logo
ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: 6 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು? ಪ್ರಭಾಸ್‌- ದೀಪಿಕಾ ಪಡುಕೋಣೆ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

Kalki 2898 AD: 6 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು? ಪ್ರಭಾಸ್‌- ದೀಪಿಕಾ ಪಡುಕೋಣೆ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

Praveen Chandra B HT Kannada

Jul 03, 2024 09:58 AM IST

google News

Kalki 2898 AD: 6 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು?

    • Kalki 2898 AD box office collection day 6: ನಾಗ್‌ ಅಶ್ವಿನ್‌ ನಿರ್ದೇಶನದ ಸೈನ್ಸ್‌ ಫಿಕ್ಷನ್‌ ಸಿನಿಮಾ ಕಲ್ಕಿ 2898 ಎಡಿ ಜೂನ್‌ 27ರಂದು ಭಾರತ ಮತ್ತು ಜಾಗತಿಕವಾಗಿ ಬಿಡುಗಡೆಯಾಗಿತ್ತು. ಕಳೆದ ಆರು ದಿನಗಳಲ್ಲಿ ಈ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟಿದೆ ನೋಡೋಣ.
Kalki 2898 AD: 6 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು?
Kalki 2898 AD: 6 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು?

Kalki 2898 AD box office collection day 6: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ನಾಗ್ ಅಶ್ವಿನ್ ಅವರ ವೈಜ್ಞಾನಿಕ ಡಿಸ್ಟೋಪಿಯನ್ ಚಿತ್ರ ಕಲ್ಕಿ 2898 AD, ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಕಲೆಕ್ಷನ್‌ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಮತ್ತೆ ಏರಿಕೆ ಕಾಣಲು ವೀಕೆಂಡ್‌ ಬರಬೇಕಿದೆ. ಸಿನಿಮಾಗಳ ಗಲ್ಲಾಪೆಟ್ಟಿಗೆ ವರದಿ ನೀಡುವ ತಾಣ ಸಕ್‌ನಿಲ್ಕ್‌.ಕಾಂ ಪ್ರಕಾರ ಮಂಗಳವಾರದವರೆಗೆ ಕಲ್ಕಿ ಕಲೆಕ್ಷನ್‌ ಒಟ್ಟು 371 ಕೋಟಿ ರೂಪಾಯಿಗೆ ತಲುಪಿದೆ.

ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್

ಕಲ್ಕಿ 2898 ಎಡಿ ಸಿನಿಮಾವು ಕಳೆದ ಆರು ದಿನಗಳಲ್ಲಿ ಭಾರತದಲ್ಲಿನ ಎಲ್ಲಾ ಭಾಷೆಗಳಲ್ಲಿ 362.96 ಕೋಟಿ ರೂ ಗಳಿಸಿದೆ. ಮೊದಲ ದಿನ ಈ ಚಿತ್ರವು ಭಾರತದಲ್ಲಿ 95.3 ಕೋಟಿ ರೂಪಾಯಿ ಗಳಿಸಿತ್ತು. ಶುಕ್ರವಾರ 59.3 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವಾರಾಂತ್ಯದಲ್ಲಿ, ಚಿತ್ರವು 66.2 ಕೋಟಿ ರೂ (ಶನಿವಾರ) ಮತ್ತು 88.2 ಕೋಟಿ (ಭಾನುವಾರ) ರೂ ಗಳಿಸಿದೆ. ಸೋಮವಾರ ಕಲೆಕ್ಷನ್‌ ಶೇಕಡ 61ರಷ್ಟು ಕುಸಿದು 34.15 ಕೋಟಿ ರೂಪಾಯಿ ಸಂಗ್ರಹಿಸಿತು. ಮಂಗಳವಾರ ಶೇಕಡ 18.45ರಷ್ಟು ಇಳಿಕೆ ಕಂಡು 27.85 ಕೋಟಿ ರೂಪಾಯಿ ಗಳಿಸಿದೆ. ಜಾಗತಿಕವಾಗಿ ಐದು ದಿನಗಳಲ್ಲಿ 625 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಲ್ಕಿ ಕುರಿತು ಸೆಲೆಬ್ರಿಟಿಗಳಿಂದ ಮೆಚ್ಚುಗೆಯ ಮಾತುಗಳು

ನಿರ್ದೇಶಕ ಅಟ್ಲೀ, ನಟರಾದ ವರುಣ್ ಧವನ್, ಅರ್ಜುನ್ ಕಪೂರ್ ಅವರು ಕಲ್ಕಿ 2898 ಎಡಿಯ ವಿಮರ್ಶೆ ನೀಡಿದ್ದಾರೆ. ಅಟ್ಲೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಾಗ್ ಅವರ ಚಲನಚಿತ್ರ ನಿರ್ಮಾಣವನ್ನು 'ನಂಬಲು ಕಷ್ಟವಾಗುವ ಅದ್ಭುತ' ಎಂದು ಕರೆದಿದ್ದಾರೆ. "ಈ ಚಿತ್ರವು ಪ್ರತಿಯೊಂದು ಅಂಶದಲ್ಲೂ ನಿಜವಾಗಿಯೂ ಬೆರಗುಗೊಳಿಸುತ್ತದೆ. ಪ್ರಭಾಸ್ ಸರ್, ನಿಮ್ಮ ಅಭಿನಯ ಅದ್ಭುತವಾಗಿದೆ! ದೀಪಿಕಾ ಪಡುಕೋಣೆ ಮೇಡಂ, ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು! ಅಮಿತಾಬ್ ಬಚ್ಚನ್ ಸರ್, ಈ ಚಿತ್ರದಲ್ಲಿ ನೀವು ದೇವರ ಮಟ್ಟದಲ್ಲಿದ್ದಿರಿ! ಮಾಸ್!... ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಅಟ್ಲಿ ಪೋಸ್ಟ್‌ ಮಾಡಿದ್ದಾರೆ.

ವರುಣ್‌ ಧವನ್‌ ಹೀಗೆ ಬರೆದಿದ್ದಾರೆ. “ಕಲ್ಕಿ ನಾವು ಭಾರತೀಯ ಚಿತ್ರರಂಗಕ್ಕಾಗಿ ಕಂಡ ಕನಸು ನನಸಾದ ಕ್ಷಣ. ಪ್ರತಿ ಫ್ರೇಮ್ ಅದ್ಭುತವಾಗಿದೆ - ನೀವು ಮಾಡಿರುವುದು ಮ್ಯಾಜಿಕ್ ಮತ್ತು ಹುಚ್ಚುತನಕ್ಕಿಂತ ಕಡಿಮೆಯಿಲ್ಲ.. # ಕಲ್ಕಿ ಸಿನಿಮಾದ ಮೂಲಕ ನಮಗೆ ಈ ಅನುಭವವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದಾರೆ.

ಅರ್ಜುನ್‌ ಕಪೂರ್‌ ಹೀಗೆ ವಿಮರ್ಶೆ ಮಾಡಿದ್ದಾರೆ. “ಕಲ್ಕಿ, ಗೇಮ್ ಚೇಂಜರ್ !! @nag_ashwin ಅವರಿಂದ ಎಂತಹ ಸಿನಿಮಾ ದೃಷ್ಟಿ! ತಲೆಮಾರುಗಳವರೆಗೆ ವ್ಯಾಪಿಸಿರುವ ಈ ಮಹಾಕಾವ್ಯದ, ವ್ಯಾಪಕವಾದ ಸಾಹಸಗಾಥೆಯನ್ನು ದೃಶ್ಯ ರೂಪದಲ್ಲಿ ನೀಡಿರುವ ನಿಮಗೆ ನಾನು ತಲೆಬಾಗುತ್ತೇನೆ" ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಲ್ಕಿ ಸಿನಿಮಾದಲ್ಲಿ ಪ್ರಭಾಸ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್‌ ಹಾಸನ್‌ ಮತ್ತು ಅಮಿತಾಬ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ರೊಕ್ಸಿಯಾಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಮತ್ತು ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯು ಮಹಾಭಾರತದ ಕುರುಕ್ಷೇತ್ರ ಯುದ್ಧದ 6000 ವರ್ಷಗಳ ನಂತರ ನಡೆಯುತ್ತದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಹಿಂದೂ ಧರ್ಮಗ್ರಂಥಗಳಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರವನ್ನು 600 ಕೋಟಿ ರೂ.ಗಳ ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ