AAP 3rd List: ಎಎಪಿ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ; 28 ಕ್ಷೇತ್ರಗಳಿಗೆ ಹುರಿಯಾಳುಗಳ ವಿವರ ಹೀಗಿದೆ ನೋಡಿ
Apr 10, 2023 07:18 PM IST
ರಾಜ್ಯ ವಿಧಾನಸಭೆ ಚುನಾವಣೆಗೆ ಎಎಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಎಎಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು (Aam Aadmi Party) ಮುಂಬರುವ ವಿಧಾನಸಭೆ ಚುನಾವಣೆಗೆ (Assembly Elections) ತನ್ನ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು (AAP 3rd List) ಬಿಡುಗಡೆ ಮಾಡಿದೆ.
ಕಾಂಗ್ರೆಸ್ (Congress) ಹಾಗೂ ಜೆಡಿಎಸ್ ಗೆ (JDS) ಹೋಲಿಸಿಕೊಂಡರೆ ಈವರೆಗೆ ಎಎಪಿಯು (AAP) ಅತಿ ಹೆಚ್ಚು ಅಭ್ಯರ್ಥಿಗಳನ್ನು ಘೊಷಣೆ ಮಾಡಿದೆ. ಮೂರು ಹಂತಗಳಲ್ಲಿ ಒಟ್ಟಾರೆಯಾಗಿ 168 ಕ್ಷೇತ್ರಗಳನ್ನು ಬಿಡುಗಡೆ ಮಾಡಿದಂತಾಗಿದೆ.
ಎಎಪಿಯ ವಿಶೇಷವೆಂದರೆ ಅತಿ ಹೆಚ್ಚು ರೈತರು, ಯುವಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ತಿಳಿಯಲು ನಾವು ನೋಡಿರುವುದು ಅವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಯನ್ನೇ ಹೊರತು ಅವರ ಹಣಬಲ ಮತ್ತು ತೋಳ್ಬಲವನ್ನಲ್ಲ. ಮೂರೂ ಹಳೇ ಪಕ್ಷಗಳನ್ನು ನೋಡಿ, ಅವರ ಮೋಸ ಅನುಭವಿಸಿ ರಾಜ್ಯದ ಜನತೆಗೆ ಸಾಕಾಗಿದೆ, ಒಂದು ಸೂಕ್ತ ಪರ್ಯಾಯ ಬೇಕಾಗಿದೆ, ಅದನ್ನು ನೀಡಲು ಎಎಪಿ ಸಿದ್ದಗೊಂಡದೆ ಎಂದು ಪಟ್ಟಿ ಬಿಡುಗಡೆ ಬಳಿಕ ಎಎಪಿ ನಾಯಕರು ತಿಳಿಸಿದ್ದಾರೆ.
ಒಟ್ಟು 168 ಅಭ್ಯರ್ಥಿಗಳ ಪೈಕಿ, 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು ಹಾಗೂ 10 ಇಂಜಿನಿಯರ್ ಗಳು ಇದ್ದಾರೆ. ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು - 5, ಮಾಸ್ಟರ್ ಡಿಗ್ರಿ ಹೊಂದಿರುವ 41 ಅಭ್ಯರ್ಥಿಗಳು, ಪದವಿ ಹೊಂದಿರುವ 82 ಅಭ್ಯರ್ಥಿಗಳು ಇದ್ದಾರೆ. ಜೊತೆಗೆ 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ.
ನಮ್ಮ ಅಭ್ಯರ್ಥಗಳ ಸದ್ಗುಣದ ಆಧಾರದಲ್ಲಿ, ನಮ್ಮ ಪಕ್ಷವು ಪಂಜಾಬ್ ಮತ್ತು ದೆಹಲಿಯಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಕೆಲಸಗಳ ಆಧಾರದ ಮೇಲೆ ನಾವು ಈ ಚುನಾವಣೆಯನ್ನು ನಡೆಸುತ್ತೇವೆ. ದೆಹಲಿ ಮತ್ತು ಪಂಜಾಬ್ ನಲ್ಲಿ ಸಿಗುತ್ತಿರುವ ಜನಪರ ಆಡಳಿತವನ್ನು ನೀಡಲು ಸಿದ್ದಗೊಂಡಿರುವ ನಮಗೆ ಕರ್ನಾಟಕದ ಜನರು ಆಶೀರ್ವಾದ ಮಾಡಿ, ಮತ ನೀಡುತ್ತಾರೆ ಎಂದು ಅಚಲವಾಗಿ ನಂಬಿದ್ದೇವೆ ಎಂದು ಎಎಪಿ ನಾಯಕರು ವಿವರಿಸಿದ್ದಾರೆ.
ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರಸ್ ಮತ್ತು ವಿಶ್ವದ ಅತಿದೊಡ್ಡ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ಕರ್ನಾಟಕ ರಾಜಕೀಯದಲ್ಲಿ ಎಎಪಿ ಇರುವುದನ್ನು ನೋಡಿ ಭಯ ಪಟ್ಟಿವೆ. ಅವರ ಶತಮಾನಗಳ ಲೂಟಿ ರಾಜಕೀಯ ಅಂತ್ಯಗೊಳ್ಳುತ್ತದೆ ಎಂಬ ದಿಗಿಲು ಅವರಲ್ಲಿದೆ.
ನಮ್ಮ ಅಭ್ಯರ್ಥಿಗಳನ್ನು ತಡೆಯಲು ಅವರು ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ, ಬಗ್ಗದಿದ್ದಲ್ಲಿ ಹಣಬಲ ಮತ್ತು ತೋಳ್ಬಲದಿಂದ ನಮ್ಮನ್ನು ಭಯಪಡಿಸುತ್ತಿದ್ದಾರೆ. ಅವರ ಪ್ರಚಾರ ವೈಖರಿಯಲ್ಲಿ ಅಥವಾ ಅವರು ಮಾಡಿರುವ ಕೆಲಸದಲ್ಲಿ ಅವರಿಗೆ ನಂಬಿಕೆಯೇ ಇಲ್ಲದಿರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಸುಮ್ಮನಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.