ಪೊಲೀಸರಿಗೆ ಹೆದರಿ ಪರಾರಿಯಾದ್ರ ಬಿಗ್ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್; ಮೊನ್ನೆ ಗೆದ್ದ ರೈತನ ಮಗನಿಗೆ ಇಂದು ಇದೆಂಥ ಸಂಕಷ್ಟ
Dec 20, 2023 04:56 PM IST
ಬಿಗ್ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್
- Bigg Boss Winner Pallavi Prashanth: ಬಿಗ್ಬಾಸ್ ತೆಲುಗು ರಿಯಾಲಿಟಿ ಶೋ ಈ ಬಾರಿ ಸಾಕಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮೊನ್ನೆಯಷ್ಟೇ ಬಿಗ್ಬಾಸ್ ವಿನ್ನರ್ ಪಟ್ಟ ಪಡೆದಿರುವ ಪಲ್ಲವಿ ಪ್ರಶಾಂತ್ ಈಗ ಪೊಲೀಸರಿಗೆ ಹೆದರಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗು ನಟ ನಾಗಾರ್ಜುನ ನಡೆಸಿಕೊಡುವ ಈ ಬಾರಿ ಬಿಗ್ಬಾಸ್ ತೆಲುಗು ರಿಯಾಲಿಟಿ ಶೋದ ಅಂತಿಮ ಫಲಿತಾಂಶವು ಸಾಕಷ್ಟು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಬಿಗ್ಬಾಸ್ ಸೀಸನ್ 7ರಲ್ಲಿ ಗೆಲುವು ಪಡೆದಿರುವ ರೈತನ ಮಗ ಪಲ್ಲವಿ ಪ್ರಶಾಂತ್ ಅವರು ಪೊಲೀಸರಿಗೆ ಹೆದರಿ ಪರಾರಿಯಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಪಲ್ಲವಿ ಪ್ರಶಾಂತ್ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಿಗ್ಬಾಸ್ ಗೆಲುವಿನ ಸಂಭ್ರಮದಲ್ಲಿರಬೇಕಾದ ಈ ರೈತನ ಮಗ ಪೊಲೀಸರಿಗೆ ಹೆದರಿ ಓಡುವಂತಾಗಿದೆ.
ಈ ಎಲ್ಲಾ ಸಂಕಷ್ಟಗಳಿಗೆ ಕಾರಣವಾಗಿರುವುದು ಬಿಗ್ಬಾಸ್ ಗೆಲುವು ಪಡೆದ ದಿನ. ಬಿಗ್ಬಾಸ್ ಸೀಸನ್ 7ರಲ್ಲಿ ಪಲ್ಲವಿ ಪ್ರಶಾಂತ್ ಗೆಲುವು ಪಡೆದ ದಿನದಂದು ಬಿಗ್ಬಾಸ್ ಮನೆಯ ಮುಂದೆ ಇರುವ ಅನ್ನಪೂರ್ಣ ಸ್ಟುಡಿಯೋಸ್ ಮುಂದೆ ಪಲ್ಲವಿ ಅಭಿಮಾನಿಗಳು ಪುಂಡಾಟ ಮೆರೆದಿದ್ದರು. ಕಾರು ಬಸ್ಸುಗಳನ್ನು, ಪೀಠೋಪಕರಣಗಳನ್ನು ಜಖಂ ಮಾಡಿದ್ದರು. ಈ ಪ್ರಕರಣದಲ್ಲಿ ಪಲ್ಲವಿ ಪ್ರಕಾಶ್ ಅವರನ್ನು ಎ ವನ್ ಆರೋಪಿಯನ್ನಾಗಿ ಮಾಡಲಾಗಿದೆ. ಬಿಗ್ಬಾಸ್ ಮನೆಯಿಂದ ಹಿಂಬಾಗಿಲ ಮೂಲಕ ಹೋಗುವಂತೆ ಪೊಲೀಸರು ತಿಳಿಸಿದರೂ ತೆರೆದ ವಾಹನದಲ್ಲಿ ತನ್ನ ಹಿಂಬಾಲಕರ ಜತೆ ಹೋಗಿರುವುದು ಪೊಲೀಸರ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಂಧಿಸಲು ಪೊಲೀಸರು ಪಲ್ಲವಿ ಪ್ರಶಾಂತ್ರನ್ನು ಹುಡುಕುತ್ತಿದ್ದಾರೆ.
ಹೊರಗಡೆ ಜಗಳ ಆಗುತ್ತಿರುವುದರಿಂದ ಹಿಂದಿನ ಬಾಗಿಲಿನಿಂದ ಹೋಗುವಂತೆ ಪೊಲೀಸರು ಮಾತ್ರವಲ್ಲದೆ ಬಿಗ್ಬಾಸ್ ಆಡಳಿತವೂ ತಿಳಿಸಿತ್ತು. ಆದರೆ, ಈ ಆದೇಶ, ಸೂಚನೆ ಮರೆತ ಪಲ್ಲವಿ ಪ್ರಶಾಂತ್ ತೆರೆದ ಜೀಪ್ನಲ್ಲಿ ಜಗಳ, ಪುಂಡಾಟ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಸಾರ್ವಜನಿಕರಿಗೆ ಕಿರುಕುಳ ನೀಡಿದ ಆರೋಪವನ್ನು ಈಗ ಪಲ್ಲವಿ ಪ್ರಶಾಂತ್ ಎದುರಿಸುತ್ತಿದ್ದಾರೆ. ಇದನ್ನೂ ಓದಿ: Akka Anu: ಇನ್ಮೇಲೆ ಅಕ್ಕನ ಕೈ ಕುಂಚ ಹಿಡಿಯಲ್ಲ; ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ ಅಂದ್ರು ಕೆಚ್ಚೆದೆಯ ಕನ್ನಡತಿ ಅಕ್ಕ ಅನು
ವಿಡಿಯೋ ಹಂಚಿಕೊಂಡ ಪಲ್ಲವಿ ಪ್ರಶಾಂತ್
ಪೊಲೀಸರು ತನ್ನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದ ಪಲ್ಲವಿ ಪ್ರಶಾಂತ್ ಇದೀಗ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಾನು ತಪ್ಪು ಮಾಡಿಲ್ಲ. ನನ್ನ ವಿಡಿಯೋಗಳನ್ನು ತಿರುಚಿ ಸೋಷಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿದೆ. ಪಲ್ಲವಿ ಪ್ರಶಾಂತ್ ರೈತನ ಮಗ, ಆತ ಎಂದಿಗೂ ತಪ್ಪು ಮಾಡುವುದಿಲ್ಲ" ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಬಿಗ್ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲಿ ಇವರನ್ನು ಬಂಧಿಸಲು ಪೊಲೀಸ್ ತಂಡ ರೆಡಿಯಾಗಿದೆ. ಇದರಿಂದ ಇವರು ತಲೆಮರೆಸಿಕೊಂಡಿದ್ದಾರೆ ಎಂಬ ಊಹಾಪೋಹಗಳು ಆಂಧ್ರದಲ್ಲಿ ಹರಿದಾಡುತ್ತಿದೆ. ನನ್ನ ಮಗನ ಫೋನ್ ಸ್ಚಿಚ್ ಆಫ್ ಆಗಿದ್ದು, ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಪಲ್ಲವಿ ಪ್ರಶಾಂತ್ ಪೋಷಕರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದೀಗ ಪಲ್ಲವಿ ಪ್ರಶಾಂತ್ ವಿಡಿಯೋದಲ್ಲಿ "ನಾನು ತಲೆಮರೆಸಿಕೊಂಡಿಲ್ಲ. ಮನೆಯಲ್ಲಿಯೇ ಇದ್ದೇನೆ" ಎಂದಿದ್ದಾರೆ.
ಈ ವಿಡಿಯೋದಲ್ಲಿ ತನ್ನನ್ನು ಭೇಟಿಯಾಗಲು ಬೇರೆ ಬೇರೆ ಕಡೆಯಿಂದ ಬಂದಿದ್ದ ಕೆಲವರನ್ನು ಪ್ರಶಾಂತ್ ಪರಿಚಯಿಸಿದ್ದಾನೆ. ಅವರು ಎಲ್ಲಿಂದ ಬಂದರು ಎಂದು ಕೇಳಿದರು. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಫೋನ್ ಬಳಸುತ್ತಿಲ್ಲ ಎಂದರು. ಆದರೆ, ಪ್ರಶಾಂತ್ ಮನೆಯಲ್ಲಿದ್ದರೆ, ಅವರ ಪೋಷಕರು ಮಾಧ್ಯಮಗಳಿಗೆ ಏಕೆ ಲಭ್ಯವಾಗಲಿಲ್ಲ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಪಲ್ಲವಿ ಪ್ರಶಾಂತ್ ಅವರ ಕೆಲಸಗಳು ಬಿರುಸುಗೊಳ್ಳುತ್ತಿವೆ.