logo
ಕನ್ನಡ ಸುದ್ದಿ  /  ಮನರಂಜನೆ  /  ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಮದುವೆ ತಯಾರಿ ಶುರು; ಫೋಟೋದಲ್ಲಿ ಎದ್ದು ಕಾಣ್ತಿದೆ ಮದುವೆ ಮನೆ ಸಡಗರ, ಸಂಭ್ರಮ

ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಮದುವೆ ತಯಾರಿ ಶುರು; ಫೋಟೋದಲ್ಲಿ ಎದ್ದು ಕಾಣ್ತಿದೆ ಮದುವೆ ಮನೆ ಸಡಗರ, ಸಂಭ್ರಮ

Suma Gaonkar HT Kannada

Oct 21, 2024 03:58 PM IST

google News

ಶೋಭಿತಾ ಧೂಳಿಪಾಲ, ಮದುವೆ ಮನೆ ಸಡಗರ, ಸಂಭ್ರಮ

    • ಟಾಲಿವುಡ್ ತಾರೆಗಳಾದ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆ ತಯಾರಿಗಳು ಆರಂಭವಾಗಿದೆ. ಶೋಭಿತಾ ಮದುವೆಯ ಪೂರ್ವ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಎಲ್ಲ ಆಚರಣೆಗಳನ್ನೂ ಅನುಸರಿಸಿರುವುದು ಫೋಟೋದಲ್ಲಿ ಕಾಣುತ್ತದೆ. 
ಶೋಭಿತಾ ಧೂಳಿಪಾಲ, ಮದುವೆ ಮನೆ ಸಡಗರ, ಸಂಭ್ರಮ
ಶೋಭಿತಾ ಧೂಳಿಪಾಲ, ಮದುವೆ ಮನೆ ಸಡಗರ, ಸಂಭ್ರಮ

ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ತಮ್ಮ ಮದುವೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಮದುವೆಯ ಪೂರ್ವ ಸಮಾರಂಭದ ಸುಂದರವಾದ ಫೊಟೋಗಳನ್ನು ಶೋಭಿತಾ ಹಂಚಿಕೊಂಡಿದ್ದಾರೆ. “ಗೋಧುಮ ರೈ ಪಸುಪು ದಂಚತಂ” ಎಂದು ಅವರು ತಮ್ಮ ಪೋಸ್ಟ್‌ಗೆ ಕ್ಯಾಪ್ಶನ್ ನೀಡಿದ್ದಾರೆ. ಇದರ ಅರ್ಥ ಹೀಗಿದೆ. ಗೋಧೂಮ ಎಂದರೆ ಗೋಧಿ. ರಾಯ ಎಂದರೆ ಕಲ್ಲು. ಪಸುಪು ಎಂದರೆ ಅರಿಶಿನ. ದಂಚತಂ ಎಂದರೆ ಪುಡಿ ಮಾಡುವುದು. ಅದಕ್ಕೆ ತಕ್ಕಂತೆ ಫೋಟೋಗಳನ್ನೂ ಸಹ ಅವರು ಪೋಸ್ಟ್‌ ಮಾಡಿದ್ದಾರೆ. ವಿಶಾಖಪಟ್ಟಣದಲ್ಲಿ ಈ ಮದುವೆಯ ಪೂರ್ವ ತಯಾರಿಗಳು ಆರಂಭವಾಗಿದೆ.

ಸಾಂಪ್ರದಾಯಿಕ ಆಚರಣೆಯನ್ನು ಆಚರಿಸುವ ಮೂಲಕ ಮದುವೆಯ ಸಮಾರಂಭಕ್ಕೆ ಅಣಿಯಾಗುತ್ತಿದ್ದಾರೆ. ಸುಂದರವಾದ ಗೋಲ್ಡನ್‌ ಮತ್ತು ಹಸಿರು ಬಣ್ಣದ ಕಾಂಬಿನೇಷನ್ ಇರುವ ಸೀರೆಯನ್ನು ಅವರು ಉಟ್ಟಿದ್ದಾರೆ. ಅವರ ಕುಟುಂಬದ ಇನ್ನಿತರ ಸದಸ್ಯರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧಾರೆ. ಒಂದಷ್ಟು ಹಿರಿಯರು ಮದುವೆ ಸಮಾರಂಭವನ್ನು ಮುನ್ನಡೆಸುತ್ತಾ, ಆಚರಣೆಗಳ ಬಗ್ಗೆ ತಿಳಿಸುತ್ತಿರುವುದು ಅವರು ಹಂಚಿಕೊಂಡ ಫೋಟೋದಲ್ಲಿ ಕಾಣುತ್ತದೆ.

ಇನ್ನು ಅವರ ಸ್ನೇಹಿತೆಯರು ಕೂಡ ಈ ಮದುವೆಯ ಪೂರ್ವ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆಗಸ್ಟ್‌ನಲ್ಲಿ ತಮ್ಮ ಹತ್ತಿರದ ಕುಟುಂಬದವರ ಸಮ್ಮುಖದಲ್ಲಿ ಶೋಭಿತಾ ಹಾಗೂ ನಾಗಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಯನ್ನೂ ಆಗುತ್ತಿದ್ದಾರೆ. ಈ ನಡುವೆ ಸಮಂತಾ ಎಲ್ಲಿಯೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಹಿರಿಯರ ಆಶೀರ್ವಾದ ಪಡೆದು ಅವರ ಪಾದಸ್ಪರ್ಶ ಮಾಡಿ ಆಶಿರ್ವಾದ ತೆಗೆದುಕೊಳ್ಳುತ್ತಿರುವ ಫೋಟೋ, ಸ್ನೇಹಿತೆಯರ ಜೊತೆ ಕಾಲ ಕಳೆದ ಫೋಟೋ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದ ಹಲವು ಫೋಟೋಗಳನ್ನು ಶೋಭಿತಾ ಹಂಚಿಕೊಂಡಿದ್ಧಾರೆ. ಇನ್ನು ಸಾಕಷ್ಟು ಜನ ಇವರು ಫೋಟೋಗಳನ್ನು ಹಂಚಿಕೊಂಡ ಸಂದರ್ಭದಲ್ಲಿ ಸಮಂತಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಯಾಕೆಂದರೆ ನಾಗಚೈತನ್ಯ ಈ ಹಿಂದೆ ಸಮಂತಾ ಅವರನ್ನು ಮದುವೆ ಆಗಿದ್ದರು. ಇದೀಗ ತನ್ನ ಗಂಡನ ಎರಡನೇ ಮದುವೆಯ ಸಂದರ್ಭದಲ್ಲಿ ಸಮಂತಾ ಮೌನದಿಂದಿದ್ಧಾರೆ. ಆದರೆ ಸಮಂತಾ ಅಭಿಮಾನಿಗಳು ಮಾತ್ರ ಈ ಸಂಭ್ರಮವನ್ನು ಸಹಿಸಿಕೊಳ್ಳದೆ ಕಾಮೆಂಟ್ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ