logo
ಕನ್ನಡ ಸುದ್ದಿ  /  ಮನರಂಜನೆ  /  Anubandha Awards 2024: ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭ; ನಿಮ್ಮ ನೆಚ್ಚಿನ ಕಿರುತೆರೆ ತಾರೆಯರಿಗೆ ಈಗಲೇ ಓಟ್‌ ಮಾಡಿ

Anubandha awards 2024: ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭ; ನಿಮ್ಮ ನೆಚ್ಚಿನ ಕಿರುತೆರೆ ತಾರೆಯರಿಗೆ ಈಗಲೇ ಓಟ್‌ ಮಾಡಿ

Praveen Chandra B HT Kannada

Sep 10, 2024 03:05 PM IST

google News

ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ.

    • Colors Kannada Anubandha awards 2024 vote: ಕಲರ್ಸ್‌ ಕನ್ನಡ ವಾಹಿನಿಯ ವಾರ್ಷಿಕ ಹಬ್ಬ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಈ ಪ್ರಶಸ್ತಿಗೆ ತಮ್ಮ ನೆಚ್ಚಿನ ಕಲಾವಿದರು, ತಂತ್ರಜ್ಞರನ್ನು ಆಯ್ಕೆ ಮಾಡಲು ಜಿಯೋಸಿನೆಮಾ ಆಪ್‌ನಲ್ಲಿ ಓಟ್‌ ಮಾಡಬಹುದು.
ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ.

Colors Kannada Anubandha awards 2024 vote: ಕಲರ್ಸ್‌ ಕನ್ನಡ ವಾಹಿನಿಯ ವಾರ್ಷಿಕ ಹಬ್ಬ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಈ ಪ್ರಶಸ್ತಿಗೆ ತಮ್ಮ ನೆಚ್ಚಿನ ಕಲಾವಿದರು, ತಂತ್ರಜ್ಞರನ್ನು ಆಯ್ಕೆ ಮಾಡುವ ಕ್ಷಣ ಕಿರುತೆರೆ ಪ್ರೇಕ್ಷಕರಿಗೆ ಬಂದಿದೆ. ಕಲರ್ಸ್‌ ಕನ್ನಡದ ಕಲಾವಿದರು, ತಂತ್ರಜ್ಞರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಈ ವಾರ್ಷಿಕ ಹಬ್ಬದಲ್ಲಿ ಹಾಡು, ಕುಣಿತ, ಪ್ರಶಸ್ತಿ ವಿತರಣೆಗಳ ಮಸ್ತಿ ಇರಲಿದೆ. ಈ ಬಾರಿಯ ಅನುಬಂಧ ಅವಾರ್ಡ್ಸ್‌ 2024ಕ್ಕೆ ನೀವು ಮತಚಲಾಯಿಸಬಹುದು.

ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌

ಇದು ಕಲರ್ಸ್‌ ಕನ್ನಡದ ವಿವಿಧ ಮನರಂಜನೆ ಕಾರ್ಯಕ್ರಮಗಳಿಗೆ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡುವಂತಹ ಒಂದು ಕಾರ್ಯಕ್ರಮ. ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಕೂಡಿರುತ್ತದೆ. ಈ ಅವಾರ್ಡ್‌ಗೆ ಎಲ್ಲರೂ ಮತಚಲಾಯಿಸಬಹುದು. ವಿಶೇಷವೆಂದರೆ, ಈ ಅವಾರ್ಡ್‌ಗೆ ಮತ ಚಲಾಯಿಸುವ ಸಮಯ ಈಗ ಬಂದಿದೆ. ಈಗಲೇ ನಿಮ್ಮ ಮೊಬೈಲ್‌ನಲ್ಲಿ ಮತ ಚಲಾಯಿಸಬಹುದು. ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಮತ ಚಲಾವಣೆ ಹೇಗೆ ಎಂದು ತಿಳಿಯೋಣ.

ಅನುಬಂಧ ಅವಾರ್ಡ್‌ ಓಟ್‌ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಜಿಯೋ ಸಿನೆಮಾ ಆಪ್‌ ಓಪನ್‌ ಮಾಡಿ. ಈಗಾಗಲೇ ಡೌನ್‌ಲೋಡ್‌ ಮಾಡಿಲ್ಲದಿದ್ದರೆ ಡೌನ್‌ಲೋಡ್‌ ಮಾಡಿಕೊಳ್ಳಿ. ಜಿಯೋ ಸಿನೆಮಾ ಒಟಿಟಿ ಆಪ್‌ ಓಪನ್‌ ಮಾಡಿದ ಬಳಿಕ ಅದರ ಮುಖಪುಟದಲ್ಲಿ ಕಲರ್ಸ್‌ ಕನ್ನಡ ಎಂಬ ಆಯ್ಕೆ (ಲೋಗೊ) ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ.

  • ಜಿಯೋ ಸಿನಿಮಾದಲ್ಲಿ ಕಲರ್ಸ್‌ ಕನ್ನಡ ಕ್ಲಿಕ್‌ ಮಾಡಿದ ಬಳಿಕ ಅಲ್ಲಿ ಅನುಬಂಧ ಆಯ್ಕೆ ಕ್ಲಿಕ್‌ ಮಾಡಿ.
  • ಅಲ್ಲಿ ನಿಮ್ಮ ಮೆಚ್ಚಿನ ತಾರೆಯರನ್ನು ಆಯ್ಕೆ ಮಾಡಲು ಓಟ್‌ ಮಾಡುವ ಆಯ್ಕೆ ದೊರಕುತ್ತದೆ.
  • ನಿಮ್ಮ ಮೆಚ್ಚಿನ ಆಯ್ಕೆಗಳಿಗೆ ಹೋಗಿ ಮತ ಚಲಾಯಿಸಿ.

ಯಾರಿಗೆ ಮತ ಚಲಾಯಿಸುವಿರಿ?

ಉದಾಹರಣೆಗೆ ನಿಮ್ಮ ನೆಚ್ಚಿನ ಜೋಡಿಯಲ್ಲಿ ಶ್ರೇಷ್ಠ, ಕೀರ್ತಿ, ರಚನಾ, ರಚನಾ, ಚಾರು, ಸಾಹಿತ್ಯ, ಅಮಲ, ಸುಧಾನರಲ್ಲಿ ನಿಮಗೆ ಯಾರು ಇಷ್ಟ ಅವರಿಗೆ ಮತ ಚಲಾಯಿಸಬಹುದು. ಇದೇ ರೀತಿ ಜನ ಮೆಚ್ಚಿದ ಜೋಡಿ, ಜನಮೆಚ್ಚಿದ ಮಂಥರೆ, ಜನ ಮೆಚ್ಚಿದ ಶಕುನಿ, ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ಸ್ಟೈಲ್‌ ಐಕಾನ್‌ ಪುರುಷ, ಜನ ಮೆಚ್ಚಿದ ಐಕಾನ್‌ ಮಹಿಳೆ, ಜನ ಮೆಚ್ಚಿದ ಯೂತ್‌ ಐಕಾನ್‌, ಜನ ಮೆಚ್ಚಿದ ಸಂಸಾರ, ಜನ ಮೆಚ್ಚಿದ ಹೊಸ ಪರಿಚಯ, ಜನ ಮೆಚ್ಚಿದ ಎಂಟರ್‌ಟ್ರೇನರ್‌ (ಪುರುಷ), ಜನ ಮೆಚ್ಚಿದ ಎಂಟರ್‌ಟ್ರೇನರ್‌ (ಮಹಿಳೆ), ಜನಮೆಚ್ಚಿದ ಹಾಸ್ಯ ಕಲಾವಿದರು ಹೀಗೆ ಸುಮಾರು ಹದಿಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗಕ್ಕೂ ಹೋಗಿ ಮತ ಚಲಾಯಿಸಬಹುದು.

ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಅನುಬಂಧ ಅವಾರ್ಡ್‌ ಪ್ರಮೋವನ್ನು ಝೀ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಇದೇ ಸಮಯದಲ್ಲಿ ಕಿರುತೆರೆ ಪ್ರೇಕ್ಷಕರು ತಮ್ಮ ನೆಚ್ಚಿನ ಕಿರೆತೆರೆ ತಾರೆಯರಿಗೆ ಓಟ್‌ ಮಾಡಲು ಆರಂಭಿಸಿದ್ದಾರೆ.

ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ದಿನಾಂಕ

ಇದೇ ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 1ರಂದು ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮ ನಡೆಯಲಿದೆ. ಕಲರ್ಸ್ ಅನುಬಂಧ, ಇದು ಸಂಬಂಧಗಳ ಸಂಭ್ರಮ, ಅನುಬಂಧ ಅವಾರ್ಡ್ಸ್ 2024 ಈಗಲೇ ಮತ ಚಲಾಯಿಸಬಹುದು. ಸೆಪ್ಟೆಂಬರ್‌ 20, 21 ಮತ್ತು 22 ಸಂಜೆ 7 ಗಂಟೆಗೆ ಅನುಬಂಧ ಅವಾರ್ಡ್‌ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ