logo
ಕನ್ನಡ ಸುದ್ದಿ  /  ಮನರಂಜನೆ  /  Che Movie: ಚೆಗುವೆರಾ ಅಭಿಮಾನಿಗಳಿಗೆ ಸಿಹಿಸುದ್ದಿ; ಕ್ಯೂಬಾದ ಕ್ರಾಂತಿಕಾರಿ ನಾಯಕನ ಆತ್ಮಚರಿತ್ರೆ ಚೆ ಸಿನಿಮಾ ನಾಳೆ ಬಿಡುಗಡೆ

Che Movie: ಚೆಗುವೆರಾ ಅಭಿಮಾನಿಗಳಿಗೆ ಸಿಹಿಸುದ್ದಿ; ಕ್ಯೂಬಾದ ಕ್ರಾಂತಿಕಾರಿ ನಾಯಕನ ಆತ್ಮಚರಿತ್ರೆ ಚೆ ಸಿನಿಮಾ ನಾಳೆ ಬಿಡುಗಡೆ

Praveen Chandra B HT Kannada

Dec 14, 2023 10:19 AM IST

google News

Che Movie: ಕ್ಯೂಬಾದ ಕ್ರಾಂತಿಕಾರಿ ನಾಯಕನ ಆತ್ಮಚರಿತ್ರೆ ಚೆ ಸಿನಿಮಾ ನಾಳೆ ಬಿಡುಗಡೆ

    • Che Telugu Movie: ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆಗುವೆರಾನ ಜೀವನಚರಿತ್ರೆ ಚೆ ತೆಲುಗು ಸಿನಿಮಾ ನಾಳೆ (ಡಿಸೆಂಬರ್‌ 15) ಬಿಡುಗಡೆಯಾಗುತ್ತಿದೆ. ಚೆ ಸಿನಿಮಾಕ್ಕೆ ಲಾಂಗ್‌ ಲಿವ್‌ ಎಂಬ ಟ್ಯಾಗ್‌ಲೈನ್‌ ಇದ್ದು, ಬಿಆರ್‌ ಸಬಾವತ್‌ ಅವರು ನಾಯಕನಟನಾಗಿ ನಟಿಸಿದ್ದಾರೆ.
Che Movie: ಕ್ಯೂಬಾದ ಕ್ರಾಂತಿಕಾರಿ ನಾಯಕನ ಆತ್ಮಚರಿತ್ರೆ ಚೆ ಸಿನಿಮಾ ನಾಳೆ ಬಿಡುಗಡೆ
Che Movie: ಕ್ಯೂಬಾದ ಕ್ರಾಂತಿಕಾರಿ ನಾಯಕನ ಆತ್ಮಚರಿತ್ರೆ ಚೆ ಸಿನಿಮಾ ನಾಳೆ ಬಿಡುಗಡೆ

ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆಗುವೆರಾನಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಚೆಗುವೆರಾನ ಆತ್ಮಚರಿತ್ರೆ ಅಥವಾ ಬಯೋಪಿಕ್‌ ರೆಡಿಯಾಗಿದೆ. ತೆಲುಗು ಭಾಷೆಯಲ್ಲಿ ಚೆ ಹೆಸರಿನಲ್ಲಿ ಚೆಗುವೆರಾ ಬಯೋಪಿಕ್‌ ತಯಾರಾಗಿದ್ದು, ನಾಳೆ ಅಂದರೆ ಡಿಸೆಂಬರ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಚೆ ಸಿನಿಮಾಕ್ಕೆ ಲಾಂಗ್‌ ಲಿವ್‌ ಎಂಬ ಟ್ಯಾಗ್‌ಲೈನ್‌ ಇದ್ದು, ಬಿಆರ್‌ ಸಬಾವತ್‌ ಅವರು ನಾಯಕನಟನಾಗಿ ನಟಿಸಿದ್ದಾರೆ. ಇವರೇ ಈ ಚಿತ್ರದ ನಿರ್ದೇಶಕ. ಇತ್ತೀಚೆಗೆ ಹೈದರಾಬಾದ್‌ನ ಪ್ರಸಾದ್‌ ಲ್ಯಾಬ್‌ನಲ್ಲಿ ಚೆ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮ ನಡೆದಿದೆ.

"ಕ್ರಾಂತಿಕಾರಿ ನಾಯಕ ಚೆಗುವೆರಾನ ಜೀವನಚರಿತ್ರೆಯನ್ನು ಸಿನಿಮಾ ಮಾಡಬೇಕು ಎನ್ನುವುದು ನನ್ನ 20 ವರ್ಷದ ಕನಸು. ಶಾಲಾ ದಿನಗಳಿಂದಲೂ ಇಂತಹ ಕನಸು ನನ್ನಲ್ಲಿತ್ತು. ತಿಂಡಿ ಮಾರಿ ಹಣ ಸಂಗ್ರಹಿಸಿ ಚೆ ಸಿನಿಮಾ ಮಾಡಿದ್ದೇವೆ. ಚೆಗುವೆರಾ ಮೇಲಿನ ಗೌರವಕ್ಕೆ ಕುಂದು ಬಾರದಂತೆ ಈ ಸಿನಿಮಾ ಮಾಡಿದ್ದೇನೆ" ಎಂದು ಚೆ ಸಿನಿಮಾದ ನಿರ್ದೇಶಕ ಮತ್ತು ನಾಯಕ ನಟ ಬಿ.ಆರ್‌. ಸಬಾವತ್‌ ನಾಯಕ್‌ ಹೇಳಿದ್ದಾರೆ. ಈಗಾಗಲೇ ಚೆಗುವೆರಾ ಅವರ ಪುತ್ರಿ ಅಲೈದಾ ಗುವೇರಾ ಅವರು ಈ ಸಿನಿಮಾ ಮೆಚ್ಚಿದ್ದಾರೆ ಎಂದರು.

ಚೆ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಜನಸೇನಾ ಪಕ್ಷದ ನಾಯಕ ರಾಯಪತಿ ಅರುಣಾ ಭಾಗವಹಿಸಿದ್ದರು. "ಈ ಸಿನಿಮಾಕ್ಕೆ ಪವನ್‌ ಕಲ್ಯಾಣ್‌ ಅಭಿಮಾನಿಗಳು ಬೆಂಬಲ ನೀಡುತ್ತಾರೆ ಎನ್ನುವ ಆಶಯ ನನ್ನದು. ಯುವ ಜನತೆಗೆ ಇಂತಹ ಸಿನಿಮಾಗಳು ಬಹಳ ಮುಖ್ಯ. ತೆಲುಗು ಭಾಷೆಯಲ್ಲಿ ಇಂತಹ ಸಿನಿಮಾ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ" ಎಂದು ಜನಸೇನಾ ನಾಯಕ ರಾಯಪತಿ ಅರುಣಾ ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯರ್ಥಿ ಸಿನಿಮಾ ಖ್ಯಾತಿಯ ನಿರ್ದೇಶಕರಾದ ಶಂಕರ್‌ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ಚೆಗುವೆರಾ ಜೀವನಚರಿತ್ರೆಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನ ಅದ್ಭುತವಾಗಿದೆ" ಎಂದು ಅವರು ಹೇಳಿದರು. ಚುನಾವಣಾ ಆಯೋಗದ ಸದಸ್ಯರಾದ ಮಾಣಿಕ್ ಮತ್ತು ಹಿರಿಯ ಪತ್ರಕರ್ತ ಪ್ರಭು ಕೂಡ ‘ಚೆ’ ಸಿನಿಮಾಕ್ಕೆ ಶುಭಹಾರೈಸಿದರು.

ಚೆ ಸಿನಿಮಾದಲ್ಲಿ ನಾಯಕರಾಗಿ ಸಬಾವತ್‌ ನಟಿಸಿದ್ದಾರೆ. ಲಾವಣ್ಯ ಸಮೀರ, ಪುಲ ಸಿದ್ಧೇಶ್ವರ್, ಕಾರ್ತಿಕ್ ನೂನ್, ವಿನೋದ್, ಪಸಲ ಉಮಾಮಹೇಶ್ವರ್ ಮುಂತಾದವರು ತಾರಾಗಣದಲ್ಲಿದ್ದಾರೆ. ನೇಚರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯ, ಬಾಬು ಮತ್ತು ದೇವೇಂದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಮತ್ತು ಜಗದೀಶ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಶಿವ ಶರ್ವಾಣಿ ಸಂಕಲನ ಮಾಡಿದ್ದಾರೆ. ರವಿಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಚೆಗುವೆರಾ ಬಯೋಪಿಕ್‌ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ