UI ಮತ್ತು ಮ್ಯಾಕ್ಸ್ ಸಿನಿಮಾ ಬಗ್ಗೆ ಮಾತನಾಡಿದ ಉಪೇಂದ್ರ; ಬಾಕ್ಸ್ ಆಫೀಸ್ ಕ್ಲಾಷ್ ಬಗ್ಗೆ ಹೇಳಿದ್ದೇನು ನೋಡಿ
Dec 14, 2024 10:23 AM IST
UI ಮತ್ತು ಮ್ಯಾಕ್ಸ್ ಸಿನಿಮಾ ಬಗ್ಗೆ ಮಾತನಾಡಿದ ಉಪೇಂದ್ರ
- UI ಮತ್ತು ಮ್ಯಾಕ್ಸ್ ಈ ಎರಡೂ ಸಿನಿಮಾಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಇದು ಪರಿಣಾಮ ಬೀರುವುದಿಲ್ಲವೇ? ಎಂಬ ಪ್ರಶ್ನೆಗೆ ಉಪೇಂದ್ರ ಈ ರೀತಿಯಾಗಿ ಉತ್ತರಿಸಿದ್ದಾರೆ. ಮಾಹಿತಿಗಾಗಿ ಮುಂದೆ ಓದಿ.
ಉಪೇಂದ್ರ ಅವರ UI ಸಿನಿಮಾ ಬಿಡುಗಡೆಯಾದ ಕೇವಲ 5 ದಿನಗಳ ನಂತರ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗುತ್ತದೆ. ಡಿಸೆಂಬರ್ 20ರಂದು ಉಪೇಂದ್ರ ಅವರು ಸಿನಿಮಾ ಬಿಡುಗಡೆಯಾದರೆ, ಡಿಸೆಂಬರ್ 25ರಂದು ಸುದೀಪ್ ಸಿನಿಮಾ ರಿಲೀಸ್ ಆಗಲಿದೆ. ಹೀಗೆ ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂದು ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪ್ರಶ್ನೆಗೆ ಉಪೇಂದ್ರ ಅವರು ಯಾವ ರೀತಿ ಉತ್ತರಿಸಿದ್ದಾರೆ ನೋಡಿ.
“ಎರಡು ದೊಡ್ಡ ಚಿತ್ರಗಳು ಒಂದೇ ಸಮಯದಲ್ಲಿ ಬಿಡುಗಡೆಯಾಗಿ ಎರಡೂ ಉತ್ತಮ ಪ್ರದರ್ಶನ ನೀಡಿದ ಇತಿಹಾಸವಿದೆ. ತೀರಾ ಇತ್ತೀಚೆಗೆ, ಭೀಮಾ ಮತ್ತು ಕೃಷ್ಣಂ ಪ್ರಣಯ ಸಖಿ ಒಂದಾದ ಮೇಲೊಂದು ಬಿಡುಗಡೆಯಾಯಿತು, ಆದರೆ ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ನೀಡಿದೆ. ಜನರು ಸ್ವೀಕರಿಸಿದ್ದಾರೆ" ಎಂದಿದ್ದಾರೆ. "ಯುಐ ಮತ್ತು ಮ್ಯಾಕ್ಸ್ ಸಿನಿಮಾಗಳ ನಡುವೆ ಕ್ಲಾಶ್ ಇಲ್ಲ. ಆ ರೀತಿ ಆಗುವುದೂ ಇಲ್ಲ ಎಂದು ಭರವಸೆಯಿಂದ ಹೇಳಿದ್ದಾರೆ. ಸುದೀಪ್ ಅವರ ಚಿತ್ರ 5 ದಿನಗಳ ನಂತರ ಬಿಡುಗಡೆಯಾಗುತ್ತಿದೆ, ಮತ್ತು ಪ್ರೇಕ್ಷಕರು ಎರಡೂ ಚಿತ್ರಗಳನ್ನು ನೋಡಬೇಕು ಎಂಬುದು ನನ್ನ ವಿನಮ್ರ ವಿನಂತಿ” ಎಂದಿದ್ದಾರೆ.
ನಾವು ಈ ರೀತಿ ಅಂದುಕೊಳ್ಳಬಾರದು. ಎಲ್ಲವನ್ನೂ ಸ್ವೀಕರಿಸಬೇಕು. ಎರಡೂ ಸಿನಿಮಾ ಓಡಬೇಕು. ಯಾವುದೇ ನಕಾರಾತ್ಮಕ ಆಲೋಚನೆ ಮಾಡಬಾರದು ಎಂಬ ಉದ್ದೇಶದಲ್ಲಿ ಅವರು ಮಾತನಾಡಿದ್ದಾರೆ. ಉಪೇಂದ್ರ ಗ್ಯಾರಂಟಿ ನ್ಯೂಸ್‌ನೊಂದಿಗೆ ಮಾತನಾಡುತ್ತಾ ಈ ಬಗ್ಗೆ ಹೇಳಿದ್ದಾರೆ. ಬಿಡುಗಡೆಯ ದಿನಾಂಕಗಳ ಆಯ್ಕೆಯಿಂದಾಗಿ ಘರ್ಷಣೆಯ ಮಾತುಕತೆಗಳು ಬಂದಿವೆ ಎಂದು ಉಪೇಂದ್ರ ಹೇಳಿದ್ದಾರೆ.
ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಜನರು ಊಹಿಸುತ್ತಾರೆ. ಆದರೆ ಇದು ಹಾಗಲ್ಲ ಜನರು ಎರಡೂ ಸಿನಿಮಾವನ್ನು ನೋಡಬೇಕು. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಎರಡು ಉತ್ತಮ ಕನ್ನಡ ಚಿತ್ರಗಳು ಥಿಯೇಟರ್‌ಗಳಿಗೆ ಬರುತ್ತಿವೆ; ಹೋಗಿ ಎರಡನ್ನೂ ನೋಡಿ ಎಂದು ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ಅವರ ಯುಐ ಸಿನಿಮಾದ ಬಗ್ಗೆ ಅಮೀರ್ ಖಾನ್ ಹರ್ಷ
ಉಪೇಂದ್ರ ಬಹಳ ಚೆನ್ನಾಗಿ ಟ್ರೇಲರ್ ಮಾಡಿದ್ದೀರಾ. ಇದು ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದಿ ಪ್ರೇಕ್ಷಕರು ಸಹ ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಟ್ರೇಲರ್ ನೋಡಿದಾಗ ನಿಜಕ್ಕೂ ಶಾಕ್ ಆಯ್ತು. ಅದ್ಭುತ ಟ್ರೇಲರ್ ಎಂದು ಬಾಲಿವುಡ್ ನಟ ಆಮೀರ್ ಖಾನ್ 'UI' ಚಿತ್ರಕ್ಕೆ ಶುಭಾಶಯ ಹೇಳಿದ್ದಾರೆ.
ಇದುವರೆಗೂ ಬೇರೆ ಭಾಷೆಗಳ ಹಲವು ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಉಪೇಂದ್ರ ಅವರ ಚಿತ್ರಗಳು ಮತ್ತು ಕಾರ್ಯವೈಖರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಬಾಲಿವುಡ್ ನಟ ಆಮೀರ್ ಖಾನ್ ಸಹ ತಾನು ಉಪೇಂದ್ರ ಅವರ ಅಭಿಮಾನಿ ಎಂದಿರುವುದು ವಿಶೇಷ.