logo
ಕನ್ನಡ ಸುದ್ದಿ  /  ಮನರಂಜನೆ  /  Eagle: ಬಾಕ್ಸ್‌ ಆಫೀಸ್‌ನಲ್ಲಿ ಹಾರದ ಹದ್ದು; 3 ದಿನದಲ್ಲಿ 15 ಕೋಟಿ ರೂಗೆ ತೃಪ್ತಿಪಟ್ಟ ರವಿತೇಜ ನಟನೆಯ ಈಗಲ್‌ ಸಿನಿಮಾ

Eagle: ಬಾಕ್ಸ್‌ ಆಫೀಸ್‌ನಲ್ಲಿ ಹಾರದ ಹದ್ದು; 3 ದಿನದಲ್ಲಿ 15 ಕೋಟಿ ರೂಗೆ ತೃಪ್ತಿಪಟ್ಟ ರವಿತೇಜ ನಟನೆಯ ಈಗಲ್‌ ಸಿನಿಮಾ

Praveen Chandra B HT Kannada

Feb 12, 2024 12:37 PM IST

google News

3 ದಿನದಲ್ಲಿ 15 ಕೋಟಿ ರೂಗೆ ತೃಪ್ತಿಪಟ್ಟ ರವಿತೇಜ ನಟನೆಯ ಈಗಲ್‌ ಸಿನಿಮಾ

    • Eagle Box Office Collection Day 3: ರವಿತೇಜಾ ಮುಖ್ಯಪಾತ್ರದಲ್ಲಿ ನಟಿಸಿರುವ ಈಗಲ್‌ ಸಿನಿಮಾಕ್ಕೆ ಕಾರ್ತಿಕ್‌ ಗಟ್ಟಮನೇನಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಳೆದ ಮೂರು ದಿನಗಳಲ್ಲಿ ಈಗಲ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಿದೆ ನೋಡೋಣ.
3 ದಿನದಲ್ಲಿ 15 ಕೋಟಿ ರೂಗೆ ತೃಪ್ತಿಪಟ್ಟ ರವಿತೇಜ ನಟನೆಯ ಈಗಲ್‌ ಸಿನಿಮಾ
3 ದಿನದಲ್ಲಿ 15 ಕೋಟಿ ರೂಗೆ ತೃಪ್ತಿಪಟ್ಟ ರವಿತೇಜ ನಟನೆಯ ಈಗಲ್‌ ಸಿನಿಮಾ

ಬೆಂಗಳೂರು: ಮಾಸ್‌ ಚಿತ್ರಪ್ರೇಕ್ಷಕರ ನೆಚ್ಚಿನ ನಟ ರವಿತೇಜಾ ನಟನೆಯ ಈಗಲ್‌ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಸಿನಿಮಾಟ್ರೊಗ್ರಾಫರ್‌ ಆಗಿದ್ದ ಕಾರ್ತಿಕ್‌ ಗಟ್ಟಮನೆನಿ ಅವರು ಈಗಲ್‌ ಮೂಲಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟುಕೊಂಡಿದ್ದಾರೆ. ಇದು ಆಕ್ಷನ್‌-ಎಂಟರ್‌ಟೇನ್‌ಮೆಂಟ್‌ ಸಿನಿಮಾ. ಬಿಡುಗಡೆಯಾದಾಗ ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

ಶುಕ್ರವಾರ ಬಿಡುಗಡೆಯಾದ ದಿನ ಈಗಲ್‌ ಚಿತ್ರವು ಕೇವಲ 6.2 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಹಿಂದಿ ವರ್ಷನ್‌ನಲ್ಲಿ 0.1 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ ಮತ್ತು ಭಾನುವಾರ ಈ ಸಿನಿಮಾ ತಲಾ 5 ಕೋಟಿ ರೂಪಾಯಿ ಮತ್ತು 4.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಈಗಲ್‌ ಸಿನಿಮಾ 3ನೇ ದಿನದ ಬಾಕ್ಸ್‌ ಆಫೀಸ್‌ ಗಳಿಕೆ

ನಿನ್ನೆ ಅಂದರೆ ಭಾನುವಾರ ಈಗಲ್‌ ಸಿನಿಮಾವು ಶೇಕಡ 31.08 ಆಕ್ಯುಪೆನ್ಸಿ ಹೊಂದಿತ್ತು. ಸಂಜೆಯ ಶೋಗಳು ಶೇಕಡ 38ರಷ್ಟು ಫುಲ್‌ ಆಗಿದ್ದವು. ಹಿಂದಿ ವರ್ಷನ್‌ ಆಕ್ಯುಪೆನ್ಸಿ ಕೇವಲ ಶೇಕಡ 10.27ರಚ್ಟಿತ್ತು. ಮೂರನೇ ದಿನದ ಒಟ್ಟಾರೆ ಗಳಿಕೆ 4.7 ಕೋಟಿ ರೂಪಾಯಿ ಇದೆ. ಈಗಲ್‌ ಸಿನಿಮಾವು ಜಾಗತಿಕವಾಗಿ ಕಳೆದ ಮೂರು ದಿನಗಳಲ್ಲಿ ಒಟ್ಟಾರೆ 15 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಈಗಲ್‌ ತೆಲುಗು ಸಿನಿಮಾವಾಗಿದ್ದು, ಕಾರ್ತಿಕ್‌ ಗಟ್ಟಮ್‌ನೇನಿ ನಿರ್ದೇಶನ ಮತ್ತು ಟಿಜಿ ವಿಶ್ವಪ್ರಸಾದ್‌ ಹಾಗೂ ವಿವೀಕ್‌ ಕಚ್ಚಿಬೋಟ್ಲಾ ನಿರ್ಮಾನ ಹೊಂದಿದೆ. ರವಿತೇಜಾ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಕಾವ್ಯ ತಾಪರ್‌, ಅನುಮಪಾ ಪರಮೇಶ್ವರನ್‌ ಮತ್ತು ನವದೀಪ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಲ್‌ ಸಿನಿಮಾವು 2024ರ ಜನವರಿ 13ರಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಮಕರ ಸಂಕ್ರಾಂತಿಯಂದು ಹಲವು ಸಿನಿಮಾಗಳು ರಿಲೀಸ್‌ ಆಗುತ್ತಿರುವುದರಿಂದ ಬಿಡುಗಡೆ ಮಾಡುವ ಯೋಜನೆಯನ್ನು ಮುಂದಕ್ಕೆ ಹಾಕಲಾಗಿತ್ತು. ಫೆಬ್ರವರಿ 9ರಂದು ಈಗಲ್‌ ಬಿಡುಗಡೆಯಾಗಿತ್ತು. ಸಹದೇವ್‌ ಹೆಸರಿನಲ್ಲಿ ಹಿಂದಿ ವರ್ಷನ್‌ ಕೂಡ ಬಿಡುಗಡೆಯಾಗಿದೆ. ಈಗಲ್‌ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ವರದಿ

ಈಗಲ್‌ ಬಿಡುಗಡೆಯಾದ ಸಮಯದಲ್ಲಿಯೇ ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಕೂಡ ಬಿಡುಗಡೆಯಾಗಿದೆ. ಲಾಲ್‌ ಸಲಾಮ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಈಗಲ್‌ ಸಿನಿಮಾದಷ್ಟೂ ಇಲ್ಲ. ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾವು ಮೊದಲ ದಿನ 3.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನ ಮೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳು ವರ್ಷನ್‌ಗೆ ಶೇಕಡ 29.24 ಆಕ್ಯುಪೆನ್ಸಿ ಮತ್ತು ತೆಲುಗು ಶೋಗಳಿಗೆ ಶೇಕಡ 15.24 ಆಕ್ಯುಪೆನ್ಸಿ ಇತ್ತು. ಇದನ್ನೂ ಓದಿ: ರಜನಿಕಾಂತ್‌ ಸಿನಿಮಾದ ಕಲೆಕ್ಷನ್‌ ಇಷ್ಟು ಕಡಿಮೆಯಾ? ಬಾಕ್ಸ್‌ ಆಫೀಸ್‌ನಲ್ಲಿ ಅಂಬೆಗಾಲಿಡುತ್ತಿರುವ ಲಾಲ್‌ ಸಲಾಮ್‌

ಈಗಲ್‌ ಕುರಿತು ಎಕ್ಸ್‌ ವಿಮರ್ಶೆ

ಟ್ವಿಟ್ಟರ್‌ ಅಥವಾ ಎಕ್ಸ್‌ನಲ್ಲಿ ಈಗಲ್‌ ಸಿನಿಮಾದ ಕುರಿತು ಪ್ರೇಕ್ಷಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈಗಲ್‌ ಸಿನಿಮಾದಲ್ಲಿ ರವಿ ಅಣ್ಣಾನ ಸ್ಟೇಜ್‌ ಪ್ರಸೆನ್ಸ್‌ ಅದ್ಭುತವಾಗಿದೆ. ಇದೇ ಕಾರಣಕ್ಕೆ ಇವರನ್ನು ಮಾಸ್‌ ಮಹಾರಾಜ ಎನ್ನೋದು. ಈ ಸಿನಿಮಾ ಒಳ್ಳೆಯ ಸಂದೇಶವನ್ನೂ ಹೊಂದಿದೆ. ಕೆಲವೊಂದು ದೃಶ್ಯಗಳನ್ನು ನೋಡಿದಾಗ ಕಣ್ಣಲ್ಲಿ ನೀರು ಬಂತು" ಎಂದು ಅಭಿಮಾನಿಯೊಬ್ಬರು ಎಕ್ಸ್‌ನಲ್ಲಿ ರಿವ್ಯೂ ಬರೆದಿದ್ದಾರೆ. " ಸಿನಿಮಾದ ಮೊದಲಾರ್ಧದಲ್ಲಿ ರವಿತೇಜಾ ಕ್ಯಾರೆಕ್ಟರ್‌ ಹೆಚ್ಚು ತೋರಿಸಲಾಗಿಲ್ಲ. ಎರಡನೇ ಹಾಫ್‌ ಉತ್ತಮವಾಗಿದೆ. ಕ್ಲೈಮ್ಯಾಕ್ಸ್‌ ಮೊದಲು ಮತ್ತು ಕ್ಲೈಮ್ಯಾಕ್ಸ್‌ ಆಸಕ್ತಿದಾಯಕವಾಗಿದೆ. ಬಿಜಿಎಂ ಕೂಡ ಉತ್ತಮವಾಗಿದೆ" ಎಂದು ಈಗಲ್‌ಗೆ ಎಕ್ಸ್‌ನಲ್ಲಿ ಸಿನಿವಿಮರ್ಶಕರೊಬ್ಬರು ಎರಡೂವರೆ ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ