logo
ಕನ್ನಡ ಸುದ್ದಿ  /  ಮನರಂಜನೆ  /  Vijay Deverakonda: ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಬಹಿಷ್ಕಾರದ ಬಿಸಿ!; ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ!

Vijay Deverakonda: ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಬಹಿಷ್ಕಾರದ ಬಿಸಿ!; ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ!

Aug 20, 2022 10:55 AM IST

google News

ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಬಹಿಷ್ಕಾರದ ಬಿಸಿ! ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ!

    • ಟ್ವಿಟರ್‌ನಲ್ಲಿ ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ನಟನೆಯ “ಲೈಗರ್‌ ” ಚಿತ್ರಕ್ಕೂ  ಬಹಿಷ್ಕಾರದ ಬಿಸಿ ತಟ್ಟಿದೆ. #BoycottLigerMovie ಹ್ಯಾಷ್‌ಟ್ಯಾಗ್‌ನ ಸಾಕಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ. 
ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಬಹಿಷ್ಕಾರದ ಬಿಸಿ! ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ!
ಸೌತ್‌ ಸ್ಟಾರ್‌ ವಿಜಯ್‌ ದೇವರಕೊಂಡ ಸಿನಿಮಾಕ್ಕೂ ಬಹಿಷ್ಕಾರದ ಬಿಸಿ! ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ!

2022 ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಕರಾಳ ವರ್ಷ. ಈ ವರ್ಷ ಕೇವಲ ಬೆರಳೆಣಿಕೆ ಹಿಂದಿ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡಿವೆ. ಸಿನಿಮಾ ಓಡದೇ ಇರುವಾಗಲೇ ಮತ್ತೊಂದೆಡೆ ಬಾಲಿವುಡ್ ಚಿತ್ರಗಳ ಬಹಿಷ್ಕಾರ ಟ್ರೆಂಡ್‌ ಸಹ ದೊಡ್ಡ ಮಟ್ಟದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳು ಟ್ರೋಲ್‌ಗೆ ಒಳಗಾಗಿ, ಬಾಕ್ಸ್ ಆಫೀಸ್ ಕಲೆಕ್ಷನ್‌ ಮೇಲೆ ಕೆಟ್ಟ ಪರಿಣಾಮ ಬೀರಿದೆ ಉದಾಹರಣೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಅಭಿನಯದ "ಲೈಗರ್" ಚಿತ್ರ ಕೂಡ ಟ್ರೋಲ್‌ಗೆ ಗುರಿಯಾಗಿದೆ. ಟ್ವಿಟರ್‌ನಲ್ಲಿ #BoycottLigerMovie ಟ್ರೆಂಡಿಂಗ್ ಆಗಿದೆ.

ಬಹಿಷ್ಕಾರ ಏಕೆ ನಡೆಯುತ್ತಿದೆ?

ಟ್ವಿಟರ್‌ನಲ್ಲಿ #BoycottLigerMovie ಹ್ಯಾಷ್‌ಟ್ಯಾಗ್‌ನ ಸಾಕಷ್ಟು ಟ್ವೀಟ್‌ಗಳು ಹರಿದಾಡುತ್ತಿವೆ. ವಿಭಿನ್ನ ಕಾರಣಗಳೂ ಕಮೆಂಟ್‌ ಮೂಲಕ ಸಂದಾಯವಾಗಿವೆ. ಕರಣ್ ಜೋಹರ್ ನಿರ್ಮಾಣದ ಕಾರಣದಿಂದ ಲೈಗರ್‌ ಚಿತ್ರವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಕೆಲವರು ಬರೆದರೆ, ಇನ್ನು ಕೆಲವರು "ಬಹಿಷ್ಕಾರ ಸಂಸ್ಕೃತಿಯ ಕುರಿತು ವಿಜಯ್ ದೇವರಕೊಂಡ ಅವರ ಪ್ರತಿಕ್ರಿಯೆಯಿಂದಾಗಿ ಚಿತ್ರವನ್ನು ಬಹಿಷ್ಕರಿಸಲಾಗುತ್ತಿದೆ" ಎಂದು ಬರೆದಿದ್ದಾರೆ. ಇದೇ ವೇಳೆ ಕೆಲವು ಟ್ವೀಟ್‌ಗಳಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ವೇಳೆ ಟೇಬಲ್ ಮೇಲೆ ವಿಜಯ್ ಕಾಲಿಟ್ಟಿದ್ದು, ಡ್ರಗ್ಸ್ ಪ್ರಕರಣದಲ್ಲಿ ಅನನ್ಯಾ ಹೆಸರು ತಳುಕು ಹಾಕಿಕೊಂಡಿದ್ದನ್ನೂ ಬರೆಯಲಾಗಿದೆ.

ಬಹಿಷ್ಕಾರದ ಕುರಿತು ವಿಜಯ್ ಹೇಳಿಕೆ ಏನು?

ಬಹಿಷ್ಕಾರದ ವಿಚಾರವಾಗಿ ಸಂದರ್ಶನದಲ್ಲಿ ಮಾತನಾಡಿದ ವಿಜಯ್, 'ನನ್ನ ಪ್ರಕಾರ ಒಂದು ಸಿನಿಮಾದಲ್ಲಿ ಕಲಾವಿದರು, ನಿರ್ದೇಶಕರನ್ನು ಹೊರತುಪಡಿಸಿ ಚಿತ್ರದ ಸೆಟ್‌ಗಳಲ್ಲಿ ದುಡಿಯುವವರೂ ಪ್ರಮುಖ ಪಾತ್ರವಹಿಸುತ್ತಾರೆ. ನಿತ್ಯ ಇನ್ನೂರರಿಂದ ಮುನ್ನೂರು ಮಂದಿ ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಾರೆ. ಈ ಮೂಲಕ ಸಿನಿಮಾ ಅನೇಕ ಜನರಿಗೆ ಉದ್ಯೋಗ ನೀಡುತ್ತಿದೆ. ಅಮೀರ್ ಖಾನ್ ಅವರ "ಲಾಲ್ ಸಿಂಗ್ ಛಡ್ಡಾ" ಚಿತ್ರವನ್ನು ಮಾಡಿದಾಗ, ಏನೇ ಆದರೂ ಅವರ ಹೆಸರಷ್ಟೇ ಮುನ್ನೆಲೆಗೆ ಬಂದು ನಿಲ್ಲುತ್ತದೆ. ಆದರೆ ಆ ಚಿತ್ರದೊಂದಿಗೆ ಎರಡು ಸಾವಿರದಿಂದ ಮೂರು ಸಾವಿರ ಕುಟುಂಬಗಳು ಸಂಬಂಧ ಹೊಂದಿವೆ. ನೀವು ಸಿನಿಮಾ ಬಹಿಷ್ಕರಿಸಿದಾಗ, ಅಮೀರ್ ಖಾನ್‌ ಮಾತ್ರವಲ್ಲ, ಸಾವಿರಾರು ಕುಟುಂಬಗಳ ಮೇಲೆಯೂ ಅದು ಪರಿಣಾಮ ಬೀರಲಿದೆ" ಎಂದಿದ್ದಾರೆ ವಿಜಯ್‌.

ಪುನೀತ್‌ ಸಮಾಧಿಗೆ ಭೇಟಿ ನೀಡಿದ ವಿಜಯ್‌

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಸದ್ಯ "ಲೈಗರ್"‌ ಸಿನಿಮಾದ ಬಿಡುಗಡೆ ಪ್ರಚಾರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಅದರಲ್ಲೂ ತೆಲುಗು ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವ ಬೆಂಗಳೂರಿಗೂ ವಿಜಯ್‌ ಎಂಟ್ರಿಕೊಟ್ಟಿದ್ದಾರೆ. ವಿಶೇಷ ಏನೆಂದರೆ, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೂ ಭೇಟಿ ನೀಡಿದ ವಿಜಯ್‌, ಅಪ್ಪುಗೆ ನಮಸ್ಕರಿಸುವ ಮೂಲಕವೇ ಕರ್ನಾಟಕದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.ಪುನೀತ್‌ ನಿಧನರಾಗಿ ಹತ್ತು ತಿಂಗಳ ಮೇಲಾಯಿತು. ನಿತ್ಯ ಅವರ ಸಮಾಧಿ ಬಳಿ ಈಗಲೂ ಸಾವಿರಾರು ಮಂದಿ ಅಭಿಮಾನಿಗಳ ಹಾಜರಿ ಇದ್ದೇ ಇರುತ್ತದೆ. ಅದರಲ್ಲೂ ಪರಭಾಷೆ ಸ್ಟಾರ್‌ ನಟರು ತಮ್ಮ ಸಿನಿಮಾ ಪ್ರಮೋಷನ್‌ಗೆ ಬೆಂಗಳೂರಿಗೆ ಬಂದರೆ, ಮೊದಲು ಭೇಟಿ ನೀಡುವುದೇ ಪುನೀತ್‌ ಸಮಾಧಿಗೆ. ಇದೀಗ "ಲೈಗರ್‌" ಸಿನಿಮಾ ಬಿಡುಗಡೆ ಪ್ರಯುಕ್ತ ವಿಜಯ್‌ ದೇವರಕೊಂಡ ಮತ್ತು ಚಿತ್ರದ ನಾಯಕಿ ಅನನ್ಯಾ ಪಾಂಡೆ ಪುನೀತ್‌ ಸಮಾಧಿ ದರ್ಶನ ಮಾಡಿದ್ದಾರೆ.

ಇದೇ 25ಕ್ಕೆ ಲೈಗರ್..‌

ವಿಜಯ್‌ ದೇವರಕೊಂಡ ಮತ್ತು ಪುರಿ ಜಗನ್ನಾಥ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ "ಲೈಗರ್"‌ ಸಿನಿಮಾ ಇದೇ 25ಕ್ಕೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇನ್ನೊಂದು ವಿಶೇಷ ಏನೆಂದರೆ, ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ಸಿನಿಮಾ "ಅಪ್ಪು" ಚಿತ್ರಕ್ಕೂ ನಿರ್ದೇಶನ ಮಾಡಿದ್ದು, ಇದೇ ಪುರಿ ಜಗನ್ನಾಥ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ