logo
ಕನ್ನಡ ಸುದ್ದಿ  /  ಮನರಂಜನೆ  /  ಅತ್ತಿಗೆ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ನನಗೆ ಇಷ್ಟವಾಗದು ಎಂದ ಪಾರ್ಥ, ಅಕ್ಕನ ಅನುಕರಣೆ ಮಾಡಿದ್ರೂ ಬದಲಾಗಿಲ್ಲ ಅಪ್ಪಿ ಸ್ವಾರ್ಥ- ಅಮೃತಧಾರೆ

ಅತ್ತಿಗೆ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ನನಗೆ ಇಷ್ಟವಾಗದು ಎಂದ ಪಾರ್ಥ, ಅಕ್ಕನ ಅನುಕರಣೆ ಮಾಡಿದ್ರೂ ಬದಲಾಗಿಲ್ಲ ಅಪ್ಪಿ ಸ್ವಾರ್ಥ- ಅಮೃತಧಾರೆ

Praveen Chandra B HT Kannada

Sep 10, 2024 09:43 AM IST

google News

ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384.

    • ಭೂಮಿಕಾಳನ್ನು ಅನುಕರಣೆ ಮಾಡಿ ಪಾರ್ಥನಿಗೆ ಟಿಫಿನ್‌ ಕ್ಯಾರಿಯರ್‌ ಕಳುಹಿಸಿದ ಅಪೇಕ್ಷಾ, ಇಂದಿನ ಸಂಚಿಕೆಯಲ್ಲಿ ಭೂಮಿಕಾಳಂತೆ ಹೂವು ಮುಡಿದು ಗಂಡನಿಗಾಗಿ ಕಾದಿದ್ದಾಳೆ. ಇದೇ ಸಮಯದಲ್ಲಿ ಅತ್ತಿಗೆ ಬಗ್ಗೆ ಅಪೇಕ್ಷಾ ಕೆಟ್ಟದ್ದಾಗಿ ಮಾತನಾಡಿದ್ದು ಪಾರ್ಥನಿಗೆ ಸಹಿಸಲು ಆಗಿಲ್ಲ. - ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384.
ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384.
ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384.

ಜೀ ಕನ್ನಡ ಅಮೃತಧಾರೆ ಧಾರಾವಾಹಿ ಸಂಚಿಕೆ 384: ಭೂಮಿಕಾ ಆಫೀಸ್‌ನಿಂದ ಬರುವ ಗೌತಮ್‌ ದಿವಾನ್‌ರನ್ನು ವೆಲ್‌ಕಂ ಮಾಡಲು ಕಾಯುತ್ತಿದ್ದಾಳೆ. ಇದನ್ನು ನೋಡಿ ಅಪೇಕ್ಷಾಗೆ ಅಚ್ಚರಿಯಾಗುತ್ತದೆ. ಹೆಂಡತಿಯರು ಸಂಜೆ ಗಂಡ ಮನೆಗೆ ಬರುವ ಸಮಯದಲ್ಲಿ ಬ್ರೈಟ್‌ ಆಗಿರಬೇಕು ಎಂದು ಹೇಳುತ್ತಾಳೆ ಭೂಮಿಕಾ. ಇದನ್ನು ಕೇಳಿ ಅಪೇಕ್ಷಾ ಒಳಗೆ ಹೋಗುತ್ತಾಳೆ. "ನನ್ನ ಮೇಲೆ ಕೋಪ ಇದ್ರೂ ನಾನು ಹೇಳಿದ ಹಾಗೇ ಕೇಳ್ತಿಯಲ್ವ ಅಷ್ಟೇ ಸಾಕು" ಎಂದು ಭೂಮಿಕಾ ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ. ಅಪೇಕ್ಷಾ ಕೂಡ ಹೂವು ಮುಡಿದು, ಡ್ರೆಸ್‌ ಮಾಡಿಕೊಂಡು ಬರುತ್ತಾಳೆ. ಇದೇ ಸಮಯದಲ್ಲಿ ಮಲ್ಲಿ ಬೆಡ್‌ನ ಮೇಲೆ ಕುಳಿತಿದ್ದಾಳೆ. ಆಗ ಜೈದೇವ್‌ ಮೊಬೈಲ್‌ಗೆ ದಿಯಾಳ ಕಾಲ್‌ ಬರುತ್ತದೆ. ಮಲ್ಲಿ ಮೊಬೈಲ್‌ ಕೈಗೆತ್ತಿಕೊಳ್ಳಬೇಕೆನಿಸುವಷ್ಟರಲ್ಲಿ ಜೈದೇವ್‌ ಆ ಫೋನ್‌ ತೆಗೆದುಕೊಳ್ಳುತ್ತಾನೆ. ಬಾತ್‌ರೂಂಗೆ ಹೋಗಿ ದಿಯಾಳಲ್ಲಿ ಮಾತನಾಡುತ್ತಾನೆ. "ನಿಮ್ಮನ್ನು ನೋಡಬೇಕು. ಬಾಲ್ಕನಿಗೆ ಬನ್ನಿ. ನೋಡ್ತಿನಿ" ಎನ್ನುತ್ತಾಳೆ ದಿಯಾ. ಹೊರಗೆ ಸ್ವಲ್ಪ ಸುತ್ತಾಡಿ ಬರ್ತಿನಿ ಎಂದಾಗ ಮಲ್ಲಿ ಬಿಡೋದಿಲ್ಲ. ಹೊರಗೆ ಹೋಗದೆ ಇದ್ರೆ ದಿಯಾ ಬಿಡೋಲ್ಲ. ಎರಡು ದೋಣಿಯ ಮೇಲೆ ಕಾಲಿಡಬಾರದು ಎಂದುಕೊಳ್ಳುತ್ತಾನೆ ಜೈದೇವ್‌.

ಆನಂದ್‌ಗೆ ಖುಷಿಯಾಗಿದೆ. ಎರಡೇ ದಿನದಲ್ಲಿ ಬ್ಯಾಂಡೇಜ್‌ ಬಿಚ್ಚುತ್ತಾರೆ ಎಂದು ಡಾಕ್ಟರ್‌ ಹೇಳಿದ್ದಾರೆ. ಆಗ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಪಕ್ಕದ ಮನೆಯ ಆಂಟಿ ಬಂದಿದ್ದಾರೆ. "ನಿಮ್ಮನ್ನು ನೋಡಿಕೊಂಡು ಹೋಗೋಣ ಬಂದೆ. ನಿಮಗೆ ಆಕ್ಸಿಡೆಂಟ್‌ ಆಗಿದೆ ಅಲ್ವ. ತುಂಬಾ ಸೀರಿಯಸ್‌ ಅಂತ ಗೊತ್ತಾಯ್ತು. ನಮ್ಮ ಮನೆಯವರಿಗೆ ಏನೋ ಆಯ್ತು ಅಂದಹಾಗೆ" ಎಂದು ಹೇಳುತ್ತಾಳೆ. ಆಗಾಗ ಆನಂದ್‌ ತೊಡೆ ಮೇಲೆ ಕೈಯಿಟ್ಟು ಕುಶಲ ಸಮಚಾರ ವಿಚಾರಿಸುತ್ತಾರೆ. ಅಪರ್ಣಾ ಮನಸ್ಸಲ್ಲಿ ಕೋಪಗೊಳ್ಳುತ್ತಾಳೆ. ಕಾಫಿ ತರಲು ಹೋಗುತ್ತಾಳೆ. ಕಾಫಿ ತಂದಾಗ ಇಬ್ಬರೂ ಮುಖ ಸಿಂಡರಿಸಿಕೊಳ್ಳುತ್ತಾರೆ. ಕಾಫಿ ಕೆಟ್ಟದ್ದಾಗಿ ಮಾಡಿರುತ್ತಾಳೆ ಅಪರ್ಣಾ. ಆಂಟಿ ಹೋದ ಬಳಿಕ ಎಂದಿನಂತೆ ಅಪರ್ಣಾಳ ಕ್ಲಾಸ್‌ ಇರುತ್ತದೆ.

ಭೂಮಿಕಾಳನ್ನು ಅನುಕರಣೆ ಮಾಡುತ್ತ ಅಪೇಕ್ಷಾ ಕಾಯುತ್ತ ಇದ್ದಾರೆ. ಗೌತಮ್‌ ಮತ್ತು ಪಾರ್ಥ ಬಂದಾಗ ಇಬ್ಬರೂ ಓಡೋಡಿ ಹೋಗುತ್ತಾರೆ. ಪಾರ್ಥನ ಬ್ಯಾಗ್‌ ತೆಗೆದುಕೊಂಡು ಅಪೇಕ್ಷಾ ಪ್ರೀತಿ ತೋರಿಸುತ್ತಾರೆ. ಈ ಸಮಯದಲ್ಲಿ ಗೌತಮ್‌ ತನ್ನ ಬ್ಯಾಗ್‌ನಿಂದ ಮಲ್ಲಿಗೆ ಹೂ ತೆಗೆದು ಭೂಮಿಕಾಗೆ ಕೊಡುತ್ತಾರೆ. ಇದನ್ನು ನೋಡಿ ಅಪೇಕ್ಷಾಗೆ ಅಸೂಯೆಯಾಗುತ್ತದೆ. "ನೀವೇನೂ ತಂದಿಲ್ವ" ಎಂದು ಪಾರ್ಥನ ಜತೆ ಮುನಿಸಿಕೊಳ್ಳುತ್ತಾಳೆ. ಪಾರ್ಥ ಇಕ್ಕಟ್ಟಿಗೆ ಸಿಲುಕುತ್ತಾನೆ. ಹಿಂದಿನಿಂದ ಗೌತಮ್‌ ಪಾರ್ಥನಿಗೆ ಬ್ಯಾಗ್‌ ನೋಡಲು ಹೇಳುತ್ತಾರೆ. ಅಪೇಕ್ಷಾಳಿಗೆ ಬ್ಯಾಗ ನೋಡಲು ಹೇಳುತ್ತಾನೆ ಪಾರ್ಥ. ಬ್ಯಾಗ್‌ನೊಳಗೆ ಮಲ್ಲಿಗೆ ಹೂವು ಇರುತ್ತದೆ. ಅಪೇಕ್ಷಾ ಖುಷಿಯಾಗುತ್ತದೆ. ಇವರಿಬ್ಬರ ಖುಷಿ ನೋಡಿ ಗೌತಮ್‌ ಮತ್ತು ಭೂಮಿಕಾರಿಗೂ ಖುಷಿಯಾಗುತ್ತದೆ. "ನನ್ನ ಪ್ಲ್ಯಾನ್‌ ವರ್ಕ್‌ ಆಗ್ತಾ ಇದೆ" ಎಂದು ಗೌತಮ್‌ ಹೇಳುತ್ತಾರೆ.

ಶಕುಂತಲಾದೇವಿ ಮತ್ತು ಸಹೋದರ ಮಾತನಾಡುತ್ತ ಇರುತ್ತಾರೆ. "ಭೂಮಿಕಾ ಮತ್ತು ಅಪೇಕ್ಷಾರ ನಡುವೆ ಏನೋ ಆಗುತ್ತದೆ. ಮನೆ ಕುರುಕ್ಷೇತ್ರ ಆಗುತ್ತದೆ ಎಂದು ಹೇಳಿದೆ. ಈಗ ನೋಡಿದ್ರೆ ಠುಸ್‌ ಪಟಾಕಿಯಾಗಿದೆ" ಎಂದು ಹೇಳುತ್ತಾನೆ ರಮಾಕಾಂತ. "ಅವರಿಬ್ಬರು ಅವರ ಗಂಡಂದಿರ ಜತೆ ಆರಾಮವಾಗಿದ್ದಾರೆ. ಅಡುಗೆ ಮಾಡಿಕೊಡೋದೇನೋ, ಮನೆಯವರನ್ನು ವೆಲ್‌ಕಂ ಮಾಡೋದೇನೋ. ಅವರಿಬ್ಬರ ನಡುವೆ ಬೆಂಕಿ ಇಲ್ಲ" ಎಂದು ರಮಾಕಾಂತ ಹೇಳುತ್ತಾರೆ. "ಇಬ್ಬರ ನಡುವೆ ಬೆಂಕಿ ಬರುತ್ತದೆ. ಕಾಯುತ್ತಿರು" ಎಂದು ಶಕುಮತಲಾದೇವಿ ಹೇಳುತ್ತಾರೆ.

ಬದಲಾಗಿಲ್ಲ ಅಪ್ಪಿ ಸ್ವಾರ್ಥ

"ಊಟ ಅಷ್ಟೊಂದು ಚೆನ್ನಾಗಿತ್ತಾ?" ಎಂದು ಅಪೇಕ್ಷಾ ಕೇಳುತ್ತಾಳೆ. ಏನೂ ಹೇಳೋದು ಎಂದು ಪಾರ್ಥನಿಗೆ ಟೆನ್ಷನ್‌ ಆಗುತ್ತದೆ. ಸುಮ್ಮನೆ "ದಿ ಬೆಸ್ಟ್‌ ಊಟ" ಎಂದು ಹೊಗಳುತ್ತಾಳೆ. "ನಾನು ಅಡುಗೆ ಮನೆಗೆ ಹೋದ್ರೆ ಅಕ್ಕ ಅದನ್ನೂ ಕಾಪಿ ಮಾಡ್ತಾ ಇದ್ದಳು. ಸಂಜೆ ವೆಲ್‌ಕಂ ಮಾಡೋದ್ರಲ್ಲೂ ನನ್ನನ್ನೇ ಕಾಪಿ ಮಾಡ್ತಾರೆ" ಎಂದು ಅಕ್ಕನ ಬಗ್ಗೆ ದೂರು ಹೇಳುತ್ತಾಳೆ. "ನೀವ್ಯಾಕೆ ಅಕ್ಕನ ಡಿಗ್ರೇಡ್‌ ಮಾಡ್ತಾ ಇದ್ದೀರ. ನೀವು ಬರೋದಕ್ಕೆ ಮುಂಚೆಯೂ ಅತ್ತಿಗೆ ಹೀಗೆಯೇ. ನಾನು ನಿಮ್ಮನ್ನು ಅತ್ತಿಗೆತಂಗಿ ಅಂತ ಕರೆಯೋದು ಅದಕ್ಕೆ. ಅತ್ತಿಗೆ ಬಗ್ಗೆ ಯಾರಾದ್ರೂ ಏನಾದ್ರೂ ಹೇಳಿದ್ರೆ ನನಗೆ ಇಷ್ಟವಾಗೋದಿಲ್ಲ" ಎಂದು ಪಾರ್ಥ ಹೇಳುತ್ತಾನೆ. "ಎಲ್ಲರೂ ಅತ್ತಿಗೆ ಪರವಹಿಸಿಕೊಂಡು ಬರ್ತಾರೆ. ಅವಳ ಬಗ್ಗೆ ನನಗೆ ಗೊತ್ತಿಲ್ವ" ಎಂದು ಅಪೇಕ್ಷಾ ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ.

ತುಂಬಾ ಹಸಿವಾಗ್ತಿದೆ ಚಾಕೋಲೇಟ್‌ ಕೊಡಿ ಎಂದು ಗೌತಮ್‌ ಹೇಳುತ್ತಾರೆ. ಅಷ್ಟೊಂದು ಕಟ್ಟಿ ಕೊಟ್ಟಿದ್ದೆ. ಏನ್‌ ಮಾಡಿದ್ರಿ ಎಂದು ಕೇಳುತ್ತಾಳೆ ಭೂಮಿಕಾ. "ನಾನು ತಿಂದಿಲ್ಲರಿ. ಪಾರ್ಥನಿಗೆ ಕೊಟ್ಟೆ" ಎನ್ನುತ್ತಾಳೆ. "ಅಪೇಕ್ಷಾ ಮಾಡಿದ್ದನ್ನು ತಿಂದೆ" ಎನ್ನುತ್ತಾರೆ. "ಹೇಗಿತ್ತು?" ಎಂದು ಕೇಳುತ್ತಾಳೆ. "ತುಂಬಾ ಕೆಟ್ಟದ್ದಾಗಿತ್ತು. ಊಟ ರೀತಿ ಇರಲಿಲ್ಲ. ಊಟದ ಮೇಲೆ ಜಿಗುಪ್ಸೆ ಬರೋ ರೀತಿ ಇತ್ತು" ಎಂದು ಅಪೇಕ್ಷಾಳ ಅಡುಗೆ ಕುರಿತು ಹೇಳುತ್ತಾರೆ. "ಅಪೇಕ್ಷಾ ಚೆನ್ನಾಗಿಯೇ ಅಡುಗೆ ಮಾಡುತ್ತಾಳೆ. ಇವತ್ತು ವೆರೆಯಿಟಿ ವೆರೆಯಿಟಿ ಮಾಡಲು ಹೋಗಿ ಏನೋ ಹೆಚ್ಚು ಕಮ್ಮಿ ಆಗಿರಬಹುದು" ಎಂದು ಭೂಮಿಕಾ ಹೇಳುತ್ತಾಳೆ. "ಪಾರ್ಥನಿಗೆ ಈ ವಿಷಯ ಗೊತ್ತಾಗಬಾರದು ಎಂದು ಹೀಗೆ ಮಾಡಿದೆ" ಎಂದು ಗೌತಮ್‌ ಹೇಳುತ್ತಾರೆ. ಹೀಗೆ ಅವರಿಬ್ಬರ ನಡುವೆ ಪ್ರೀತಿ ಹೆಚ್ಚಿಸುವ ಕುರಿತು ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ
ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ