logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ತೆಲುಗು ನಟನ ಜೊತೆ ನಿಹಾರಿಕಾ ಎರಡನೇ ಮದುವೆ; ಸೋಷಿಯಲ್‌ ಮೀಡಿಯಾ ಮೂಲಕ ತರುಣ್‌ ನೀಡಿದ ಸಂದೇಶ ಏನು?

Tollywood News: ತೆಲುಗು ನಟನ ಜೊತೆ ನಿಹಾರಿಕಾ ಎರಡನೇ ಮದುವೆ; ಸೋಷಿಯಲ್‌ ಮೀಡಿಯಾ ಮೂಲಕ ತರುಣ್‌ ನೀಡಿದ ಸಂದೇಶ ಏನು?

HT Kannada Desk HT Kannada

Aug 03, 2023 08:09 AM IST

google News

ನಿಹಾರಿಕಾ ಕೊನಿಡೇಲ ಎರಡನೇ ಮದುವೆ ರೂಮರ್

  • ಬಹಳ ಹಿಂದಿನಿಂದಲೂ ಮೆಗಾ ಫ್ಯಾಮಿಲಿ ಹಾಗೂ ತರುಣ್‌ ನಡುವೆ ಉತ್ತಮ ಒಡನಾಟ ಇದ್ದು ಇದೇ ಕಾರಣದಿಂದ ತರುಣ್‌ ಈಗ ನಿಹಾರಿಕಾ ಕೊನಿಡೇಲ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ನಿಹಾರಿಕಾ ಕೊನಿಡೇಲ ಎರಡನೇ ಮದುವೆ ರೂಮರ್
ನಿಹಾರಿಕಾ ಕೊನಿಡೇಲ ಎರಡನೇ ಮದುವೆ ರೂಮರ್ (PC: Niharika Konidela, Tarun social media)

ಮೆಗಾ ಕುಟುಂಬದ ಮಗಳು ನಿಹಾರಿಕಾ ಕೊನಿಡೇಲ ಇತ್ತೀಚೆಗಷ್ಟೇ ಡಿವೋರ್ಸ್‌ ಘೋಷಿಸಿದ್ದರು. ಮದುವೆ ಆಗಿ ಮೂರು ವರ್ಷ ತುಂಬುವಷ್ಟರಲ್ಲೇ ನಿಹಾರಿಕಾ ಈ ರೀತಿ ಪತಿಯಿಂದ ದೂರಾಗಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಮೆಗಾ ಕುಟುಂಬದ ಕಾಲೆಳೆದಿದ್ದರು. ಆದರೆ ಇದೀಗ ನಿಹಾರಿಕಾ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ತರುಣ್‌ ಜೊತೆ ನಿಹಾರಿಕಾ ಮದುವೆ?

ತೆಲುಗು ಖ್ಯಾತ ನಟನೊಬ್ಬನ ಜೊತೆ ನಿಹಾರಿಕ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದನ್ನು ಕೇಳಿದವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾ ನೀವು ಡಿವೋರ್ಸ್‌ ಪಡೆದದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಟಾಲಿವುಡ್‌ ನಟ ತರುಣ್‌ ಜೊತೆ ನಿಹಾರಿಕಾ ಮದುವೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ತರುಣ್‌ ಬಾಲನಟನಾಗಿ ಕರಿಯರ್‌ ಆರಂಭಿಸಿದವರು. ನಾಯಕನಾಗಿಯೂ ಯಶಸ್ಸು ಕಂಡ ಅವರು ತೆಲುಗು ಮಾತ್ರವಲ್ಲ, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ನಂದಿ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಕೂಡಾ ಪಡೆದಿದ್ದಾರೆ.

ಟಾಲಿವುಡ್‌ನ ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌ ತರುಣ್

ತರುಣ್‌ ಟಾಲಿವುಡ್‌ನಲ್ಲಿ ಚಾಕೊಲೇಟ್‌ ಬಾಯ್‌ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಟಾಲಿವುಡ್‌ನಲ್ಲಿ ಮೋಸ್ಟ್‌ ವಾಂಟೆಡ್‌ ಬ್ಯಾಚುಲರ್‌ ಆಗಿ ಹೆಸರಾಗಿದ್ದಾರೆ. ಬಹಳ ಹಿಂದಿನಿಂದಲೂ ಮೆಗಾ ಫ್ಯಾಮಿಲಿ ಹಾಗೂ ತರುಣ್‌ ನಡುವೆ ಉತ್ತಮ ಒಡನಾಟ ಇದ್ದು ಇದೇ ಕಾರಣದಿಂದ ತರುಣ್‌ ಈಗ ನಿಹಾರಿಕಾ ಕೊನಿಡೇಲ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ನಿಹಾರಿಕಾ ಕುಟುಂಬದವರು ಈ ವಿಚಾರದ ಬಗ್ಗೆ ತುಟಿ ಬಿಚ್ಚಿಲ್ಲ, ತರುಣ್‌ ಮಾತ್ರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌

ಮದುವೆ ಬಗ್ಗೆ ತರುಣ್‌ ಸ್ಪಷ್ಟನೆ

''ನನ್ನ ಮದುವೆ ಬಗ್ಗೆ ಕೆಲವು ದಿನಗಳಿಂದ ತಪ್ಪು ಮಾಹಿತಿ ಹರಿದಾಡುತ್ತಿದೆ. ಇದೆಲ್ಲಾ ಆಧಾರರಹಿತ ಮಾಹಿತಿಗಳಾಗಿವೆ. ಶೀಘ್ರದಲ್ಲೇ ಇದಕ್ಕಿಂದ ದೊಡ್ಡ ಸುದ್ದಿ ಕೊಡುತ್ತೇನೆ. ದಯವಿಟ್ಟು ನನ್ನನ್ನು ಸಂಪರ್ಕಿಸದೆ ಇಂತಹ ಸುದ್ದಿಗಳನ್ನು ಪ್ರಕಟಿಸಬೇಡಿ'' ಎಂದು ಮನವಿ ಮಾಡಿಕೊಳ್ಳುವುದಾಗಿ ತರುಣ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್‌ಗೆ ಕಾಮೆಂಟ್‌ ಆಫ್‌ ಮಾಡಿದ್ದಾರೆ. ತರುಣ್‌ ಪೋಸ್ಟ್‌ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಹರಿದಾಡುತ್ತಿರುವ ಸುದ್ದಿ ನಿಜವೇನಾ ಅಥವಾ ಗಾಸಿಪ್‌ ಅಷ್ಟೇನಾ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ