logo
ಕನ್ನಡ ಸುದ್ದಿ  /  ಮನರಂಜನೆ  /  Samantha: ಜಗತ್ತಿನಲ್ಲಿ ನೋವು, ಅನಾರೋಗ್ಯ ತುಂಬಿದೆ, ಅಧ್ಯಾತ್ಮ ಎಲ್ಲರ ಅಗತ್ಯ; ಸಾಕ್ಷಾತ್ಕಾರದ ಮಾತುಗಳನ್ನಾಡಿದ ನಟಿ ಸಮಂತಾ ರುತ್‌ ಪ್ರಭು

Samantha: ಜಗತ್ತಿನಲ್ಲಿ ನೋವು, ಅನಾರೋಗ್ಯ ತುಂಬಿದೆ, ಅಧ್ಯಾತ್ಮ ಎಲ್ಲರ ಅಗತ್ಯ; ಸಾಕ್ಷಾತ್ಕಾರದ ಮಾತುಗಳನ್ನಾಡಿದ ನಟಿ ಸಮಂತಾ ರುತ್‌ ಪ್ರಭು

Praveen Chandra B HT Kannada

Jul 16, 2024 10:25 AM IST

google News

ನಟಿ ಸಮಂತಾ ರುತ್‌ ಪ್ರಭು

    • Samantha Ruth Prabhuನಟ ನಾಗ ಚೈತನ್ಯರ ಜತೆಗಿನ ಡಿವೋರ್ಸ್‌, ಮಯೋಸಿಸ್‌ ಕಾಯಿಲೆ ಇತ್ಯಾದಿಗಳಿಂದ ಕಳೆದ ಕೆಲವು ವರ್ಷಗಳಿಂದ ನಟಿ ಸಮಂತಾ ರುತ್‌ ಪ್ರಭು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಜಗತ್ತಿಗೆ ಇಂದು ಹಿಂದೆಂದಿಗಿಂತಲೂ ಅಧ್ಯಾತ್ಮದ ಅವಶ್ಯಕತೆಯಿದೆ ಎಂದು ಸಮಂತಾ ಹೇಳಿದ್ದಾರೆ.
ನಟಿ ಸಮಂತಾ ರುತ್‌ ಪ್ರಭು
ನಟಿ ಸಮಂತಾ ರುತ್‌ ಪ್ರಭು

ಬೆಂಗಳೂರು: ನಟಿ ಸಮಂತಾ ರುತ್‌ ಪ್ರಭು ಮತ್ತೊಮ್ಮೆ ತಮ್ಮ ಆರೋಗ್ಯ ಸ್ಥಿತಿ ಮತ್ತು ನಾಗಚೈತನ್ಯ ಜತೆಗಿನ ಡಿವೋರ್ಸ್‌ ವಿಚಾರದ ಕುರಿತು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ತಾನು ಅನುಭವಿಸಿದ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಸಮಂತಾ ರುತ್‌ ಪ್ರಭು ಅವರು ನಟ ನಾಗ ಚೈತನ್ಯರನ್ನು ವಿವಾಹವಾಗಿದ್ದರು. ತನಗೆ ಅಪರೂಪದ ಆಟೋಇಮ್ಯುನ್‌ ಕಾಯಿಲೆ ಮಯೋಸಿಸ್‌ ಇರುವುದು ತಿಳಿದ ಬಳಿಕ ಚಿತ್ರರಂಗದಿಂದ ತುಸು ಸಮಯ ದೂರವಾಗಿದ್ದರು.

ಸಮಂತಾ ರುತ್‌ ಪ್ರಭು ಆಧ್ಯಾತ್ಮಿಕ ಜಾಗೃತಿ

ವಿಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಬಯಸುವಿರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸಮಂತಾ ರುತ್ ಪ್ರಭು ಹೀಗೆಂದು ಉತ್ತರಿಸಿದ್ದಾರೆ. "ನಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ಈ ಸಮಯದಲ್ಲಿ ನಮಗೆ ಇರುವ ಪರಿಸ್ಥಿತಿಯನ್ನು ಅನುಭವಿಸಬೇಕೆ ಎಂದು ಆಶ್ಚರ್ಯ ಪಡುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ಸ್ನೇಹಿತನೊಂದಿಗೆ ಈ ಕುರಿತು ಚರ್ಚಿಸಿದ್ದೆ. ಆದರೆ, ನಮ್ಮ ಜೀವನ ಹೇಗಿದೆಯೋ ಅದನ್ನು ನಿಭಾಯಿಸಬೇಕು ಎಂದು ನಾನು ಭಾವಿಸುವೆ. ಯಾವುದೇ ಸಮಸ್ಯೆಯಿಂದ ಹೊರಗೆ ಬರುವ ತನಕ ಹೋರಾಡಬೇಕು. ಇಂತಹ ಸಮಯದಲ್ಲಿ ನಾನು ಎಂದಿಗಿಂತಲೂ ಬಲಶಾಲಿಯಾಗಿರಬೇಕೆಂದು ಭಾವಿಸುವೆ. ನಾನು ಬೆಂಕಿಯ ಹಾದಿಯಲ್ಲಿ ಸಾಗಿದ್ದೇನೆ. ಇದನ್ನು ನೀವು ಆಧ್ಯಾತ್ಮಿಕ ಜಾಗೃತಿ ಎಂದು ಕರೆಯಬಹುದು" ಎಂದು ಅವರು ಹೇಳಿದ್ದಾರೆ.

ಅಧ್ಯಾತ್ಮ ಕುರಿತು ಸಮಂತಾ ಮಾತು

"ನನ್ನ ವೈಯಕ್ತಿಕ ಬೆಳವಣಿಗೆಗೆ ಆಧ್ಯಾತ್ಮಿಕತೆಯು ಅವಿಭಾಜ್ಯ ಅಂಶ ಎನ್ನಬಹುದು. ಅದು ನನ್ನ ಕೆಲಸದಲ್ಲಿ ನೆರವಾಗುತ್ತದೆ. ಅದು ನನ್ನ ಜೀವನದ ಎಲ್ಲಾ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಮಾತು, ಗ್ರಹಿಕೆ ಸಂಘರ್ಷದ ನಿರ್ವಹಣೆಗೆ ಸಹಾಯ ಮಾಡುತ್ತದೆ. ನನ್ನ ಅನೇಕ ಅಡೆತಡೆಗಳನ್ನು ನಿವಾರಿಸಲು ಅಧ್ಯಾತ್ಮವು ನನಗೆ ಅಗತ್ಯವಿರುವ ಶಕ್ತಿಯಾಗಿದೆ. ಇಂದಿನ ಜಗತ್ತಿನಲ್ಲಿ ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ಆಧ್ಯಾತ್ಮಿಕತೆಯ ಅಗತ್ಯವಿದೆ. ಇಲ್ಲಿ ತುಂಬಾ ನೋವು ಮತ್ತು ಅನಾರೋಗ್ಯವಿದೆ. ಅಧ್ಯಾತ್ಮವು ನಿಮ್ಮ ಉತ್ತಮ ಸ್ನೇಹಿತ ಮತ್ತು ಶಕ್ತಿಯ ಅಂತ್ಯವಿಲ್ಲದ ಮೂಲವಾಗಿದೆ ಎನ್ನುವುದು ನನ್ನ ನಂಬಿಕೆ" ಎಂದು ಅವರು ಹೇಳಿದ್ದಾರೆ.

ಸಮಂತಾ ರುತ್‌ ಡಿವೋರ್ಸ್‌ ವಿಚಾರ

ಸಮಂತಾ ರುತ್‌ ಪ್ರಭು ಅವರು 2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯರನ್ನು ವಿವಾಹವಾಗಿದ್ದರು. ಸುಮಾರು 4 ವರ್ಷ ಸಂಸಾರ ನಡೆಸಿದ ಬಳಿಕ ಇವರಿಬ್ಬರು ಬೇರೆಯಾಗಿದ್ದರು. ಅಕ್ಟೋಬರ್‌ 2021ರಲ್ಲಿ ತಾವಿಬ್ಬರು ಬೇರ್ಪಡುತ್ತಿರುವುದಾಗಿ ಘೋಷಿಸಿದರು. ಈ ಕುರಿತು ಇವರಿಬ್ಬರೂ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಘೋಷಿಸಿದ್ದರು. 2021ರಲ್ಲಿ ಇವರಿಬ್ಬರು ದೂರವಾದ ಬಳಿಕ ಈ ಡಿವೋರ್ಸ್‌ಗೆ ಶೋಭಿತಾ ಧೂಳಿಪಾಲ ಲಿಂಕ್‌ ಇರುವುದಾಗಿ ವದಂತಿಗಳು ಎದ್ದವು. "ಆಕೆ ತನ್ನ ಆರೋಗ್ಯ ಮತ್ತು ಕೆಲಸದ ಕುರಿತು ಗಮನ ಹರಿಸಲಿದ್ದಾಳೆ" ಎಂದು ನಾಗ ಚೈತನ್ಯ ಡಿವೋರ್ಸ್‌ ಸಂದರ್ಭದಲ್ಲಿ ಹೇಳಿದ್ದರು.

2022ರಲ್ಲಿ ಸಮಂತಾ ಅವರು ಮಯೋಸಿಸ್‌ ಕಾಯಿಲೆ ಗೊತ್ತಾದ ಬಳಿಕ ಕೆಲಸದಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಮಯೋಸಿಸ್‌ ಕಾಯಿಲೆ ಇರುವುದು ಗೊತ್ತಾದ ಸಂದರ್ಭದಲ್ಲಿ ಇವರು ಖುಷಿ ಸಿನಿಮಾದ ಶೂಟಿಂಗ್‌ನಲ್ಲಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ