Tollywood News: ಕೊನೆಗೂ ತನ್ನ ಮಗುವಿನ ನಿಗೂಢ ಅಪ್ಪನನ್ನು ಪರಿಚಯಿಸಿದ ಇಲಿಯಾನಾ ಡಿಸೋಜಾ; ಫಾರಿನ್ ಹುಡುಗಾನಾ ಎಂದು ಪ್ರಶ್ನಿಸಿದ ನೆಟಿಜನ್ಸ್
Jul 17, 2023 01:51 PM IST
ಬಾಯ್ ಫ್ರೆಂಡ್ ಜೊತೆ ಇಲಿಯಾನಾ
ಇತ್ತೀಚೆಗೆ ತನ್ನ ಹುಡುಗನ ಜೊತೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದ ಇಲಿಯಾನಾ ಪ್ರೆಗ್ನೆನ್ಸಿ ಎನ್ನುವುದು ಒಂದು ವರ ಎಂದೆಲ್ಲಾ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಮಗುವಿನ ಅಪ್ಪನನ್ನು ಇಲಿಯಾನಾ ಜನರಿಗೆ ಪರಿಚಯಿಸಿದ್ದಾರೆ.
ಇಲಿಯಾನಾ ಡಿಸೋಜಾ ಮೂಲತ: ಮಹಾರಾಷ್ಟ್ರಕ್ಕೆ ಸೇರಿದವರಾದರೂ ಆಕೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಪೋಕರಿ, ಜಲ್ಸಾ, ಕಿಕ್, ಭಲೇ ದೊಂಗಲು ಸೇರಿ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ತೆಲುಗು ಹುಡುಗಿಯೇ ಆಗಿ ಹೋಗಿದ್ದಾರೆ. ತೆಲುಗು ಜೊತೆ ಕನ್ನಡ, ತಮಿಳು , ಹಿಂದಿಯಲ್ಲೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಪ್ರೆಗ್ನೆನ್ಸಿ ಘೋಷಿಸಿದ್ದ ಇಲಿಯಾನಾ ಡಿಸೋಜಾ
ಇಲಿಯಾನಾಗೆ ಮೊದಲಿನಂತೆ ಈಗ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಇಲ್ಲದಿದ್ದರೂ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಿಕಿನಿ ಧರಿಸಿ ಸದ್ದು ಮಾಡಿದ್ದ ಈ ಬ್ಯೂಟಿ ಕೆಲವು ದಿನಗಳ ಹಿಂದಷ್ಟೇ ತಾನು ಪ್ರೆಗ್ನೆಂಟ್ ಎಂದು ಘೋಷಿಸಿದ್ದರು. ಇದನ್ನು ಕೇಳಿ ಹಲವರು ಶಾಕ್ ಆಗಿದ್ದರು. ಮದುವೆ ಆಯ್ತಾ, ಅಥವಾ ಮದುವೆ ಆಗದೇ ಪ್ರೆಗ್ನೆನ್ಸಿ ಘೋಷಣೆ ಮಾಡುತ್ತಿದ್ದೀರಾ? ಮಗುವಿನ ಅಪ್ಪ ಯಾರು ಎಂದೆಲ್ಲಾ ಪ್ರಶ್ನಿಸಿದ್ದರು. ಆದರೆ ಇಲಿಯಾನಾ ಮಾತ್ರ ಯಾವುದಕ್ಕೂ ತುಟಿ ಬಿಚ್ಚಿರಲಿಲ್ಲ.
ಕೊನೆಗೂ ಬಾಯ್ ಫ್ರೆಂಡ್ ಪರಿಚಯಿಸಿದ ಕಿಕ್ ಹುಡುಗಿ
ಇತ್ತೀಚೆಗೆ ತನ್ನ ಹುಡುಗನ ಜೊತೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದ ಇಲಿಯಾನಾ ಪ್ರೆಗ್ನೆನ್ಸಿ ಎನ್ನುವುದು ಒಂದು ವರ ಎಂದೆಲ್ಲಾ ಸುದೀರ್ಘವಾಗಿ ಬರೆದುಕೊಂಡಿದ್ದರು. ಆದರೆ ತನ್ನ ಹುಡುಗನ ಫೋಟೋವನ್ನು ಬ್ಲರ್ ಮಾಡಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಮಗುವಿನ ಅಪ್ಪನನ್ನು ಇಲಿಯಾನಾ ಜನರಿಗೆ ಪರಿಚಯಿಸಿದ್ದಾರೆ. ಫೋಟೋಗಳೊಂದಿಗೆ ಹಾರ್ಟ್ ಎಮೋಜಿ ಹಂಚಿಕೊಂಡಿರುವ ಅವರು ಡೇಟ್ ನೈಟ್ ಎಂದು ಬರೆದುಕೊಂಡಿದ್ದಾರೆ. ಇವರು ನಿಮ್ಮ ಪತಿನಾ ಅಥವಾ ಬಾಯ್ ಫ್ರೆಂಡಾ ಎಂದು ನೆಟಿಜನ್ಸ್ ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಆತ ನೋಡಲು ವಿದೇಶಿಗನಂತೆ ಇದ್ದಾರೆ, ನೀವೂ ಕೂಡಾ ಫಾರಿನ್ ಹುಡುಗನ ಹಿಂದೆ ಬಿದ್ರಾ? ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಇಲಿಯಾನಾ ಪ್ರೆಗ್ನೆನ್ಸಿ ವಿಚಾರಕ್ಕೆ ಬಹಳ ಟ್ರೋಲ್ ಆಗುತ್ತಿದ್ದಾರೆ.
ಹಿಂದಿ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ನಟಿ
ಇಲಿಯಾನಾ ಕೆಲವು ವರ್ಷಗಳ ಹಿಂದೆ ಟಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ತಮ್ಮ ಸಿನಿ ಕೆರಿಯರ್ನಲ್ಲಿ ಇಲಿಯಾನಾ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಅವಕಾಶಗಳಿದ್ದರೂ ಇಲಿಯಾನಾ ತೆಲುಗಿನಿಂದ ಬಾಲಿವುಡ್ ಹಾದಿ ಹಿಡಿದರು. ಆದರೆ ಹಿಂದಿ ಚಿತ್ರರಂಗದಲ್ಲಿ ಆಕೆಗೆ ನಿರೀಕ್ಷಿಸಿದ ಯಶಸ್ಸು ದೊರೆಯಲಿಲ್ಲ. ಇದಕ್ಕೂ ಮುನ್ನ ಇಲಿಯಾನಾ, ಬಾಲಿವುಡ್ ಫೋಟೋಗ್ರಾಫ್ ಒಬ್ಬರನ್ನು ಪ್ರೀತಿಸುತ್ತಿದ್ದು ಅದು ಬ್ರೇಕಪ್ ಆಗಿತ್ತು ಈ ವಿಚಾರವನ್ನು ಆಕೆಯೇ ಹೇಳಿಕೊಂಡಿದ್ದರು. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇಲಿಯಾನಾ 'ಅನ್ಫೇರ್ ಅಂಡ್ ಲವ್ ಲಿ' ಹಾಗೂ 'ಲವರ್ಸ್' ಎಂಬ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.