logo
ಕನ್ನಡ ಸುದ್ದಿ  /  ಮನರಂಜನೆ  /  ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರ ಕೊನೆಯಾಗ್ತಿದ್ದಂತೆ ಸಂಜನಾ ಬುರ್ಲಿ ಏನ್ಮಾಡ್ತಿದ್ದಾರೆ? ಇಲ್ಲಿದೆ ಉತ್ತರ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರ ಕೊನೆಯಾಗ್ತಿದ್ದಂತೆ ಸಂಜನಾ ಬುರ್ಲಿ ಏನ್ಮಾಡ್ತಿದ್ದಾರೆ? ಇಲ್ಲಿದೆ ಉತ್ತರ

Dec 14, 2024 02:48 PM IST

google News

ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂಜನಾ ಬುರ್ಲಿ‌ ಸದ್ಯ ಏನ್ಮಾಡ್ತಿದ್ದಾರೆ.

    • Puttakkana Makkalu Serial Sneha: ಜೀ ಕನ್ನಡದ ನಂಬರ್‌ 1 ಸೀರಿಯಲ್‌ ಪುಟ್ಟಕ್ಕನ ಮಕ್ಕಳು ಕಿರುತೆರೆ ವೀಕ್ಷಕರ ಫೇವರಿಟ್‌ ಧಾರಾವಾಹಿ. ಇತ್ತೀಚೆಗಷ್ಟೇ ಇದೇ ಸೀರಿಯಲ್‌ನ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಪಾತ್ರ ಅಂತ್ಯವಾಗಿತ್ತು. ಪಾತ್ರ ಮುಗಿದ ಬಳಿಕ ಇದೇ ನಟಿ ಸದ್ಯ ಏನ್ಮಾಡ್ತಿದ್ದಾರೆ? ಹೀಗಿದೆ ಮಾಹಿತಿ. 
ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂಜನಾ ಬುರ್ಲಿ‌ ಸದ್ಯ ಏನ್ಮಾಡ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂಜನಾ ಬುರ್ಲಿ‌ ಸದ್ಯ ಏನ್ಮಾಡ್ತಿದ್ದಾರೆ. (Instagram\ Sanjana Burli)

Puttakkana Makkalu Serial: ಕನ್ನಡ ಕಿರುತೆರೆಯಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ, ಆ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಧಾರಾವಾಹಿ. ಜೀ ಕನ್ನಡದಲ್ಲಿ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಮೆಗಾ ಸೀರಿಯಲ್‌, ಅಂದಿನಿಂದ ವೀಕ್ಷಕರ ನೆಚ್ಚಿನ ಧಾರಾವಾಹಿ ಎಂದೆನಿಸಿಕೊಂಡಿದೆ. ಉಮಾಶ್ರೀ, ಮಂಜು ಭಾಷಿಣಿ ತಮ್ಮ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಇದೇ ಸೀರಿಯಲ್‌ನ ಸ್ನೇಹಾ ಪಾತ್ರ ಸಾವಿನ ಮೂಲಕ ಅಂತ್ಯವಾಗಿತ್ತು. ವೀಕ್ಷಕನ ಕಣ್ಣಲ್ಲೂ ನೀರು ಜಿನುಗಿದ್ದವು. ಹೀಗಿರುವಾಗಲೇ ಅದೇ ಸ್ನೇಹಾ ಪಾತ್ರಧಾರಿ ಸದ್ಯ ಏನ್ಮಾಡ್ತಿದ್ದಾರೆ?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡವರು ಸಂಜನಾ ಬುರ್ಲಿ. ಸೀರಿಯಲ್‌ನ ನಟನೆಯ ಜತೆ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಕೊಂಚ ಸಕ್ರಿಯರಾಗಿರುವ ಅವರು, ಸರಣಿ ಫೋಟೋ ಗೊಂಚಲನ್ನೇ ಶೇರ್‌ ಮಾಡಿಕೊಳ್ಳುತ್ತಲಿರುತ್ತಾರೆ. ಅಷ್ಟೇ ಅಲ್ಲ, ಪ್ರವಾಸ, ಸುತ್ತಾಟ ಎಂದೆಲ್ಲ ಅಲೆದಾಡುತ್ತಾರೆ. ಇತ್ತೀಚೆಗಷ್ಟೇ ಕಾಶ್ಮೀರಕ್ಕೂ ತೆರಳಿ ಅಲ್ಲಿನ ಚೆಂದದ ಪರಿಸರದ ಅಂದ ಸವಿದು ಬಂದಿದ್ದರು. ಈಗ ಇದೇ ನಟಿ, ಸದ್ಯ ಖಾಲಿಯಿದ್ದಾರೆ. ಕೈಯಲ್ಲಿದ್ದ ಸೀರಿಯಲ್‌ ಮುಗಿಸಿದ್ದಾರೆ. ಈ ನಡುವೆ ತಮಗೇ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ.

ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ

ಹೌದು ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳಿಗೆ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಅನಿವಾರ್ಯ. ಹಾಗಾಗಿ ಬಿಡುವಿನ ಸಮಯವನ್ನು ಜಿಮ್‌, ವರ್ಕೌಟ್‌, ಯೋಗ, ಅಚ್ಚುಕಟ್ಟು ಡಯಟ್‌ ಎಂದೆಲ್ಲ ಒಂದಷ್ಟು ರೂಢಿಸಿಕೊಂಡಿರುತ್ತಾರೆ. ಅದರಂತೆಯೇ ನಟಿ ಸಂಜನಾ ಬುರ್ಲಿ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಮುಗಿದ ಬಳಿಕ, ಫಿಟ್‌ನೆಸ್‌, ಜಿಮ್‌ ಮೊರೆ ಹೋಗಿದ್ದಾರೆ. ನಿತ್ಯ ಇಂತಿಷ್ಟು ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅದರಂತೆ ಸೋಷಿಯಲ್‌ ಮೀಡಿಯಾದಲ್ಲಿ ವರ್ಕೌಟ್‌ನ ವಿಡಿಯೋ ತುಣುಕನ್ನು ಶೇರ್‌ ಮಾಡಿ, ನಿಮಗೆ ಎದುರಾಗುವ ಯುದ್ಧಗಳಲ್ಲಿ ನೀವೇ ಹೋರಾಡಬೇಕು. ಆಗ ಮಾತ್ರ ನೀವು ಬಲಶಾಲಿಯಾಗಬಲ್ಲಿರಿ" ಎಂದಿದ್ದಾರೆ.

ಸದ್ಯಕ್ಕೆ ಬೇರೆ ಪ್ರಾಜೆಕ್ಟ್‌ ಘೋಷಣೆ ಆಗಿಲ್ಲ...

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಮುಗಿಸಿರುವ ಸಂಜಾನ ಬುರ್ಲಿ ಸದ್ಯ ಏನ್ಮಾಡ್ತಿದ್ದಾರೆ ಎಂದರೆ, ಅದಕ್ಕೆ ಉತ್ತರ ಏನೆಂದರೆ ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಅದರಾಚೆಗೆ ಬೇರೆ ಬೇರೆ ಪ್ರಾಜೆಕ್ಟ್‌ಗಳ ಮುಖಮಾಡಿದ್ದಾರಾದರೂ, ಈ ವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಈ ನಡುವೆ ಸೀರಿಯಲ್‌ನಲ್ಲಿಯೇ ಇರುತ್ತಾರಾ ಅಥವಾ ಸಿನಿಮಾ ಕ್ಷೇತ್ರಕ್ಕೆ ಮತ್ತೆ ಇಳಿಯುತ್ತಾರಾ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಸ್ನೇಹಾ ನೆನಪಲ್ಲಿಯೇ ಇದ್ದಾರೆ ವೀಕ್ಷಕರು..

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಜಿಲ್ಲಾಧಿಕಾರಿಯಾದ ಸ್ನೇಹಾ ಹೆಚ್ಚು ದಿನ ಬದುಕಲಿಲ್ಲ. ಭೀಕರ ಅಪಘಾತದಲ್ಲಿ ಆಕೆ ಪ್ರಾಣ ಚೆಲ್ಲುತ್ತಾಳೆ. ಸೀರಿಯಲ್‌ ವೀಕ್ಷಕರಿಗೂ ಇದು ಅರಗಿಸಿಕೊಳ್ಳದ ದೃಶ್ಯವಾಗಿತ್ತು. ಎಷ್ಟೋ ಮಂದಿ ಇನ್ಮುಂದೆ ಈ ಧಾರಾವಾಹಿ ನೋಡಲ್ಲ ಎಂದೇ ಹೇಳಿಕೊಂಡಿದ್ದರು. ಸ್ನೇಹಾ ಇಲ್ಲದ ಸೀರಿಯಲ್‌ ನಮಗೆ ಬೇಡ ಎಂದಿದ್ದರು. ಆದರೆ, ಕಥೆ ಮುಂದೆ ಸಾಗಲೇಬೇಕು. ಪಾತ್ರಗಳೂ ಬದಲಾಗಲೇಬೇಕು. ಈ ಬದಲಾವಣೆಗೆ ಜನ ಮತ್ತೆ ಒಗ್ಗಿಕೊಂಡಿದ್ದಾರೆ. ಟಿಆರ್‌ಪಿ ರೇಸ್‌ನಲ್ಲಿಯೂ ಈ ಸೀರಿಯಲ್‌ ಈಗ ಮುಂದಡಿ ಇರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ