IFS Transfer: 30 ಐಎಫ್‌ಎಸ್ ಅಧಿಕಾರಿಗಳ ವರ್ಗ, ಬೆಂಗಳೂರಿಗೆ ಹೊಸ ಸಿಎಫ್, ಗದಗ, ಧಾರವಾಡಕ್ಕೂ ನೂತನ ಡಿಸಿಎಫ್: ಹೀಗಿದೆ ವರ್ಗಾವಣೆ ಪಟ್ಟಿ
Dec 31, 2023 12:25 PM IST
ಬಿಪಿ ರವಿ, ದೀಪಿಕಾ ಬಾಜಪೈ, ಶಿವಶಂಕರ್ ಸಹಿತ ಹಲವರಿಗೆ ಬಡ್ತಿ ನೀಡಲಾಗಿದೆ. ಸಿವರಾಂ ಬಾಬು ಸಹಿತ ಹಲವರನ್ನು ವರ್ಗ ಮಾಡಲಾಗಿದೆ.
- Karnataka Forest Department ಕರ್ನಾಟಕ ಅರಣ್ಯ ಇಲಾಖೆಯ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನು ಕೆಲವರಿಗೆ ಬಡ್ತಿ ನೀಡಲಾಗಿದೆ. ಈ ಪಟ್ಟಿ ಇಲ್ಲಿದೆ..
ಬೆಂಗಳೂರು: ಕರ್ನಾಟಕದ ಅರಣ್ಯ ಇಲಾಖೆಯಲ್ಲೂ ಭಾರೀ ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ಬಡ್ತಿ ನೀಡಿ ಹೊಸ ಹುದ್ದೆ ನೀಡಲಾಗಿದ್ದರೆ. ಮತ್ತೆ ಕೆಲವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ತೀವ್ರ ಸಂಘಷರ್ದ ಕಾರಣದಿಂದ ಸದ್ದು ಮಾಡುತ್ತಿರುವ ಕರ್ನಾಟಕ ಹುಲಿ ಹಾಗೂ ಆನೆ ಯೋಜನೆಗೆ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ.
ಬೆಂಗಳೂರು ವೃತ್ತಕ್ಕೆ ಹೊಸ ಸಂರಕ್ಷಣಾಧಿಕಾರಿ ನೇಮಿಸಲಾಗಿದ್ದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೂ ಹೊಸ ಅಧಿಕಾರಿ ನಿಯೋಜನೆಗೊಂಡಿದ್ದಾರೆ. ಗದಗ, ಧಾರವಾಡ ವೃತ್ತಗಳಿಗೂ ಹೊಸ ಡಿಸಿಎಫ್‌ಗಳನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಇಲ್ಲಿಗೆ ವರ್ಗಾವಣೆಗೊಂಡ ಪ್ರಮುಖ ಅಧಿಕಾರಿಗಳ ಪಟ್ಟಿ
- ಸೀಮಾ ಗರ್ಗ್ ಅವರನ್ನು ಅರಣ್ಯ ಅಭಿವೃದ್ದಿ ಪಿಸಿಸಿಎಫ್ ಆಗಿ ವರ್ಗಾಯಿಸಲಾಗಿದೆ.
- ಬಿ.ಪಿ. ರವಿ ಅವರಿಗೆ ಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿಯೇ ಮುಂದುವರೆಸಲಾಗಿದೆ.
- ಡಾ.ಸೂರ್ಯದೇವ ಪಾಠಕ್ ಅವರಿಗೆ ಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಿ ಜಲ ಸಂಪನ್ಮೂಲ ಇಲಾಖೆಯ ಭೂಸ್ವಾಧೀನ, ಅರಣ್ಯ ಘಟಕಕ್ಕೆ ವರ್ಗಾಯಿಸಲಾಗಿದೆ.
- ಸಾಸ್ವತಿ ಮಿಶ್ರ ಎಪಿಸಿಸಿಎಫ್ ಅರಣ್ಯ ವಿಚಕ್ಷಣದಳ
- ವಿಪಿನ್ ಸಿಂಗ್ ಎಪಿಸಿಸಿಎಫ್ ಸಂಶೋಧನೆ ಬೆಂಗಳೂರು
- ಡಾ.ಆರ್.ಮನೋಜ್‌ಗೆ ಎಪಿಸಿಸಿಎಫ್ ಹುದ್ದೆಗೆ ಬಡ್ತಿ, ಆನೆ ಯೋಜನೆ ನಿರ್ದೇಶಕರಾಗಿ ನಿಯೋಜನೆ
- ಎಸ್.ಎಸ್.ಲಿಂಗರಾಜ ಎಪಿಸಿಸಿಎಫ್ ಹುದ್ದೆಗೆ ಬಡ್ತಿ, ಹುಲಿ ಯೋಜುನೆ ನಿರ್ದೇಶಕರಾಗಿ ನೇಮಕ
- ದೀಪಿಕಾ ಬಾಜಪೇಯಿ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ಧಾರವಾಡ ಕಾರ್ಯಯೋಜನೆ ಸಿಎಫ್ ಆಗಿ ನಿಯೋಜನೆ
- ಎಸ್.ಎಸ್.ರವಿಶಂಕರ್‌ಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ, ಮೈಸೂರು ಕಾರ್ಯಯೋಜನೆ ಸಿಎಫ್ ಆಗಿ ನೇಮಕ
- ಎಸ್.ಶಿವಶಂಕರ್‌ಗೆ ಸಿಎಓ ಆಗಿ ಬಡ್ತಿ ಬೆಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜನೆ
ಇದನ್ನೂ ಓದಿರಿ: Google Doodle New year:2023ಕ್ಕೆ ವಿದಾಯ, 2024ರ ಹೊಸ ವರ್ಷ ಸ್ವಾಗತಕ್ಕೆ ಗೂಗಲ್ ಡ್ಯೂಡಲ್ ನೋಟ ಹೇಗಿದೆ
- ಯಶಪಾಲ್ ಕ್ಷೀರಸಾಗರ್ ಡಿಸಿಎಫ್ ಭದ್ರಾ ಹುಲಿ ಯೋಜನೆ, ಚಿಕ್ಕಮಗಳೂರು
- ಡಿ.ಮಹೇಶ್ ಕುಮಾರ್, ಮೈಸೂರು ಚಾಮರಾಜೇಂದ್ರ ಮೃಗಾಲಯ
- ಏಡುಕೊಂಡಲು- ಡಿಸಿಎಫ್ ಕೋಲಾರ
- ಎಸ್.ಪ್ರಭಾಕರನ್, ಯಾವುದೇ ಹುದ್ದೆ ಇಲ್ಲ
- ಸೋನಾಲ್ ವೃಶ್ನಿ, ಡಿಸಿಎಫ್ ಕಾರ್ಯಯೋಜನೆ ಚಿಕ್ಕಮಗಳೂರು
- ದೀಪ್ ಜೆ ಕಂಟ್ರಾಕ್ಟರ್ ಡಿಸಿಎಫ್ ಬಿಆರ್‌ಟಿ ಚಾಮರಾಜನಗರ
- ಸಿವರಾಂ ಬಾಬು ಕುದುರೆಮುಖ ವನ್ಯಜೀವಿಧಾಮ, ಕಾರ್ಕಳ
- ಕೆ.ಸಿ.ಪ್ರಶಾಂತ್ ಕುಮಾರ್, ಡಿಸಿಎಫ್ ಕಾರವಾರ
- ಪಿ.ರುದ್ರನ್, ಡಿಸಿಎಫ್ ಅಭಿವೃದ್ದಿ ಬೆಂಗಳೂರು
- ಸಿ.ರವಿಶಂಕರ್, ಡಿಸಿಎಫ್ ಹೊನ್ನಾವರ
- ಅನುಪಮಾ ಎಚ್. ಡಿಸಿಎಫ್ ತುಮಕೂರು
- ಜಿ.ಪಿ. ಹರ್ಷಭಾನು ಡಿಸಿಎಫ್ ಕಾರ್ಯಯೋಜನೆ ಬೆಳಗಾವಿ
- ಪ್ರಸನ್ನಕುಮಾರ್ ಪಟಗಾರ್, ಡಿಸಿಎಫ್ ವನ್ಯಜೀವಿ ಶಿವಮೊಗ್ಗ
- ವೈ.ಕೆ.ದಿನೇಶ್‌ಕುಮಾರ್, ಡಿಸಿಎಫ್ ಎಂಡಿ ಜಿಟಿಟಿಸಿ ಬೆಂಗಳೂರು
ಇದನ್ನೂ ಓದಿರಿ: Kaatera Day 2 Collection: ಕಾಟೇರನ ಬೊಕ್ಕಸಕ್ಕೆ ಎರಡನೇ ದಿನವೂ ಹರಿದು ಬಂತು ಕೋಟಿ ಕೋಟಿ ಹಣ; ಎಷ್ಟಾಯ್ತು ಒಟ್ಟಾರೆ ಕಲೆಕ್ಷನ್?
- ಸರೀನಾ ಸಿಕ್ಕಲಿಗಾರ್, ಡಿಸಿಎಫ್ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ
- ಎನ್.ಇ. ಕ್ರಾಂತಿ, ಎಂಡಿ ಉಗ್ರಾಣ ನಿಗಮ, ಬೆಂಗಳೂರು
- ಎಚ್.ಸಿ.ಗಿರೀಶ್, ಆಯುಕ್ತರು ಜಲಾನಯನ ಇಲಾಖೆ ಬೆಂಗಳೂರು
- ಪಿ.ಶ್ರೀಧರ್, ಡಿಸಿಎಫ್ ಬಾಗಲಕೋಟೆ
- ಲೇಖರಾಜ್ ಮೀನಾ ಡಿಸಿಎಫ್‌ಗೆ ಹುದ್ದೆಗೆ ಬಡ್ತಿ, ಗದಗಕ್ಕೆ ನಿಯೋಜನೆ
- ಸಿ.ಕೆ.ಯೋಗೀಶ್ ಡಿಸಿಎಫ್‌ಗೆ ಹುದ್ದೆಗೆ ಬಡ್ತಿ ಧಾರವಾಡ ಡಿಸಿಎಫ್ ಆಗಿ ನಿಯೋಜನೆ
===
ವಿಭಾಗ