ಬಿಗ್‌ಬಾಸ್ ಸೊಸೆ ಅಂಕಿತಾ ಬಗ್ಗೆ ಅತ್ತೆ ನೀಡಿದ 5 ಆಘಾತಕಾರಿ ಹೇಳಿಕೆಗಳು; ಗಂಡನಿಗೆ ಯಾರಾದ್ರೂ ಹೀಗೆ ಮಾಡ್ತಾರೇನ್ರಿ
Jan 11, 2024 06:27 AM IST
ಬಿಗ್‌ಬಾಸ್ ಸ್ಪರ್ಧಿ ಅಂಕಿತಾ ಕುರಿತು ಅತ್ತೆ ನೀಡಿದ 5 ಆಘಾತಕಾರಿ ಹೇಳಿಕೆಗಳಿವು
- Bigg Boss 17: ಬಿಗ್‌ಬಾಸ್ ಹಿಂದಿ ಈಗ ರೋಚಕ ಘಟ್ಟ ಪ್ರವೇಶಿಸುತ್ತಿದೆ. ಇತ್ತೀಚೆಗೆ ದೊಡ್ಮನೆಗೆ ಬಂದ ಅಂಕಿತಾ ಲೋಖಂಡೆ ಅತ್ತೆ ಮನೆಯಿಂದ ಹೊರಹೋದ ಬಳಿಕ ವಿವಿಧ ಸಂದರ್ಶನಗಳಲ್ಲಿ ಸೊಸೆ ಮತ್ತು ಮಗನ ಕುರಿತು ಹಲವು ವಿಚಾರಗಳನ್ನು ಮಾತನಾಡಿದ್ದಾರೆ.
ಒಂದೆಡೆ ಬಿಗ್‌ಬಾಸ್ ಕನ್ನಡವು ಫಿನಾಲೆಯತ್ತ ಮುನ್ನುಗುತ್ತಿದೆ. ಇನ್ನೊಂದೆಡೆ ಬಿಗ್‌ಬಾಸ್ ಹಿಂದಿ ರಿಯಾಲಿಟಿ ಶೋ ಕೂಡ ರೋಚಕ ಹಂತ ತಲುಪಿದೆ. ಬಿಗ್‌ಬಾಸ್ ಸೀಸನ್ 17 ಮನೆಯೊಳಗೆ ವಿಶೇಷ ಸಂಚಿಕೆಯಲ್ಲಿ ಇತ್ತೀಚೆಗೆ ಅಂಕಿತಾ ಲೋಖಂಡೆ ತಾಯಿ ವಂದನಾ ಮತ್ತು ಅಂಕಿತಾ ಪತಿ ವಿಕ್ಕಿ ಜೈನ್ ಅವರ ತಾಯಿ ರಂಜನಾ ಅವರು ಆಗಮಿಸಿದ್ದರು. ಮನೆಯಿಂದ ಹೊರನಡೆದ ಬಳಿಕ ಅಂಕಿತಾ ಲೋಖಂಡೆ ಅತ್ತೆ ರಂಜನಾ ಹಲವು ಸಂದರ್ಶನಗಳಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ದೊಡ್ಮನೆಯಲ್ಲಿ ಸಹಾನುಭೂತಿ ಗಿಟ್ಟಿಸಿಕೊಳ್ಳುವ ಸಲುವಾಗಿ ನನ್ನ ಸೊಸೆ ಸುಶಾಂತ್ ಸಿಂಗ್ ರಜ್‌ಪೂತ್ ಹೆಸರು ಬಳಸಿಕೊಳ್ತಾ ಇದ್ದಾಳೆ ಎಂದು ಇವರು ಹೇಳಿದ್ದಾರೆ. ಇವರು ನೀಡಿರುವ ಐದು ಆಘಾತಕಾರಿ ಹೇಳಿಕೆಗಳ ವಿವರ ಇಲ್ಲಿದೆ.
ಅಂಕಿತಾ ಮತ್ತು ವಿಕ್ಕಿ ಜೈನ್ ಮದುವೆಗೆ ನಾವು ಸಪೋರ್ಟ್ ಮಾಡಿಲ್ಲ
ಬಿಗ್‌ಬಾಸ್ ಮನೆಗೆ ಹೋಗಿ ಬಂದ ಬಳಿಕ ಅಂಕಿತಾ ಲೋಖಂಡೆ ಅತ್ತೆ ಪಿಂಕ್‌ವಿಲ್ಲಾಗೆ ಸಂದರ್ಶನ ನೀಡಿದ್ದರು. ಈ ಸಮಯದಲ್ಲಿ ಅಂಕಿತಾ ಮತ್ತು ವಿಕ್ಕಿ ಮದುವೆಗೆ ನಮ್ಮ ಬೆಂಬಲ ಇರಲಿಲ್ಲ ಎಂಬ ಅಂಶವನ್ನು ಹೇಳಿದ್ದಾರೆ. "ನಾನು ಎಂದಿಗೂ ಈ ಮದುವೆಗೆ ಬೆಂಬಲ ನೀಡಿರಲಿಲ್ಲ. ಈಗ ಈತ (ಮಗ) ಈ ಸಂಬಂಧವನ್ನು ಮುಂದುವರೆಸಲು ಸಿದ್ಧನಾಗಿದ್ದಾನೆ. ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಎಲ್ಲಾ ವಿಷಯಗಳನ್ನು ನೋಡುತ್ತೇವೆ, ಏನೂ ಹೇಳುತ್ತಿಲ್ಲ. ಅವನು ವಾಪಸ್ ಬಂದು ಮದುವೆಯಾಗುತ್ತಾನೆ. ಅದನ್ನು ಕಾರ್ಯಗತ ಮಾಡ್ತಾನೆ ಅನ್ನೋದು ನಮಗೆ ಖಚಿತವಾಗಿದೆ" ಎಂದಿದ್ದರು. ಅಂಕಿತಾ ಮತ್ತು ವಿಕ್ಕಿಗೆ 2021ರಲ್ಲಿ ವಿವಾಹವಾಗಿತ್ತು. ಆದರೆ, ಅವರು ಜತೆಯಲ್ಲಿ ಇಲ್ಲ. ಇದೀಗ ಮತ್ತೆ ಈ ಸಂಬಂಧ ಮುಂದುವರೆಯುವ ಸೂಚನೆ ಇದೆ. ಇದೇ ವಿಷಯದ ಕುರಿತು ಅಂಕಿತಾ ಅತ್ತೆ ಮಾತನಾಡಿದ್ದಾರೆ.
ಸುಶಾಂತ್ ಸಿಂಗ್ ಹೆಸರನ್ನು ಸಹಾನುಭೂತಿಗಾಗಿ ಬಳಸ್ತಾಳೆ
ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಜೈನ್ ತಾಯಿ ಮತ್ತು ಅಂಕಿತಾ ಅತ್ತೆ ತನ್ನ ಸೊಸೆ ಕುರಿತು ಇನ್ನೊಂದು ಆಘಾತಕಾರಿ ವಿಚಾರ ತಿಳಿಸಿದ್ದಾರೆ. ಅಂಕಿತಾ ಲೋಖಂಡೆ ಅವರು ತನ್ನ ಮಾಜಿ ಪ್ರೇಮಿ ದಿ. ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ಬಿಗ್‌ಬಾಸ್ ಮನೆಯೊಳಗೆ ಸಿಂಪತಿ ಗಳಿಸುವ ಸಲುವಾಗಿ ಬಳಸ್ತಾಳೆ ಎಂದು ಅತ್ತೆ ಹೇಳಿದ್ದಾರೆ. "ತನ್ನ ಕುರಿತು ದೊಡ್ಮನೆಯಲ್ಲಿ ಸಹಾನುಭೂತಿ ಗಳಿಸಲು ಸುಶಾಂತ್ ಹೆಸರು ಬಳಸ್ತಾಳೆ ಎಂದು ನನಗೆ ಅನಿಸ್ತದೆ. ಈಗ ಸುಶಾಂತ್ ಹೆಸರು ಹೇಳಿ ಏನು ಪ್ರಯೋಜನ? ಆತ ಹೋಗಿಬಿಟ್ಟಿದ್ದಾನೆ. ಆತ ಜೀವಂತವಾಗಿರುವಾಗ ಎಲ್ಲರ ಪ್ರೀತಿ ಗಳಿಸಿದ್ದ. ಅದೆಲ್ಲ ನಿಜಕ್ಕೂ ಉತ್ತಮ ವಿಚಾರಗಳು" ಎಂದು ಅತ್ತೆ ಹೇಳಿದ್ದರು.
ನನ್ನ ಮಗನತ್ತ ಚಪ್ಪಲಿ ಎಸೆದದ್ದು ಸರಿಯಲ್ಲ
ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗ ವಿಕ್ಕಿ ಜೈನ್‌ನತ್ತ ಅಂಕಿತಾ ಲೋಖಂಡೆ ಚಪ್ಪಲಿ ಎಸೆದಿರುವ ವಿಷಯದ ಕುರಿತೂ ಅತ್ತೆ ರಂಜನಾ ಮಾತನಾಡಿದ್ದಾರೆ. "ಇದು ಯಾವ ರೀತಿಯ ತಮಾಷೆ ಎಂದು ನನಗೆ ಗೊತ್ತಿಲ್ಲ. ಗಂಡನಿಗೆ ಚಪ್ಪಲಿ, ತಲೆದಿಂಬು ಎಸೆಯುವುದು... ಏನಿದು ಕರ್ಮ" ಎಂದಿದ್ದರು.
ಆಕೆ ಎಲ್ಲವನ್ನೂ ಮರೆಯಲು ರೆಡಿ ಇದ್ದಾಳೆ
ಇದೇ ಪಿಂಕ್‌ವಿಲ್ಲಾ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಅಂಕಿತಾ ಅತ್ತೆ ತಮ್ಮ ಮಗ ಮತ್ತು ಸೊಸೆಯ ನಡುವೆ ಇರುವ ಅನ್ಯೋನ್ಯತೆ ಕುರಿತೂ ಮಾತನಾಡಿದ್ದಾರೆ. "ನಾನು ಅಂಕಿತಾಳಿಗೆ ಹೇಳಲು ಬಯಸುವೆ. ಅವಳು ಬುದ್ಧಿವಂತಿಕೆಯಿಂದ ಮಾತನಾಡಬೇಕು. ಮಾತನಾಡುವ ವಿಷಯದ ಕುರಿತು ಗಮನ ಇರಬೇಕು. ತನ್ನ ಗಂಡನನ್ನು ಗೌರವಿಸಲು ಆರಂಭಿಸಬೇಕು. ಮದುವೆಯಾದ ನಂತರ ಕುಟುಂಬದ ಬಗ್ಗೆ ಮರೆಯಬಾರದು. ಅವಳು ಎಲ್ಲವನ್ನೂ ಮರೆತು ಪ್ರತಿಬಾರಿ ಹೋರಾಟ ನಡೆಸಲು ಸಿದ್ಧಳಾಗುತ್ತಾಳೆ" ಎಂದು ಹೇಳಿದ್ದರು.
ಮಗನಿಗೆ ಹೊಡೆದದ್ದು ಇಷ್ಟವಾಗಲಿಲ್ಲ
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗ ಮತ್ತು ಸೊಸೆಯ ಜಗಳ ಇಷ್ಟವಾಗಿಲ್ಲ ಎಂದಿದ್ದಾರೆ. ಇತ್ತೀಚೆಗೆ ಅಂಕಿತಾ ಲೋಖಂಡೆ ತನ್ನ ಪತಿ ವಿಕ್ಕಿ ಜೈನ್‌ಗೆ ಹೊಡೆದ ವಿಡಿಯೋ ವೈರಲ್ ಆಗಿತ್ತು. "ಅಂಕಿತಾಳ ಈ ಸಂಗತಿ ನೋಡಿದ್ದಾನೆ. ನೀನು ಅವನನ್ನು ಕೆರಳಿಸಲು ಯತ್ನಿಸಿದರೆ, ಅವನನ್ನು ದೂರ ಮಾಡಲು ಬಯಸಿದರೆ ಖಂಡಿತಾ ಅವನು ಹತ್ತಿರದಲ್ಲಿ ಇರಲು ಬಯಸುವುದಿಲಲ. ವಿಕ್ಕಿ ಒಬ್ಬ ತಮಾಷೆಯ ವ್ಯಕ್ತಿ. ತನ್ನ ರೀತಿ ಫನ್ ಆಗಿರೋರ ಜತೆ ಇರಲು ಬಯಸುತ್ತಾನೆ. ಹೊಸದಾಗಿ ಮದುವೆಯಾದ ಈ ಜೋಡಿ ಜಗಳವಾಡ್ತರೆ ಎಂದುಕೊಂಡಿರಲಿಲ್ಲ" ಎಂದು ಅಂಕಿತಾ ಅತ್ತೆ ಹೇಳಿದ್ದಾರೆ.