logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Footpaths: ಬೆಂಗಳೂರು ಫುಟ್‌ ಪಾತ್‌ಗಳು ಎಷ್ಟು ಸುರಕ್ಷಿತ, ಪಾದಚಾರಿ ಸ್ನೇಹಿ: ಇಲ್ಲಿದೆ ಸಂಶೋಧನಾ ವರದಿ ವಿವರ

Bangalore Footpaths: ಬೆಂಗಳೂರು ಫುಟ್‌ ಪಾತ್‌ಗಳು ಎಷ್ಟು ಸುರಕ್ಷಿತ, ಪಾದಚಾರಿ ಸ್ನೇಹಿ: ಇಲ್ಲಿದೆ ಸಂಶೋಧನಾ ವರದಿ ವಿವರ

HT Kannada Desk HT Kannada

Dec 11, 2023 07:00 AM IST

google News

ಬೆಂಗಳೂರು ಫುಟ್‌ಪಾತ್‌ಗಳು ಸುರಕ್ಷಿತವಾಗಿಲ್ಲ ಎನ್ನುವುದನ್ನು ವರದಿಯೊಂದು ಹೇಳಿದೆ.

    • Bangalore footpaths unsafe ಬೆಂಗಳೂರಿನ ಫುಟ್‌ಪಾತ್‌ಗಳ( Bangalore foot paths) ಸ್ಥಿತಿಗತಿ ಹೇಗಿದೆ ಎನ್ನುವ ಕುರಿತು ಸ್ವಯಂ ಸೇವಾ ಸಂಸ್ಥೆ ಸಮೀಕ್ಷೆ ಕೈಗೊಂಡಿದೆ. ಏನಿದೆ ವರದಿಯಲ್ಲಿ ಎನ್ನುವ ವಿವರ ಇಲ್ಲಿದೆ. 
ಬೆಂಗಳೂರು ಫುಟ್‌ಪಾತ್‌ಗಳು ಸುರಕ್ಷಿತವಾಗಿಲ್ಲ ಎನ್ನುವುದನ್ನು ವರದಿಯೊಂದು ಹೇಳಿದೆ.
ಬೆಂಗಳೂರು ಫುಟ್‌ಪಾತ್‌ಗಳು ಸುರಕ್ಷಿತವಾಗಿಲ್ಲ ಎನ್ನುವುದನ್ನು ವರದಿಯೊಂದು ಹೇಳಿದೆ.

ಬೆಂಗಳೂರು: ಬೆಂಗಳೂರು ಮಹಾನಗರದ ಪಾದಚಾರಿ ರಸ್ತೆಗಳು ಎಷ್ಟು ಸುರಕ್ಷಿತ. ನಿತ್ಯ ನಾವು ಬಳಸುವ ಫುಟ್‌ಪಾತ್‌ಗಳಲ್ಲಿ ಸುಲಭವಾಗಿ ನಾವು ನಡೆದು ಹೋಗಬಹುದೇ?

ಇಂತಹ ಪ್ರಶ್ನೆಗಳಿಗೆ ವರ್ಲ್ಡ್ ರೀಸರ್ಚ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾ(WRI) ಉತ್ತರವಾಗಿ ಸಮೀಕ್ಷೆಯೊಂದನ್ನು ಕೈಗೊಂಡಿದೆ.

ನಿತ್ಯ ಫುಟ್‌ ಪಾತ್‌ ಬಳಸುವ ಪಾದಚಾರಿಗಳನ್ನೇ ಮಾತನಾಡಿಸಿ ಅವರ ಅನುಭವಗಳನ್ನಾಧರಿಸಿ ಸಮೀಕ್ಷೆಯನ್ನು ಸಿದ್ದಪಡಿಸಿದೆ.

ವರದಿಯಲ್ಲಿ ಏನಿದೆ

ಸಮೀಕ್ಷೆ ಪ್ರಕಾರ ಶೇ. 56 ರಷ್ಟು ಮಂದಿ ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳು ಸುರಕ್ಷಿತವಾಗಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶೇ.68 ರಷ್ಟು ಫುಟ್‌ ಪಾತ್‌ ಬಳಕೆದಾರರು ರಸ್ತೆ ದಾಟುವುದು ಕಷ್ಟ ಎನ್ನುವ ಉತ್ತರ ನೀಡಿದ್ದಾರೆ.

ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 351 ಮಂದಿಯನ್ನು ಮಾತನಾಡಿಸಲಾಗಿದೆ. ಇದಕ್ಕಾಗಿ ನಮ್ಮ ರಸ್ತೆ ಎನ್ನುವ ವಸ್ತು ಪ್ರದರ್ಶನವನ್ನೂ ಆಯೋಜಿಸಿ ಅಲ್ಲಿಂದಲೂ ಮಾಹಿತಿ ಪಡೆಯಲಾಗಿದೆ. ಎರಡು ದಿನದ ವಸ್ತು ಪ್ರದರ್ಶನದಲ್ಲಿ ರಸ್ತೆಗಳನ್ನು ಹೇಗೆ ಉತ್ತಮಪಡಿಸಬೇಕು ಎನ್ನುವ ಉದ್ದೇಶದೊಂದಿಗೆ ಚಟುವಟಿಕೆ, ರಸ್ತೆಗಳ ಸ್ಥಿತಿಗತಿಯ ಮಾಹಿತಿ ಹಂಚಿಕೊಳ್ಳಲಾಗಿತ್ತು.ಅನ್‌ಬಾಕ್ಸಿಂಗ್‌ ಬೆಂಗಳೂರು ಹಬ್ಬ ಭಾಗವಾಗಿ ಶುಕ್ರವಾರ ಈ ವಸ್ತು ಪ್ರದರ್ಶನದಲ್ಲಿ ಹಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ಧಾರೆ.

ಜನ ಏನಂತಾರೆ

ಇನ್ನು ಸಮೀಕ್ಷೆಯ ಪ್ರಕಾರ ಶೇ. 26ರಷ್ಟು ಮಂದಿ ಈಗಿರುವ ರಸ್ತೆಗಳು ಚೆನ್ನಾಗಿವೆ. ಬಳಕೆಗೂ ಯೋಗ್ಯವಾಗಿವೆ. ಸಂಚಾರಿ ನಿಯಮಗಳನ್ನು ಪಾಲಿಸಲಾಗಿದೆ. ಇಲ್ಲಿ ಸುರಕ್ಷಿತವಾಗಿ ಸಂಚರಿಸಬಹುದು ಎನ್ನುವ ಮಾಹಿತಿಯನ್ನು ಒದಗಿಸಿದ್ದಾರೆ.

ಆದರೆ ಫುಟ್‌ ಪಾತ್‌ಗಳಿಂದ ಇನ್ನೊಂದು ರಸ್ತೆ ಕಡೆಗೆ ದಾಟುವಾಗ ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಆತಂಕ ಹಲವರದ್ದು. ದ್ವಿಚಕ್ರವಾಹನ ಸವಾರರು ಚಲಾಯಿಸುವಾಗ ಫುಟ್‌ ಪಾತ್‌ ದಾಟುವವರನ್ನೂ ಗಮನಿಸೋಲ್ಲ. ವಾಹನಗಳನ್ನು ಜೋರಾಗಿ ಓಡಿಸುತ್ತಾರೆ. ಕೆಲವು ಕಡೆ ಮೂಲಸೌಕರ್ಯ ಕೊರತೆಯಿಂದ ಫುಟ್‌ ಪಾತ್‌ ಸಂಚಾರ ನಿಯಮ ಪಾಲನೆ ಆದಂತೆ ಕಾಣುವುದಿಲ್ಲ. ಫುಟ್‌ಪಾತ್‌ ದಾಟುವ ಸ್ಥಳದಲ್ಲಿ ವಾಹನಗಳ ಓಡಾಟಕ್ಕೆ ತಡೆ ಹಾಕಬೇಕು. ಮೂಲಸೌಕರ್ಯಕ್ಕೂ ಒತ್ತು ನೀಡಬೇಕು ಎನ್ನುವ ಸಲಹೆ ನೀಡಲಾಗಿದೆ.

ಹಲವಾರು ಸಲಹೆ

ರಸ್ತೆಗಳನ್ನು ಬೆಂಗಳೂರಲ್ಲಿ ದಾಟುವುದು ಸುಲಭವಲ್ಲ. ಅಷ್ಟರ ಮಟ್ಟಿಗೆ ಸಂಚಾರ ದಟ್ಟಣೆ, ವೇಗವಾಗಿ ವಾಹನ ಚಲಾಯಿಸುವುದು ಇದಕ್ಕೆ ಕಾರಣ. ಒಮ್ಮೆ ರಸ್ತೆ ದಾಟಲು ನಾನು ಸಾಕಷ್ಟು ಕಷ್ಟ ಪಟ್ಟೆ. ಅದೂ ಒಬ್ಬರೇ ಇದ್ದರಂತೂ ಮುಗಿಯಿತು. ಒಮ್ಮೆ ಬೈಕ್‌ ಒಂದು ಡಿಕ್ಕಿಯನ್ನೇ ಹೊಡೆದಿತ್ತು. ಈಗ ಆದಷ್ಟು ರಸ್ತೆಯ ಅಂತ್ಯಭಾಗದಿಂದಲೇ ದಾಟಲು ಪ್ರಯತ್ನಿಸುವೆ. ಮೆಟ್ರೋದಲ್ಲಿ ಹೆಚ್ಚು ಸಂಚಾರ ಮಾಡುತ್ತೇನೆ ಎನ್ನುವುದು ಕನಕಪುರ ರಸ್ತೆಯ ವಿದ್ಯಾರ್ಥಿ ಹಶಾಂಕ್‌ ವಜನೇಪಲ್ಲಿ ಅಭಿಪ್ರಾಯ.

ಬೆಂಗಳೂರು ನಗರದಲ್ಲಿ ಫುಟ್‌ಪಾತ್‌ಗಳನ್ನು ಸುಧಾರಿಸುವ ಅಗತ್ಯವಿದೆ. ಪಾದಚಾರಿ ಸ್ನೇಹಿಯಾಗಿ ರೂಪಿಸಲು ಒತ್ತು ನೀಡಬೇಕು. ಜನ ಸಾರ್ವಜನಿಕ ಸಾರಿಗೆ ಬಳಸುವಾಗ ಅವರ ಸುಲಭವಾಗಿ ನಡೆದುಕೊಂಡು ಹೋಗಲು ಸೂಕ್ತ ಪಾದಚಾರಿ ಮಾರ್ಗಗಳು ಬೆಂಗಳೂರಿನಲ್ಲಿ ಬೇಕು. ಸುರಕ್ಷತೆ ಕಾರಣದಿಂದ ಜನ ಸಾರ್ವಜನಿಕ ವಾಹನ ಬಳಕೆ ಬದಲು ಸ್ವಂತ ವಾಹನಗಳನ್ನೇ ಬಳಕೆ ಮಾಡುತ್ತಾರೆ ಎನ್ನುವುದು ವರ್ಲ್ಡ್ ರೀಸರ್ಚ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾ(WRI)ನ ಶ್ರೀನಿವಾಸ ಅಲವಳ್ಳಿ ಅಭಿಮತ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ