Siddharth: ಕರ್ನಾಟಕದ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ ಸಿದ್ಧಾರ್ಥ್, ತೆಲುಗು ಕಾರ್ಯಕ್ರಮದಲ್ಲಿ ಕಣ್ಣಿರಿಟ್ಟ ಬೊಮ್ಮರಿಲ್ಲು ನಟ
Oct 04, 2023 09:10 AM IST
ಚಿತ್ತ ಚಿತ್ರದಲ್ಲಿ ಸಿದ್ಧಾರ್ಥ್
- Actor Siddharth cries: ಹೈದರಾಬಾದ್‌ನಲ್ಲಿ ಚಿತ್ತ ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ತಮಿಳುನಟ ಸಿದ್ಧಾರ್ಥ್ ಭಾವುಕರಾಗಿದ್ದಾರೆ. ನನ್ನ ಸಿನಿಮಾವನ್ನು ತೆಲುಗಿನವರು ನೋಡೋದಿಲ್ಲ ಎಂಬ ಅಭಿಪ್ರಾಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ತಮಿಳು ನಟ ಸಿದ್ಧಾರ್ಥ್‌ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರರ ಗುಂಪೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದು, ಈ ಘಟನೆಯ ಕುರಿತು ಬಹುಭಾಷಾ ನಟ ಪ್ರಕಾಶ್ ರಾಜ್, ಡಾ. ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಜನರು ಖೇದ ವ್ಯಕ್ತಪಡಿಸಿದ್ದರು. ಈ ಘಟನೆಯಿಂದ ನಟ ಸಿದ್ಧಾರ್ಥ್ ತೀವ್ರ ಬೇಸರವಾಗಿದ್ದು, ಈ ಘಟನೆಯ ಕುರಿತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಚಿತ್ತ ಸಿನಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಸಿದ್ಧಾರ್ಥ್ ನಟನೆಯ ಚಿತ್ತ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡದಲ್ಲಿ ಚಿಕ್ಕು ಹೆಸರಿನಲ್ಲಿ, ತೆಲುಗಿನಲ್ಲಿ ಚಿತ್ತ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಇವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು. "ಕರ್ನಾಟಕದಲ್ಲಿ ಪ್ರೆಸ್‌ಮೀಟ್ ಮಾಡಿದ ಸಂದರ್ಭದಲ್ಲಿ ನನ್ನನ್ನು ಗೆಟ್‌ಔಟ್ ಮಾಡಿದರು. ಈ ಘಟನೆಯ ಬಳಿಕ ಸಾಕಷ್ಟು ಜನರು ಸಾರಿ ಕೇಳಿದರು, ಕೆಲವರು ಥ್ಯಾಂಕ್ಸ್ ಹೇಳಿದರು. ಯಾಕೆಂದು ಗೊತ್ತಿಲ್ಲ. ಸಿನಿಮಾದ ನಟನಾಗಿ, ಸಿನಿಮಾದ ನಿರ್ಮಾಪಕನಾಗಿ ಆ ಸಿನಿಮಾದ ಕುರಿತು ಮಾತನಾಡಲು ನನಗೆ ಅವಕಾಶ ದೊರಕಲಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವೇದಿಕೆ ಮೇಲೆ ಕಣ್ಣೀರು ಹಾಕಿದ ನಟ
ಚಿನ್ನ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಸಿದ್ಧಾರ್ಥ್ ವೇದಿಕೆಯಲ್ಲಿ ಭಾವುಕರಾದರು. "ಇಂಥ ಸಿನಿಮಾ ನೋಡಿಲ್ಲ ಎಂದು ತಮಿಳಿನ ರೆಡ್ ಜಾಯಿಂಟ್ ಸಿನಿಮಾ ಹಕ್ಕು ಖರೀದಿ ಮಾಡಿದ್ರು. ಮಲಯಾಳಂನಲ್ಲಿ ಗೋಕುಲಂ ಗೋಪಾಲನ್ ಅವರು ಖರೀದಿ ಮಾಡಿದರು. ಕೆಜಿಎಫ್ ನಿರ್ಮಾಣ ಮಾಡಿದ ತಂಡದವರು ನನ್ನ ಸಿನಿಮಾ ಖರೀದಿಸಿದ್ದರು. ತೆಲುಗಿನಲ್ಲಿ ಸಿದ್ಧಾರ್ಥ್ ಸಿನಿಮಾನ ಯಾರು ನೋಡ್ತಾರೆ ಎಂದು ಹೇಳ್ತಾರೆ" ಎಂದು ವೇದಿಕೆಯಲ್ಲಿ ನಟ ಸಿದ್ಧಾರ್ಥ್ ಕಣ್ಣೀರು ಹಾಕಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ತೆಲುಗಿನಲ್ಲಿ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿತ್ತು. ಸಿದ್ಧಾರ್ಥ್ ಸಿನಿಮಾನ ಯಾರು ನೋಡ್ತಾರೆ ಎಂಬ ಕೆಲವರ ಅಭಿಪ್ರಾಯಕ್ಕೆ ನನಗೆ ಥಿಯೇಟರ್ ಸರಿಯಾಗಿ ಸಿಗಲಿಲ್ಲ. ಈ ಸಂದರ್ಭದಲ್ಲಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಏಷಿಯನ್ ಸಿನಿಮಾದ ಸುನಿಲ್ ಜತೆಗೆ ನಿಂತರು ಎಂದು ಸಿದ್ಧಾರ್ಥ್ ಹೇಳಿದ್ದಾರೆ. "ಪ್ರೇಕ್ಷಕರೇ ಪ್ರಭುಗಳು, ನೀವು ನನ್ನನ್ನು ಸ್ಟಾರ್ ಮಾಡಿದ್ದು. ಬೊಮ್ಮರಿಲ್ಲು, ನುವಸ್ತಾನಂಟೆ ನೇಣೋದ್ದಂಟಾನ ಮುಂತಾದ ಸಿನಿಮಾಗಳಿಗೆ ನೀವು ಪ್ರೀತಿ ತೋರಿಸಿದ್ದೀರಿ" ಎಂದು ಸಿದ್ಧಾರ್ಥ್ ನೆನಪಿಸಿಕೊಂಡರು.
ತೆಲುಗಿನಲ್ಲಿ ಬೊಮ್ಮರಿಲ್ಲು ಮುಂತಾದ ಸೂಪರ್‌ಹಿಟ್ ಚಿತ್ರನ ನೀಡಿದ್ದೇನೆ. ಈಗ ಚಿತ್ತ ಸಿನಿಮಾ ಮುಂದಿದೆ. ಇದು ನಾನು ಈವರೆಗೆ ಮಾಡಿರುವ ಸಿನಿಮಾಗಳಲ್ಲಿಯೇ ಅತ್ಯುತ್ತಮ ಚಿತ್ರ. ನನಗೆ ಇಷ್ಟು ಒಳ್ಳೆಯ ಸಿನಿಮಾ ಮಾಡಲು ಇನ್ನ ಉಸಾಧ್ಯವಿಲ್ಲ. ನಾನು ಒಳ್ಳೆಯ ಸಿನಿಮಾ ನೀಡಿದ್ರೆ ಪ್ರೇಕ್ಷಕರು ನೋಡ್ತಾರೆ ಅನ್ನೋದು ನನ್ನ ನಂಬಿಕೆ. ನಿಮಗೆ ಸಿನಿಮಾದ ಮೇಲೆ ಪ್ರೀತಿ ಇದ್ದರೆ ಈ ಸಿನಿಮಾ ನೋಡಿ. ತೆಲುಗಿನಲ್ಲಿ ಸಿದ್ಧಾರ್ಥನ ಸಿನಿಮಾ ಏಕೆ ನೋಡಬೇಕು ಎಂದುಕೊಂಡರೆ ನೋಡಬೇಡಿ. ಹೀಗಿದ್ದರೆ ನಾನು ಇಲ್ಲಿಗೆ ನನ್ನ ಸಿನಿಮಾ ತರೋದಿಲ್ಲ" ಎಂದು ಭಾವುಕರಾಗಿ ಹೇಳಿದ್ದಾರೆ.