logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: 27 ವರ್ಷ ನಂತರ ಬೆಂಗಳೂರು ರಸ್ತೆಗಿಳಿಯಲಿವೆ ಡಬ್ಬಲ್‌ ಡೆಕ್ಕರ್‌ ಬಸ್‌; ಮೊದಲ ಹಂತದ 3 ಮಾರ್ಗದ ವಿವರ ಇಲ್ಲಿದೆ

Bangalore News: 27 ವರ್ಷ ನಂತರ ಬೆಂಗಳೂರು ರಸ್ತೆಗಿಳಿಯಲಿವೆ ಡಬ್ಬಲ್‌ ಡೆಕ್ಕರ್‌ ಬಸ್‌; ಮೊದಲ ಹಂತದ 3 ಮಾರ್ಗದ ವಿವರ ಇಲ್ಲಿದೆ

Umesha Bhatta P H HT Kannada

Feb 06, 2024 08:45 PM IST

google News

ಬೆಂಗಳೂರಿನಲ್ಲಿ ಡಬ್ಬಲ್‌ ಡೆಕ್ಕರ್‌ ಬಸ್‌ ಸಂಚಾರ ಮತ್ತೆ ಶುರುವಾಗಲಿದೆ.

    • BMTC ಬೆಂಗಳೂರು ಮೆಟ್ರೋಪಾಲಿಟಿನ್‌ ನಗರ ಸಾರಿಗೆಯು ಮತ್ತೆ ಡಬ್ಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿದೆ. ಮೂರು ಮಾರ್ಗಗಳಲ್ಲಿ ಹತ್ತು ಬಸ್‌ ಸಂಚರಿಸಲಿವೆ.
ಬೆಂಗಳೂರಿನಲ್ಲಿ ಡಬ್ಬಲ್‌ ಡೆಕ್ಕರ್‌ ಬಸ್‌ ಸಂಚಾರ ಮತ್ತೆ ಶುರುವಾಗಲಿದೆ.
ಬೆಂಗಳೂರಿನಲ್ಲಿ ಡಬ್ಬಲ್‌ ಡೆಕ್ಕರ್‌ ಬಸ್‌ ಸಂಚಾರ ಮತ್ತೆ ಶುರುವಾಗಲಿದೆ.

ಬೆಂಗಳೂರು: ಬೆಂಗಳೂರಿನ ರಸ್ತೆಗಳಿಗೆ 27 ವರ್ಷದ ನಂತರ ಡಬ್ಬಲ್‌ ಡೆಕ್ಕರ್‌ ಬಸ್‌ಗಳು ಇಳಿಯಲಿವೆ. ಅದು ಮೊದಲ ಹಂತವಾಗಿ 10 ಬಸ್‌ಗಳು ಮೂರು ಮಾರ್ಗದಲ್ಲಿ ಸಂಚರಿಸಲಿವೆ. ಬೆಂಗಳೂರು ಮೆಟ್ರೋಪಾಲಿಟಿನ್‌ ನಗರ ಸಾರಿಗೆ( BMTC) ಬಸ್‌ ಸಂಚಾರಕ್ಕೆ ಅನುಮತಿ ನೀಡಿದೆ. ಸದ್ಯದಲ್ಲೇ ಬಸ್‌ಗಳು ಬೆಂಗಳೂರಿನ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಸಂಚಾರ ಆರಂಭಿಸಲಿವೆ.

ಬೆಂಗಳೂರಿನಲ್ಲಿ 1997ರಲ್ಲಿ ಇದೇ ರೀತಿಯ ಡಬ್ಬಲ್‌ ಡೆಕ್ಕರ್‌ ಬಸ್‌ಗಳು ಸಂಚಾರವಿತ್ತು. ನಾನಾ ಕಾರಣದಿಂದ ಆಗ ಡಬ್ಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರ ನಿಂತು ಹೋಯಿತು. ಆನಂತರ ಹಲವು ಬಾರಿ ಈ ರೀತಿಯ ಬಸ್‌ಗಳ ಸಂಚಾರಕ್ಕೆ ಯೋಜನೆ ರೂಪಿಸಿದರೂ ಅದು ಜಾರಿಯಾಗಿರಲಿಲ್ಲ. ಈಗ ಮತ್ತೆ ಡಬ್ಬಲ್‌ ಡೆಕ್ಕರ್‌ ಬಸ್‌ ಓಡಿಸಲು ಅನುಮತಿ ನೀಡಲಾಗಿದೆ.

ಯಾವ ಮಾರ್ಗದಲ್ಲಿ ಸಂಚಾರ

ಇದಕ್ಕಾಗಿ ಮೂರು ಮಾರ್ಗಗಳನ್ನು ಬಿಎಂಟಿಸಿ ಅಂತಿಮಗೊಳಿಸಿದೆ. ಇದರಲ್ಲಿ ಮೆಜೆಸ್ಟಿಕ್‌ನಿಂದ ಶಿವಾಜಿನಗರ, ಮೆಜೆಸ್ಟಿಕ್‌ ನಿಂದ ಅತ್ತಿಬೆಲೆ ಹಾಗೂ ವಿಜಯನಗರದಿಂದ ಕಲಾಸಿಪಾಳ್ಯದವರೆಗಿನ ಮೂರು ಮಾರ್ಗಗಳಲ್ಲಿ ಈ ಬಸ್‌ಗಳು ಸಂಚರಿಸಲಿವೆ.

ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, ಬೆಂಗಳೂರಿನ ರಸ್ತೆಗಳು ಮೊದಲಿನಂತೆ ಇಲ್ಲ. ಸಾಕಷ್ಟು ಮೂಲಸೌಕರ್ಯ ಕಲ್ಪಿಸಿದ ನಂತರ ಬೆಂಗಳೂರು ಮುಖ್ಯ ರಸ್ತೆ ಸ್ವರೂಪವೇ ಬದಲಾಗಿವೆ. ಬೆಂಗಳೂರಿನಲ್ಲಿ ಫ್ಲೈಓವರ್‌, ಅಂಡರ್‌ಪಾಸ್‌, ಸ್ಕೈವಾಕ್ಸ್‌ ಸಹಿತ ವಿಭಿನ್ನ ರೂಪದಲ್ಲಿ ಬದಲಾವಣೆಗಳಾಗಿವೆ. ಇದರಿಂದ ಡಬ್ಬಲ್‌ ಡೆಕ್ಕರ್‌ ಬಸ್‌ಗಳನ್ನು ಎಲ್ಲಾ ಮಾರ್ಗದಲ್ಲಿ ಓಡಿಸಲು ಆಗದು. ಸುರಕ್ಷಿತ ಮಾರ್ಗ ನೋಡಿಕೊಂಡು ಬಸ್‌ ಓಡಿಸುವ ಸನ್ನಿವೇಶ ಇರುವುದರಿಂದ ಮೂರು ಮಾರ್ಗಗಳನ್ನು ಗುರುತಿಸಲಾಗಿದೆ.

ಹೊಸ ಡಬ್ಬಲ್‌ ಡೆಕ್ಕರ್‌ ಬಸ್‌ ಗಳು ಓಡಿಸಲು ಅನುಮತಿ ನೀಡಿರುವುದನ್ನು ಟೈಂಸ್‌ ಆಫ್‌ ಇಂಡಿಯಾಕ್ಕೆ ಖಚಿತಪಡಿಸಿರುವ ಬಿಎಂಟಿಸಿ ಎಂಡಿ ಆರ್‌.ರಾಮಚಂದ್ರನ್‌, ಒಟ್ಟು ಸುಸಜ್ಜಿತ ಎಸಿ ಸೌಲಭ್ಯವುಳ್ಳ ಹತ್ತು ಡಬ್ಬಲ್‌ ಡೆಕ್ಕರ್‌ ಬಸ್‌ಗೆ ಅನುಮತಿ ನೀಡಿದ್ದೇವೆ. ನಾವೇ ಇವುಗಳನ್ನು ಖರೀದಿಸಲು ನಿರ್ಧರಿಸಿದ್ದರೂ ಕೆಲವು ಕಾರಣಗಳಿಂದ ಸರ್ಕಾರ ಅನುಮತಿ ನೀಡಿಲ್ಲ. ಆದರೆ ಗ್ರಾಸ್‌ ಕಾಂಟ್ರಾಕ್ಟ್‌ ಮಾದರಿಯಲ್ಲಿ ಬಸ್‌ ಓಡಿಸಲು ಖಾಸಗಿ ಸಂಸ್ಥೆಯವರಿಗೆ ಅನುಮತಿ ನೀಡಲಾಗಿದೆ. ಅವರು ಬಸ್‌ ಓಡಿಸಿದ ದೂರವನ್ನು ಆಧರಿಸಿ ಪಾವತಿ ಮಾಡುವುದು ಈ ಒಪ್ಪಂದದಲ್ಲಿದೆ. ಇವು ಸಂಪೂರ್ಣ ಎಲೆಕ್ಟ್ರಿಕಲ್‌ ಬಸ್‌ಗಳು. ಪ್ರತಿ ಡಬ್ಬಲ್‌ ಡೆಕ್ಕರ್‌ ಬಸ್‌ನಲ್ಲಿ 65 ಮಂದಿ ಏಕಕಾಲಕ್ಕೆ ಪ್ರಯಾಣಿಸಲು ಅವಕಾಶವಿದೆ ಎಂದು ಹೇಳುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ