ನೆನಪಾಗುತ್ತದೆ. ಆಗ ಭೂಮಿಕಾ ಅಲ್ಲಿಗೆ ಬರುತ್ತಾಳೆ. "ನಮ್ಮಪ್ಪ ಸಾಯುವಾಗ ತಂಗಿಯರು ತಮ್ಮಂದಿರ ನಿಜವಾದ ಜವಾಬ್ದಾರಿಯನ್ನು ನನಗೆ ಕೊಟ್ರು. ನಾನು ನನ್ನ ಜವಾಬ್ದಾರಿ ನಿಭಾಯಿಸಿಲ್ಲ. ಜೈದೇವ್‌ನನ್ನು ಸರಿಯಾಗಿ ಬೆಳೆಸಿಲ್ಲ" ಎಂದೆಲ್ಲ ಗೌತಮ್ ಭೂಮಿಕಾಳ ಬಳಿ ಹೇಳುತ್ತಾನೆ. "ಜೈದೇವ್‌ಗೆ ಒಂದಿಷ್ಟು ಮೌಲ್ಯಗಳನ್ನು ನಾನು ಹೇಳಿಕೊಡಬೇಕಿತ್ತು. ನಾನು ವಿಫಲನಾದೆ" ಎಂದು ಗೌತಮ್ ಹೇಳುತ್ತಾನೆ. ಇದೇ ಸಮಯದಲ್ಲಿ ಅಮ್ಮನ ಕುರಿತೂ ಮಾತನಾಡುತ್ತಾನೆ. ಜೈದೇವ್ ವಿಷಯದಲ್ಲಿ ಶಕುಂತಲಾದೇವಿ ನೊಂದಿರುತ್ತಾರೆ ಎಂದು ಗೌತಮ್ ದುಃಖಿಸುತ್ತಾನೆ. ನನ್ನ ಅಪ್ಪನಿಗೆ ಕೊಟ್ಟ ಮಾತನ್ನು ಮರೆತುಬಿಟ್ಟೆ, ಉಳಿಸಿಕೊಳ್ಳಲಿಲ್ಲ ಎಂದು ಗಿಲ್ಟ್ ಫೀಲ್ ಆಗ್ತಾ ಇದೆ ಎನ್ನುತ್ತಾನೆ.
"ನಿಮ್ಮಿಂದ ಯಾವ ತಪ್ಪೂ ಆಗಿಲ್ಲ. ನೀವು ಎಲ್ಲರಿಗೂ ಒಳ್ಳೆಯದನ್ನು ಬಯಸ್ತಾ ಇದ್ದೀರ, ಒಳ್ಳೆಯದನ್ನೇ ಮಾಡ್ತಿರ, ಕೆಲವೊಮ್ಮೆ ಪರಿಸ್ಥಿತಿ ನಮ್ಮನ್ನು ಹೀಗೆ ಮಾಡಿಸುತ್ತದೆ. ಎಲ್ಲವೂ ಸರಿಯಾಗುತ್ತದೆ. ಸಮಧಾನ ಮಾಡಿಕೊಳ್ಳಿ" ಎಂದು ಭೂಮಿಕಾ ಸಮಧಾನ ಹೇಳುತ್ತಾಳೆ. ಹೆಚ್ಚೇನೂ ಹೇಳದೇ ಗೌತಮ್ ಮಲಗುತ್ತಾನೆ. "ಗೌತಮ್ ಅವರಿಗೆ ತಮ್ಮ ಮನೆಯವರ ಬಗ್ಗೆ ಒಳ್ಳೆಯ ಭಾವನೆ ಇದೆ. ಆದರೆ, ಅವರ ನೋವನ್ನು ಇಲ್ಲಿ ಅರ್ಥ ಮಾಡಿಕೊಳ್ಳುವವರೂ ಯಾರೂ ಇಲ್ಲ" ಎಂದು ಭೂಮಿಕಾ ಯೋಚನೆ ಮಾಡುತ್ತಾಳೆ.
ಇನ್ನೊಂದೆಡೆ ಶಕುಂತಲಾದೇವಿ ಎಲ್ಲರಿಗೂ ಬ್ರೇಕ್‌ಫಾಸ್ಟ್ ಬಡಿಸ್ತಾ ಇರುತ್ತಾಳೆ ಅತ್ತೆಯಾದವಳು ಮೊದಲು ದಿನ ಸೊಸೆಗೆ ಬಡಿಸಬೇಕು ಎಂದು ಶಕುಂತಲಾ ಹೇಳುತ್ತಾಳೆ. ಅಮ್ಮನ ಕೋಪ ಕಡಿಮೆಯಾಯಿತು ಎಂದು ಗೌತಮ್ ಹೇಳುತ್ತಾರೆ. "ಅಮ್ಮ ಅಮ್ಮನೇ ಆ ಜಾಗ ಯಾರೂ ತುಂಬಿಕೊಳ್ಳಲು ಸಾಧ್ಯವಿಲ್ಲ" ಎಂದು ಗೌತಮ್ ಹೇಳುತ್ತಾನೆ. ಅದೇ ಸಮಯದಲ್ಲಿ ಜೈದೇವ್ ಒಬ್ಬನೇ ಬರುತ್ತಾನೆ. ಮಲ್ಲಿಯನ್ನು ಕರೆದುಕೊಂಡು ಬರಲು ಭೂಮಿಕಾ ಹೋಗುತ್ತಾಳೆ. "ನನಗೆ ಮನೆಯಲ್ಲಿ ಜಾಗ ಸಿಗ್ತು, ಆದರೆ, ಈ ಮನೆಯಲ್ಲಿರುವ ಮನಸ್ಸುಗಳಲ್ಲಿ ಜಾಗ ಸಿಗ್ತಿಲ್ಲ" ಎಂದು ಮಲ್ಲಿ ಹೇಳುತ್ತಾಳೆ. "ನಾನು ಇಲ್ಲಿಗೆ ಬರಬಾರದಿತ್ತು" ಎನ್ನುತ್ತಾಳೆ. "ಅವರಿಗೆ ನನ್ನನ್ನು ಕಂಡರೆ ಕೆಂಡದಂತಹ ಕೋಪ, ನನ್ನ ನೆರಳು ಕಂಡರೂ ಇಷ್ಟವಾಗುವುದಿಲ್ಲ" ಎಂದಾಗ ಭೂಮಿಕಾಳಿಗೆ ಪರಿಸ್ಥಿತಿಯ ಅರಿವಾಗುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)