logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಹೆಸರಿನಲ್ಲಿ ಮಹಿಳೆಗೆ 30 ಲಕ್ಷ ರೂ. ಸೈಬರ್‌ ವಂಚನೆ

Bangalore Crime: ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಹೆಸರಿನಲ್ಲಿ ಮಹಿಳೆಗೆ 30 ಲಕ್ಷ ರೂ. ಸೈಬರ್‌ ವಂಚನೆ

Umesha Bhatta P H HT Kannada

May 13, 2024 05:28 PM IST

google News

ಬೆಂಗಳೂರಿನಲ್ಲಿ ಭಾರೀ ಸೈಬರ್‌ವಂಚನೆ ನಡೆದಿದೆ.

    • ಕೇಂದ್ರ ಸರ್ಕಾರದ ಇಲಾಖೆಗಳ ಹೆಸರು ಹೇಳಿ ಬೆದರಿಸಿ ಬೆಂಗಳೂರು ಮೂಲದ ಮಹಿಳೆಯೊಬ್ಬರಿಂದ ಹಣ ಕಿತ್ತಿರುವ ಪ್ರಕರಣವಿದು.
    • ವರದಿ: ಎಚ್‌.ಮಾರುತಿ, ಬೆಂಗಳೂರು
ಬೆಂಗಳೂರಿನಲ್ಲಿ ಭಾರೀ ಸೈಬರ್‌ವಂಚನೆ ನಡೆದಿದೆ.
ಬೆಂಗಳೂರಿನಲ್ಲಿ ಭಾರೀ ಸೈಬರ್‌ವಂಚನೆ ನಡೆದಿದೆ.

ಬೆಂಗಳೂರು: ವಂಚನೆ ಎಸಗಲು ಸೈಬರ್‌ ವಂಚಕರು ಬಳಸಿಕೊಳ್ಳದ ಮಾರ್ಗಗಳೇ ಇಲ್ಲ ಎನ್ನಬಹುದು. ಇವರು ಮೋಸ ಮಾಡಲು ಕೇವಲ, ಆದಾಯ ತೆರಿಗೆ ಇಲಾಖೆ, ಪೊಲೀಸ್‌ ಮೊಬೈಲ್‌ ಕಂಪನಿ ಸೇರಿದಂತೆ ಎಲ್ಲ ಇಲಾಖೆಗಳನ್ನೂ ಬಳಸಿಕೊಳ್ಳುತಿದ್ದಾರೆ ಮತ್ತು ಯಶಸ್ವಿಯಾಗುತ್ತಿದ್ದಾರೆ. ಇದೀಗ ಸೈಬರ್‌ ವಂಚಕರು ದೂರ ಸಂಪರ್ಕ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆ ಹೆಸರನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಸುಮಾರು 30 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ದೂರ ಸಂಪರ್ಕ ಇಲಾಖೆ ಅಧಿಕಾರಿಗಳು ಎಂದು ಹೇಳಿಕೊಂಡ ತಂಡವೊಂದು ಬೆಂಗಳೂರು ಉತ್ತರ ಬಾಗದ ಮಹಿಳೆಯೊಬ್ಬರಿಗೆ ಫೆಡ್‌ ಎಕ್ಸ್‌ ಹೆಸರಿನಲ್ಲಿ ಕೊರಿಯರ್‌ ಬಂದಿದೆ ಎಂದು ತಿಳಿಸಿದೆ. ಆಧಾರ್‌ ಬಯೋಮೆಟ್ರಿಕ್‌ ದುರ್ಬಳಕೆ ಆಗಿದೆ ಮತ್ತು ಬ್ಯಾಂಕ್‌ ಖಾತೆಯ ಪರಿಶೀಲನೆ ನಡೆಸಬೇಕೆಂದು 14 ದಿನಗಳ ಅವಧಿಯಲ್ಲಿ 30 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ.

ಆಗಿದ್ದೇನು?

ಈ ಮಹಿಳೆಗೆ ಏಪ್ರಿಲ್ 8ರಂದು 08146849478 ಸಂಖ್ಯೆಯಿಂದ ದೂರವಾಣಿ ಕರೆ ಮಾಡಿ ದೂರ ಸಂಪರ್ಕ ಇಲಾಖೆಯ ಅಸ್ತಿತ್ವದಲ್ಲೇ ಇಲ್ಲದಿರುವ ವಿಭಾಗದ ಹೆಸರು ಹೇಳಿ ಪರಿಚಯಿಸಿಕೊಂಡಿದ್ದಾನೆ.

ನಿಮ್ಮ ಆಧಾರ್‌ ಬಯೋಮೆಟ್ರಿಕ್‌ ಬಳಸಿಕೊಂಡು ಮುಂಬೈನಲ್ಲಿ ಸಿಮ್‌ ಕಾರ್ಡ್ ಖರೀದಿಮಾಡಿದ್ದಾರೆ. ಅವರು ಈ ನಂಬರನ್ನು ಅನಧಿಕೃತ ಜಾಹೀರಾತು ಪ್ರಕಟಿಸಲು ಮತ್ತು ಅಪರಾಧ ಚಟುವಟಿಕೆಗಳನ್ನು ಎಸಗಲು ಬಳಸಿಕೊಳ್ಳುತ್ತಿದ್ದಾರೆ ಎಂದು ಹೆದರಿಸಿದ್ದಾರೆ. ನಂತರ ಕರೆಯನ್ನು ಮುಂಬೈನ ಅಂಧೇರಿ ಪೊಲೀಸ್‌ ಠಾಣೆಯ ಅಧಿಕಾರಿಗೆ ವರ್ಗಾಯಿಸುತ್ತೇನೆ ಎಂದು ಹೇಳಿ ಮತ್ತೊಬ್ಬರಿಂದ ಮಾತನಾಡಿಸಿದ್ದಾನೆ.

ಈ ಸೈಬರ್‌ ವಂಚಕರು ಮತ್ತೆ ಮಹಿಳೆಯ ಮೊಬೈಲ್‌ ಗೆ 9686071308 8735028302 ಮೊಬೈಲ್‌ ನಂಬರ್‌ ಗಳಿಂದ ಕರೆ ಮಾಡಿ ನಿಮ್ಮ ಆಧಾರ್‌ ನಂಬರ್‌ ಬಳಸಿಕೊಂಡು ಖರೀದಿಸಿರುವ ಸಿಮ್‌ ನಿಂದ ಮುಂಬೈನ ಅನೇಕ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆಗಳಿಂದ ಅವರು ಅಕ್ರಮ ಚಟುವಟಿಕೆಗಳನ್ನು ನಡೆಸಲಿದ್ದಾರೆ ಎಂದು ಬೆದರಿಕೆ ಒಡ್ಡಿದ್ದಾರೆ.

ಹಣ ಹಾಕಿಸಿಕೊಂಡರು

ಸೈಬರ್‌ ವಂಚಕರು ಯಾವುದೇ ಅನುಮಾನಗಳಿಗೆ ಆಸ್ಪದ ಉಂಟಾಗದಂತೆ ಮಹಿಳೆಯನ್ನು ವ್ಯವಸ್ಥಿತವಾಗಿ ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಷಯವನ್ನು ಬೇರೆ ಯಾರಿಗಾದರೂ ತಿಳಿಸಿದರೆ ನಿಮ್ಮ ಕುಟುಂಬದ ಇತರ ಸದಸ್ಯರನ್ನೂ ಈ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆದರಿಸಿದ್ದಾರೆ. ನಂತರ ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್‌ ಖಾತೆಗಳನ್ನು ಪರಿಶೀಲನೆ ನಡೆಸಬೇಕಿದೆ. ಅಲ್ಪ ಪ್ರಮಾಣದ ಮೊತ್ತವನ್ನು ವರ್ಗಾಯಿಸಿ, ನಂತರ ಮರಳಿಸುವುದಾಗಿ ನಂಬಿಸಿದ್ದಾರೆ. ನಿಮ್ಮ ಬ್ಯಾಂಕ್‌ ಖಾತೆಯಿಂದ ಅಕ್ರಮ ಚಟುವಟಿಕೆಗಳು ನಡೆದಿಲ್ಲ ಎನ್ವುದನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಹಣ ವನ್ನು ವರ್ಗಾವಣೆ ಹೇಳಿ ಮಾಡಲು ಹೇಳಿದ್ದಾರೆ. ಇದೇ ರೀತಿ ಏಪ್ರಿಲ್‌ 8ರಿಂದ 21ರವರೆಗೆ ಒಟ್ಟು 30 ಲಕ್ಷ ರೂ.ಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅನುಮಾನ ಬಂದ ನಂತರ ಈ ಮಹಿಳೆ ಮೇ 6ರಂದು ದೂರು ದಾಖಲಿಸಿದ್ದಾರೆ.

ಸೈಬರ್‌ ವಂಚನೆ ಪ್ರಕರಣ

ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಂಚನೆ ಮತ್ತು ಅಪನಂಬಿಕೆಯ ಸೆ.420ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೆಡ್‌ ಎಕ್ಸ್‌ ಕಾನ್‌ ನಂತೆಯೇ ವಂಚನೆ ಎಸಗಿದ್ದಾರೆ. ಈ ಪ್ರಕರಣದಲ್ಲಿ ಸೈಬರ್‌ ವಂಚಕರು ತುಂಬಾ ಜಾಣತನದಿಂದ ಮೋಸ ಮಾಡಿದ್ದಾರೆ. ಇವರು ಸಾರ್ವಜನಿಕರಿಗೆ ಅಷ್ಟಾಗಿ ಪರಿಚಿತವಲ್ಲದ ಇಲಾಖೆಗಳು ಮತ್ತು ಮಾಹಿತಿಯನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ. ದೂರ ಸಂಪರ್ಕ ಇಲಾಖೆಯಾಗಲೀ ಅಥವಾ ಪೊಲೀಸರಾಗಲೀ ತನಿಖೆಯ ಭಾಗವಾಗಿ ಹಣ ವರ್ಗಾವಣೆ ಮಾಡಲು ಕೇಳುವುದಿಲ್ಲ. ಇಲಾಖೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಜ್ಞಾನ ಇಲ್ಲದ ಸಾರ್ವಜನಿಕರು ಸೈಬರ್‌ ವಂಚಕರು ಹೆಣೆಯುವ ಮೋಸದ ಜಾಲಕ್ಕೆ ಬೀಳುತ್ತಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ದೂರು ನೀಡುವುದು ಹೇಗೆ

ಇತ್ತೀಚೆಗೆ ದೂರ ಸಂಪರ್ಕ ಇಲಾಖೆ ಯಾರೊಬ್ಬರಿಗೂ ಕರೆ ಮಾಲು ಇಲಾಖೆ ಯಾರೊಬ್ಬರಿಗೂ ಅಧಿಕಾರ ನೀಡಿರುವುದಿಲ್ಲ ಮತ್ತು ನೇಮಕ ಮಾಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಯಾವುದೇ ಸಂದರ್ಭದಲ್ಲಿಯೂ ಯಾವುದೇ ರೀತಿಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಮನವಿ ಮಾಡಿಕೊಂಡಿದೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಚಾರ್‌ ಸಾಥಿ ಪೋರ್ಟಲ್‌ ನಲ್ಲಿ ದೂರು ದಾಖಲಿಸಬಹುದಾಗಿದೆ.

ವರದಿ: ಎಚ್.ಮಾರುತಿ. ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ