logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Power Cut: ಬೆಂಗಳೂರು ನಗರ ಹಾಗೂ ಸುತ್ತಮುತ್ತ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್‌ ಇರೋಲ್ಲ ಗಮನಿಸಿ

Bangalore Power Cut: ಬೆಂಗಳೂರು ನಗರ ಹಾಗೂ ಸುತ್ತಮುತ್ತ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಕರೆಂಟ್‌ ಇರೋಲ್ಲ ಗಮನಿಸಿ

Umesha Bhatta P H HT Kannada

Published Jan 16, 2025 07:27 PM IST

google News

ಬೆಂಗಳೂರಿನ ಹಲವು ಕಡೆ ಈ ವಾರಾಂತ್ಯ ವಿದ್ಯುತ್‌ ಕಡಿತವಾಗಲಿದೆ.

    • Bangalore Power Cut: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ವಾರಾಂತ್ಯದಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 
ಬೆಂಗಳೂರಿನ ಹಲವು ಕಡೆ ಈ ವಾರಾಂತ್ಯ ವಿದ್ಯುತ್‌ ಕಡಿತವಾಗಲಿದೆ.
ಬೆಂಗಳೂರಿನ ಹಲವು ಕಡೆ ಈ ವಾರಾಂತ್ಯ ವಿದ್ಯುತ್‌ ಕಡಿತವಾಗಲಿದೆ.

ಬೆಂಗಳೂರು: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ವಾರಾಂತ್ಯದಂದು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್‌ನ ವಿದ್ಯುತ್‌ ಮಾರ್ಗಗಳ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ 2025ರ ಜನವರಿ 18 ಹಾಗೂ 19ರಂದು ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಾಸಗಳಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಂಗಳೂರು: 220/66/11 ಕೆವಿ ಐ.ಟಿ.ಐ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ .2025ರ ಜನವರಿ 18 ರ ಶನಿವಾರದಂದು ಬೆಳಗ್ಗೆ 10ರಿಂದ ಸಂಜೆ ಗಂಟೆವರೆಗೆ 5 ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜೈ ಭುವನೇಶ್ವರ ಲೇಔಟ್, ಕೆಆರ್ ಪುರಂ ಮುಖ್ಯರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತ, ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿಸಿ ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ ಮತ್ತು ಯರಪ್ಪನ ಪಾಳ್ಯ, ಕುವೆಂಪು ನಗರ, ರಾಮಮೂರ್ತಿ ನಗರ, ಎನ್‌ಆರ್‌ಐ ಲೇಔಟ್ ರಾಮಮೂರ್ತಿ ನಗರ, ಸಿಎಎನ್‌ವಿ ಲೇಔಟ್ ರಾಮಮೂರ್ತಿ ಮೇನ್ ರಸ್ತೆ, ರಾಘವೇಂದ್ರ ವೃತ್ತ, ಸೀ ಕಾಲೇಜ್, ಆಲ್ಫಾ ಗಾರ್ಡನ್, ಸ್ವತಂತ್ರ ನಗರ, ರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್, ಆಲ್ಫಾ ಗಾರ್ಡನ್ ಲೇಔಟ್, ಕೋ ಕೋನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆಆರ್ಆರ್ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಮತ್ತು ವಾರಣಾಸಿ ಲೇಕ್, ಗ್ಯಾಸ್ ಗೂಡೌನ್ ಮುಖ್ಯ ರಸ್ತೆ, ಎನ್ಆರ್ಐ 5 ನೇ. ಮುಖ್ಯ ರಸ್ತೆ, ಗ್ರೀನ್‌ವುಡ್ ಲೇಔಟ್, ಭೂಶ್ರೇಷ್ಟ ಲೇಔಟ್, ಪ್ರತಿಷ್ಠಾನ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಜೆಕೆ ಹಳ್ಳಿ ಹಳ್ಳಿ, ಪ್ರಸ್ತುತ ಎಫ್ 7 ಟಿಸಿ ಪಾಳ್ಯ ಬೃಂದಾವನ ಲೇಔಟ್, ಸನ್ಶೈನ್ ಲೇಔಟ್, ಗಾರ್ಡನ್ ಸಿಟಿ ಕಾಲೇಜು, ಲೇಕ್ ವ್ಯೂ ಸಿಟಿ, ಆನಂದಪುರ, ಮಾನ್ಸೂನ್ ಪಬ್ಲಿಕ್ ಸ್ಕೂಲ್ ರಸ್ತೆ, ಸಾಯಿ ಗಾರ್ಡನ್, ಮದರ್ ಥೆರೆಸಾ ಸ್ಕೂಲ್ ರಸ್ತೆ, ಟಿಸಿ ಪಾಳ್ಯ ಮಾ. ರಸ್ತೆ, ಹೊಯಸಲ ನಗರ 1ನೇ ಮುಖ್ಯ, 2ನೇ ಮುಖ್ಯ, 3 ನೇ ಮುಖ್ಯ ಮತ್ತು 6 ನೇ ಮುಖ್ಯ, ಬಿಡಬ್ಲುಎಸ್‌ಎಸ್‌ಬಿ ಮತ್ತು ರಾಮಮೂರ್ತಿ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳುಲ್ಲ ಕರೆಂಟ್‌ ಇರೋಲ್ಲ.

ಅದೇ ದಿನ ಆದರ್ಶ್ ಟೆಕ್ ಪಾರ್ಕ್, ಜೆಕೆ ಹೋಟೆಲ್, ಕ್ವಾಲ್ಕಾಮ್ ಎಂಟರ್‌ಪ್ರೈಸಸ್, ಮುಂದಿನ ಡೇಟಾ (ಏರ್‌ಟೆಲ್), ಎನ್‌ಟಿಟಿ ಡೇಟಾ, ಎಸ್‌ಎಪಿ ಲ್ಯಾಬ್, ಗೋಪಾಲನ್ ಎಂಟರ್‌ಪ್ರೈಸಸ್, ಇನ್ಫ್ರೋ, ವಿ.ಕೆ. ಟೆಕ್ ಪಾರ್ಕ್, ನರುಲ್ಲಹಳ್ಳಿ, ರಾಮಗೊಂಡನಹಳ್ಳಿ, ಬೋರ್‌ವೆಲ್ ರಸ್ತೆ, ಎಂಫಾರ್‌ಸಿಲ್ವರ್‌ಲೈನ್, ನೇತ್ರಾ ಟೆಕ್ ಪಾರ್ಕ್, ಅನಂತ ಪರಿಹಾರಗಳು, ಎಲೆಕ್ಟ್ರೋಮ್ಸ್, ಶ್ರೀ ರಾಬರ್ಟ್ ಕ್ರಿಸ್ಟೋಫರ್ಸ್, ಶ್ರೀ ಚೈತನ್ಯ ಪ್ರಾಪರ್ಟೀಸ್, ಅಭಿಲಾಷ್ ಸಾಫ್ಟ್‌ವೇರ್ ಅಭಿವೃದ್ಧಿ, ಟ್ರ್ಯಾಕ್ ಮತ್ತು ಸೇವೆ, ಪೆರೋಟ್ ಸಿಸ್ಟಮ್ M/S ಶ್ರೇಯಾಂಕ್ ಎಂಟರ್‌ಪ್ರೈಸ್ ,ಇಂಡಿಯೋನ್ ಹೋಟೆಲ್ ಪ್ರೈವೇಟ್ ಲಿಮಿಟೆಡ್, ಕ್ವಾಲ್ಕಾಮ್ ಬ್ಲಾಕ್ 2, ಮೈಂಡ್ ಟ್ರೀ, ಜಿಂಜರ್ ಹೋಟೆಲ್, ಆಶಿಶ್ ಸಿಮ್ರಾನ್, ವೈದೇಹಿ ಆಸ್ಪತ್ರೆ, ಎಸ್‌ಜೆಆರ್‌ ಟೆಕ್ ಪಾರ್ಕ್, ಸಂತೋಷ್ ಟವರ್ಸ್, ಶೈಲೇಂದ್ರ ಟೆಕ್ ಪಾರ್ಕ್, ಕ್ವಾಲ್ಕಾಮ್ ಸಿ ಬ್ಲಾಕ್, ಬಿಜೆಪಿ ಡೆವೆಲ್ಪರ್ ಬ್ಲಾಕ್ , ಐ ಗೇಟ್ ಪರಿಹಾರಗಳು & ಇಪಿಐಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿಕ್ಟೋರಿಯಾ ಕೇಂದ್ರ

ವಿಕ್ಟೋರಿಯಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಂದು “ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್‌ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ನೆಫ್ರೋರಾಲಜಿ, ಮಿಂಟೊ, ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರತ್ ಪೇಟೆ, ತಿಗಳರಪೇಟೆ, ಎನ್, ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆ, ಎಸ್‌ಜೆಪಿ ಪಾರ್ಕ್, ಬಸಪ್ಪ ವೃತ್ತ, ಕೆಆರ್ ರಸ್ತೆ, ಕೋಟೆ ಬೀದಿ, ಕಲಾಸಿಪಾಳ್ಯ ಮುಖ್ಯ ರಸ್ತೆ, ಪಟ್ನೂಲ್‌ಪೇಟೆ, ಹಳೆ ಕಸಾಯಿಖಾನೆ ರಸ್ತೆ, ನಗರತ್ ಪೇಟೆ ಮುಖ್ಯರಸ್ತೆ, ಕುಂಬಾರಪೇಟೆ ಮುಖ್ಯರಸ್ತೆ, ಅಪ್ಪುರಾಯಪ್ಪ ಲೇನ್, ಎಂಬಿಟಿ ರಸ್ತೆ, ಪಿಳ್ಳಪ್ಪ ಲೇನ್, ಸಿಆರ್ ಸ್ವಾಮಿ ಬೀದಿ, ಮೇಧರಪೇಟೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ, ಆರ್.ಟಿ.ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಒಟಿ ಪೆಟ್, ಒಟಿಸಿ ರಸ್ತೆ, ಗುಂಡೋಪಂಥ್ ಬೀದಿ, ಮಾಮೂಲ್‌ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಜರಾಜು ಇರುವುದಿಲ್ಲ.

ಜಯದೇವ ಉಪಕೇಂದ್ರ

ಜಯದೇವ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಐಎಎಸ್ ಕಾಲೋನಿ, ಕೆಎಎಸ್ ಕಾಲೋನಿ, ಎನ್.ಎಸ್ ಪಾಳ್ಯ ಇಂಡಸ್ಟ್ರಿಯರ್ ಏರಿಯಾ, ಜಾಹ್ನಾವಿ ಎನ್ಕ್ಲೇವ್, ಅನಂತ ಲೇಔಟ್, ಬಿಳೆಕಹಳ್ಳಿ ಮ್ಯೇನ್ ರೋಡ್, ಜಯನಗರ 4, 9ನೇ ಟಿ ಬ್ಲಾಕ್, ಜಯನಗರ ಈಸ್ಟ್ ಎಂಡ್, ಎಬಿಸಿಡಿ ರಸ್ತೆ, ಬಿಹೆಚ್ ಇಎಲ್ ಲೇಔಟ್, ಎಸ್ ಆರ್ ಕೆ ಗಾರ್ಡನ್, ಎನ್ ಎಲ್ ಲೇಔಟ್, ತಿಲಕ್ ನಗರ, ಶಾಂತಿ ನಗರ, ಜಯದೇವ ಆಸ್ಪತ್ರೆ, ರಂಕ ಕಾಲೋನಿ, ಎನ್.ಎಸ್.ಪಾಳ್ಯ ಮ್ಯೇನ್ ರೋಡ್, ಜಿಆರ್.ಬಿ. ಮ್ಯೇನ್ ರೋಡ್, ಬಿಸ್ಮಿಲ್ಲಾ ನಗರ, ಶೊಭಾ ಅಪಾರ್ಟ್ ಮೆಂಟ್, ದಿವ್ಯಶ್ರೀ ಟನರಸ್, ವೆಗಾಸಿಟಿ ಮಾಲ್, ಏರ್ಟೇಲ್ ಆಫೀಸ್, ಬನ್ನೇರುಘಟ್ಟ ಮೈನ್ ರೋಡ್, ಕೆ.ಇ.ಬಿ. ಕಾಲೋನಿ, ಗುರಪ್ಪನ ಪಾಳ್ಯ, ಬಿಟಿಎಮ್ ಮೊದಲನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

ಭಾನುವಾರ ಎಲ್ಲೆಲ್ಲಿ

66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿಜನವರಿ 19ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗೌರಿಬಿದನೂರು, ಅಲ್ಲಿಪುರ, ರಮಾಪುರ, ಕುಡುಮಲಕುಂಟೆ, ತೋಂಡೇಬಾವಿ, ಎಸಿ.ಸಿ. ಇಹೆಚ್.ಟಿ, ಮಂಚೇನಹಳ್ಳಿ, ವಿಧುರಾಶ್ವಥ, ಪೆರೇಸಂದ್ರ, ಮಂಡಿಕಲ್ಲಿ, ಗಿಡಿಬಂಡೆ, ಡಿ.ಪಾಳ್ಯ, ವಾಟದಹೊಸಳ್ಳಿ, ಜಿ.ಕೊತ್ತೂರು, ಸೋಮೇನಹಳ್ಳಿ, ಬಾಗೇಪಲ್ಲಿ, ಸಾದಲಿ ಮಿಟ್ಟೇಮರಿ, ತಿಮ್ಮಂಪಲ್ಲಿ, ಸೋಮನಾಥಪುರ, ಚೇಳೂರು, ಪಾತಪಾಳ್ಯ, ಚಾಕವೇಲು, ಗೂಳೂರು, ಜೂಲಪಾಳ್ಯ ಸೇರಿದಂತೆ ಈ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೆಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ ಎಂದು ತಿಳಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು