logo
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರಲ್ಲಿ Devara Part 1 ಚಿತ್ರದ ಕನ್ನಡ ಅವತರಣಿಕೆಗೆ ಕೇವಲ 36 ಶೋ, ತೆಲುಗು ವರ್ಷನ್‌ಗೆ ಬರೋಬ್ಬರಿ 363 ಶೋ!

ಬೆಂಗಳೂರಲ್ಲಿ Devara Part 1 ಚಿತ್ರದ ಕನ್ನಡ ಅವತರಣಿಕೆಗೆ ಕೇವಲ 36 ಶೋ, ತೆಲುಗು ವರ್ಷನ್‌ಗೆ ಬರೋಬ್ಬರಿ 363 ಶೋ!

Sep 25, 2024 04:03 PM IST

google News

ಬೆಂಗಳೂರಿನಲ್ಲಿ ದೇವರ ಕನ್ನಡ ಅವತರಣಿಗೆ ಸಿಕ್ಕ ಶೋಗಳೆಷ್ಟು?

    • Devara Part 1: ಜೂನಿಯರ್‌ ಎನ್‌ಟಿಆರ್‌ ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾದ ನಟನಲ್ಲ. ಅವರನ್ನು ನೋಡುವ, ತೆರೆಮೇಲೆ ಆರಾಧಿಸುವ ದೊಡ್ಡ ಬಳಗ ಕರ್ನಾಟಕದಲ್ಲಿಯೂ ಇದೆ. ಇದೀಗ ದೇವರ ಸಿನಿಮಾದ ಉತ್ಸವ ಬೆಂಗಳೂರಿನಲ್ಲಿಯೂ ಶುರುವಾಗಿದೆ. ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿಯೂ ದೇವರ ಕರುನಾಡಿನಲ್ಲಿ ಮುನ್ನಡೆ ಇರಿಸಿದ್ದಾನೆ.
ಬೆಂಗಳೂರಿನಲ್ಲಿ ದೇವರ ಕನ್ನಡ ಅವತರಣಿಗೆ ಸಿಕ್ಕ ಶೋಗಳೆಷ್ಟು?
ಬೆಂಗಳೂರಿನಲ್ಲಿ ದೇವರ ಕನ್ನಡ ಅವತರಣಿಗೆ ಸಿಕ್ಕ ಶೋಗಳೆಷ್ಟು?

Devara Part 1 Advance Booking: ಜೂನಿಯರ್‌ ಎನ್‌ಟಿಆರ್‌, ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಮತ್ತು ಸೈಫ್‌ ಅಲಿಖಾನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದೇವರ ಪಾರ್ಟ್‌ 1 ಬಿಡುಗಡೆ ಸನಿಹದಲ್ಲಿದೆ. ಇನ್ನೇನು ಸೆ. 27ರಂದು ಬೆಳಗಿನ ಜಾವದಿಂದಲೇ ಈ ಸಿನಿಮಾ ತೆರೆಗೆ ಬರಲಿದೆ. ದೊಡ್ಡ ಮಟ್ಟದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿರುವ ಈ ಸಿನಿಮಾ, ಭಾರತದ ಜತೆಗೆ ವಿದೇಶಗಳಲ್ಲಿಯೂ ಮೋಡಿ ಮಾಡಲಿದೆ. ಈ ನಡುವೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾದ ಕ್ರೇಜ್‌ ಹೇಗಿದೆ? ಟಿಕೆಟ್‌ ಬುಕಿಂಗ್‌ ರೆಸ್ಪಾನ್ಸ್‌ ಹೇಗಿದೆ? ಇಲ್ಲಿದೆ ಮಾಹಿತಿ.

ಜೂನಿಯರ್‌ ಎನ್‌ಟಿಆರ್‌ ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾದ ನಟನಲ್ಲ. ಅವರನ್ನು ನೋಡುವ, ತೆರೆಮೇಲೆ ಆರಾಧಿಸುವ ದೊಡ್ಡ ಬಳಗ ಭಾರತದಾದ್ಯಂತವೂ ಇದೆ. ಅದರಲ್ಲೂ ಕರ್ನಾಟಕದಲ್ಲಿಯೂ ಎನ್‌ಟಿಆರ್‌ ಸಿನಿಮಾಗಳ ಬಗ್ಗೆ ಕ್ರೇಜ್‌ ತುಸು ಜಾಸ್ತಿ. ಇದೀಗ ದೇವರ ಸಿನಿಮಾದ ಉತ್ಸವ ಬೆಂಗಳೂರಿನಲ್ಲಿಯೂ ಶುರುವಾಗಿದೆ. ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿಯೂ ದೇವರ ಸಿನಿಮಾ ಬೆಂಗಳೂರಿನಲ್ಲಿ ಮುನ್ನಡೆ ಇರಿಸಿದ್ದಾನೆ. ಕನ್ನಡ ಸಿನಿಮಾಳಿಗೂ ಸಿಗದಷ್ಟು ರೆಸ್ಪಾನ್ಸ್‌ ಈ ಸಿನಿಮಾಕ್ಕೆ ಸಿಲಿಕಾನ್‌ ಸಿಟಿಯಲ್ಲಿ ಸಿಗುತ್ತಿದೆ.

ಕನ್ನಡಕ್ಕಿಂತ ತೆಲುಗು ಶೋಗಳೇ ಅಧಿಕ

ದೇವರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರುವ ಸಿನಿಮಾ. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ರಿಲೀಸ್‌ ಆಗಲಿದೆ. ಆದರೆ, ಇದೇ ಸಿನಿಮಾ ಕರ್ನಾಟಕದಲ್ಲಿ ಕನ್ನಡಕ್ಕಿಂತ, ತೆಲುಗು ಶೋಗಳನ್ನು ಪಡೆದುಕೊಂಡಿದೆ. ಕನ್ನಡ ಡಬ್ಬಿಂಗ್‌ ವರ್ಷನ್‌ ಶೋಗಳು ಕೇವಲ 40ರ ಆಸುಪಾಸಿನಲ್ಲಿದ್ದರೆ, ಮೂಲ ತೆಲುಗು ಸಿನಿಮಾಕ್ಕೆ 400ರ ಸನಿಹ ಶೋಗಳು ಬೆಂಗಳೂರಿನಲ್ಲಿ ಸಿಕ್ಕಿವೆ. ತಮಿಳು ದೇವರ ಸಿನಿಮಾ ಸಹ ಬೆಂಗಳೂರಿನ ಮಾಲ್‌ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಟಿಕೆಟ್‌ ದರ; ಬೆಂಗಳೂರು Vs ಹೈದರಾಬಾದ್‌

ಇನ್ನು ಬೆಂಗಳೂರಿನಲ್ಲಿ ದೇವರ ಸಿನಿಮಾದ ಟಿಕೆಟ್‌ ದರ ಹೈದರಾಬಾದ್‌ಗೆ ಹೋಲಿಸಿದರೆ ದುಬಾರಿ! ಬೆಂಗಳೂರಿನಲ್ಲಿ 200ರಿಂದ ಶುರುವಾಗಿ 650 ರೂಪಾಯಿ ವರೆಗೂ ಟಿಕೆಟ್‌ ದರ ನಿಗದಿ ಪಡಿಸಲಾಗಿದೆ. ಅದೇ ಹೈದರಾಬಾದ್‌ನಲ್ಲಿ 150ರಿಂದ 470 ರೂಪಾಯಿ ವರೆಗೂ ಟಿಕೆಟ್‌ ದರ ಫಿಕ್ಸ್‌ ಮಾಡಲಾಗಿದೆ. ಇತ್ತೀಚೆಗಷ್ಟೇ ಸಿನಿಮಾ ಟಿಕೆಟ್‌ ದರ ಏರಿಕೆ ಮಾಡುವ ಕುರಿತು, ಚಿತ್ರತಂಡ ಸರ್ಕಾರಕ್ಕೆ ಮನವಿ ಮಾಡಿತ್ತು. ತಂಡದ ಮನವಿಗೆ ಸರ್ಕಾರವೂ ಸಮ್ಮತಿಸಿತ್ತು.

ಲಕ್ಷ ಲಕ್ಷ ಟಿಕೆಟ್‌ ಬಿಕರಿ

ದೇವರ ಭಾಗ 1 ಚಿತ್ರದ ಹೈಪ್‌ ಅದ್ಯಾವ ಮಟ್ಟಿಗೆ ಇದೆ ಎಂದರೆ, ಈ ಸಿನಿಮಾ ಮುಂಗಡ ಬುಕಿಂಗ್‌ ವಿಚಾರದಲ್ಲಿಯೇ ದೊಡ್ಡ ಗಳಿಕೆಯ ನಗೆ ಬೀರಿದೆ. ಅಂದರೆ, ಸಿನಿಮಾ ಬಿಡುಗಡೆಗೂ ಮೊದಲೇ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿದೆ. ಬಾಕ್ಸ್‌ಆಫೀಸ್‌ನಲ್ಲಿ ಬೇರಾವ ದೊಡ್ಡ ಸಿನಿಮಾಗಳು ರಿಲೀಸ್‌ ಆಗದೇ ಇರುವುದನ್ನೂ ದೇವರ ಸಿನಿಮಾ ಎನ್‌ಕ್ಯಾಶ್‌ ಮಾಡಿಕೊಂಡಿದೆ. ಆರು ಸಾವಿರ ಶೋಗಳಲ್ಲಿ 6 ಲಕ್ಷ 50 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಿಕೊಂಡಿದೆ ದೇವರ ಸಿನಿಮಾ.

ಮೊದಲ ದಿನವೇ ನೂರು ಕೋಟಿ?

ದೇಶದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಮುಂಗಡ ಟಿಕೆಟ್‌ ಬುಕಿಂಗ್‌ ತೆರೆಯಲಾಗಿದೆ. ಆ ಪೈಕಿ ಹಾಗೆ ಓಪನ್‌ ಆದ ಬಹುತೇಕ ಕಡೆಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಭಾರತದಲ್ಲಿ ಈ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 28 ಕೋಟಿ ರೂ ಬಾಚಿಕೊಂಡರೆ, ವಿಶ್ವಾದ್ಯಂತ ಒಟ್ಟು 50 ಕೋಟಿಗೂ ಅಧಿಕ ಮೊತ್ತವನ್ನು ಅಡ್ವಾನ್ಸ್‌ ಬುಕಿಂಗ್‌ನಿಂದಲೇ ಪಡೆದುಕೊಂಡಿದೆ. ಇದೆಲ್ಲವನ್ನು ನೋಡುತ್ತಿದ್ದರೆ, ಮೊದಲ ದಿನವೇ ಈ ಸಿನಿಮಾ 100 ಕೋಟಿಯ ಗಡಿ ದಾಟುವ ಎಲ್ಲ ಸೂಚನೆ ಸಿಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ