Prabhas Anushka Marriage: ಅರೆ! ಪ್ರಭಾಸ್ ಅನುಷ್ಕಾ ಶೆಟ್ಟಿಗೆ ಮದುವೆ ಆಗಿ ಮಗು ಕೂಡಾ ಇದ್ಯಾ, ಏನಿದು ವಿಚಾರ?
Oct 07, 2023 05:03 PM IST
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆ ಆಗಿರುವಂತೆ ಸೃಷ್ಟಿಸಲಾದ ಎಐ ಜನರೇಟೆಡ್ ಫೋಟೊಗಳು
- ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ. ಆದರೆ ಇಬ್ಬರ ಅಭಿಮಾನಿಗಳಿಗೂ ಇವರಿಬ್ಬರ ಮದುವೆ ಚಿಂತೆ ಕಾಡುತ್ತಿದೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮಿರ್ಚಿ, ಬಿಲ್ಲಾ, ಬಾಹುಬಲಿ ಸಿನಿಮಾಗಳಲ್ಲಿ ಜೊತೆಯಲ್ಲಿ ನಟಿಸಿದ್ದಾರೆ. ಇತರ ಜೋಡಿಗಳಿಗಿಂತ ಇವರಿಬ್ಬರ ಜೋಡಿ ಎಂದರೆ ಇಬ್ಬರ ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ. ಆ ಕಾರಣದಿಂದಲೇ ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ ಎಂದು ಪ್ರಭಾಸ್ ಹಾಗೂ ಅನುಷ್ಕಾ ಹೇಳಿದ್ದರು. ಇದೀಗ ಇವರಿಬ್ಬರೂ ಮದುವೆ ಆಗಿ ಮಗು ಆಗಿದೆ ಎನ್ನಲಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದೂ ಉಂಟು. ಅರೆ! ನಾವಿಬ್ರೂ ಫ್ರೆಂಡ್ಸ್ ಎಂದಿದ್ದ ಇವರು ಈ ರೀತಿ ಅಭಿಮಾನಿಗಳಿಗೆ ತಿಳಿಸದೆ ಮದುವೆ ಆಗಿದ್ದು ಸರೀನಾ ಎಂದು ಉದ್ಘರಿಸಿದ್ದರು. ಆದರೆ ನಿಜ ವಿಚಾರ ತಿಳಿದು ಕೆಲವರು ಸುಮ್ಮನಾದರೆ, ಇನ್ನೂ ಕೆಲವರು ಇದು ನಿಜ ಆಗಿದಿದ್ರೆ ಚೆನ್ನಾಗಿರ್ತಿತ್ತು ಎನ್ನುತ್ತಿದ್ದಾರೆ. ಅಸಲಿಗೆ ಇದು ಇಬ್ಬರ ಅಭಿಮಾನಿಗಳು AI ತಂತ್ರಜ್ಞಾನ ಬಳಸಿ ತಯಾರಿಸಿರುವ ಫೋಟೋಗಳಷ್ಟೇ. ಇಬ್ಬರೂ ಮದುವೆ ಆದರೆ ಚೆಂದ ಎಂಬ ಆಸೆಯನ್ನು ಫ್ಯಾನ್ಸ್ ಈ ರೀತಿ ವ್ಯಕ್ತಪಡಿಸಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಪ್ರಭಾಸ್ ಪ್ರಶಾಂತ್ ನೀಲ್ ಕಾಂಬಿನೇಶನ್ ಸಲಾರ್ ಸಿನಿಮಾ ಡಿಸೆಂಬರ್ 22 ಕ್ಕೆ ರಿಲೀಸ್ ಆಗುತ್ತಿದೆ. ಇದನ್ನು ಹೊರತುಪಡಿಸಿ ಪ್ರಭಾಸ್ ಕಲ್ಕಿ 2898ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅನುಷ್ಕಾ ನಟನೆಯ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಇತ್ತೀಚಿಗೆ ತೆರೆ ಕಂಡಿತ್ತು. ಬಹಳ ದಿನಗಳ ನಂತರ ಅನುಷ್ಕಾ ಶೆಟ್ಟಿ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು. ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಸಿನಿಮಾ ಬಗ್ಗೆ ಮಾಹಿತಿ ಹೊರ ಬೀಳಲಿದೆ.