logo
ಕನ್ನಡ ಸುದ್ದಿ  /  ಕರ್ನಾಟಕ  /  Leopard In Bangalore: ಅರವಳಿಕೆ ಏಟಿಗೂ ದಕ್ಕದೇ ಬೆಂಗಳೂರು ಚಿರತೆ ಪರಾರಿ: ಇಬ್ಬರಿಗೆ ಗಾಯ, ಬಿರುಸುಗೊಂಡ ಸೆರೆ ಕಾರ್ಯಾಚರಣೆ

Leopard in Bangalore: ಅರವಳಿಕೆ ಏಟಿಗೂ ದಕ್ಕದೇ ಬೆಂಗಳೂರು ಚಿರತೆ ಪರಾರಿ: ಇಬ್ಬರಿಗೆ ಗಾಯ, ಬಿರುಸುಗೊಂಡ ಸೆರೆ ಕಾರ್ಯಾಚರಣೆ

HT Kannada Desk HT Kannada

Nov 01, 2023 01:01 PM IST

google News

ಬೆಂಗಳೂರಲ್ಲಿ ಕಾಣಿಸಿಕೊಂಡು ಕಾಡುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಂಡಿದೆ.

    • Bangalore leopard ಬೆಂಗಳೂರಿನ ಬೊಮ್ಮನಹಳ್ಳಿ( Bangalore Bommenahalli) ಭಾಗದಲ್ಲಿ ಕಾಣಿಸಿಕೊಂಡಿರುವ ಚಿರತೆ( Leopard) ಸೆರೆಗೆ ಅರಣ್ಯ ಇಲಾಖೆ( Karnataka Forest department) ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಬೆಂಗಳೂರಲ್ಲಿ ಕಾಣಿಸಿಕೊಂಡು ಕಾಡುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಂಡಿದೆ.
ಬೆಂಗಳೂರಲ್ಲಿ ಕಾಣಿಸಿಕೊಂಡು ಕಾಡುತ್ತಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಂಡಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಚಿರತೆ ಮಾಡಿದ್ದು. ಇಬ್ಬರಿಗೆ ಗಾಯಗಳಾಗಿವೆ.

ಸತತ ಮೂರು ದಿನದಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್‌ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಚಿರತೆ ಕಂಡಿದ್ದು ಅದಕ್ಕೆ ಅರವಳಿಕೆ ನೀಡಲು ಮುಂದಾದಾಗ ಇಬ್ಬರ ಮೇಲೆ ದಾಳಿ ಮಾಡಿದೆ. ಬನ್ನೇರಘಟ್ಟ ಜೈವಿಕ ಉದ್ಯಾನವನದ ವನ್ಯಜೀವಿ ವೈದ್ಯಾಧಿಕಾರಿ ಡಾ.ಕಿರಣ್‌ ಹಾಗೂ ಚಿರತೆ ಕಾರ್ಯಪಡೆಯ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿದೆ. ಅಲ್ಲದೇ ಅಲ್ಲಿಂದ ತಪ್ಪಿಸಿಕೊಂಡು ಹೋಗಿದೆ. ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗಿದ್ದು. ಮತ್ತೆ ಬುಧವಾರ ಮಧ್ಯಾಹದಿಂದಲೇ ಇಬ್ಬರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರಿನ ಆಗ್ನೇಯ ಭಾಗದ ಎಚ್‌ಎಸ್‌ಆರ್‌ ಬಡಾವಣೆಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಚಿರತೆ ಅಪಾರ್ಟ್‌ಮೆಂಟ್‌ ಒಂದರಲ್ಲಿ ಶನಿವಾರ ಹಾಗೂ ಭಾನುವಾರ ಕಾಣಿಸಿಕೊಂಡಿತ್ತು. ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದ ಫೂಟೇಜ್‌ ಆಧರಿಸಿ ಅರಣ್ಯ ಇಲಾಖೆ ಚಿರತೆ ಪತ್ತೆಗೆ ಮುಂದಾಗಿತ್ತು. ಕೆಲವು ಸಿಬ್ಬಂದಿ ಚಿರತೆ ಹುಡುಕಾಟ ನಡೆಸಿದ್ದರು. ಸೋಮವಾರ ರಾತ್ರಿ ಮತ್ತೆ ಪೊಲೀಸರಿಗೆ ಚಿರತೆಗೆ ಕಾಣಿಸಿಕೊಂಡಿದ್ದರಿಂದ ಮಂಗಳವಾರದಿಂದ ತಂಡವಾಗಿಯೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರು ನಗರ ವಿಭಾಗದ ಅರಣ್ಯ ಸಿಬ್ಬಂದಿ, ಮೈಸೂರಿನಿಂದ ಆಗಮಿಸಿರುವ ಚಿರತೆ ಕಾರ್ಯಪಡೆ ಸಿಬ್ಬಂದಿ, ಬನ್ನೇರಘಟ್ಟ ಜೈವಿಕ ಉದ್ಯಾನದ ತಂಡದೊಂದಿಗೆ ಜಂಟಿ ಕಾರ್ಯಾಚರಣೆ ನಡದಿದೆ. ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಖುದ್ದು ಪಿಸಿಸಿಎಫ್‌( ವನ್ಯಜೀವಿ) ಸುಭಾಷ್‌ ಮಳಖೆಡ್‌, ಬೆಂಗಳೂರು ಸಿಸಿಎಫ್‌ ಲಿಂಗರಾಜು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಎರಡು ಥರ್ಮಲ್‌ ಡ್ರೋಣ್‌ ಬಳಸಿ ಚಿರತೆ ಇರುವಿಕೆಯನ್ನು ಪತ್ತೆ ಮಾಡಲಾಗಿತ್ತು. ಅಲ್ಲದೇ ಮಂಗಳವಾರ ರಾತ್ರಿಯೇ ಎರಡು ನಾಯಿಗಳು ಚಿರತೆಯನ್ನು ಅಪಾರ್ಟ್‌ವೊಂದರ ನೆಲ ಮಹಡಿಯಲ್ಲಿ ಓಡಿಸಿಕೊಂಡು ಬಂದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ಮಾಹಿತಿ ಆಧರಿಸಿಯೇ ಬುಧವಾರ ಬೆಳಿಗ್ಗೆಯಿಂದಲೇ ಕಾರ್ಯಾಚಣೆ ಶುರು ಮಾಡಲಾಗಿತ್ತು. ಬೊಮ್ಮನಹಳ್ಳಿಗೆ ಸೇರಿದ ಅಪಾರ್ಟ್‌ಮೆಂಟ್‌ ಒಂದರ ಪಾಳುಬಿದ್ದ ಕಟ್ಟಡದ ಕೆಳಗೆ ಚಿರತೆ ಇರುವುದನ್ನು ತಿಳಿದು ಅಲ್ಲಿಗೆ ಸಿಬ್ಬಂದಿ ದೌಡಾಯಿಸಿತ್ತು. ಚಿರತೆಗೆ ಅರವಳಿಕೆ ನೀಡಲು ಮುಂದಾದಾಗ ಅದು ಕಿರಣ್‌ಗೆ ಕತ್ತಿಗೆ ಪರಚಿತ್ತು. ಸಿಬ್ಬಂದಿಗೂ ಗಾಯವಾಗಿದ್ದು. ತಪ್ಪಿಸಿಕೊಂಡು ಹೋಗಿತ್ತು.

ಕೆಲ ಹೊತ್ತಿನ ಬಿಡುವಿನ ಬಳಿಕ ಈಗ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಅಹಾರವಿಲ್ಲದೇ ನಿತ್ರಾಣಗೊಂಡಂತಿರುವ ಚಿರತೆಯನ್ನು ಇಂದೇ ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಯೋಜನೆ ರೂಪಿಸಿಕೊಂಡು ಕಾರ್ಯಾಚರಣೆ ನಡೆಸಿದೆ.

ಚಿರತೆ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ದ ಇಬ್ಬರೂ ಈಗಾಗಲೇ ಕಾರ್ಯಾಚರಣೆ ತಂಡ ಸೇರಿಕೊಂಡಿದ್ದಾರೆ. ಚಿರತೆ ಅವಿತಿರುವ ಜಾಗ ಗುರುತಿಸಿ ಅದನ್ನು ಸೆರೆ ಹಿಡಿಯುವ ಪ್ರಯತ್ನ ನಡೆದಿದೆ ಎಂದು ಬೆಂಗಳೂರು ಸಿಸಿಎಫ್‌ ಲಿಂಗರಾಜು ಖಚಿತಪಡಿಸಿದ್ದಾರೆ.

ಚಿರತೆ ಪತ್ತೆ ಮಾಡಿ ಅದನ್ನು ಸೆರೆ ಹಿಡಿಯಲು ಮುಂದಾದಾಗ ದಾಳಿ ಮಾಡಿದೆ. ಅಲ್ಲದೇ ಅಲ್ಲಿಂದ ತಪ್ಪಿಸಿಕೊಂಡಿದೆ. ಆದರೂ ಚಿರತೆ ಸಮೀಪದಲ್ಲಿಯೇ ಇರುವ ಮಾಹಿತಿಯಿದ್ದು. ಅರಣ್ಯ ಇಲಾಖೆ ಇಡೀ ತಂಡವಾಗಿ ಕೆಲಸ ಮಾಡಿ ಸೆರೆ ಹಿಡಿಯಲಿದೆ ಎಂದು ವನ್ಯಜೀವಿ ವಿಭಾಗದ ಎಪಿಸಿಎಫ್‌ ಕುಮಾರಪುಷ್ಕರ್‌ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ