logo
ಕನ್ನಡ ಸುದ್ದಿ  /  ಮನರಂಜನೆ  /  ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ, ಕೈಗಳು ಸುಮ್ಮನೆ ಇರದೇ ಇದ್ರೆ...

ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ, ಕೈಗಳು ಸುಮ್ಮನೆ ಇರದೇ ಇದ್ರೆ...

Praveen Chandra B HT Kannada

Nov 29, 2024 03:20 PM IST

google News

ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ

    • ಪುಷ್ಪ 2 ಸಿನಿಮಾದ ಕಿಸ್ಸಿಕ್‌ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಹಾಡು ಇಷ್ಟೊಂದು ಹಿಟ್‌ ಆಗಲು ಕಾರಣವೇನು? ಇಲ್ಲಿ ಶ್ರೀಲೀಲಾ ಸೌಂದರ್ಯದ ಜತೆಗೆ ಈ ಹಾಡಿನ ಸಾಹಿತ್ಯದಲ್ಲಿ ಗಂಡಸರ ದೌರ್ಬಲ್ಯದ ಅಣಕ, ಈಗಿನ ಸೋಷಿಯಲ್‌ ಮೀಡಿಯಾದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಇತ್ಯಾದಿ ವಿಚಾರಗಳ ಸಾಹಿತ್ಯವೂ ಪ್ರಮುಖ ಕಾರಣ.
ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ
ಕಿಸ್ಸಿಕ್‌ ಸಾಂಗ್‌ ಹಿಟ್‌ ಆಗಲು ಕಾರಣವೇನು? ಶ್ರೀಲೀಲಾ ಸೌಂದರ್ಯ ಜತೆ ಗಂಡಸರ ದೌರ್ಬಲ್ಯದ ಅಣಕ

ಪುಷ್ಪ 2 ಸಿನಿಮಾದ ಕಿಸ್ಸಿಕ್‌ ಹಾಡು ಜನಪ್ರಿಯತೆ ಪಡೆಯುತ್ತಿದೆ. ಈ ಹಾಡು ಇಷ್ಟೊಂದು ಹಿಟ್‌ ಆಗಲು ಶ್ರೀಲೀಲಾ ಸೌಂದರ್ಯ ಮಾತ್ರ ಕಾರಣವಲ್ಲ. ಈ ಐಟಂ ಸಾಂಗ್‌ನಲ್ಲಿರುವ ಅಣಕ ಸಾಹಿತ್ಯವೂ ಈ ಹಾಡಿನ ಜನಪ್ರಿಯತೆಗೆ ಕಾರಣ ಎಂದರೆ ತಪ್ಪಾಗದು. ಈ ಸಿನಿಮಾದ ಮೊದಲ ಭಾಗದ ಊ ಅಂತವ ಮಾವಾ ಹಾಡಿನ ಪ್ರಭಾವವೂ ಇದರಲ್ಲಿದೆ. ಊ ಅಂತವ ಮಾವಾ ಹಾಡಿನಲ್ಲಿ ಸಮಂತಾ ಅವರ ಝಗಮಗಿಸುವ ಗ್ಲಾಮರ್‌ ಮತ್ತು ಅದ್ಭುತ ಡ್ಯಾನ್ಸ್‌ ಜತೆಗೆ ಪುರುಷರ ವಿವೇಚನಾರಹಿತ ನಡವಳಿಕೆಯನ್ನು ಗುರಿಯಾಗಿರಿಸಿದ ಕೆನ್ನೆಯ ಸಾಹಿತ್ಯವೂ "ಆ ಹಾಡು" ಹಿಟ್‌ ಆಗಲು ಕಾರಣವಾಗಿತ್ತು.

ಇದೀಗ ಕಿಸ್ಸಿಕ್‌ಹಾಡಿನ ಮೂಲಕ ನಿರ್ದೇಶಕ ಸುಕುಮಾರ್, ಸಂಯೋಜಕ ಡಿಎಸ್ಪಿ ಮತ್ತು ಬರಹಗಾರ ಚಂದ್ರಬೋಸ್ ಮತ್ತೊಮ್ಮೆ ಸಾಮಾಜಿಕ ವಿಡಂಬನೆ ಮಾಡಿದ್ದಾರೆ. ಈ ಸಿನಿಮಾದ ಕಿಸ್ಸಿಕ್‌ಹಾಡು ಈಗಿನ ತಲೆಮಾರಿನ ಅನೇಕ ಜ್ವಲಂತ ವಿಷಯಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಬ್ಯಾಡ್‌ ಟಚ್‌, ಸಾಮಾಜಿಕ ಮಾಧಯಮಗಳ ದುರ್ಬಳಕೆ, ಡೀಪ್‌ಫೇಕ್‌ ಸಂಸ್ಕೃತಿಯ ಕುರಿತು ಈ ಹಾಡು ಮಾತನಾಡಿದೆ.

ಬ್ಯಾಡ್‌ ಟಚ್‌ ಕುರಿತು

ಈ ಹಾಡಿನ ಮುಂದಿನ ಸಾಲುಗಳನ್ನು ಗಮನಿಸಿ "ಪಕ್ಕನೇ ನಿಂತು ಫೋಟೋ ತಕ್ಕೋ, ಭುಜಕ್ಕೆ ಭುಜವ ತೀಡೋಕೆ ಬಂದ್ರೆ, ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ‌ಕಿಸಕ್‌, ಆಯ್ತು, ಆಯ್ತು ಹೆಗಲ ಮೇಲೆ ಕೈ ಹಾಕೇ ತಕ್ಕೋ, ಕೈಗಳು ಸುಮ್ಮನೆ ಇರದೇ ಇದ್ರೆ, ರಪ್ಪನೇ ಬೀಳುತ್ತೋ.. ರಪ್ಪನೇ ಬೀಳುತ್ತೋ". ನಟಿಯರ ಜತೆ ಅಥವಾ ಮಹಿಳೆಯರ ಜತೆ ಫೋಟೋ ತೆಗೆದುಕೊಳ್ಳಲು ಬರುವಾಗ ಭುಜಕ್ಕೆ ಭುಜವ ತೀಡೋದು,ಹೆಗಲ ಮೇಲೆ ಕೈ ಹಾಕುವಾಗ ಕೈಗಳು ಸುಮ್ಮನೆ ಇರದೆ ಇದ್ದರೆ ರಪ್ಪನೆ ಪೆಟ್ಟು ಬೀಳುತ್ತದೆ ಎಂದು ಈ ಹಾಡಿನ ಮೂಲಕ ಎಚ್ಚರಿಸಲಾಗಿದೆ.

ಸೋಷಿಯಲ್‌ ಮೀಡಿಯಾದ ದುರ್ಬಳಕೆ ಬೇಡ

"ಸಿಂಗಲ್‌ ಫೋಟೋ ತಪ್ಪಿಲ್ಲ, ಮಿಂಗಲ್‌ ಫೋಟೋ ತಪ್ಪಿಲ್ಲ. ಗ್ರೂಪ್‌ ಫೋಟೋ ತಕ್ಕೋಳಾಕ ಅಭ್ಯಂತರವಿಲ್ಲ.. ಆದ್ರೆ ಪಬ್ಲಿಕ್‌ನಲ್ಲಿ ನನ್‌ ಫೋಟೋ ಹಾಕಿ ಕೆಟ್‌ ಕೆಟ್‌ ಕಾಮೆಂಟ್ಸ್‌ ಮಾಡಿದ್ರೆ ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ". ಈ ಸಾಲುಗಳು ಸೋಷಿಯಲ್‌ ಮೀಡಿಯಾದಲ್ಲಿ ಈಗ ನಟಿಯರು, ಯುವತಿಯರು, ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್‌ ಮಾಡುವವರಿಗೆ ಚಾಟಿಯೇಟಿನಂತೆ ಇದೆ.

 

ಇದೇ ರೀತಿ "ಯಾವ ಪೋಸಲ್ಲೇ ಫೋಟೋ ತಕ್ಕೋ, ಎಕ್ಸ್‌ಪೋಸಿಂಗ್‌ ಥರ ಕಾಣಿಸ್ತಂದ್ರೆ, ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ‌ಕಿಸಕ್‌" ಸಾಲುಗಳು ಕೂಡ ಹೆಣ್ಣನ್ನು ಕೆಟ್ಟದ್ದಾಗಿ ಚಿತ್ರಿಸದಂತೆ ಎಚ್ಚರಿಸುತ್ತದೆ. ಯಾವ ಆಂಗಲ್‌ನಲ್ಲಾದ್ರೂ ತಕ್ಕೋ, ಬ್ಯಾಡ್‌ ಆಂಗಲ್‌ನಲ್ಲಿ ಯೋಚಿಸ್ತಿದ್ರೆ, ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ‌ಕಿಸಕ್‌" ತಪ್ಪಿಯೇ ಹೆಣ್ಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ ಎಂದು ಹಾಡು ಎಚ್ಚರಿಸಿದೆ.

ಡೀಪ್‌ಫೇಕ್‌ ದುರ್ಬಳಕೆ ಬೇಡ

"ಪೋಟೋ ನೀ ಬಚ್ಚಿಟ್ಟುಕೋ, ಬೇಕಾದಷ್ಟು ನೋಡಿಕೋ, ಕಣ್ಣಿಗೆ ಹಬ್ಬ ಮಾಡಿಕೋ, ಬೇಡ ಅನ್ನಲ್ಲ.. ಆದ್ರೆ ಫೇಸನ್‌ ಗೀಸನ್‌, ಮಾರ್ಫಿಂಗ್‌ ಮಾಡಿ, ಹುಚ್ಚ ಹುಚ್ಚ ಆಟ ಆಡಿದ್ರೆ.. ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ" ಈ ಸಾಲುಗಳು ಕೂಡ ಈಗಿನ ಜಮಾನಕ್ಕೆ ತಕ್ಕಂತೆ ಇದೆ. ನಟಿಯರ ಫೋಟೋ ಇಟ್ಟುಕೊಳ್ಳಿ, ಕಣ್ಣು ತಂಪು ಮಾಡಿಕೊಳ್ಳಿ. ಕೆಟ್ಟದ್ದಾಗಿ ಮಾರ್ಫಿಂಗ್‌ ಮಾಡಿ ಹುಚ್ಚಾಟ ಆಡಬೇಡಿ ಎಂದು ಪುಷ್ಪ 2 ಎಚ್ಚರಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ