logo
ಕನ್ನಡ ಸುದ್ದಿ  /  ಮನರಂಜನೆ  /  Hanuman Ott Release: ಒಟಿಟಿಗೆ ಬರಲು ಬ್ಲಾಕ್ ಬಸ್ಟರ್‌ ಹನುಮಾನ್‌ ಸಿನಿಮಾ ಸಿದ್ಧ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ವಿವರ

Hanuman OTT Release: ಒಟಿಟಿಗೆ ಬರಲು ಬ್ಲಾಕ್ ಬಸ್ಟರ್‌ ಹನುಮಾನ್‌ ಸಿನಿಮಾ ಸಿದ್ಧ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ವಿವರ

Feb 14, 2024 10:50 AM IST

google News

Hanuman Ott Release: ಒಟಿಟಿಗೆ ಬರಲು ಬ್ಲಾಕ್ ಬಸ್ಟರ್‌ ಹನುಮಾನ್‌ ಸಿನಿಮಾ ಸಿದ್ಧ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ವಿವರ

  • ತೇಜ ಸಜ್ಜಾ ನಾಯಕನಾಗಿ ನಟಿಸಿರುವ ಹನುಮಾನ್‌ ಸಿನಿಮಾ ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದೆ. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸುವುದಕ್ಕೂ ಸಿದ್ಧತೆ ಮಾಡಿಕೊಂಡಿದೆ. ಯಾವ ಒಟಿಟಿಯಲ್ಲಿ ಯಾವಾಗಿನಿಂದ ಈ ಸಿನಿಮಾ ಶುರು? ಇಲ್ಲಿದೆ ಮಾಹಿತಿ. 

Hanuman Ott Release: ಒಟಿಟಿಗೆ ಬರಲು ಬ್ಲಾಕ್ ಬಸ್ಟರ್‌ ಹನುಮಾನ್‌ ಸಿನಿಮಾ ಸಿದ್ಧ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ವಿವರ
Hanuman Ott Release: ಒಟಿಟಿಗೆ ಬರಲು ಬ್ಲಾಕ್ ಬಸ್ಟರ್‌ ಹನುಮಾನ್‌ ಸಿನಿಮಾ ಸಿದ್ಧ; ಎಲ್ಲಿ, ಯಾವಾಗ ವೀಕ್ಷಣೆ? ಹೀಗಿದೆ ವಿವರ

Hanuman Ott Release: ಪ್ರಶಾಂತ್‌ ವರ್ಮಾ ಮತ್ತು ತೇಜ್‌ ಸಜ್ಜಾ ಕಾಂಬಿನೇಷನ್‌ನಲ್ಲಿ ಸಂಕ್ರಾಂತಿ ಹಬ್ಬದ (ಜ. 12) ಪ್ರಯುಕ್ತ ಪ್ರೇಕ್ಷಕರ ಮುಂದೆ ಬಂದಿದ್ದ ಹನುಮಾನ್‌ ಸಿನಿಮಾ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಹನುಮಾನ್‌ ಸಿನಿಮಾ ಎದುರು ಮಹೇಶ್‌ ಬಾಬು ಗುಂಟೂರು ಕಾರಂ ಸಿನಿಮಾ ಬಿಡುಗಡೆಯಾಗಿದ್ದರೂ, ಯಾವುದಕ್ಕೂ ಜಗ್ಗದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕೇವಲ 40 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿದ್ದ ಈ ಸಿನಿಮಾ ಬರೋಬ್ಬರಿ 300 ಪ್ಲಸ್‌ ಗಳಿಕೆ ಕಂಡಿತ್ತು.

ತೆಲುಗಿನ ಸಿನಿಮಾಗಳಷ್ಟೇ ಅಲ್ಲದೆ, ಬಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆಯ ಫೈಟರ್‌ ಸಿನಿಮಾಕ್ಕೂ ಹನುಮಾನ್‌ ಟಕ್ಕರ್‌ ನೀಡಿತ್ತು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಹನುಮಾನ್‌ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಬಹುಪರಾಕ್‌ ಸಿಕ್ಕಿತ್ತು. ಭಾರತದ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ ಸೇರಿ ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲೂ ಸದ್ದು ಮಾಡಿತ್ತು.

ಹನುಮಾನ್ ನಮ್ಮ ದೇವರು. ಇದೊಂದು ಫ್ಯಾಂಟಸಿ ಮೂವೀ. ಇದು ಹನುಮಾನ್ ಬಗೆಗಿನ ಸಿನಿಮಾ ಅಲ್ಲ‌. ಒಂದು ಹುಡುಗನಿಗೆ ಹನುಮನ ಪವರ್ ಬಂದಾಗ ಏನಾಗುತ್ತದೆ ಅನ್ನೋದು ಸಿನಿಮಾ. ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ ಎಂದು ಚಿತ್ರತಂಡ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹೇಳಿಕೊಂಡಿತ್ತು. ಚಿತ್ರಮಂದಿರದಕ್ಕೆ ಬಂದ ಬಳಿಕ ಅದು ನಿಜವಾಯ್ತು. ಹೀಗೆ ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದ ಇದೇ ಹನುಮಾನ್‌ ಈಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ.

ಯಾವ ಒಟಿಟಿಯಲ್ಲಿ ಹನುಮಾನ್?

ಎಲ್ಲ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಬಿಡುಗಡೆಯಾದ 3 ವಾರಗಳಿಗೆ ಒಟಿಟಿ ಅಂಗಳಕ್ಕೆ ಹನುಮಾನ್‌ ಸಿನಿಮಾ ಆಗಮಿಸಬೇಕಿತ್ತು. ಆದರೆ, ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕ ಹಿನ್ನೆಲೆಯಲ್ಲಿ ಒಟಿಟಿ ದಿನಾಂಕ ಮುಂದೂಡಿ, ಚಿತ್ರಮಂದಿರದಲ್ಲಿಯೇ ಸಿನಿಮಾ ಮುಂದೂಡಿತು. ಇದೀಗ ಈ ಚಿತ್ರ ಒಟಿಟಿಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ. ಮಾರ್ಚ್‌ 2ರಂದು ಜೀ 5ನಲ್ಲಿ ಹನುಮಾನ್‌ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ಮೂಲಕ ಸಿನಿಮಾ ಬಿಡುಗಡೆಯಾದ 55 ದಿನಕ್ಕೆ ಒಟಿಟಿಗೆ ಈ ಚಿತ್ರ ಆಗಮಿಸಿದಂತಾಗಲಿದೆ. ಇನ್ನು ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

ಹನುಮಾನ್‌ ಗಳಿಸಿದ ಕಲೆಕ್ಷನ್‌ ಎಷ್ಟು?

ಜ. 12ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಹನುಮಾನ್‌ ಸಿನಿಮಾ ಬಿಡುಗಡೆಯಾಗಿತ್ತು. ಆ ಪೈಕಿ ಭಾರತದಲ್ಲಿ 194 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತ್ತು. ಒಟ್ಟಾರೆ ಕಲೆಕ್ಷನ್‌ ಲೆಕ್ಕ ಹಾಕುವುದಾದರೆ, 300 ಪ್ಲಸ್‌ ಕೋಟಿ ರೂಪಾಯಿಯನ್ನು ಈ ಸಿನಿಮಾ ಬಾಚಿಕೊಂಡಿದೆ. ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಅಮೃತಾ ಅಯ್ಯರ್ ಮತ್ತು ವಿನಯ್ ರೈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತ ಇದೇ ಸಿನಿಮಾ ಅಭಿಮಾನಿಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ 'ಹನುಮಾನ್' ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆಯೂ ನಿರ್ದೇಶ ಪ್ರಶಾಂತ್ ವರ್ಮಾ ಘೋಷಣೆ ಮಾಡಿದ್ದರು. ಆ ಚಿತ್ರಕ್ಕೆ 'ಜೈ ಹನುಮಾನ್' ಎಂಬ ಶೀರ್ಷಿಕೆಯನ್ನೂ ಅಂತಿಮ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ