Anna Bhagya Politics: ಬಿಜೆಪಿಯಿಂದ ಕರ್ನಾಟಕಕ್ಕೆ ದ್ರೋಹ; ಡಿಕೆ ಶಿವಕುಮಾರ್ ಆಕ್ರೋಶ
Jun 28, 2023 04:41 PM IST
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ)
Anna Bhagya Politics: ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅನ್ನಭಾಗ್ಯದ ಅಕ್ಕಿ ಬದಲು ಹಣ ನೀಡುವ ತೀರ್ಮಾನ ತೆಗೆದುಕೊಂಡಿರುವುದನ್ನು ಕಾಂಗ್ರೆಸ್ ನಾಯಕರು ಸಮರ್ಥಿಸುತ್ತಿದ್ದಾರೆ. ಯಾರು ಏನು ಹೇಳಿದರು? ಇಲ್ಲಿದೆ ವಿವರ.
ಬೆಂಗಳೂರು: ಅನ್ನಭಾಗ್ಯದ ಅಕ್ಕಿ ವಿತರಣೆಗೆ ಸಮಸ್ಯೆ ಆದ ಕಾರಣ ಅಕ್ಕಿಯ ಬದಲು ಹಣ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸರಿಯಾದ ತೀರ್ಮಾನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಅಸಹಕಾರ ಹೆಚ್ಚಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಉದ್ದೇಶಪೂರ್ವಕವಾಗಿ ಈ ವಿಚಾರದಲ್ಲಿ ರಾಜಕಾರಣ ಮಾಡಿದೆ. ಅವರಿಗೆ ಅಕ್ಕಿ ಸಂಗ್ರಹದ ಅಧಿಕಾರ ಇದೆ. ಸದ್ಯಕ್ಕೆ ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಕೆಲವು ಕಡೆ ಅಕ್ಕಿ ಕೊಡಲು ಬದ್ಧರಾಗಿದ್ದಾರೆ. ಕೆಲವರು ಒಂದು, ಮೂರು, ಆರು ತಿಂಗಳಿಗೆ ಕೊಡ್ತೀವಿ ಅಂತ ಹೇಳ್ತಿದ್ಆರೆ. ಅದಕ್ಕೆ ನಾವು ಇಂಥ ತೀರ್ಮಾನ ತಗೊಂಡ್ವಿ. ಬಿಜೆಪಿಯವರು ನಮ್ಮ ಗ್ಯಾರೆಂಟಿ ಫೇಲ್ ಮಾಡಬೇಕು ಅಂತ ನಾವು ಬದ್ಧರಾಗಿದ್ದೇವೆ. ಅದಕ್ಕೆ ಈ ತೀರ್ಮಾನ. ಅಕ್ಕಿ ಸಂಗ್ರಹಕ್ಕೆ ಯೋಜನೆ ರೂಪಿಸುತ್ತೇವೆ. ಒಂದು ದಿನಕ್ಕೆ ಭತ್ತ ಬೆಳೆದು ಅಕ್ಕಿ ಮಾಡಲು ಆಗಲ್ಲ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಬಿಜೆಪಿ ನಾಯಕರು ಕೇಂದ್ರದಿಂದ ಅಕ್ಕಿ ಕೊಡಿಸಬೇಕು. ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡಲಿ. ಅದು ಬಿಟ್ಟು ವಿಕೃತ ಹೇಳಿಕೆ ಕೊಟ್ಟರೆ ಏನು ಪ್ರಯೋಜನ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನಮ್ಮ ಮಾತು ಕೇಳಿಸಿಕೊಳ್ಳಲಿಲ್ಲ, ಸ್ಪಂದಿಸಲಿಲ್ಲ. ಕಟೀಲು, ಬೊಮ್ಮಾಯಿ ಅವರು ವಿಕೃತವಾಗಿ ನಡೆದುಕೊಂಡಿದ್ದಾರೆ. ನಮಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ. ನಾವು ಜುಲೈ 1ರಿಂದ ಅನ್ನಭಾಗ್ಯ ಜಾರಿ ಮಾಡಲಾಗುವುದು ಎಂದು ಹೇಳಿದ್ದೆವು. ಮಾತು ಉಳಿಸಿಕೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಫ್‌ಕೆಸಿಸಿಐ ಸರ್ಕಾರಗಳು ಹರಾಜಿನಲ್ಲಿ ಪಾಲ್ಗೊಳ್ಳಬಾರದು ಎಂಬ ಷರತ್ತು ಹಾಕಿದೆ. ಇದೆಂಥ ವಿಪರ್ಯಾಸ.
- ಸಚಿವ ದಿನೇಶ್ ಗುಂಡೂರಾವ್
ಅಕ್ಕಿ ಸಿಗುವವರೆಗೆ ಅದರ ಬದಲು ಹಣ ಕೊಡುತ್ತೇವೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಏನೇ ತೊಡರುಗಾಲು ಹಾಕಿದರೂ ನಮ್ಮ ಗ್ಯಾರಂಟಿಗಳು ಅನುಷ್ಠಾನಕ್ಕೆ ಬರುತ್ತವೆ. ಇದರಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ.