logo
ಕನ್ನಡ ಸುದ್ದಿ  /  ಕರ್ನಾಟಕ  /  Bagalkote: ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ; ಬಾಗಲಕೋಟೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು

Bagalkote: ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ; ಬಾಗಲಕೋಟೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು

Meghana B HT Kannada

Jan 29, 2024 04:23 PM IST

google News

ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ

    • Bagalkote road accident: ಭಾನುವಾರ (ಜ.28) ರಾತ್ರಿ 12 ಗಂಟೆ ಸುಮಾರಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಮುಗಿಸಿಕೊಂಡು ಶಾಲಾ ವಾಹನದಲ್ಲಿ ಮಕ್ಕಳು ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ ಕಬ್ಬಿನ ಟ್ರ್ಯಾಕ್ಟರ್​​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.  (ವರದಿ: ಸಮೀವುಲ್ಲಾ ಉಸ್ತಾದ)
ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ
ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ

ಬಾಗಲಕೋಟೆ: ಜಮಖಂಡಿ ತಾಲೂಕು ಆಲಗೂರ ಗ್ರಾಮದ ರಸ್ತೆಯ ಮೇಲೆ ನಿಲ್ಲಿಸಿದ ಕಬ್ಬಿನ ಟ್ರ್ಯಾಕ್ಟರ್​​​ಗೆ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿ, 28ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಜಮಖಂಡಿ ತಾಲ್ಲೂಕಿನ ಕವಟಗಿ ಗ್ರಾಮದ ವಿದ್ಯಾರ್ಥಿ ಗೋವಿಂದ ಸದಾಶಿವ ಜಂಬಗಿ (13), ಶ್ವೇತಾ ಶಿವನಗೌಡ ಪಾಟೀಲ (12), ಬಸವರಾಜ ಕೊಟ್ಟಗಿ (17), ಸಾಗರ ಗುರಲಿಂಗ ಕಡಕೋಳ (16) ಸಾವನಪ್ಪಿದ್ದಾರೆ.

ಗಾಯಗೊಂಡ ಕೆಲ ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕೆಲ ವಿದ್ಯಾರ್ಥಿಗಳನ್ನು ಪಾಲಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಲಗೂರಿನ ವರ್ಧಮಾನ ನ್ಯಾಮಗೌಡ ಖಾಸಗಿ ಶಾಲೆಯಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಮುಗಿಸಿಕೊಂಡು ಶಾಲಾ ವಾಹನದಲ್ಲಿ ಮಕ್ಕಳು ಮನೆಗೆ ಹೋಗುವ ಸಂದರ್ಭದಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ ಕಬ್ಬಿನ ಟ್ರ್ಯಾಕ್ಟರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ.

ಸರ್ಕಾರಿ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ತಡ ರಾತ್ರಿ ಜಿಲ್ಲಾ ಎಸ್.ಪಿ. ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಶಾಸಕ ಜಗದೀಶ ಗುಡಗುಂಟಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಕೆ ಎಂ ಜಾನಕಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೋರೆರೆ, ಎಸಿ ಸಂತೋಷ ಕಾಮಗೊಂಡ, ಡಿ.ಎಸ್.ಪಿ ಶಾಂತವೀರ ಈ, ತಹಶೀಲ್ದಾರ ಸದಾಶಿವ ಮಕ್ಕೋಜಿ, ಬಿಇಒ ಅಶೋಕ ಬಸನ್ನವರ, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಸಿಪಿಐ ಮಲ್ಲಪ್ಪ ಮಡ್ಡಿ ಸೇರಿದಂತೆ ಅನೇಕರು ಭೇಟಿ ನೀಡಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ