logo
ಕನ್ನಡ ಸುದ್ದಿ  /  ಮನರಂಜನೆ  /  Salaar Twitter Review: ‘ಸಲಾರ್’ ನೋಡಿದ ಪ್ರೇಕ್ಷಕ ಏನಂದ? ಪ್ರಭಾಸ್‌ ಚಿತ್ರಕ್ಕೆ ಸಿಕ್ತಾ ಬಹುಪರಾಕ್?‌ ಹೀಗಿದೆ ಟ್ವಿಟ್ಟರ್‌ ವಿಮರ್ಶೆ

Salaar Twitter Review: ‘ಸಲಾರ್’ ನೋಡಿದ ಪ್ರೇಕ್ಷಕ ಏನಂದ? ಪ್ರಭಾಸ್‌ ಚಿತ್ರಕ್ಕೆ ಸಿಕ್ತಾ ಬಹುಪರಾಕ್?‌ ಹೀಗಿದೆ ಟ್ವಿಟ್ಟರ್‌ ವಿಮರ್ಶೆ

Dec 22, 2023 09:25 AM IST

google News

Salaar Twitter Review: ‘ಸಲಾರ್’ ನೋಡಿದ ಪ್ರೇಕ್ಷಕ ಏನಂದ? ಪ್ರಭಾಸ್‌ ಚಿತ್ರಕ್ಕೆ ಸಿಕ್ತಾ ಬಹುಪರಾಕ್?‌ ಹೀಗಿದೆ ಟ್ವಿಟ್ಟರ್‌ ವಿಮರ್ಶೆ

    • Salaar Twitter Review: ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ ಸಲಾರ್‌ ಸಿನಿಮಾ ಇಂದು ಹಲವು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಿದೆ. ಚಿತ್ರಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಗುತ್ತಿರುವುದು ಒಂದೆಡೆಯಾದರೆ, ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್‌ ಗೆಲುವಿನ ಸಿಹಿಯುಂಡಿದ್ದಾರೆ. 
Salaar Twitter Review: ‘ಸಲಾರ್’ ನೋಡಿದ ಪ್ರೇಕ್ಷಕ ಏನಂದ? ಪ್ರಭಾಸ್‌  ಚಿತ್ರಕ್ಕೆ ಸಿಕ್ತಾ ಬಹುಪರಾಕ್?‌ ಹೀಗಿದೆ ಟ್ವಿಟ್ಟರ್‌ ವಿಮರ್ಶೆ
Salaar Twitter Review: ‘ಸಲಾರ್’ ನೋಡಿದ ಪ್ರೇಕ್ಷಕ ಏನಂದ? ಪ್ರಭಾಸ್‌ ಚಿತ್ರಕ್ಕೆ ಸಿಕ್ತಾ ಬಹುಪರಾಕ್?‌ ಹೀಗಿದೆ ಟ್ವಿಟ್ಟರ್‌ ವಿಮರ್ಶೆ

Salaar Review: ಟಾಲಿವುಡ್‌ ರೆಬೆಲ್‌ ಸ್ಟಾರ್ ಪ್ರಭಾಸ್‌‌ ಅಭಿನಯದ ಸಲಾರ್‌ ಸಿನಿಮಾ ವಿಶ್ವದಾದ್ಯಂತ ಇಂದು (ಡಿ. 22) ಬಿಡುಗಡೆ ಆಗಿದೆ. ಮಾಸ್‌ ಪ್ರಿಯರಿಗೆ ಬಾಡೂಟ ಎಂಬಂತೆ ಸಿನಿಮಾ ಮೂಡಿಬಂದಿದ್ದು ಒಂದೆಡೆಯಾದರೆ, ಸತತ ಸಿನಿಮಾ ಸೋಲಿನ ಬಳಿಕ ಗೆಲುವಿನ ರುಚಿ ಸವಿದಿದ್ದಾರೆ ಪ್ರಭಾಸ್!‌ ಪ್ರಶಾಂತ್‌ ನೀಲ್‌ ಕಲ್ಪನೆಯಲ್ಲಿ ಜೀವತೆಳೆದ ಕಾನ್ಸಾರಾ ಅನ್ನೋ ಕತ್ತಲು ಕತ್ತಲು ಲೋಕದಲ್ಲಿ ಕಣ್ಣಿಗೆ ಕಾಣಿಸೋದೆಲ್ಲವೂ ಅಚ್ಚರಿಯ ಗುಚ್ಛ!

ಮುಂಗಡ ಬುಕಿಂಗ್‌ ವಿಚಾರದಲ್ಲಿ ದಾಖಲೆ ಬರೆದಿದ್ದ ಸಲಾರ್‌ ಸಿನಿಮಾ, ಮೂಲ ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಡಬ್‌ ಆಗಿ ರಿಲೀಸ್‌ ಆಗಿದೆ. ಸೌತ್‌ನ ಜತೆಗೆ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿಕೊಂಡಿತ್ತು ಸಲಾರ್‌. ಮೇಕಿಂಗ್‌ ಒಂದೆಡೆಯಾದರೆ, ಸ್ಟಾರ್‌ ತಾರಾಬಳವೂ ಇಡೀ ಸಿನಿಮಾದ ಹೈಲೈಟ್.‌ ಬಾಲಿವುಡ್‌ ಸೇರಿ ಸೌತ್‌ನ ಚಿತ್ರೋದ್ಯಮದ ಹಲವು ಕಲಾವಿದರೂ ಸಲಾರ್‌ನಲ್ಲಿದ್ದಾರೆ.

ಪ್ರಭಾಸ್‌, ಪೃಥ್ವಿರಾಜ್‌ ಸುಕುಮಾರನ್‌, ಜಗಪತಿ ಬಾಬು, ಶ್ರುತಿ ಹಾಸನ್‌ ಜತೆಗೆ ಕನ್ನಡಿಗರಾದ, ಗರುಡ ರಾಮಚಂದ್ರ ರಾಜು, ಪ್ರಮೋದ್‌, ನವೀನ್‌ ಶಂಕರ್‌, ಮಧು ಗುರುಸ್ವಾಮಿ, ಪೋಷಕ ನಟ ರಘು ಭಟ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂದಿನಂತೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದರೆ, ಭುವನ್‌ ಗೌಡ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ವರದರಾಜನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಿದರೆ, ಅವನ ತಂದೆಯಾಗಿ ರಾಜ ಮನ್ನಾರ್‌ ಪಾತ್ರದಲ್ಲಿ ಮಿಂಚಿನ ನಟನೆ ನೀಡಿದ್ದಾರೆ ಜಗಪತಿ ಬಾಬು. ಪ್ರಭಾಸ್ ಬಿಟ್ಟರೆ ಪೃಥ್ವಿರಾಜ್‌ ನಟನೆ ಸಿನಿಮಾ ಹೈಲೈಟ್‌ಗಳಲ್ಲೊಂದು ಎಂದು ಸಿನಿಮಾ ನೋಡಿದ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಕೆಜಿಎಫ್ ಮತ್ತು ಕೆಜಿಎಫ್ 2 ನಂತರ ಪ್ರಶಾಂತ್ ನೀಲ್, ಸಲಾರ್ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ರೋಚಕವಾಗಿದ್ದು, ಹಿನ್ನೆಲೆ ಸಂಗೀತವೂ ಮೋಡಿ ಮಾಡುತ್ತಿದೆ. ಸೀಕ್ವೆಲ್ ಗೆ ಸಂಬಂಧಿಸಿದಂತೆ ಟ್ವಿಸ್ಟ್ ಕೂಡ ಅಷ್ಟೇ ಕುತೂಹಲ ಮೂಡಿಸುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇದೀಗ ಇದೇ ಸಿನಿಮಾ ಬಿಡುಗಡೆ ಆಗಿದೆ. ನೋಡುಗರಿಗೆ ಪ್ರಿಯವಾಗಿದೆ. ಹಾಗಾದರೆ ಪ್ರಭಾಸ್‌ ನಟನೆ, ಮಾಸ್‌ ಅವತಾರಕ್ಕೆ ಪ್ರೇಕ್ಷಕ ನೀಡಿದ ಅಂಕ ಎಷ್ಟು? ಒಟ್ಟಾರೆ ಸಿನಿಮಾ ನೋಡಿದವರು ಏನಂದ್ರು? ಹೀಗಿದೆ ಟ್ವಿಟರ್‌ ರಿವ್ಯೂ.

ಸಿನಿಮಾ ನೋಡಿದ ನೆಟ್ಟಿಗರ ವಿಮರ್ಶೆ ಹೀಗಿದೆ

ಮಾಸ್‌ ಆಕ್ಷನ್ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್ ದೇವಾ ಆಗಿ ಮಿಂಚಿದ್ದಾರೆ. ಪ್ರಶಾಂತ್‌ ನೀಲ್‌ ವಿಶಿಷ್ಟವಾದ ಆಕ್ಷನ್ ಪ್ರಕಾರದ ಗಡಿಗಳನ್ನು ಮೀರಿದ ಸಿನಿಮಾ ನೀಡಿದ್ದಾರೆ. ಹ್ಯಾಟ್ರಿಕ್ ಬ್ಲಾಕ್‌ಬಸ್ಟರ್‌ ಮುಡಿಗೇರಿಸಿಕೊಂಡಿದ್ದಾರೆ. ಸಲಾರ್ ಸೀಸ್‌ ಫೈರ್‌ ಮೂಲಕ ತಮ್ಮ ಯಶಸ್ಸಿನ ಸರಣಿಯನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದಾರೆ. ವರದ್‌ರಾಜ್‌ ಮನ್ನಾರ್ ಪಾತ್ರಕ್ಕೆ ಪೃಥ್ವಿರಾಜ್ ಸೂಕ್ತವಾಗಿ ಹೊಂದಿಕೊಂಡರೆ, ಜಗಪತಿ ಬಾಬು ಅವರ ತಂದೆಯಾಗಿ ಮಿಂಚಿದ್ದಾರೆ. ಹಿನ್ನೆಲೆ ಸಂಗೀತ ನಿಮ್ಮನ್ನು ಮತ್ತಷ್ಟು ಸೆಳೆಯಲಿದೆ. ಶೌರ್ಯಾಂಗ ಪರ್ವಂ ಆರಂಭದ ನಿರೀಕ್ಷೆಯಲ್ಲಿದ್ದೇವೆ ಎಂದು ತೆಲುಗು ಟ್ರೇಡ್‌ ಅನಲಿಸ್ಟ್‌ ಮನೋಬಲ ವಿಜಯನ್‌ ಟ್ವಿಟ್‌ ಮಾಡಿದ್ದಾರೆ.

  • ಉತ್ತರ ಭಾರತ ಸೇರಿ ಸೌತ್‌ನ ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಯ್ತು ಸಲಾರ್

  • ಈ ಹೈಪ್‌ ಮತ್ತು ಮೇಕಿಂಗ್‌ ವಿಚಾರದಲ್ಲಿ ಸಿನಿಮಾ ಮೋಡಿ ಮಾಡುತ್ತಿದೆ. ಇದನ್ನು ಮಿಸ್ ಮಾಡಿಕೊಳ್ಳಬೇಡಿ ಸಹೋದರರೇ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿಯೇ ನೋಡಿ. ಡೈನೋಸಾರ್ ಶ್ರೇಣಿಯ ಬ್ಲಾಕ್ಬಸ್ಟರ್..

  • ನಿಜಕ್ಕೂ ರೋಮಾಂಚನ, ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು. ಬಹುತೇಕ ಎಲ್ಲ ದಾಖಲೆಗಳು ಧೂಳಿಪಟವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ