logo
ಕನ್ನಡ ಸುದ್ದಿ  /  ಮನರಂಜನೆ  /   Yami Gautam: ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ,ಚಿತ್ರರಂಗದವರ ವರ್ತನೆ ಬೇಸರ ತರಿಸಿದೆ..ಸಿನಿಮಾ ಬಿಡಲು ನಿರ್ಧರಿಸಿದ್ರಾ 'ಉಲ್ಲಾಸ ಉತ್ಸಾಹ' ನಟಿ?

Yami Gautam: ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ,ಚಿತ್ರರಂಗದವರ ವರ್ತನೆ ಬೇಸರ ತರಿಸಿದೆ..ಸಿನಿಮಾ ಬಿಡಲು ನಿರ್ಧರಿಸಿದ್ರಾ 'ಉಲ್ಲಾಸ ಉತ್ಸಾಹ' ನಟಿ?

HT Kannada Desk HT Kannada

Jan 02, 2023 10:52 AM IST

google News

ಚಿತ್ರರಂಗ ತೊರೆಯಲು ನಿರ್ಧರಿಸಿದ್ದ ಯಾಮಿ ಗೌತಮ್

    • ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ. ಅಂದಕ್ಕೆ, ಎಕ್ಸ್‌ಪೋಸ್‌ಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ನನಗೆ ಯಾರ ಬಗ್ಗೆಯೂ ಕೋಪವಿಲ್ಲ. ನನ್ನಂತೆ ಅನೇಕ ಮಹಿಳೆಯರು ವೃತ್ತಿ ಜೀವನದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಂತ ಇದು ಪ್ರಚಾರವಲ್ಲ. ಅವಾರ್ಡ್‌ ಫಂಕ್ಷನ್‌ಗಳಂತೆ ಇಲ್ಲೂ ಸಮಸ್ಯೆ ಇದೆ.
ಚಿತ್ರರಂಗ ತೊರೆಯಲು ನಿರ್ಧರಿಸಿದ್ದ ಯಾಮಿ ಗೌತಮ್
ಚಿತ್ರರಂಗ ತೊರೆಯಲು ನಿರ್ಧರಿಸಿದ್ದ ಯಾಮಿ ಗೌತಮ್ (PC: Yami Gautam Facebook)

ಬಾಲಿವುಡ್‌ನ ಪ್ರತಿಭಾನ್ವಿತ ನಟಿಯರಲ್ಲಿ ಯಾಮಿ ಗೌತಮ್‌ (Yami Gautam) ಕೂಡಾ ಒಬ್ಬರು. ಎಕ್ಸ್‌ಪೋಸ್‌ನಿಂದಲೇ ತುಂಬಿರುವ ಬಾಲಿವುಡ್‌ನಲ್ಲಿ ಪ್ರತಿಭೆಯಿಂದಲೇ ಗುರುತಿಸಿಕೊಂಡಿರುವ ಕೆಲವೇ ಕೆಲವು ನಟಿಯರಲ್ಲಿ ಯಾಮಿ ಕೂಡಾ ಒಬ್ಬರು. ಹಿಂದಿ ಮಾತ್ರವಲ್ಲ ಕನ್ನಡ, ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಕೂಡಾ ಯಾಮಿ ಗುರುತಿಸಿಕೊಂಡಿದ್ದಾರೆ. ಅನೇಕ ಜಾಹೀರಾತುಗಳಲ್ಲಿ ಕೂಡಾ ನಟಿಸಿದ್ದಾರೆ.

ಯಾಮಿ ಕರಿಯರ್‌ ಆರಂಭಿಸಿದ್ದು 2009ರಲ್ಲಿ ತೆರೆ ಕಂಡ 'ಉಲ್ಲಾಸ ಉತ್ಸಾಹ' ಕನ್ನಡ ಚಿತ್ರದ ಮೂಲಕ. ನಂತರ ಹಿಂದಿಯಲ್ಲಿ ಅವರು ನಟಿಸಿದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಬಾಲಾ', 'ವಿಕ್ಕಿ ಡೋನರ್', 'ಕಾಬಿಲ್' ಮತ್ತು 'ಬದ್ಲಾಪುರ್' ನಂತಹ ಸಿನಿಮಾದ ನಟನೆಗಾಗಿ ಯಾಮಿ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸಿದ್ದಾರೆ. ಯಾಮಿಗೆ ಕೂಡಾ ಸಾಕಷ್ಟು ಫ್ಯಾನ್‌ ಫಾಲೋಯಿಂಗ್‌ ಇದೆ. 2021 ರಲ್ಲಿ 'ಉರಿ' ಚಿತ್ರದ ನಿರ್ದೇಶಕ ಆದಿತ್ಯಧರ್‌ ಅವರನ್ನು ಕೈ ಹಿಡಿದ ಯಾಮಿ ಗೌತಮ್‌ ಮದುವೆಯಾದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಫೇರ್‌ ಅಂಡ್‌ ಲವ್‌ ಲಿ ಚೆಲುವೆ ಸಿನಿಮಾರಂಗವನ್ನು ಬಿಡುವ ನಿರ್ಧಾರ ಮಾಡಿದ್ದಾರೆ ಎಂಬ ಗುಸು ಗುಸು ಬಾಲಿವುಡ್‌ ವಲಯದಲ್ಲಿ ಕೇಳಿ ಬರುತ್ತಿದೆ. ಇತ್ತೀಚಿನ ಸಿನಿಮಾ ಇಂಟರ್‌ವ್ಯೂ ಒಂದರಲ್ಲಿ ಯಾಮಿ ಗೌತಮ್‌ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಲ್ಲ, ಒಂದು ಕಾಲದಲ್ಲಿ ನಾನು ಇಂಡಸ್ಟ್ರಿ ಬಿಡಲು ನಿರ್ಧರಿಸಿದ್ದು ನಿಜ ಎಂದು ಹೇಳಿದ್ದಾರೆ.

''ನಾನು ಒಂದು ಸಮಯದಲ್ಲಿ ಚಿತ್ರರಂಗವನ್ನು ತೊರೆಯಲು ನಿರ್ಧಾರ ಮಾಡಿದ್ದೆ. ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ. ಅಂದಕ್ಕೆ, ಎಕ್ಸ್‌ಪೋಸ್‌ಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ನನಗೆ ಯಾರ ಬಗ್ಗೆಯೂ ಕೋಪವಿಲ್ಲ. ನನ್ನಂತೆ ಅನೇಕ ಮಹಿಳೆಯರು ವೃತ್ತಿ ಜೀವನದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಂತ ಇದು ಪ್ರಚಾರವಲ್ಲ. ಅವಾರ್ಡ್‌ ಫಂಕ್ಷನ್‌ಗಳಂತೆ ಇಲ್ಲೂ ಸಮಸ್ಯೆ ಇದೆ. ಹೊರಗಿನ ಪ್ರಪಂಚಕ್ಕೆ ಯಾವುದು ಸತ್ಯ? ಯಾವುದು ಸುಳ್ಳು ಎಂದು ತಿಳಿಯುವುದಿಲ್ಲ. ನಾವು ಸ್ಟಾರ್‌ಗಳು, ನಾವು ಸುಖ ಸಂತೋಷದಿಂದ ಜೀವನ ನಡೆಸುತ್ತೇವೆ, ನಮಗೆ ಏನೂ ಸಮಸ್ಯೆಗಳು ಇರುವುದಿಲ್ಲ ಎಂದೇ ಎಲ್ಲರೂ ತಪ್ಪು ತಿಳಿದಿರುತ್ತಾರೆ. ಆದರೆ ಒಳಗಿನ ಹುಳುಕು ಯಾರಿಗೂ ತಿಳಿಯುವುದಿಲ್ಲ.''

''ಪಾಪರಾಜಿಗಳು ನಮ್ಮನ್ನು ಫಾಲೋ ಮಾಡುವುದು, ಫೋಟೋ ಕ್ಲಿಕ್‌ ಮಾಡುವುದು, ಲಕ್ಷಾಂತರ ಜನರು ನಮ್ಮನ್ನು ಫಾಲೋ ಮಾಡುವುದು , ಯಾರಿಗೂ ಮುಖ್ಯವಲ್ಲ. ನಾವು ಯಾವ ರೀತಿಯ ಸಿನಿಮಾಗಳನ್ನು ಮಾಡುತ್ತೇವೆ ಅನ್ನೋದು ಬಹಳ ಮುಖ್ಯ. ಆದರೆ ಕೆಲವು ನಿರ್ಮಾಪಕರ, ನಿರ್ದೇಶಕರ ವರ್ತನೆ ನನಗೆ ಬೇಸರ ತರಿಸಿತ್ತು. ಆಗಲೇ ಸಿನಿಮಾರಂಗವನ್ನು ಬಿಡಲು ನಿರ್ಧರಿಸಿದ್ದೆ, ಎಷ್ಟೇ ಉತ್ತಮ ಅಭಿನಯ ನೀಡಿದರೂ ಚಿತ್ರರಂಗದಲ್ಲಿ ನನಗೆ ದೊರೆಯಬೇಕಿದ್ದ ಮನ್ನಣೆ ದೊರೆಯುತ್ತಿಲ್ಲ ಎಂಬ ಬೇಸರ ಇತ್ತು. ಈ ಬಗ್ಗೆ ತಾಯಿಯೊಂದಿಗೆ ಕೂಡಾ ಮಾತನಾಡಿದ್ದೆ. ಅಮ್ಮ ಕೂಡಾ ವಾಪಸ್‌ ಬಂದು ಬಿಡು ಎಂದಿದ್ದರು, ಕಾರಣಾಂತರಗಳಿಂದ ಮತ್ತೆ ನನ್ನ ನಿರ್ಧಾರ ಬದಲಿಸಬೇಕಾಯ್ತು. ಆದರೆ ಈಗಲೂ ಬೇಸರ ಇದೆ ಎಂದು ಯಾಮಿ ಗೌತಮ್‌ ಹೇಳಿದ್ದಾರೆ.'' ಯಾಮಿ, ಸದ್ಯಕ್ಕೆ ಲಾಸ್ಟ್‌, ಚೋರ್‌ ನಿಕಲ್‌ ಕೇ ಭಾಗಾ, ಓ ಮೈ ಗಾಡ್‌ 2 ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ