logo
ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: 8 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು? ವೀಕೆಂಡ್‌ ಬಂತು, ಮತ್ತಷ್ಟು ಕೋಟಿ ಬಾಚಿಕೊಳ್ಳಲು ರೆಡಿಯಾದ ಪ್ರಭಾಸ್‌ ಸಿನಿಮಾ

Kalki 2898 AD: 8 ದಿನದಲ್ಲಿ ಕಲ್ಕಿ ಸಿನಿಮಾ ಗಳಿಸಿದ್ದೆಷ್ಟು? ವೀಕೆಂಡ್‌ ಬಂತು, ಮತ್ತಷ್ಟು ಕೋಟಿ ಬಾಚಿಕೊಳ್ಳಲು ರೆಡಿಯಾದ ಪ್ರಭಾಸ್‌ ಸಿನಿಮಾ

Praveen Chandra B HT Kannada

Jul 05, 2024 11:22 AM IST

google News

ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್

    • Kalki 2898 AD box office collection day 8: ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದನ್ನು ಮುಂದುವರೆಸಿದೆ. ಕಳೆದ ಎಂಟು ದಿನಗಳಲ್ಲಿ ಈ ಸಿನಿಮಾದ ಗಳಿಕೆಯ ವರದಿ ಇಲ್ಲಿದೆ.
ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್
ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್

Kalki 2898 AD box office collection day 8: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾದ ಕಲೆಕ್ಷನ್‌ ಶೇಕಡ 2ರಷ್ಟು ಕುಸಿತ ಕಂಡಿದೆ. ಸಿನಿಮಾಗಳ ಬಾಕ್ಸ್‌ ಆಫೀಸ್‌ ವರದಿ ನೀಡುವ ಸಕ್‌ನಿಲ್ಕ್‌.ಕಾಂ ರಿಪೋರ್ಟ್‌ ಪ್ರಕಾರ ಕಲ್ಕಿ ಸಿನಿಮಾವು ಮೊದಲ ವಾರದಲ್ಲಿ ಭಾರತದಲ್ಲಿ ಒಟ್ಟು 414.25 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಒಂದು ವಾರದೊಳಗೆ ವಿಶ್ವಾದ್ಯಂತ 700 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಲ್ಕಿ 2898 ಎಡಿ ಬಾಕ್ಸ್ ಆಫೀಸ್ ಕಲೆಕ್ಷನ್

ಕಲ್ಕಿ 2898 ಎಡಿ ಜೂನ್ 27 ರಂದು ಮೊದಲ ದಿನ 95.3 ಕೋಟಿ ರೂಪಾಯಿ ಗಳಿಸಿದೆ. ಶುಕ್ರವಾರ ಗಳಿಕೆಯಲ್ಲಿ ಕುಸಿತ ಕಂಡಿತ್ತು. ಕಳೆದ ಶುಕ್ರವಾರ 59.3 ಕೋಟಿ ಗಳಿಸಿತು. ಮೊದಲ ದಿನ ಅತ್ಯಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರುವುದು ಮತ್ತು ಕಲ್ಕಿ ಕುರಿತು ಕುತೂಹಲ ಹೆಚ್ಚಿದ್ದ ಕಾರಣ ಮೊದಲ ದಿನ ಗಳಿಕೆ ಭರ್ಜರಿಯಾಗಿತ್ತು. ಶನಿವಾರ 66.2 ಕೋಟಿ ರೂ.ಗಳನ್ನು ಗಳಿಸಿತು. ಭಾನುವಾರ, ವ್ಯವಹಾರವು ಮತ್ತಷ್ಟು ವೇಗ ಪಡೆದುಕೊಂಡಿತು, ತಯಾರಕರಿಗೆ 88.2 ಕೋಟಿ ಗಳಿಸಿತು. ಸೋಮವಾರ 34.15 ಕೋಟಿ, ಮಂಗಳವಾರ 27.05 ಕೋಟಿ ಮತ್ತು ಬುಧವಾರ 22.7 ಕೋಟಿ ಗಳಿಸಿದೆ. ಇಲ್ಲಿಯವರೆಗೆ ಭಾರತದಲ್ಲಿ ಕಲ್ಕಿ 2898 ಎಡಿ ಸಿನಿಮಾ 414.25 ಕೋಟಿ ರೂ. ಗಳಿಕೆ ಮಾಡಿದೆ.

ವಾರದ ದಿನಗಳಲ್ಲಿ ಸಹಜವಾಗಿ ಚಿತ್ರಮಂದಿರಗಳಿಗೆ ಆಗಮಿಸುವವರ ಪ್ರಮಾಣ ಕಡಿಮೆ ಇರುತ್ತದೆ. ಬಹುತೇಕರ ತಮ್ಮ ಉದ್ಯೋಗಗಳಲ್ಲಿ ಬಿಝಿ ಇರುತ್ತಾರೆ. ಇದೀಗ ಮತ್ತೆ ವೀಕೆಂಡ್‌ ಬಂದಿದೆ. ಈ ಶನಿವಾರ ಮತ್ತು ಭಾನುವಾರ ಮತ್ತೆ ಚಿತ್ರಮಂದಿರಗಳಲ್ಲಿ ಕಲ್ಕಿ ಸಿನಿಮಾದ ಅಬ್ಬರ ಮುಂದುವರೆಯುವ ನಿರೀಕ್ಷೆಯಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲೂ ಈ ಸಿನಿಮಾದ ಅಬ್ಬರ ಮುಂದುವರೆಯಲಿದೆ. ಹಾಲಿವುಡ್‌ ಶೈಲಿಯ ಇಂತಹ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ.

ನಾಗ್ ಅಶ್ವಿನ್ ಅವರು ಕಲ್ಕಿ ಸಿನಿಮಾದ ಮುಂದಿನ ಭಾಗದ ಕುರಿತು ಒಂದಿಷ್ಟು ಮಾಹಿತಿ ನೀಡಿದ್ದಾರೆ. "ಕಲ್ಕಿ 2898 ಎಡಿ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ನಾವು ಸುಮಾರು 25 ಅಥವಾ 30 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಆದರೆ ಇನ್ನೂ ಸಾಕಷ್ಟು ಆಕ್ಷನ್ ಉಳಿದಿದೆ. ಇದು ಸಂಪೂರ್ಣವಾಗಿ ಹೊಸದಾಗಿ ಮಾಡುವ ಸಿನಿಮಾದಂತೆಯೇ ಇದೆ. ನಾವು ಮೊದಲ ಭಾಗದಲ್ಲಿ ಮಾಡಲಾಗದ್ದನ್ನು ಈ ಭಾಗದಲ್ಲಿ ಮಾಡಬೇಕು. ಈ ಮೂವರ ಮುಖಾಮುಖಿ ಅತ್ಯಂತ ನಿರ್ಣಾಯಕ ವಿಷಯವಾಗಿದೆ. ಪ್ರಬಲ ಆಯುಧವೆಂದು ಭಾವಿಸಲಾದ ಗಾಂಡಿವವನ್ನು ಚಲಾಯಿಸಬಲ್ಲ ಯಾಸ್ಕಿನ್‌ ಮತ್ತು ಅತ್ಯಂತ ಪ್ರಬಲ ಯೋಧರಾದ ಕರ್ಣ ಮತ್ತು ಅಶ್ವತ್ಥಾಮನ ವಿಚಾರ ಇದಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂನ್‌ ಕೊನೆಯ ವಾರ ರಿಲೀಸ್‌ ಆದ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್‌ ಹಾಸನ್‌ ಮತ್ತು ಅಮಿತಾಬ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಬಹುತಾರಾಗಣದ ಸಿನಿಮಾವಾಗಿದೆ. ಪ್ರಮುಖ ಪಾತ್ರಗಳಲ್ಲಿ ಮತ್ತು ಅತಿಥಿ ಪಾತ್ರಗಳಲ್ಲಿ ಭಾರತದ ಹಲವು ಸ್ಟಾರ್‌ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ದಿಶಾ ಪಟಾನಿ ರೊಕ್ಸಿಯಾಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಮತ್ತು ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯು ಮಹಾಭಾರತದ ಕುರುಕ್ಷೇತ್ರ ಯುದ್ಧದ 6000 ವರ್ಷಗಳ ನಂತರ ನಡೆಯುತ್ತದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಹಿಂದೂ ಧರ್ಮಗ್ರಂಥಗಳಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರವನ್ನು 600 ಕೋಟಿ ರೂ.ಗಳ ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರ ಭಾರತ ಮತ್ತು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ