ಕಾಮಿಡಿ, ಎಮೋಷನ್ ಮೂಲಕ ಮನಗೆದ್ದ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ; ಮೋಡಿ ಮಾಡ್ತು ಶೆಟ್ಟಿ, ಪೊಲಿಶೆಟ್ಟಿ ಜೋಡಿ; ಟ್ವಿಟರ್ ರಿವ್ಯೂ
Sep 07, 2023 07:41 AM IST
ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ನವೀನ್ ಪೊಲಿಶೆಟ್ಟಿ
- ಶೀರ್ಷಿಕೆ, ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಮಿಡಿ, ಎಮೋಷನ್ ದ್ರಶ್ಯ ಸಂಯೋಜನೆಯ ಈ ಸಿನಿಮಾ ಬಗ್ಗೆ ಸಾಗರೋತ್ತರ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದಾರೆ. ಈ ಸಿನಿಮಾದ ಟ್ವಿಟರ್ ರಿವ್ಯೂ ಇಲ್ಲಿದೆ.
ಶೀರ್ಷಿಕೆಯ ಮೂಲಕ ಗಮನ ಸೆಳೆದಿದ್ದ ಬಹುನಿರೀಕ್ಷಿತ ಟಾಲಿವುಡ್ ಸಿನಿಮಾ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಇಂದು ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಪ್ರಪಂಚದಾದ್ಯಂತ ಇಂದು ಸಿನಿಮಾ ಬಿಡುಗಡೆಯಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸಿನಿಮಾದ ಬಗ್ಗೆ ಪಾಸಿಟಿವ್ ರಿಯಾಕ್ಷನ್ ಕೇಳಿ ಬರುತ್ತಿದೆ.
ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಹಾಗೂ ಜಾತಿರತ್ನಾಲು ಸಿನಿಮಾ ಖ್ಯಾತಿಯ ನವೀನ್ ಪೊಲಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪಿ. ಮಹೇಶ್ ಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುವಿ ಪ್ರೊಡಕ್ಷನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿತ್ತು.
ಸಿನಿಮಾದ ಟ್ರೇಲರ್‌ಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಮೂಡುವಂತೆ ಮಾಡಿತ್ತು. ಇದೀಗ ಸಿನಿಮಾ ಕೂಡ ಮೆಚ್ಚುಗೆಯ ಹಾದಿಯಲ್ಲಿ ಸಾಗುತ್ತಿದೆ.
ಕಳೆದೆರಡು ದಿನಗಳ ಹಿಂದೆ ಸಿನಿಮಾದ ಸೆಲೆಬ್ರಿಟಿ ಷೋ ಆಯೋಜಿಸಿತ್ತು ಚಿತ್ರತಂಡ. ಈ ಸಿನಿಮಾ ನೋಡಿದ ಮೆಗಾಸ್ಟಾರ್ ಚಿರಂಜೀವಿ, ಮಹೇಶ್‌ಬಾಬು ಮೊದಲಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಹೀಗಿದೆ ಟ್ವಿಟರ್ ಪ್ರತಿಕ್ರಿಯೆ
ಇದೊಂದು ಹಾಸ್ಯಮಯ ಸಿನಿಮಾವಾಗಿದ್ದು ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ʼಮಾಡರ್ನ್ ಇಂಡಿಯನ್ ಸಿನಿಮಾಗಳಲ್ಲೇ ಇದೊಂದು ಬೆಸ್ಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಸಿನಿಮಾದ ಆರಂಭದಿಂದಲೂ ನಕ್ಕು ನಕ್ಕು ಸಾಕಾಗುತ್ತದೆ. ಇದೊಂದು ಶುದ್ಧ ಹಾಸ್ಯದ ಸಿನಿಮಾ. ಸಂಭಾಷಣೆಗಳನ್ನು ಕೂಡ ಬುದ್ಧಿವಂತಿಕೆಯಿಂದ ಬರೆದಿದ್ದಾರೆ. ಸ್ಟೋರಿ, ಸ್ಕ್ರೀನ್ ಪ್ಲೇ ಎಲ್ಲವೂ ಮನಮುಟ್ಟುವಂತಿದೆ. ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟನೆಯೂ ಅದ್ಭುತ. ಒಂದೊಳ್ಳೆ ಸಿನಿಮಾ ಮೂಲಕ ಆಕೆ ಕಮ್‌ಬ್ಯಾಕ್ ಮಾಡಿದ್ದಾರೆ. ನವೀನ್ ಪೊಲಿಶೆಟ್ಟಿ ನಟನೆ, ಹಾಸ್ಯ ಎಲ್ಲವೂ ಅದ್ಭುತ, ಇವರಿಬ್ಬರ ಕಾಂಬಿನೇಷನ್ ಅಂತೂ ಸೂಪರ್ʼ ಎಂದು ಆಸ್ಟ್ರೇಲಿಯನ್ ತೆಲುಗು ಫಿಲ್ಮ್ ಎಂಬ ಹೆಸರಿನ ಟ್ವೀಟ್ ಪುಟವೊಂದು ಅಮೆರಿಕದ ಗೆಳೆಯನ ರಿಯಾಕ್ಷನ್ ಪೋಸ್ಟ್ ಮಾಡಿದೆ. ಅಮೆರಿಕದಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸ್ಟ್ಯಾಂಡಪ್ ಕಾಮಿಡಿಯನ್...
ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾದಲ್ಲಿ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ನವೀನ್ ಪೊಲಿಶೆಟ್ಟಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕೂಡ ಆಗಿರುತ್ತಾರೆ. ಅನುಷ್ಕಾ ಈ ಸಿನಿಮಾದಲ್ಲಿ ಅನ್ವಿತಾ ಎಂಬ ಶೆಫ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ನವೀನ್ ಪೊಲಿಶೆಟ್ಟಿ ಪಾತ್ರ ಹಾಗೂ ಅವರ ಕಾಮಿಡಿ ಟೈಮಿಂಗ್ ಈ ಸಿನಿಮಾಗೆ ಪ್ಲಸ್ ಪಾಯಿಂಟ್ ಎನ್ನುತ್ತಿದ್ದಾರೆ ಸಾಗರೋತ್ತರ ಪ್ರೇಕ್ಷಕರು.
ಸಿನಿಮಾ ಆರಂಭವಾದ ಹದಿನೈದು ನಿಮಿಷದ ನಂತರ ನವೀನ್ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಮೊದಲ ದೃಶ್ಯದಿಂದ ಅಂತ್ಯದವರೆಗೂ ತಮ್ಮ ಪಂಚ್ ಡೈಲಾಗ್‌ಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸುತ್ತಾರೆ ಎನ್ನಲಾಗುತ್ತಿದೆ. ಅನುಷ್ಕಾ ಪಾತ್ರ ಸಂಪೂರ್ಣ ಭಾವನಾತ್ಮಕವಾಗಿರಲಿದೆ ಎನ್ನಲಾಗಿದೆ.
ಮೊದಲ ಹದಿನೈದು ಚಿತ್ರಗಳು ಅನುಷ್ಕಾ ಪಾತ್ರವನ್ನು ಲಂಡನ್‌ನಲ್ಲಿ ಕೆಲಸ ಮಾಡುವ ಬಾಣಸಿಗ ಅನ್ವಿತಾ ಆಗಿ ಪರಿಚಯಿಸುವುದು ಮತ್ತು ನಂತರ ಬಲವಾದ ಕಾರಣದಿಂದ ತಾಯಿ (ಜಯಸುಧಾ) ಅವರೊಂದಿಗೆ ಭಾರತಕ್ಕೆ ಬರುವುದು ಮುಂತಾದ ದೃಶ್ಯಗಳೊಂದಿಗೆ ಮೊದಲ ಹದಿನೈದು ಚಿತ್ರಗಳು ನಿಧಾನವಾಗಿ ಓಡುತ್ತವೆ ಎಂದು ಸಾಗರೋತ್ತರ ಪ್ರೇಕ್ಷಕರು ಟ್ವೀಟ್ ಮಾಡುತ್ತಿದ್ದಾರೆ.
ಎಮೋಷನ್ ಜೊತೆಗೆ ಕಾಮಿಡಿ...
ಮೊದಲಾರ್ಧದಲ್ಲಿ ಕಾಮಿಡಿಯೊಂದಿಗೆ ಓಡಿದ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಎಮೋಷನ್ ಜೊತೆಗೆ ಕಾಮಿಡಿ ಮಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ಬಾಡಿಗೆ ತಾಯ್ತನಕ್ಕಾಗಿ ನವೀನ್‌ನನ್ನು ಅನುಷ್ಕಾ ಒಪ್ಪಿಸುವ ಹಾಗೂ ನವೀನ್ ಆಕೆಯನ್ನು ಅರ್ಥ ಮಾಡಿಕೊಳ್ಳುವ ದೃಶ್ಯವನ್ನು ನಿರ್ದೇಶಕರು ಮನವರಿಕೆಯಾಗುವಂತೆ ತೋರಿಸಿದ್ದಾರೆ ಎನ್ನಲಾಗಿದೆ. ನವೀನ್ ಮತ್ತು ಅವರ ತಂದೆ ಮುರಳಿಶರ್ಮಾ ಅವರ ಪಾತ್ರದ ಹಿನ್ನೆಲೆಯ ದೃಶ್ಯಗಳು ಉಲ್ಲಾಸಕರವಾಗಿ ಕೆಲಸ ಮಾಡಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.