logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಮೋಹನ್‌ ಬಾಬು ಮಕ್ಕಳ ನಡುವೆ ಆಸ್ತಿಗಾಗಿ ಕಿತ್ತಾಟ; ಮಂಚು ಮನೋಜ್‌ ಮಂಚು ವಿಷ್ಣು ಮಗಳು ಲಕ್ಷ್ಮಿಗೆ ಆಸ್ತಿ ಹಂಚಿಕೆ?

Tollywood News: ಮೋಹನ್‌ ಬಾಬು ಮಕ್ಕಳ ನಡುವೆ ಆಸ್ತಿಗಾಗಿ ಕಿತ್ತಾಟ; ಮಂಚು ಮನೋಜ್‌ ಮಂಚು ವಿಷ್ಣು ಮಗಳು ಲಕ್ಷ್ಮಿಗೆ ಆಸ್ತಿ ಹಂಚಿಕೆ?

Rakshitha Sowmya HT Kannada

Jul 14, 2023 10:43 PM IST

google News

ಮಕ್ಕಳಿಗೆ ಆಸ್ತಿ ಹಂಚಿದ ಮೋಹನ್‌ ಬಾಬು

  • ಮಂಚು ಮನೋಜ್‌ ಹಾಗೂ ವಿಷ್ಣು ಈಗಾಗಲೇ ಬೇರೆ ಬೇರೆ ಮನೆ ಮಾಡಿ ಬದುಕುತ್ತಿದ್ದಾರೆ. ಇತ್ತೀಚೆಗೆ ಮನೋಜ್‌ ಎರಡನೇ ಮದುವೆ ಆಗಿದ್ದರು. ಮೊದಲಿನಿಂದಲೇ ಅಣ್ಣ ತಮ್ಮಂದಿರ ನಡುವೆ ಆಸ್ತಿಗಾಗಿ ಗಲಾಟೆ ನಡೆಯುತ್ತಲೇ ಇದೆ ಎನ್ನಲಾಗಿದೆ.

ಮಕ್ಕಳಿಗೆ ಆಸ್ತಿ ಹಂಚಿದ ಮೋಹನ್‌ ಬಾಬು
ಮಕ್ಕಳಿಗೆ ಆಸ್ತಿ ಹಂಚಿದ ಮೋಹನ್‌ ಬಾಬು

ಟಾಲಿವುಡ್‌ ನಟ ಮೋಹನ್‌ ಬಾಬು ಯಮದೊಂಗ, ಪೆದ್ದರಾಯುಡು, ಚಕ್ರವರ್ತಿ, ಅಣ್ಣಮಯ್ಯ, ಯುದ್ಧಭೂಮಿ, ಕೊಂಡವೀಟಿ ದೊಂಗ ಸೇರಿ ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಕಲೆಕ್ಷನ್‌ ಕಿಂಗ್‌ ಎಂದೇ ಗುರುತಿಸಿಕೊಂಡಿರುವ ಮೋಹನ್‌ ಬಾಬು ಹೈದರಾಬಾದ್‌ ಹೊರ ವಲಯದಲ್ಲಿ ಅರಮನೆಯಂಥ ಮನೆಯನ್ನು ಕಟ್ಟಿಸಿಕೊಂಡು ಕುಟುಂಬದೊಂದಿಗೆ ಬದುಕುತ್ತಿದ್ದಾರೆ.

ಮೂವರು ಮಕ್ಕಳು

ಮೋಹನ್‌ ಬಾಬು ಅವರಿಗೆ ಮೂವರು ಮಕ್ಕಳು ಮಂಚು ಲಕ್ಷ್ಮಿ, ಮಂಚು ಮನೋಜ್‌ ಹಾಗೂ ಮಂಚು ವಿಷ್ಣು . ಈ ಮೂವರಿಗೂ ಚಿತ್ರರಂಗದಲ್ಲಿ ತಂದೆಯಂತೆ ಹೆಸರು ದೊರೆಯಲಿಲ್ಲ. ಮಂಚು ಲಕ್ಷ್ಮಿ ತೆಲುಗು ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೂ ವಿಷ್ಣು ಹಾಗೂ ಮನೋಜ್‌ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ಧಾರೆ. ಆದರೆ ಯಾವ ಸಿನಿಮಾಗಳೂ ಇವರಿಗೆ ಸ್ಟಾರ್‌ ಪಟ್ಟ ತಂದುಕೊಟ್ಟಿಲ್ಲ. ಆದರೆ ಈಗ ಮೂವರೂ ಮಕ್ಕಳ ನಡುವೆ ಆಸ್ತಿ ವಿವಾದ ತಲೆದೋರಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಹಣದ ಆಸೆಗೆ ಬಿ ಗ್ರೇಡ್‌ ಚಿತ್ರಗಳಲ್ಲಿ ನಟಿಸಿ ಕೆರಿಯರ್‌ ಹಾಳು ಮಾಡಿಕೊಂಡ್ರಾ ಲಾಲಿ ಸಿನಿಮಾ ನಟ ಹರೀಶ್‌ ಕುಮಾರ್?

ಮೊದಲಿನಿಂದಲೂ ಆಸ್ತಿಗೆ ಗಲಾಟೆ

ಮಂಚು ಮನೋಜ್‌ ಹಾಗೂ ವಿಷ್ಣು ಈಗಾಗಲೇ ಬೇರೆ ಬೇರೆ ಮನೆ ಮಾಡಿ ಬದುಕುತ್ತಿದ್ದಾರೆ. ಇತ್ತೀಚೆಗೆ ಮನೋಜ್‌ ಎರಡನೇ ಮದುವೆ ಆಗಿದ್ದರು. ಮೊದಲಿನಿಂದಲೇ ಅಣ್ಣ ತಮ್ಮಂದಿರ ನಡುವೆ ಆಸ್ತಿಗಾಗಿ ಗಲಾಟೆ ನಡೆಯುತ್ತಲೇ ಇದೆ ಎನ್ನಲಾಗಿದೆ. ಇತ್ತೀಚೆಗೆ ಮೋಹನ್‌ ಬಾಬು ತಮ್ಮ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಮೂವರೂ ಮಕ್ಕಳಿಗೂ ಹಂಚಿದ್ದಾರಂತೆ. ಮೋಹನ್‌ ಬಾಬು ಗುರುವಾರ ಹೈದರಾಬಾದ್‌ನ ಷಾದ್ ನಗರ್‌ ರಿಜಿಸ್ಟರ್ ಆಫೀಸ್‌ ಬಳಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ಧಾರೆ. ಅವರನ್ನು ಮಾತನಾಡಿಸಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆಗಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

ರಿಜಿಸ್ಟರ್‌ ಆಫೀಸ್‌ಗೆ ತೆರಳಿದ್ದ ಮೋಹನ್‌ ಬಾಬು

ಸದ್ಯಕ್ಕೆ ಮೋಹನ್‌ ಬಾಬು ಅವರ ಆಸ್ತಿಯಲ್ಲಿ ವಿದ್ಯಾನಿಕೇತನ್‌ ಶಾಲೆಯನ್ನು ಕಿರಿಯ ಮಗ ವಿಷ್ಣುವಿಗೆ ನೀಡಿದ್ದು, ಫಿಲ್ಮ್‌ ನಗರದಲ್ಲಿರುವ ಮನೆಯೊಂದನ್ನು ಮಂಚು ಲಕ್ಷ್ಮಿಗೆ ನೀಡಿದ್ದಾರೆ. ಮನೋಜ್‌ ಹೆಸರಿಗೆ ಒಂದಿಷ್ಟು ಆಸ್ತಿ ಬರೆಯಲು ಷಾದ್‌ ನಗರ್‌ ರಿಜಿಸ್ಟರ್‌ ಆಫೀಸಿಗೆ ತೆರಳಿದ್ದರು ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ. ಇತ್ತೀಚೆಗೆ ಮಂಚು ಮನೋಜ್‌ ಮದುವೆ ಸಮಯದಲ್ಲಿ ಲಕ್ಷ್ಮಿ ಮಾತ್ರ ಮೊದಲೇ ತೆರಳಿದ್ದರು. ಆದರೆ ವಿಷ್ಣು ಮಾತ್ರ ಕೊನೆ ಗಳಿಗೆಯಲ್ಲಿ ಬಂದು ಹೋಗಿದ್ದನ್ನು ವಿಡಿಯೋಗಳಲ್ಲಿ ಕಾಣಬಹುದು. ಲಕ್ಷ್ಮಿ ಕೂಡಾ ಸಹೋದರ ವಿಷ್ಣು ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಈಗಲಾದರೂ ಆಸ್ತಿ ವಿವಾದ ತಣ್ಣಗಾಗುವುದಾ, ಮತ್ತೆ ಮುಂದುವರೆಯುವುದಾ ಕಾದು ನೋಡಬೇಕು.

ಮಂಚು ಲಕ್ಷ್ಮಿ ತಮ್ಮ ಹೆಸರಿನಲ್ಲಿ ಒಂದು ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು ಬ್ಯೂಟಿ, ಕುಕಿಂಗ್‌, ಟ್ರಾವೆಲ್‌ ಸೇರಿದಂತೆ ಇನ್ನಿತರ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಾ ಬಂದಿದ್ಧಾರೆ. ಇದೇ ಚಾನೆಲ್‌ನಲ್ಲಿ ತಮ್ಮ ತಂದೆಯ ಬಂಗಲೆಯನ್ನು ಕೂಡಾ ತೋರಿಸಿದ್ದರು. ಮಂಚು ಮನೋಜ್‌ ಮದುವೆ ವಿಡಿಯೋವನ್ನು ಕೂಡಾ ಇದೇ ಯೂಟ್ಯೂಬ್‌ ವಿಡಿಯೋದಲ್ಲಿ ಹಂಚಿಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ