logo
ಕನ್ನಡ ಸುದ್ದಿ  /  ಮನರಂಜನೆ  /  ಇಷ್ಟಾರ್ಥ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏಡ್ಸ್‌ ಬಂದ ನಂತ್ರ ಕಡಿಮೆ ಆಯ್ತು; ನಟಿ ಅನ್ನಪೂರ್ಣಮ್ಮ

ಇಷ್ಟಾರ್ಥ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏಡ್ಸ್‌ ಬಂದ ನಂತ್ರ ಕಡಿಮೆ ಆಯ್ತು; ನಟಿ ಅನ್ನಪೂರ್ಣಮ್ಮ

Jun 28, 2024 04:05 PM IST

google News

ಇಷ್ಟಾರ್ಥ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏಡ್ಸ್‌ ಬಂದ ನಂತ್ರ ಕಡಿಮೆ ಆಯ್ತು; ನಟಿ ಅನ್ನಪೂರ್ಣಮ್ಮ

    • ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಈ ಹಿಂದೆಯೇ ಸಾಕಷ್ಟು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಾವು ಅನುಭವಿಸಿದ ಯಾತನೆಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಇದೇ ಕಾಸ್ಟಿಂಗ್‌ ಕೌಚ್‌ ಬಗ್ಗೆ ತೆಲುಗಿನ ಹಿರಿಯ ನಟಿ ಅನ್ನಪೂರ್ಣಮ್ಮ ಮಾತನಾಡಿದ್ದಾರೆ.
ಇಷ್ಟಾರ್ಥ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏಡ್ಸ್‌ ಬಂದ ನಂತ್ರ ಕಡಿಮೆ ಆಯ್ತು; ನಟಿ ಅನ್ನಪೂರ್ಣಮ್ಮ
ಇಷ್ಟಾರ್ಥ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏಡ್ಸ್‌ ಬಂದ ನಂತ್ರ ಕಡಿಮೆ ಆಯ್ತು; ನಟಿ ಅನ್ನಪೂರ್ಣಮ್ಮ

Actress Annapoornamma: ಪ್ರತಿ ಉದ್ಯಮದಲ್ಲೂ ಮಹಿಳೆಯರಿಗೆ ಕಿರುಕುಳ ಇದ್ದೇ ಇದೆ. ಮಹಿಳೆಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಆ ಪೈಕಿ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಈ ಹಿಂದೆಯೇ ಸಾಕಷ್ಟು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ತಾವು ಅನುಭವಿಸಿದ ಯಾತನೆಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಇದೇ ಕಾಸ್ಟಿಂಗ್‌ ಕೌಚ್‌ ಬಗ್ಗೆ ತೆಲುಗಿನ ಹಿರಿಯ ನಟಿ ಅನ್ನಪೂರ್ಣಮ್ಮ ಮಾತನಾಡಿದ್ದಾರೆ.

ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಅನ್ನಪೂರ್ಣಮ್ಮ ಇಂದಿಗೂ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರು. ವಯಸ್ಸು 80ರ ಆಸುಪಾಸಿನಲ್ಲಿದ್ದರೂ, ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದ ಅನ್ನಪೂರ್ಣಮ್ಮ, ಈ ವರೆಗೂ ಏನಿಲ್ಲ ಅಂದರೂ 700 ಪ್ಲಸ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಇವರದ್ದು ದೊಡ್ಡ ಹೆಸರು. ಅನಿಸಿದ್ದನ್ನು ನೇರವಾಗಿ ಹೇಳುವ ಅನ್ನಪೂರ್ಣಮ್ಮ, ಚಿತ್ರೋದ್ಯಮದಲ್ಲಿನ ಕರಾಳತೆಯನ್ನೂ ಈ ಹಿಂದೆ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರಿಗೆ ಎಲ್ಲೆ ಹೋದರೂ ಕಷ್ಟ ತಪ್ಪಿದ್ದಲ್ಲ. ಅದರಲ್ಲೂ ಬಣ್ಣದ ಲೋಕದಲ್ಲಿ ಅಂಥ ಅನುಭವಗಳು ಆಗುವುದು ತುಸು ಜಾಸ್ತಿ. ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್‌ ಕೌಚ್‌ ಪ್ರಮಾಣ ಅಧಿಕ. ಅವಕಾಶಕ್ಕಾಗಿ ಸಾಕಷ್ಟು ಮಂದಿ ಕಾಂಪ್ರಮೈಸ್‌ ಆದ ಉದಾಹರಣೆಗಳಿವೆ, ಇದರ ವಿರುದ್ಧ ಧ್ವನಿ ಎತ್ತಿದವರೂ ಇದ್ದಾರೆ. ಈ ನಡುವೆ ಹಿರಿಯ ನಟಿ ಅನ್ನಪೂರ್ಣಮ್ಮ ತಮ್ಮ ಕಾಲದಲ್ಲಿ ಕಾಸ್ಟಿಂಗ್‌ ಕೌಚ್‌ ಹೇಗಿತ್ತು, ಆಗಿನ ಸಿನಿಮಾಗಳ ಶೂಟಿಂಗ್‌, ಎದುರಿಸಿದ ಕಷ್ಟಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಇದೆ....

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕಾಸ್ಟಿಂಗ್‌ ಕೌಚ್‌ ಇದೆ. ಈ ಹಿಂದೆಯೂ ಹೆಚ್ಚಾಗಿಯೇ ಇತ್ತು" ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. "ಚಿಕ್ಕ ವಯಸ್ಸಿನಲ್ಲಿಯೇ ನನಗೆ ಸಿನಿಮಾ ಅವಕಾಶಗಳು ಸಿಗಲಾರಂಭಿಸಿದವು. ಅದರಂತೆ 20ನೇ ವಯಸ್ಸಿಗೆ ನನ್ನ ಮದುವೆಯೂ ಆಯ್ತು. 25ನೇ ವಯಸ್ಸಿಗೆ ಸಿನಿಮಾಗಳಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದೆ. ಆ ತಾಯಿ ಪಾತ್ರ ಹಾಕುತ್ತಿದ್ದರಿಂದಲೇ ನನಗೆ ಕಾಸ್ಟಿಂಗ್‌ ಕೌಚ್‌ ಸಮಸ್ಯೆ, ಕಿರುಕುಳ ಎದುರಾಗಿಲ್ಲ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ ಅನ್ನಪೂರ್ಣಮ್ಮ.

ಮಧ್ಯ ರಾತ್ರಿ ಬಾಗಿಲು ಬಡಿಯುತ್ತಿದ್ರು..

ಮುಂದುವರಿದು ಮಾತನಾಡುವ ಅವರು, "ಆಗಿನ ಜಮಾನಾದಲ್ಲಿ ಸಿನಿಮಾ ಶೂಟಿಂಗ್‌ಗಳು ಎಲ್ಲೆಲ್ಲೋ ನಡೆಯುತ್ತಿದ್ದವು. ದೂರ ದೂರದ ಊರುಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದವು. ಕಲಾವಿದರಿಗೆ ಸರಿಯಾಗಿ ಉಳಿದುಕೊಳ್ಳುವ ವ್ಯವಸ್ಥೆಯೂ ಇರುತ್ತಿರಲಿಲ್ಲ. ಅದರಲ್ಲೂ ಮಹಿಳಾ ಕಲಾವಿದರು, ನಾಯಕ ನಟಿಯರ ಸಮಸ್ಯೆ ಹೇಳತೀರದು. ರಾತ್ರಿ 2 ಗಂಟೆಗೆಲ್ಲ ಯಾರ್ಯಾರೋ ಬಂದು ಬಾಗಿಲು ಬಡಿಯುತ್ತಿದ್ದರು. ಅಂಥ ಘಟನೆಗಳು ಸಾಕಷ್ಟು ನಡೆದಿವೆ. ನಾವೂ ನೋಡಿದ್ದೇವೆ" ಎಂದಿದ್ದಾರೆ.

ಏಡ್ಸ್‌ ಬಂದು ಒಳ್ಳೆಯದೇ ಆಯ್ತು!

"ಅವಕಾಶಗಳಿಗಾಗಿ ಪ್ರಯತ್ನಿಸುವವರಿಗೆ ಆಗಿನ ಕಾಲದಲ್ಲಿ ಈ ಲೈಂಗಿಕ ಕಿರುಕುಳಗಳು ಅನಿವಾರ್ಯವಾಗಿತ್ತು. ಆಗ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಏಡ್ಸ್‌ ಕಾಯಿಲೆ ಬಗ್ಗೆ ದೊಡ್ಡ ಭಯ ಶುರುವಾಯ್ತು. ಆ ಕಾಯಿಲೆಯ ಬಗ್ಗೆ ಎಲ್ಲರಿಗೂ ಮನವರಿಕೆ ಆಗುತ್ತಿದ್ದಂತೆ, ಆಗಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿದ್ದ ಈ ಕಾಸ್ಟಿಂಗ್‌ ಕೌಚ್‌ ಪ್ರಮಾಣವೇ ಕಡಿಮೆ ಆಯ್ತು. ಏಡ್ಸ್ ಬಂದ ನಂತರ ಈ ಲೈಂಗಿಕ ದೌರ್ಜನ್ಯಗಳು ಕಡಿಮೆಯಾದವು. ಏಡ್ಸ್ ಬಂದು ಒಳ್ಳೆಯದೇ ಆಯಿತು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟಿಯ ಈ ಹೇಳಿಕೆಗಳು ನೋಡುಗರಲ್ಲಿ ಅಚ್ಚರಿ ಮೂಡಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ