Guntur Kaaram Review: ಮಹೇಶ್ ಬಾಬು ‘ಗುಂಟೂರು ಖಾರಂ’ ನೋಡಿದ ಪ್ರೇಕ್ಷಕನಿಗೆ ಕಣ್ಣುರಿ! ನಿದ್ದೆ ಮಾಡಿ ಎದ್ದು ಬಂದವ್ರೇ ಹೆಚ್ಚಂತೆ
Jan 12, 2024 03:28 PM IST
Guntur Kaaram Review: ಮಹೇಶ್ ಬಾಬು ‘ಗುಂಟೂರು ಖಾರಂ’ ನೋಡಿದ ಪ್ರೇಕ್ಷಕನಿಗೆ ಕಣ್ಣುರಿ! ನಿದ್ದೆ ಮಾಡಿ ಎದ್ದು ಬಂದವ್ರೇ ಹೆಚ್ಚಂತೆ
- ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ಸಂಸಾರದಿಂದ ದೂರವಾದ ನಾಯಕ ಬಂಡಾಯವೆದ್ದು ಮನೆಯವರ ವಿರುದ್ಧ ತಿರುಗಿ ಬೀಳುವುದೇ ಸಿನಿಮಾದ ಒಟ್ಟಾರೆ ಕಥೆ. ಶೀರ್ಷಿಕೆಗೆ ತಕ್ಕಂತೆ ಗುಂಟೂರು ಭಾಗದಲ್ಲಿನ ಆಡುಭಾಷೆ ಸೊಗಡು ಈ ಚಿತ್ರದ ಹೈಲೈಟ್. ರಮಣನಾಗಿ ನಟ ಮಹೇಶ್ ಬಾಬು ಹೊಸರೀತಿ ಕಂಡರೂ, ಈ ಹಿಂದಿನ ಗತ್ತೇ ಕಣ್ಣಮುಂದೆ ಬಂದು ನಿಲ್ಲುತ್ತೆ. ಗುಂಟೂರು ಖಾರಂ ಪ್ರೇಕ್ಷಕ ವಿಮರ್ಶೆ ಇಲ್ಲಿದೆ.
Guntur Kaaram Twitter Review: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ತೆರೆಕಂಡಿದ್ದ ಖಲೇಜಾ ಸಿನಿಮಾ ಹೇಳಿಕೊಳ್ಳುವಂಥ ಗಳಿಕೆ ಕಂಡಿರಲಿಲ್ಲ. ಆದರೆ, ಅಭಿಮಾನಿಗಳ ಮನಸ್ಸಲ್ಲಿ ಇಂದಿಗೂ ಉಳಿದಿದೆ. ಈಗ ಇದೇ ಜೋಡಿಯ ಹೊಸ ಸಿನಿಮಾ ಗುಂಟೂರು ಖಾರಂ ಇಂದು (ಜ. 12) ಬಿಡುಗಡೆ ಆಗಿದೆ. ಮೂಲ ತೆಲುಗಿನಲ್ಲಿ ಮಾತ್ರ ಬಿಡುಗಡೆ ಆಗಿರುವ ಈ ಸಿನಿಮಾ, ಆರಂಭದಿಂದಲೂ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿತ್ತು. ಅಭಿಮಾನಿ ವಲಯದಲ್ಲಿಯೂ ನಿರೀಕ್ಷೆಗಳು ಗರಿಗೆದರಿದ್ದವು.
13 ವರ್ಷಗಳ ಬಳಿಕ ನಿರ್ದೇಶಕ ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಒಂದಾಗ್ತಾರೆ ಎಂದಾಗ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದ್ದರೂ, ಇದೀಗ ಆ ನಿರೀಕ್ಷೆ ಮಟ್ಟ ತಲುಪುವಲ್ಲಿ ಸಿನಿಮಾ ಸೋತಿದೆ ಎಂದೇ ಸಿನಿಮಾ ನೋಡಿದ ಪ್ರೇಕ್ಷಕ ಹೇಳುತ್ತಿದ್ದಾನೆ. ಕಮರ್ಷಿಯಲ್ ಎಂಟರ್‌ಟೈನರ್ ಆಗಿ ತೆರೆಕಂಡಿರುವ ಈ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸಿದ್ದಾರೆ. ತೆಲುಗು ಸ್ಟೈಲ್‌ನಲ್ಲಿ ಮಾಸ್ ಅವತಾರದಲ್ಲಿಯೇ ಮಹೇಶ್ ಬಾಬು ಮಿಂಚು ಹರಿಸಿದ್ದಾರೆ. ಆದರೆ, ಆ ಸ್ಟೈಲ್ ಎಲ್ಲರಿಗೂ ಇಷ್ಟವಾಯ್ತಾ? ಚಿತ್ರ ಆ ನಿರೀಕ್ಷೆ ಮುಟ್ಟಿತಾ?
ತನ್ನವರ ವಿರುದ್ಧವೇ ನಾಯಕನ ಬಂಡಾಯ
ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ಸಂಸಾರದಿಂದ ದೂರವಾದ ನಾಯಕ ಬಂಡಾಯವೆದ್ದು ಮನೆಯವರ ವಿರುದ್ಧ ತಿರುಗಿ ಬೀಳುವುದೇ ಸಿನಿಮಾದ ಒಟ್ಟಾರೆ ಕಥೆ. ಶೀರ್ಷಿಕೆಗೆ ತಕ್ಕಂತೆ ಗುಂಟೂರು ಭಾಗದಲ್ಲಿನ ಆಡುಭಾಷೆಯ ಸಂಭಾಷಣೆ ಈ ಚಿತ್ರದ ಹೈಲೈಟ್. ರಮಣನಾಗಿ ನಟ ಮಹೇಶ್ ಬಾಬು ಹೊಸರೀತಿ ಕಂಡರೂ, ಈ ಹಿಂದಿನ ಗತ್ತೇ ಕಣ್ಣಮುಂದೆ ಬಂದು ನಿಲ್ಲುತ್ತೆ. ಶ್ರೀಲೀಲಾ ಚೆಂದನೆಯ ಡಾನ್ಸ್‌ಗಷ್ಟೇ ಸೀಮಿತವಾಗಿದ್ದಾರೆ. ಪ್ರಕಾಶ್ ರಾಜ್, ಜಯರಾಂ, ರಮ್ಯಕೃಷ್ಣ, ಈಶ್ವರಿ ರಾವ್, ಮುರಳಿಶರ್ಮ, ಜಗಪತಿ ಬಾಬು, ರಾವ್ ರಮೇಶ್, ಅಜಯ್ ಘೋಷ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಇದು ತ್ರಿವಿಕ್ರಮ್ ಸಿನಿಮಾನಾ?
ಚಿತ್ರದಲ್ಲಿ ಸಂಗೀತ ನಿರ್ದೇಶಕ ತಮನ್ ಅವರ ಹಿನ್ನೆಲೆ ಸಂಗೀತ ಸೋತಿದೆ. ಎರಡು ಹಾಡುಗಳನ್ನು ಬಿಟ್ಟರೆ ಸಂಗೀತ ನಿರ್ದೇಶಕರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಲ್ಲ. ಛಾಯಾಗ್ರಾಹಕರಾದ ಪಿ.ಎಸ್. ವಿನೋದ್ ಮತ್ತು ಮನೋಜ್ ಪರಮಹಂಸ ಕೆಲಸ ಅಚ್ಚುಕಟ್ಟಾಗಿದೆ. ಆದರೆ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮೋಡಿ ಮಾಡಿಲ್ಲ. ಇದು ಅವರದೇ ಸಿನಿಮಾನಾ? ಎಂಬಷ್ಟರ ಮಟ್ಟಿಗೆ ಚಿತ್ರ ಕಳಪೆಯಾಗಿ ಮೂಡಿಬಂದಿದೆ ಎಂದು ಸಿನಿಮಾ ನೋಡಿದ ಪ್ರೇಕ್ಷಕ ಹೇಳುತ್ತಿದ್ದಾನೆ.
ನೆಗೆಟಿವ್ ವಿಮರ್ಶೆಗಳೇ ಹೆಚ್ಚು
ಗುಂಟೂರು ಖಾರಂ ಸಿನಿಮಾ ನೋಡಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾ ವೇದಿಕೆ Xನಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅವರ ಪಕ್ಕಾ ಅಭಿಮಾನಿಗಳು ಪೈಸಾ ವಸೂಲ್ ಸಿನಿಮಾ ಎಂದು ಕೊಂಡಾಡುತ್ತಿದ್ದರೆ, ಫ್ಯಾಮಿಲಿ ಆಡಿಯೆನ್ಸ್ ಎವರೇಜ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಈ ನಡುವೆ ಇನ್ನು ಕೆಲವರು ಅತೀ ಕೆಟ್ಟ ಸಿನಿಮಾ ಎಂದೂ ಹೇಳುತ್ತಿದ್ದಾರೆ.
ಹೀಗಿವೆ ಆಡಿಯೆನ್ಸ್ ವಿಮರ್ಶೆ
- "ಸಿನಿಮಾದಲ್ಲಿ ಏನೂ ಇಲ್ಲ, ಸಿನಿಮಾ ಮೂಡಿ ಬಂದ ರೀತಿಯೂ ಸರಿಯಿಲ್ಲ.. ತುಂಬ ಕೆಟ್ಟದಾಗಿ ಸಿನಿಮಾ ಮಾಡಿದ್ದಾರೆ.
- ಇದೊಂದು ಕೇವಲ ಸಾಮಾನ್ಯ ಸಿನಿಮಾ. ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋಗಬೇಡಿ. ನಿರಾಸೆ ಖಂಡಿತ.
- ಲಾಜಿಕ್ ಇಲ್ಲದ ಲವ್, ಬೇಡದೇ ಬಂದು ಕಾಟ ಕೊಡುವ ಹಾಸ್ಯ ದೃಶ್ಯಗಳು ಸಿನಿಮಾದಲ್ಲಿ ತುಂಬಿವೆ. ಮಹೇಶ್ ಬಾಬು ಎಂಟ್ರಿ ಸೀನ್ ಚೆನ್ನಾಗಿಲ್ಲ
- ಗುಂಟೂರು ಖಾರಂ ಸಿನಿಮಾ ಒಂದು ಫ್ಯಾಮಿಲಿ ಕುಳಿತು ನೋಡುವ ಸಿನಿಮಾ, ಕ್ಲಾಸ್ ಜತೆಗೆ ಮಾಸ್ ಎಲಿಮೆಂಟ್ಸ್ ಇವೆ. ಮಹೇಶ್ ಬಾಬು ನಟನೆ ಸೂಪರ್.