logo
ಕನ್ನಡ ಸುದ್ದಿ  /  ಮನರಂಜನೆ  /  Ileana Pregnancy: ಏಕೋ ಅನುಮಾನ ಎಂದವರಿಗೆ ಬೇಬಿ ಬಂಪ್‌ ತೋರಿಸಿ ಕ್ಲಾರಿಟಿ ಕೊಟ್ಟ ನಟಿ ಇಲಿಯಾನಾ; ಶುಭ ಕೋರಿದ ತಮನ್ನಾ ಭಾಟಿಯಾ

Ileana Pregnancy: ಏಕೋ ಅನುಮಾನ ಎಂದವರಿಗೆ ಬೇಬಿ ಬಂಪ್‌ ತೋರಿಸಿ ಕ್ಲಾರಿಟಿ ಕೊಟ್ಟ ನಟಿ ಇಲಿಯಾನಾ; ಶುಭ ಕೋರಿದ ತಮನ್ನಾ ಭಾಟಿಯಾ

Rakshitha Sowmya HT Kannada

May 13, 2023 08:53 AM IST

google News

ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡ ಇಲಿಯಾನಾ

    • ತಾಯಿ ಆಗುತ್ತಿದ್ದೇನೆ ಎಂದು ಇಲಿಯಾನಾ ಘೋಷಿಸುತ್ತಿದ್ದಂತೆ ಆಕೆ ಜೋಕ್‌ ಮಾಡುತ್ತಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಇದೇ ವಿಚಾರವನ್ನು ಕೆಲವರು ಕಾಮೆಂಟ್‌ ಮಾಡಿ, ಇಂತಹ ವಿಚಾರಗಳಲ್ಲಿ ಜೋಕ್‌ ಬೇಡ ಎಂದಿದ್ದರು. ಆದರೆ ಇಲಿಯಾನಾ ಜನರ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡ ಇಲಿಯಾನಾ
ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡ ಇಲಿಯಾನಾ (PC: Ileana D Cruz Instagram)

ಇಷ್ಟು ದಿನಗಳ ಕಾಲ ಬಾಯ್‌ ಫ್ರೆಂಡ್‌ ವಿಚಾರಕ್ಕೆ ಸುದ್ದಿಯಲ್ಲಿದ್ದ ನಟಿ ಇಲಿಯಾನಾ ಡಿಸೋಜಾ ಈಗ ಪ್ರೆಗ್ನೆನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇಲಿಯಾನಾ ತಾವು ತಾಯಿ ಆಗುತ್ತಿರುವ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದನ್ನು ನೋಡಿದವರು ಮದುವೆ ಯಾವಾಗ ಆಯ್ತು ಎಂದು ಪ್ರಶ್ನಿಸುತ್ತಿದ್ದಾರೆ.

ಇಲಿಯಾನಾ ಮದುವೆ ಆಗಿಲ್ಲ ಆದರೂ ಪ್ರೆಗ್ನಿನ್ಸಿ ಘೋಷಿಸಿದ್ದಾರೆ. ಇಂದಿನ ನಟಿಯರಿಗೆ ಮದುವೆ ಆಗದೆ ಗರ್ಭ ಧರಿಸುವುದು ಟ್ರೆಂಡ್‌ ಆಗಿದೆ. ಸಂಸ್ಕೃತಿ ಸಂಪ್ರದಾಯದ ಬಗ್ಗೆ ಯಾರಿಗೂ ಗಮನ ಇಲ್ಲ ಎಂದು ಕೆಲವರು ಇಲಿಯಾನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇಲಿಯಾನಾ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟಿಯ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಅವರಿಗೇ ಎಂದು ಪ್ರತ್ಯೇಕ ಜೀವನ ಇದೆ. ಅವರ ವೈಯಕ್ತಿಕ ಜೀವನದಲ್ಲಿ ಯಾವ ರೀತಿಯ ನಿರ್ಧಾರವನ್ನಾದರೂ ತೆಗೆದುಕೊಳ್ಳುವ ಹಕ್ಕು ಅವರಿಗೆ ಇದೆ. ಇಲಿಯಾನಾ ಪ್ರೆಗ್ನೆನ್ಸಿ ಮಾತ್ರ ಘೋಷಿಸಿದ್ದಾರೆ. ಆದರೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಳ್ಳದೆ ಮದುವೆ ಆಗಿರಬಹುದು ಯಾರಿಗೆ ಗೊತ್ತು. ಎಲ್ಲವನ್ನೂ ಅವರು ಸಾರ್ವಜನಿಕವಾಗಿ ಹೇಳಿಕೊಳ್ಳುವ ಅವಶ್ಯಕತೆ ಏನಿದೆ? ಎಂದು ಮತ್ತೊಂದು ಗುಂಪು ವಾದ ಮಾಡುತ್ತಿದೆ.

ನಾನು ತಾಯಿ ಆಗುತ್ತಿದ್ದೇನೆ ಎಂದು ಇಲಿಯಾನಾ ಘೋಷಿಸುತ್ತಿದ್ದಂತೆ ಆಕೆ ಜೋಕ್‌ ಮಾಡುತ್ತಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಇದೇ ವಿಚಾರವನ್ನು ಕೆಲವರು ಕಾಮೆಂಟ್‌ ಮಾಡಿ, ಇಂತಹ ವಿಚಾರಗಳಲ್ಲಿ ಜೋಕ್‌ ಬೇಡ ಎಂದಿದ್ದರು. ಆದರೆ ಇಲಿಯಾನಾ ಜನರ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ನಿಜವಾಗಲೂ ತಾಯಿ ಆಗುತ್ತಿದ್ದೇನೆ ಎಂದು ಬೇಬಿ ಬಂಪ್‌ ಸಹಿತ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಮೂರು ಫೋಟೋಗಳನ್ನು ಇಲಿಯಾನಾ ಹಂಚಿಕೊಂಡಿದ್ದು ಅದರಲ್ಲಿ ಬೇಬಿ ಬಂಪ್‌ ಕಾಣುತ್ತಿದೆ. Bump alert ಎಂದು ಇಲಿಯಾನಾ ತಮ್ಮ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ. ಇಲಿಯಾನಾ ಫೋಟೋಗಳಿಗೆ ತಮನ್ನಾ ಭಾಟಿಯಾ ಲವ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡಿದ್ದಾರೆ. ಆತಿಯಾ ಶೆಟ್ಟಿ, ನರ್ಗಿಸ್‌ ಫಕ್ರಿ ಸೇರಿದಂತೆ ಇನ್ನಿತರ ಸೆಲೆಬ್ರಿಟಿಗಳು ಕಾಮೆಂಟ್‌ ಮಾಡುವ ಮೂಲಕ ಇಲಿಯಾನಾಗೆ ಶುಭ ಹಾರೈಸಿದ್ದಾರೆ.

ಒಂದು ಕಾಲದಲ್ಲಿ ಇಲಿಯಾನಾ ಟಾಲಿವುಡ್‌ ಟಾಪ್‌ ನಟಿಯರಲ್ಲಿ ಒಬ್ಬರು. ತಮ್ಮ ವೃತ್ತಿ ಜೀವನದಲ್ಲಿ ಬಹುತೇಕ ಎಲ್ಲಾ ಸ್ಟಾರ್‌ ನಟರೊಂದಿಗೆ ಇಲಿಯಾನಾ ನಟಿಸಿದ್ದಾರೆ. ವೃತ್ತಿ ಜೀವನದಲ್ಲಿ ಟಾಪ್‌ನಲ್ಲಿದ್ದ ಇಲಿಯಾನಾ ತೆಲುಗು ಚಿತ್ರರಂಗ ಬಿಟ್ಟು ಬಾಲಿವುಡ್‌ ಹಾದಿ ಹಿಡಿದರು. ಆದರೆ ಅಲ್ಲಿ ಆಕೆಗೆ ನಿರೀಕ್ಷಿಸಿದ ಜಯ ದೊರೆಯಲಿಲ್ಲ. ಇದಕ್ಕೂ ಮುನ್ನ ಇಲಿಯಾನಾ ಬಾಲಿವುಡ್‌ ಫೋಟೋಗ್ರಾಫ್‌ ಒಬ್ಬರನ್ನು ಪ್ರೀತಿಸುತ್ತಿದ್ದು ಬ್ರೇಕಪ್‌ ಆಗಿತ್ತು. ಇದೀಗ ಆಕೆ ಬಾಲಿವುಡ್‌ ಸ್ಟಾರ್‌ ನಟಿಯ ಸಹೋದರನನ್ನು ಪ್ರೀತಿಸುತ್ತಿದ್ದು ಆತನೇ ಇಲಿಯಾನಾ ಮಗುವಿನ ತಂದೆ ಎನ್ನಲಾಗುತ್ತಿದೆ.

 

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ