logo
ಕನ್ನಡ ಸುದ್ದಿ  /  ಮನರಂಜನೆ  /  Urvashi Rautela: 'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..

Urvashi Rautela: 'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..

Aug 12, 2022 10:59 AM IST

google News

Urvashi Rautela: 'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..

    • ಕ್ರಿಕೆಟರ್‌ ರಿಷಬ್‌ ಪಂತ್‌ ಮತ್ತು ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಹಾಟ್‌ ಟಾಪಿಕ್ ಆಗಿದೆ.‌ ಅದಕ್ಕೆ ಕಾರಣ; ಈ ಇಬ್ಬರು ಸ್ಟಾರ್‌ಗಳ ಇತ್ತೀಚಿನ ಕೆಲ ವೈಯಕ್ತಿಕ ವಿಚಾರಗಳು.
Urvashi Rautela: 'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..
Urvashi Rautela: 'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..

ಕ್ರಿಕೆಟರ್‌ ರಿಷಬ್‌ ಪಂತ್‌ ಮತ್ತು ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಹಾಟ್‌ ಟಾಪಿಕ್ ಆಗಿದೆ.‌ ಅದಕ್ಕೆ ಕಾರಣ; ಈ ಇಬ್ಬರು ಸ್ಟಾರ್‌ಗಳ ಇತ್ತೀಚಿನ ಕೆಲ ವೈಯಕ್ತಿಕ ವಿಚಾರಗಳು. ಹಳೇ ವಿಚಾರವನ್ನು ಕೆದಕಿದ ಊರ್ವಶಿಗೆ ರಿಷಬ್‌ ಟಾಂಗ್‌ ಕೊಟ್ಟಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿದ ನಟಿ, ಚೋಟು ಭಯ್ಯಾ ಎಂದು ರಿಷಬ್‌ಗೆ ಟಾಂಗ್‌ ಕೊಟ್ಟಿದ್ದಾರೆ.

ಹಾಗಾದರೆ ಅಷ್ಟಕ್ಕೂ ಇವರಿಬ್ಬರ ನಡುವಿನ ಕಿತ್ತಾಟವಾದರೂ ಏನು? ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿಕೊಂಡ ಊರ್ವಶಿ, "ನಾನು ವಾರಾಣಸಿಯಲ್ಲಿ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದೆ. ಅಲ್ಲಿಂದ ದೆಹಲಿಗೆ ತೆರಳಬೇಕಿತ್ತು. ಇಡೀ ದಿನ ಶೂಟಿಂಗ್‌ ಮಾಡಿ ಸುಸ್ತಾಗಿತ್ತು. ಬಳಿಕ ನಾನು ಮರಳಿ ಹೊಟೇಲ್‌ಗೆ ಹೋಗಿದ್ದೆ. ಆಗ ರಾತ್ರಿ ವೇಳೆ ಹೊಟೇಲ್‌ನ ಲಾಬಿಗೆ ಬಂದ ಆರ್‌ಪಿ ನನಗಾಗಿ ಕಾಯುತ್ತಿದ್ರು. ನನಗೆ ಸುಸ್ತಾಗಿದ್ದಕ್ಕೆ ನಾನು ಮಲಗಿಬಿಟ್ಟೆ. ಅವರಿಂದ ನನಗೆ 16-17 ಕ್ಕೂ ಹೆಚ್ಚು ಮಿಸ್ಡ್‌ ಕಾಲ್‌ಗಳು ಬಂದಿದ್ದವು. ಅವರನ್ನು ಕಾಯಿಸಿದ್ದಕ್ಕೆ ನನಗೂ ಬೇಸರವಾಯ್ತು. ಹಾಗಾಗಿ ಮುಂಬೈಗೆ ಬಂದಾಗ ಭೇಟಿಯಾಗುವ ಬಗ್ಗೆ ಹೇಳಿದ್ದೆ. ಅದರಂತೆ ಮುಂಬೈನಲ್ಲಿ ಭೇಟಿಯಾಗಿ ಮಾತನಾಡಿದೆವು" ಎಂದಿದ್ದರು.

ಪಂತ್‌ ಪ್ರತಿಕ್ರಿಯೆ..

ಊರ್ವಶಿಯ ಈ ಸಂದರ್ಶನದ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಕ್ರಿಕೆಟರ್‌ ರಿಷಬ್‌ ಪಂತ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಕೇವಲ ಅಲ್ಪ ಜನಪ್ರಿಯತೆಗಾಗಿ ಮತ್ತು ಸುದ್ದಿಯಾಗುವುದಕ್ಕೆ ಜನ ಹೇಗೆ ಸುಳ್ಳು ಹೇಳುತ್ತಾರೆ ಎಂಬುದನ್ನು ನೋಡಲು ತಮಾಷೆ ಎನಿಸುತ್ತದೆ. ಖ್ಯಾತಿಗಾಗಿ ಹೆಸರಿಗಾಗಿ ಈ ರೀತಿ ಮಾಡುವವರಿಗೆ ದೇವರು ಒಳ್ಳೆಯದನ್ನು ಮಾಡಲಿ" ಎಂದಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಲಿಮಿಟ್‌ ಇರಬೇಕು, ನನ್ನ ಹಿಂದೆ ಬರಬೇಡ ಅಕ್ಕ #merapichachorhoBehen #Jhutkibhilimithotihai ಎಂದು ಹ್ಯಾಷ್‌ ಟ್ಯಾಗ್‌ ಮೂಲಕ ಪ್ರತಿಕ್ರಿಯಿಸಿದ್ದರು. ಬಳಿಕ ಕೆಲ ಹೊತ್ತಿನ ನಂತರ ಪೋಸ್ಟ್‌ ಡಿಲಿಟ್‌ ಮಾಡಿದ್ದರು.

ಪಂತ್‌ಗೆ ಚೋಟು ಭಯ್ಯಾ ಎಂದ ಊರ್ವಶಿ..

"ಚೋಟು ಭಯ್ಯಾ ನೀವು ಬ್ಯಾಟ್ ಬಾಲ್ ಆಡಬೇಕು. ಮೈಂ ಕೋಯಿ ಮುನ್ನಿ ನಹೀ ಹೂಂ ಬದ್ನಾಮ್ ಹೋನೆ ವಿತ್ ಯಂಗ್ ಕಿಡ್ಡೋ ಡಾರ್ಲಿಂಗ್ಸ್ ತೇರೆ ಲಿಯೇ ಲಿಯೇ. ರಕ್ಷಾಬಂಧನದ ಶುಭಾಶಯಗಳು #RPChtobhaiyaa #Cougarhunter #Donttakeadvantageofsilentgirl.” ಎಂದು ದಬಾಂಗ್‌ ಚಿತ್ರದ ಹಾಡನ್ನು ಹೇಳಿ ಟಾಂಗ್‌ ಕೊಟ್ಟಿದ್ದಾರೆ. ಕೆಲ ಮೂಲಗಳ ಪ್ರಕಾರ 2018ರಲ್ಲಿ ಈ ಜೋಡಿ ಡೇಟಿಂಗ್‌ನಲ್ಲಿತ್ತು. ಕಾರಣಾಂತರಗಳಿಂದ ಬ್ರೇಕ್‌ ಅಪ್‌ ಆಗಿ ದೂರವಾಗಿದ್ದರು. ಇದೀಗ ಮತ್ತೆ ಈ ಜೋಡಿಯ ಸುದ್ದಿಯಲ್ಲಿದೆ.

<p>'ನನ್ನ ಹಿಂದೆ ಬರ್ಬೇಡ ಅಕ್ಕೋ..' ಎಂದಿದ್ದೇ ತಡ, ರಿಷಬ್‌ ಪಂತ್‌ಗೆ 'ಚೋಟು ಭಯ್ಯಾ' ಎಂದ ಊರ್ವಶಿ ರೌಟೇಲಾ..</p>

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ