ಚಿತ್ರಮಂದಿರ ಒಟಿಟಿಗಳಲ್ಲಿ ಈ ವಾರ ಬಿಡುಗಡೆಯಾಗುವ ಸಿನಿಮಾ, ವೆಬ್ ಸರಣಿಗಳ ವಿವರ; ಬ್ಯಾಡ್ ನ್ಯೂಝ್‌ನಿಂದ ಹೆಜ್ಜಾರುವರೆಗೆ
Jul 19, 2024 07:09 AM IST
ಚಿತ್ರಮಂದಿರ ಒಟಿಟಿಗಳಲ್ಲಿ ಈ ವಾರ ಬಿಡುಗಡೆಯಾಗುವ ಸಿನಿಮಾ, ವೆಬ್ ಸರಣಿಗಳ ವಿವರ; ಬ್ಯಾಡ್ ನ್ಯೂಝ್‌ನಿಂದ ಹೆಜ್ಜಾರುವರೆಗೆ
- Theatrical and OTT releases this week: ಈ ವಾರ ಕನ್ನಡದಲ್ಲಿ ಹೆಜ್ಜಾರು, ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸೇರಿದಂತೆ ಹಲವು ಸಿನಿಮಾ, ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ. ಇದೇ ರೀತಿ ಭಾರತದಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಥಿಯೇಟರ್ ಮತ್ತುಒಟಿಟಿಗಳಲ್ಲಿ ಹಲವು ಸಿನಿಮಾ, ವೆಬ್ ಸರಣಿಗಳು ರಿಲೀಸ್ ಆಗುತ್ತಿವೆ.
ಬೆಂಗಳೂರು: ಈ ವಾರ ಥಿಯೇಟರ್ ಮತ್ತು ಒಟಿಟಿಗಳಲ್ಲಿ ಯಾವೆಲ್ಲ ಹೊಸ ಸಿನಿಮಾ, ವೆಬ್ ಸರಣಿಗಳು ರಿಲೀಸ್ ಆಗುತ್ತಿವೆ ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು. ಕರ್ನಾಟಕದ ಕೆಲವು ಕಡೆ ವಿಪರೀತ ಎನ್ನುವಷ್ಟು ಮಳೆ ಸುರಿಯುತ್ತಿದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಬೆಚ್ಚಗೆ ಒಟಿಟಿಯಲ್ಲಿ ಸಿನಿಮಾ, ವೆಬ್ ಸರಣಿ ನೋಡುವ ಪ್ಲ್ಯಾನ್ ನೀವು ಹಾಕಿಕೊಂಡಿದ್ದರೆ ಒಟಿಟಿಗಳಲ್ಲೂ ಹಲವು ಹೊಸ ಸಿನಿಮಾಗಳು, ಸರಣಿಗಳು ಬಿಡುಗಡೆಯಾಗುತ್ತಿವೆ. ಪ್ರೇಮಕಾವ್ಯಗಳು, ಭಯಾನಕ ಸಿನಿಮಾಗಳು, ಸಾಹಸ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿವೆ. ಈ ವಾರ ರಿಲೀಸ್ ಆಗುತ್ತಿರುವ ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ, ಜಪಾನೀಸ್ ಮತ್ತು ಕೊರಿಯನ್ ಸಿನಿಮಾ, ಸರಣಿಗಳ ವಿವರ ಇಲ್ಲಿದೆ.
ಇಂದು ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು
ಇಂದು ರಾಜ್ಯಾದ್ಯಾಂತ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ನಾಟೌಟ್, ಹೆಜ್ಜಾರು, ಬ್ಯಾಕ್‌ಬೆಂಚರ್ಸ್, ಹಿರಣ್ಯ ಮತ್ತು ಕಡಲೂರ ಕಣ್ಮಣಿ ಎಂಬ ಆರು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಸಿನಿಮಾಗಳ ಕುರಿತು ವಿವರವಾದ ಮಾಹಿತಿ, ಟ್ರೇಲರ್ ವಿವರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತ್ಯೇಕ ಲೇಖನದಲ್ಲಿ ಪ್ರಕಟಿಸಿದೆ. ಆ ಲೇಖನಕ್ಕೆ ಲಿಂಕ್ ಇಲ್ಲಿದೆ.
ಬ್ಯಾಡ್ ನ್ಯೂಝ್
ತಿವಾರಿ ಅವರ ಉಲ್ಲಾಸಭರಿತ ರೋಮಾನ್ಸ್ ಸಿನಿಮಾ ಬ್ಯಾಡ್ ನ್ಯೂಝ್ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ತೃಪ್ತಿ ದಿಮ್ರಿ, ವಿಕ್ಕಿ ಕೌಶಲ್, ಅಮ್ಮಿ ವರ್ಕ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಇಶಿತಾ ಮೊಯಿತ್ರಾ ಮತ್ತು ತರುಣ್ ದುಡೇಜಾ ಬರೆದಿರುವ ಕಥೆಯ ಈ ಚಿತ್ರವನ್ನು ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಆನಂದ್ ತಿವಾರಿ ನಿರ್ಮಿಸಿದ್ದಾರೆ. ಹೆಟೆರೊಪಾಟರ್ನಲ್ ಸೂಪರ್ಫೆಕ್ಯುಂಡೇಶನ್‌ನಿಂದಾಗಿ ಇಬ್ಬರು ಬೇರೆಬೇರೆ ತಂದೆಯರಿಂದ ಅವಳಿ ಮಕ್ಕಳ ಗರ್ಭ ಧರಿಸಿದ್ದಾಳೆ. ಈ ಕಥೆಯನ್ನು ಒಳಗೊಂಡಿರುವ ಹಿಲರಿಯಸ್ ಕಾಮಿಡಿ ಸಿನಿಮಾ ಇಂದು ಬಿಡುಗಡೆಯಾಗಿತ್ತಿದೆ.
ಟ್ವಿಸ್ಟರ್ಸ್
ಟ್ವಿಸ್ಟರ್ಸ್ 1996 ರ ಅಪ್ರತಿಮ ಚಲನಚಿತ್ರ ಟ್ವಿಸ್ಟರ್‌ನ ಮುಂದುವರಿದ ಅಧ್ಯಾಯ. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಲೀ ಐಸಾಕ್ ಚುಂಗ್ ನಿರ್ದೇಶನದ ಈ ಚಿತ್ರದಲ್ಲಿ ಡೈಸಿ ಎಡ್ಗರ್-ಜೋನ್ಸ್, ಗ್ಲೆನ್ ಪೊವೆಲ್ ಮತ್ತು ಆಂಥೋನಿ ರಾಮೋಸ್ ನಟಿಸಿದ್ದಾರೆ. ಹವಾಮಾನ ಎಚ್ಚರಿಕೆ ವ್ಯವಸ್ಥೆಯ ಪ್ರಯೋಗವನ್ನು ಪರೀಕ್ಷಿಸುವ ಸಲುವಾಗಿ ಒಕ್ಲಹೋಮದಲ್ಲಿ ಭಾರಿ ಹವಾಮಾನ ಪರಿಸ್ಥಿತಿಗಳ ನಡುವೆ ಹೋರಾಟ ನಡೆಸುವ ಟ್ರೋಮ್ ಚೇಸರ್ ಮಹಿಳೆಯ ಕಥೆಯನ್ನು ಈ ಸಿನಿಮಾ ಹೇಳುತ್ತದೆ.
ಇಮ್ಯಾಕ್ಯುಲೇಟ್
ಮೈಕೆಲ್ ಮೋಹನ್ ಅವರ ಭಯಾನಕ ಸಿನಿಮಾದಲ್ಲಿ ಸಿಡ್ನಿ ಸ್ವೀನಿ, ಅಲ್ವಾರೊ ಮೊರ್ಟೆ ಮತ್ತು ಬೆನೆಡೆಟ್ಟಾ ಪೊರ್ಕರೋಲಿ ನಟಿಸಿದ್ದಾರೆ. ದೂರದ ಇಟಾಲಿಯನ್ ಕಾನ್ವೆಂಟ್‌ನಲ್ಲಿ, ಡೆಟ್ರಾಯಿಟ್ ನ ಸಿಸಿಲಿಯಾ ಎಂಬ ಶ್ರದ್ಧಾವಂತ ಸನ್ಯಾಸಿನಿ ಭಯಂಕರ ಅಗ್ನಿಪರೀಕ್ಷೆಯಲ್ಲಿ ಸಿಲುಕಿದ್ದಾಳೆ. ಅವಳು ತನ್ನ ನಂಬಿಕೆಗಾಗಿ, ಭಯಾನಕ ರಹಸ್ಯ ತಿಳಿಯಲು ಕಾನ್ವೆಂಟ್‌ಗೆ ಹೋಗುತ್ತಾಳೆ.
ಸ್ಪೈ x ಫ್ಯಾಮಿಲಿ ಕೋಡ್: ವೈಟ್
ಟಕುಯಾ ಎಗುಚಿ (ಲಾಯ್ಡ್ ಫೋರ್ಗರ್), ಅಟ್ಸುಮಿ ತನೆಜಾಕಿ (ಅನ್ಯಾ) ಮತ್ತು ಸಾರಿ ಹಯಾಮಿ (ಯೋರ್) ಧ್ವನಿ ನೀಡಿರುವ ಈ ಜಪಾನಿನ ಅನಿಮೆಷನ್ ಸಿನಿಮಾ ಮರೆಯಲಾಗದ ಸಾಹಸದ ಭರವಸೆ ನೀಡುತ್ತದೆ. ಫೋರ್ಜರ್ ಕುಟುಂಬ—ಒಬ್ಬ ಗೂಢಚಾರಿ, ಒಬ್ಬ ಕೊಲೆಗಾರ ಮತ್ತು ಒಬ್ಬ ಟೆಲಿಪಥಿಕ್ ಮಗು—ಚಳಿಗಾಲದಲ್ಲಿ ಪಲಾಯನ ಮಾಡುವ ಮತ್ತು ಎದುರಾಗುವ ಪರಿಸ್ಥಿತಿಗಳ ಕುರಿತು ಈ ಸಿನಿಮಾ ತಿಳಿಸುತ್ತದೆ.
ಲೆನಾ
ಡನ್ಹ್ಯಾಮ್ ಮತ್ತು ಸ್ಟೀಫನ್ ಫ್ರೈ ನಟಿಸಿರುವ ಟ್ರೆಷರ್ 1990 ರ ಪೋಲೆಂಡ್ ಹಿನ್ನೆಲೆಯನ್ನು ಆಧರಿಸಿದ ಹೃದಯಸ್ಪರ್ಶಿ ಮತ್ತು ಮಾರ್ಮಿಕ ದುರಂತ ಹಾಸ್ಯ ಸಿನಿಮಾ ಇದಾಗಿದೆ. ಇದು ಲಿಲಿ ಬ್ರೆಟ್ ಅವರ 1999 ರ ಕಾದಂಬರಿ ಟೂ ಮ್ಯಾನ್ ಮೆನ್ ಅನ್ನು ಆಧರಿಸಿದೆ. ಜೂಲಿಯಾ ವಾನ್ ಹೈಂಜ್ ನಿರ್ದೇಶನದ ಈ ಚಿತ್ರವು ಅಮೇರಿಕನ್ ಸಂಗೀತ ಪತ್ರಕರ್ತೆ ರೂತ್ ಮತ್ತು ಹತ್ಯಾಕಾಂಡದಿಂದ ಬದುಕುಳಿದ ಅವಳ ತಂದೆ ಎಡೆಕ್ ಅವರ ಕಥೆಯನ್ನು ಹೊಂದಿದೆ. ರೂತ್ ತನ್ನ ತಂದೆಯ ಬಾಲ್ಯದ ಪ್ರದೇಶಗಳಿಗೆ ಪ್ರಯಾಣವನ್ನು ಪ್ರಾರಂಭಿಸುತ್ತಾಳೆ, ತಮ್ಮ ಕುಟುಂಬದ ಸಮಾಧಿ ರಹಸ್ಯಗಳನ್ನು ಬಹಿರಂಗಪಡಿಸುವ ಪ್ರಯತ್ನ ಮಾಡುತ್ತಾಳೆ.
ಆಕ್ಸಿಡೆಂಟ್ ಆಂಡ್ ಕಾನ್ಸಪೆರಿಸಿ: ಗೋಧ್ರಾ
ಭಾರತದ ಒಂದು ಕರಾಳ ಅಧ್ಯಾಯಗಳಲ್ಲಿ ಒಂದಾದ ಗೋಧ್ರಾ ದುರಂತದ ಕಥೆಯನ್ನು ಈ ಸಿನಿಮಾ ತಿಳಿಸುತ್ತದೆ. 2002ರ ಫೆಬ್ರವರಿಯಲ್ಲಿ ಗೋಧ್ರಾ ರೈಲು ಹತ್ಯಾಕಾಂಡದಿಂದ ಹಲವು ಜನರು ಮೃತಪಟ್ಟರು. ಇದಾದ ಬಳಿಕ ಗುಜರಾತ್‌ನಾದ್ಯಂತ ಹಿಂದೂ ಮಸ್ಲಿಂ ಗಲಭೆಗೆ ಕಾರಣವಾಯಿತು. ಎಂ.ಕೆ.ಶಿವಾಕ್ಷ್ ನಿರ್ದೇಶನದ ಮತ್ತು ಬಿ.ಜೆ.ಪುರೋಹಿತ್ ನಿರ್ಮಾಣದ ಈ ಸಿನಿಮಾದಲ್ಲಿ ರಣವೀರ್ ಶೋರೆ ಅಭಿನಯಿಸಿದ್ದಾರೆ. ಈ ಸಿನಿಮಾ ನಾನಾವತಿ-ಮೆಹ್ತಾ ಆಯೋಗದ ತನಿಖೆಗೆ ಜೀವ ತುಂಬುತ್ತದೆ.
ಒಟಿಟಿಯಲ್ಲಿ ಬಿಡುಗಡೆ
ಆಡುಜೀವಿತಂ - ಡಿಸ್ನಿ + ಹಾಟ್‌ಸ್ಟಾರ್
ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಆಡುಜೀವಿತಂ - ದಿ ಗೋಟ್ ಲೈಫ್, ಬ್ಲೆಸ್ಸಿ ನಿರ್ದೇಶಿಸಿದ ಸಿನಿಮಾ. ಈ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ ಎಂದು ಬಹುತೇಕರು ಕಾಯುತ್ತಿದ್ದರು. ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಲಾ ಪೌಲ್ ನಟಿಸಿದ್ದಾರೆ, ಇದು ಬೆನ್ಯಾಮಿನ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ.
ಲೇಡಿ ಇನ್ ದಿ ಲೇಕ್ - ಆಪಲ್ ಟಿವಿ +
ಲಾರಾ ಲಿಪ್ಮನ್ ಅವರ ಕಾದಂಬರಿಯನ್ನು ಆಧರಿಸಿದ ನಟಾಲಿಯಾ ಪೋರ್ಟ್ಮ್ಯಾನ್ ಲೇಡಿ ಇನ್ ದಿ ಲೇಕ್ ವೆಬ್ ಸರಣಿಯಲ್ಲಿ ಮ್ಯಾಡಿ ಶ್ವಾರ್ಟ್ಜ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಮೋಸೆಸ್ ಇಂಗ್ರಾಮ್ ಕ್ಲಿಯೋ ಶೆರ್ವುಡ್ ಪಾತ್ರದಲ್ಲಿ ನಟಿಸಿದ್ದಾರೆ. 1960 ರ ಬಾಲ್ಟಿಮೋರ್‌ನಲ್ಲಿ ಚಿತ್ರೀಕರಿಸಲಾದ ಇದು ಯಹೂದಿ ಗೃಹಿಣಿಯೊಬ್ಬಳು ತನ್ನ ಜೀವನವನ್ನು ಮರುಶೋಧಿಸಿ ತನಿಖಾ ಪತ್ರಕರ್ತೆಯಾಗುವ ಕಥೆಯನ್ನು ಹೇಳುತ್ತದೆ. 1996 ರಲ್ಲಿ ಥ್ಯಾಂಕ್ಸ್ ಗೀವಿಂಗ್‌ದಿನದಂದು ಯುವತಿಯೊಬ್ಬಳು ಕಣ್ಮರೆಯಾದ ವಿಷಯ ಇದರಲ್ಲಿದೆ. ಈ ಘಟನೆಗಳ ಸರಣಿಯ ಕುರಿತು ಮ್ಯಾಡಿ ಆಳವಾಗಿ ತನಿಖೆ ಮಾಡುತ್ತಾಳೆ. ಗ್ರಹಿಕೆಗಳಿಗೆ ಸವಾಲೊಡ್ಡುವ ರಹಸ್ಯಗಳನ್ನು ಕಂಡುಹಿಡಿಯುತ್ತಾಳೆ.
ಸ್ವೀಟ್ ಹೋಮ್ (ಸೀಸನ್ 3) - ನೆಟ್‌ಫ್ಲಿಕ್ಸ್
ದಕ್ಷಿಣ ಕೊರಿಯಾದ ಸರಣಿಯ ಮೂರನೇ ಸೀಸನ್‌ನಲ್ಲಿ ಮಾನವರು, ರಾಕ್ಷಸರು ಮತ್ತು ನವಮಾನವರ ನಡುವಿನ ಉದ್ವಿಗ್ನತೆಯ ಕಥೆ ಇದೆ. ರಾಕ್ಷಸರಿಂದಾಗಿ ಭೂಮಿಯಲ್ಲಿ ಬದುಕಲು ಹೆಣಗಾಡುತ್ತಿರುವ ಚಾ ಹ್ಯುನ್-ಸು ಮತ್ತು ಅವನ ಸ್ನೇಹಿತರ ಭಯಾನಕ ಕಥೆಯನ್ನು ಹೊಂದಿದೆ. ಹಳೆಯ ಸ್ನೇಹಗಳು ಮುರಿದು ಹೋಗುತ್ತವೆ. ಹೊಸ ಸ್ನೇಹಗಳು ಶುರುವಾಗುತ್ತವೆ. ಒಂದು ಪಾತ್ರವು ಅರ್ಧ ಮಾನವ, ಅರ್ಧ ರಾಕ್ಷಸನಾಗಿ ಆಗಮಿಸುತ್ತದೆ.