logo
ಕನ್ನಡ ಸುದ್ದಿ  /  ಕರ್ನಾಟಕ  /  ಮದುವೆ, ಪ್ರವಾಸದ ಬಾಡಿಗೆಗೆ ಬಿಎಂಟಿಸಿ ಬಸ್‌ಗಳು ಲಭ್ಯ: ಬೆಂಗಳೂರು ಒಳಗೆ, ಹೊರ ಸಂಚಾರಕ್ಕೆ ಪ್ರತ್ಯೇಕ ದರ

ಮದುವೆ, ಪ್ರವಾಸದ ಬಾಡಿಗೆಗೆ ಬಿಎಂಟಿಸಿ ಬಸ್‌ಗಳು ಲಭ್ಯ: ಬೆಂಗಳೂರು ಒಳಗೆ, ಹೊರ ಸಂಚಾರಕ್ಕೆ ಪ್ರತ್ಯೇಕ ದರ

HT Kannada Desk HT Kannada

Jan 08, 2024 09:02 PM IST

google News

ಬಿಎಂಟಿಸಿ ಬಸ್‌ಗಳು ಬಾಡಿಗೆ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

    • BMTC Buses ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳನ್ನು ಬಾಡಿಗೆಗೆ ಪಡೆಯುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಬೆಂಗಳೂರು ನಗರದ ಒಳಗೆ ಹಾಗೂ ಹೊರಗೆ ಪ್ರತ್ಯೇಕ ದರದ ಬಾಡಿಗೆಯೊಂದಿಗೆ ಬಿಎಂಟಿಸಿ ಬಸ್‌ ಪಡೆಯಬಹುದು.
ಬಿಎಂಟಿಸಿ ಬಸ್‌ಗಳು ಬಾಡಿಗೆ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಬಿಎಂಟಿಸಿ ಬಸ್‌ಗಳು ಬಾಡಿಗೆ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಬೆಂಗಳೂರು: ಮದುವೆ, ಪ್ರವಾಸಕ್ಕೆಂದು ಕೆಎಸ್‌ಆರ್‌ಟಿಸಿ ಬಸ್‌ ಬಾಡಿಗೆ ಪಡೆಯಲು ಅವಕಾಶವಿತ್ತು. ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( BMTC) ಕೂಡ ಬಸ್‌ಗಳನ್ನು ಬಾಡಿಗೆ ನೀಡಲಿದೆ. ಕೌಟುಂಬಿಕ, ಶೈಕ್ಷಣಿಕ ಪ್ರವಾಸ, ಮದುವೆ, ಖಾಸಗಿ ಕಾರ್ಯಕ್ರಮಗಳಿಗೆ ಬಿಎಂಟಿಸಿ ಬಸ್‌ಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಅವಕಾಶವಿದೆ. ಇದರಲ್ಲಿ ವಿವಿಧ ಬಸ್‌ಗಳಿಗೆ ದರ ನಿಗದಿ ಮಾಡಲಾಗಿದ್ದು. ಬೆಂಗಳೂರು ನಗರದೊಳಗೆ ಹಾಗೂ ಹೊರಗೆ ಎನ್ನುವ ಎರಡು ನಿಯಮಗಳನ್ನು ರೂಪಿಸಿ ದರವನ್ನು ನಿಗದಿಪಡಿಸಲಾಗಿದೆ.

ಪುಷ್ಪಕ್‌ ಬಸ್‌( 47 ಸೀಟು)

ಈ ಬಸ್‌ಗಳಿಗೆ 8 ಗಂಟೆಗೆ( 150 ಕಿ.ಮಿ.) ಪ್ರತಿ ಕಿ.ಮಿಗೆ 55 ರೂ. ನಂತೆ ಇಲ್ಲವೇ 8,250 ದರ ನಿಗದಿ ಮಾಡಲಾಗಿದೆ. 12 ಗಂಟೆಗಳಿಗೆ (200 ಕಿ.ಮಿ) ಕಿ,.ಮಿಗೆ 50 ರೂ.ನಂತೆ ಇಲ್ಲವೇ 10000 ರೂ. ನಿಗದಿಪಡಿಸಲಾಗಿದೆ. ದಿನದ 24 ಗಂಟೆಗೆ( 250 ಕಿ.ಮಿ.) ಬಿಎಂಟಿಸಿ ವ್ಯಾಪ್ತಿಯೊಳಗೆ ಇಲ್ಲವೇ ದಿನಕ್ಕೆ ಕಿಮಿಗೆ 50 ರೂ. ಇಲ್ಲವೇ ಒಟ್ಟು 11,250 ರೂ. ನಿಗದಿ ಮಾಡಲಾಗಿದೆ. ಬಿಎಂಟಿಸಿಯಿಂದ ಹೊರಗಡೆ ಪ್ರದೇಶದಲ್ಲಿ ದಿನದ 24 ಗಂಟೆಗೆ(300 ಕಿ.ಮಿ.)ಗೆ 45 ರೂ. /13,200 ರೂ. ನಿಗದಿಪಡಿಸಲಾಗಿದೆ.

ಸಾಮಾನ್ಯ ಬಸ್‌ ( 40 ಸೀಟು)

ಈ ಬಸ್‌ಗಳಿಗೆ 8 ಗಂಟೆಗೆ( 150 ಕಿ.ಮಿ.) ಪ್ರತಿ ಕಿ.ಮಿಗೆ 50 ರೂ. ನಂತೆ ಇಲ್ಲವೇ 7500 ದರ ನಿಗದಿ ಮಾಡಲಾಗಿದೆ. 12 ಗಂಟೆಗಳಿಗೆ (200 ಕಿ.ಮಿ) ಕಿ,.ಮಿಗೆ 48ರೂ.ನಂತೆ ಇಲ್ಲವೇ 9600 ರೂ. ನಿಗದಿಪಡಿಸಲಾಗಿದೆ. ದಿನದ 24 ಗಂಟೆಗೆ( 250 ಕಿ.ಮಿ.) ಬಿಎಂಟಿಸಿ ವ್ಯಾಪ್ತಿಯೊಳಗೆ ಇಲ್ಲವೇ ದಿನಕ್ಕೆ45 ರೂ. 11000 ರೂ. ನಿಗದಿ ಮಾಡಲಾಗಿದೆ. ಬಿಎಂಟಿಸಿಯಿಂದ ಹೊರಗಡೆ ಪ್ರದೇಶದಲ್ಲಿ ದಿನದ 24 ಗಂಟೆಗೆ(300 ಕಿ.ಮಿ.)ಗೆ 13,200 ರೂ. ನಿಗದಿಪಡಿಸಲಾಗಿದೆ.

ಮಿನಿ( ಸೀಟುಗಳು)

ಈ ಬಸ್‌ಗಳಿಗೆ 8 ಗಂಟೆಗೆ( 150 ಕಿ.ಮಿ.) ಪ್ರತಿ ಕಿ.ಮಿಗೆ 47 ರೂ. ನಂತೆ ಇಲ್ಲವೇ 7050 ದರ ನಿಗದಿ ಮಾಡಲಾಗಿದೆ. 12 ಗಂಟೆಗಳಿಗೆ (200 ಕಿ.ಮಿ) ಕಿ,.ಮಿಗೆ 45 ರೂ.ನಂತೆ ಇಲ್ಲವೇ 9000 ರೂ. ನಿಗದಿಪಡಿಸಲಾಗಿದೆ. ದಿನದ 24 ಗಂಟೆಗೆ( 250 ಕಿ.ಮಿ.) ಬಿಎಂಟಿಸಿ ವ್ಯಾಪ್ತಿಯೊಳಗೆ ಇಲ್ಲವೇ ದಿನಕ್ಕೆ 42ರೂ. /10500 ರೂ. ನಿಗದಿ ಮಾಡಲಾಗಿದೆ. ಬಿಎಂಟಿಸಿಯಿಂದ ಹೊರಗಡೆ ಪ್ರದೇಶದಲ್ಲಿ ದಿನದ 24 ಗಂಟೆಗೆ(300 ಕಿ.ಮಿ.)ಗೆ 42 ರೂ. /12600 ರೂ. ನಿಗದಿಪಡಿಸಲಾಗಿದೆ.

ಭಾರತ್‌ ಸ್ಟೇಜ್‌ ( ಸೀಟುಗಳು)

ಈ ಬಸ್‌ಗಳಿಗೆ 8 ಗಂಟೆಗೆ( 150 ಕಿ.ಮಿ.) ಪ್ರತಿ ಕಿ.ಮಿಗೆ 60 ರೂ. ನಂತೆ ಇಲ್ಲವೇ 9000 ದರ ನಿಗದಿ ಮಾಡಲಾಗಿದೆ. 12 ಗಂಟೆಗಳಿಗೆ (200 ಕಿ.ಮಿ) ಕಿ,.ಮಿಗೆ 55 ರೂ.ನಂತೆ ಇಲ್ಲವೇ 11000 ರೂ. ನಿಗದಿಪಡಿಸಲಾಗಿದೆ. ದಿನದ 24 ಗಂಟೆಗೆ( 250 ಕಿ.ಮಿ.) ಬಿಎಂಟಿಸಿ ವ್ಯಾಪ್ತಿಯೊಳಗೆ ಇಲ್ಲವೇ ದಿನಕ್ಕೆ 50 ರೂ. /11,250 ರೂ. ನಿಗದಿ ಮಾಡಲಾಗಿದೆ. ಬಿಎಂಟಿಸಿಯಿಂದ ಹೊರಗಡೆ ಪ್ರದೇಶದಲ್ಲಿ ದಿನದ 24 ಗಂಟೆಗೆ(300 ಕಿ.ಮಿ.)ಗೆ 50 ರೂ. /15000 ರೂ. ನಿಗದಿಪಡಿಸಲಾಗಿದೆ.

ಇ ಬಸ್‌ ‌

40 ಸೀಟರ್‌ ಪ್ರತಿ ಕಿ.ಮಿಗೆ 150/ ದಿನದ 24 ಗಂಟೆಗೆ 15000

33 ಸೀಟರ್‌ಪ್ರತಿ ಕಿ.ಮಿಗೆ 120/ ದಿನದ 24 ಗಂಟೆಗೆ 13000

ಎಸಿ ಬಸ್‌

35/41 ಸೀಟರ್ ಪ್ರತಿ ಕಿ.ಮಿಗೆ 80/ ದಿನದ 24 ಗಂಟೆಗೆ 14000(175ಕಿ.ಮಿ) , ಪ್ರತಿ ಕಿ.ಮಿಗೆ 80/ ದಿನದ 24 ಗಂಟೆಗೆ 20000 (250ಕಿ.ಮಿ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ