Gnanavel Raja: ತಂಗಲಾನ್ ಚಿತ್ರದ ನಾಯಕಿ ಮಾಳವಿಕ ಮೋಹನನ್ ಪಾತ್ರ ಕೊಂಡಾಡಿದ ನಿರ್ಮಾಪಕ ಜ್ಞಾನವೇಲ್
Aug 18, 2024 07:22 PM IST
ತಂಗಲಾನ್ ಚಿತ್ರದ ನಾಯಕಿ ಮಾಳವಿಕ ಮೋಹನನ್ ಪಾತ್ರ ಕೊಂಡಾಡಿದ ನಿರ್ಮಾಪಕ ಜ್ಞಾನವೇಲ್
- Thangalaan Producer KE Gnanavel Raja About Nature: ಚಿಯಾನ್ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರದ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ಅವರು ನಾಯಕಿ ಮಾಳವಿಕಾ ಮೋಹನನ್ ಪಾತ್ರದ ಕುರಿತು ಮಾತನಾಡಿದ್ದಾರೆ.
Thangalaan Producer KE Gnanavel Raja: ಆಗಸ್ಟ್ 15ರಂದು ತೆರೆಗೆ ಬಂದ ಚಿಯಾನ್ ವಿಕ್ರಮ್ ಅಭಿನಯದ ಹಾಗೂ ಪಾ ರಂಜಿತ್ ನಿರ್ದೇಶನದ 'ತಂಗಲಾನ್' ಬ್ಲಾಕ್ಬಸ್ಟರ್ ಟಾಕ್ನೊಂದಿಗೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ತಂಗಲಾನ್ ಚಿತ್ರಕ್ಕೆ ಸಿಕ್ಕಿರುವ ಭಾರೀ ಪ್ರಶಂಸೆಗೆ ನಿರ್ಮಾಪಕ ಕೆಇ ಜ್ಞಾನವೇಲ್ ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತಮ ಚಿತ್ರವನ್ನು ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬುದಕ್ಕೆ ತಂಗಲಾನ್ಗೆ ಸಿಕ್ಕಿರುವ ಪ್ರತಿಕ್ರಿಯೆಯೇ ಸಾಕ್ಷಿ ಎಂದು ಜ್ಞಾನವೇಲ್ ರಾಜಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಇದೇ ವೇಳೆ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ಅವರು ಚಿತ್ರದ ನಾಯಕಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ತಂಗಲಾನ್ ಸಿನಿಮಾಗೆ ಉತ್ತಮ ಓಪನಿಂಗ್ಸ್ ಸಿಕ್ಕಿದೆ. ತೆಲುಗಿನಲ್ಲಿ ಇಷ್ಟು ದೊಡ್ಡ ಓಪನಿಂಗ್ ಸಿಗುತ್ತದೆಂದು ನಾವು ನಿರೀಕ್ಷಿಸಿರಲಿಲ್ಲ. ನಿರೀಕ್ಷಿಸಿದ್ದಕ್ಕಿಂತ ದುಪ್ಪಟ್ಟು ಕಲೆಕ್ಷನ್ ಬರುತ್ತಿದೆ. ಎ, ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿದೆ. 200 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಭಾಷೆಗಳಲ್ಲಿ 30ರಂದು ಬಿಡುಗಡೆ
ತಮಿಳು ಮತ್ತು ತೆಲುಗಿನಲ್ಲಿ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ತಂಗಲಾನ್ಗೆ ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಬೇರೆ ಭಾಷೆಗಳಲ್ಲೂ ಬಿಡುಗಡೆಗೆ ಬೇಡಿಕೆ ಹೆಚ್ಚಾಗಿದೆ. ಅದರಂತೆ ಆಗಸ್ಟ್ 30ರಂದು ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ ಎಂದು ಜ್ಞಾನವೇಲ್ ಹೇಳಿದ್ದಾರೆ.
ನಮ್ಮನ್ನು ಯಾವುದೋ ಒಂದು ಶಕ್ತಿ ಮುನ್ನಡೆಸುತ್ತದೆ ಎಂದು ನಾವು ನಂಬುತ್ತೇವೆ. ತಪ್ಪು ಮಾಡಿದರೆ ಏನೋ ಕೇಡು ಸಂಭವಿಸಬಹುದು ಎಂಬ ಭಾವನೆಯೂ ಬರುತ್ತದೆ. ಪ್ರಕೃತಿ ಕೂಡ ಅದೇ ರೀತಿ. ನಾವು ತಪ್ಪು ಮಾಡಿದರೆ ಪ್ರಕೃತಿಯೂ ಶಿಕ್ಷೆ ವಿಧಿಸುತ್ತದೆ. ಮಾಳವಿಕಾ ಮೋಹನನ್ ಅವರ ಆರತಿ ಪಾತ್ರವನ್ನು ಆ ಪರಿಕಲ್ಪನೆಯೊಂದಿಗೆ ರಚಿಸಿದ್ದಾರೆ. ಪ್ರೇಕ್ಷಕರ ಅಭಿರುಚಿಯನ್ನು ನಂಬುವುದು ಸಿನಿಮಾ ನಿರ್ಮಾಣದಲ್ಲಿ ನನ್ನ ನಂಬಿಕೆ ಎಂದು ಹೇಳಿದ್ದಾರೆ.
ಪ್ರತಿ ಪಾತ್ರಕ್ಕೂ ಮೆಚ್ಚುಗೆ
ತಂಗಲಾನ್ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ, ಪಶುಪತಿ ಜೊತೆಗೆ ಎಲ್ಲರ ಪಾತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ. ಎಲ್ಲರೂ ಆ ಪಾತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರ ಪಾತ್ರದ ಹೊರಗಿನಿಂದ ಬಂದರೆ ಆ ಪಾತ್ರದಾರಿಗಳನ್ನು ಕಂಡು ಹಿಡಿಸಲು ಸಾಧ್ಯವಿಲ್ಲ. ಅವರು ತುಂಬಾ ಸಹಜವಾಗಿ ಅಭಿನಯಿಸಿದ್ದಾರೆ. ಶೂಟಿಂಗ್ ವೇಳೆ ಹಲವು ಮಂದಿ ಗಾಯಗೊಂಡಿದ್ದರುರೆ. ನಾವು ಅವರಿಗೆ ಸಮಯ ಕೊಟ್ಟು ಮತ್ತೆ ಶೂಟಿಂಗ್ ಮಾಡಿದ್ದೆವು ಎಂದು ಹೇಳಿದ್ದಾರೆ.